ಮಾಧ್ಯಮ ವರದಿಗಳು ಸರಿಯಾಗಿದ್ದರೆ ಆರೋಪಗಳು ಗಂಭೀರ: ಪೆಗಾಸಸ್ ಕುರಿತು ಸುಪ್ರೀಂಕೋರ್ಟ್ ಹೇಳಿದ 10 ಸಂಗತಿಗಳು

ಮಾಧ್ಯಮ ವರದಿಗಳು ಸರಿಯಾಗಿದ್ದರೆ ಆರೋಪಗಳು ಗಂಭೀರ: ಪೆಗಾಸಸ್ ಕುರಿತು ಸುಪ್ರೀಂಕೋರ್ಟ್ ಹೇಳಿದ 10 ಸಂಗತಿಗಳು
ಸುಪ್ರೀಂಕೋರ್ಟ್

Pegasus: ಆರೋಪಗಳ ಬಗ್ಗೆ ಪತ್ರಿಕಾ ವರದಿ ಸರಿಯಾಗಿದ್ದರೆ ಅದು ಗಂಭೀರವಾದ ಸಂಗತಿ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ. ಪೆಗಾಸಸ್ ಗೂಢಚರ್ಯೆ ಪ್ರಕರಣದ ಬಗ್ಗೆ ವಿಶೇಷ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್ ಈ ರೀತಿ ಹೇಳಿದೆ.

TV9kannada Web Team

| Edited By: Rashmi Kallakatta

Aug 05, 2021 | 2:56 PM

ದೆಹಲಿ: ಪ್ರತಿಪಕ್ಷದ ನಾಯಕರು, ಪತ್ರಕರ್ತರು ಮತ್ತು ಇತರರನ್ನು ಗುರಿಯಾಗಿಸಲು ಪೆಗಾಸಸ್ ಸ್ಪೈವೇರ್ ಅನ್ನು ಬಳಸಲಾಗಿದೆ ಎಂಬ ಆರೋಪಗಳ ಬಗ್ಗೆ ಪತ್ರಿಕಾ ವರದಿ ಸರಿಯಾಗಿದ್ದರೆ ಅದು ಗಂಭೀರವಾದ ಸಂಗತಿ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ. ಪೆಗಾಸಸ್ ಗೂಢಚರ್ಯೆ ಪ್ರಕರಣದ ಬಗ್ಗೆ ವಿಶೇಷ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್ ಈ ರೀತಿ ಹೇಳಿದೆ. ಸುಪ್ರೀಂಕೋರ್ಟ್ ಹೇಳಿದ 10 ಸಂಗತಿಗಳು 1. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ದ್ವಿಸದಸ್ಯ ಪೀಠ, ಎಲ್ಲಾ ಅರ್ಜಿದಾರರು ತಮ್ಮ ಅರ್ಜಿಯ ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಕೇಳಿತು. ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಪೀಠದ ಎರಡನೇ ನ್ಯಾಯಾಧೀಶರಾಗಿದ್ದಾರೆ. ವಿಚಾರಣೆಗೆ ಕೇಂದ್ರವು ಹಾಜರಾಗಬೇಕು ಎಂದು ಹೇಳಿರುವ ನ್ಯಾಯಾಲಯವು ಮಂಗಳವಾರ ಮತ್ತೊಮ್ಮೆ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

2. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಎರಡು ದಿನಗಳ ಹಿಂದೆ ಸಲ್ಲಿಸಿದ ಅರ್ಜಿಯಲ್ಲಿ, ಸ್ಪೈವೇರ್ ಒಪ್ಪಂದದ ಬಗ್ಗೆ ಮತ್ತು ಗುರಿ ಹೊಂದಿದವರ ಪಟ್ಟಿಯ ಬಗ್ಗೆ ಸರ್ಕಾರದಿಂದ ವಿವರಗಳನ್ನು ಪಡೆಯಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

3. ಇದೇ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಈ ಹಿಂದೆ ಎರಡು ಇತರ ಅರ್ಜಿಗಳನ್ನು ಸಲ್ಲಿಸಲಾಗಿತ್ತು, ಸಿಪಿಎಂ ಸಂಸದ ಜಾನ್ ಬ್ರಿಟಾಸ್ ಮತ್ತು ವಕೀಲ ಎಂಎಲ್ ಶರ್ಮಾ ಈ ಎರಡು ಅರ್ಜಿ ಸಲ್ಲಿಸಿದ್ದರು.

4. ಈ ಹಿಂದೆ ಹಿರಿಯ ಪತ್ರಕರ್ತರಾದ ಎನ್ ರಾಮ್ ಮತ್ತು ಶಶಿಕುಮಾರ್ ಬೇಹುಗಾರಿಕೆ ಆರೋಪ ಪ್ರಕರಣ ಬಗ್ಗೆ ಅವರು ಮಾಜಿ ನ್ಯಾಯಾಧೀಶರ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುವಂತೆ ಕೋರಿದ್ದರು “ಅವರು ಒಪ್ಪಂದಕ್ಕೆ ಹೇಗೆ ಬಂದರು, ಇದಕ್ಕಾಗಿ ಅವರು ಯಾರು ಪಾವತಿಸಿದರು ಎಂದು ಸರ್ಕಾರ ನಮಗೆ ಹೇಳಬೇಕು” ಎಂದು ಅವರ ವಕೀಲ ಕಪಿಲ್ ಸಿಬಲ್ ಇಂದು ವಿಚಾರಣೆ ವೇಳೆ ಕೇಳಿದ್ದಾರೆ. “2019 ರಲ್ಲಿಯೇ ಪೆಗಾಸಸ್ ಸಮಸ್ಯೆಗಳು ವರದಿಯಾಗಿವೆ. ಎರಡು ವರ್ಷಗಳ ನಂತರ ನಮ್ಮ ಬಳಿಗೆ ಏಕೆ ಬರಬೇಕು?” ಎಂದು ನ್ಯಾಯಮೂರ್ತಿ ರಮಣ ಪ್ರಶ್ನಿಸಿದ್ದಾರೆ. ಮಾಜಿ ನ್ಯಾಯಾಧೀಶರ ಹಳೆಯ ಸಂಖ್ಯೆಯ ವರದಿಗಳು ಮತ್ತು ರಿಜಿಸ್ಟ್ರಾರ್‌ಗಳ ಫೋನ್‌ಗಳು ಬೇಹುಗಾರಿಕೆಯ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿವೆ ಎಂದು ಸಿಬಲ್ ಗಮನಸೆಳೆದಾಗ, ಮುಖ್ಯ ನ್ಯಾಯಮೂರ್ತಿಗಳು “ಸತ್ಯ ಹೊರಬರಬೇಕು. ಯಾರ ಹೆಸರು ಇದೆ ಎಂಬುದು ನಮಗೆ ತಿಳಿದಿಲ್ಲ ಎಂದಿದ್ದಾರೆ.

5. ಭಯೋತ್ಪಾದಕರ ಫೋನ್ ಟ್ಯಾಪಿಂಗ್ ಇತ್ಯಾದಿಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ಆದರೆ ಇಲ್ಲಿ ಸಾಮಾನ್ಯ ನಾಗರಿಕರು ಸರ್ಕಾರವನ್ನು ವಿರೋಧಿಸುವ ಅಭಿಪ್ರಾಯಗಳನ್ನು ಹೊಂದಿರಬಹುದು. ನಂತರ ಇದು ಸಂವಿಧಾನಾತ್ಮಕತೆ ಮತ್ತು ಕ್ರಿಮಿನಾಲಿಟಿಯ ವಿಷಯವಾಗಿದೆ ಎಂದು ಪತ್ರಕರ್ತರ ವಕೀಲರಾದ ಎಸ್‌ಎನ್‌ಎಂ ಅಬ್ದಿ ಮತ್ತು ಪ್ರೇಮ್ ಶಂಕರ್ ಝಾ ಇಂದು ನ್ಯಾಯಾಲಯಕ್ಕೆ ತಿಳಿಸಿದರು.

6. ಹಗರಣದ ತನಿಖೆಗಾಗಿ ಮಮತಾ ಬ್ಯಾನರ್ಜಿ ಅವರು ತನಿಖಾ ಆಯೋಗವನ್ನು ರಚಿಸಿದ್ದಾರೆ. ನಿವೃತ್ತ ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜ್ಯೋತಿರ್ಮಯ್ ಭಟ್ಟಾಚಾರ್ಯ ಮತ್ತು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂಬಿ ಲೋಕೂರ್ ಈ ಆಯೋಗದಲ್ಲಿದ್ದಾರೆ.

7. ದಿ ವೈರ್ ಸೇರಿದಂತೆ ಹಲವು ಪ್ರಮುಖ ಪ್ರಕಟಣೆಗಳು ಒಳಗೊಂಡ ಜಾಗತಿಕ ಮಾಧ್ಯಮ ತನಿಖೆಯು ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನು ಪೂರೈಸುವ ಎನ್ಎಸ್ಒ ನ ಸೋರಿಕೆಯಾದ ಡೇಟಾಬೇಸ್‌ನಲ್ಲಿ ಭಾರತದ 300 ಫೋನ್‌ಗಳು ಸಂಭಾವ್ಯ ಗುರಿಗಳ ಪಟ್ಟಿಯಲ್ಲಿರುವುದನ್ನು ಬಹಿರಂಗಪಡಿಸಿದೆ. ಆದಾಗ್ಯೂ, ಎಲ್ಲಾ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ದೃಢಪಡಿಸಿಲ್ಲ

8. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, ಇಬ್ಬರು ಕೇಂದ್ರ ಸಚಿವರು, ಮಾಜಿ ಚುನಾವಣಾ ಆಯುಕ್ತರು, 40 ಪತ್ರಕರ್ತರು ಸೇರಿದಂತೆ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿದ್ದಾರೆ.

9. ತನಿಖೆಯ ಬೇಡಿಕೆಗಳನ್ನು ತಳ್ಳಿಹಾಕಿದ ಸರ್ಕಾರವು ತನ್ನ ಏಜೆನ್ಸಿಗಳಿಂದ ಯಾವುದೇ ಅನಧಿಕೃತ ಹಸ್ತಕ್ಷೇಪವಿಲ್ಲ ನಡೆದಿಲ್ಲ ಎಂದು ಹೇಳಿದೆ.  ನಿರ್ದಿಷ್ಟ ಜನರ ಮೇಲೆ ಸರ್ಕಾರದ ಕಣ್ಗಾವಲಿಗೆ ಸಂಬಂಧಿಸಿದ ಆರೋಪಗಳಿಗೆ ಯಾವುದೇ ನಿರ್ದಿಷ್ಟ ಆಧಾರವಿಲ್ಲ ಅಥವಾ ಅದಕ್ಕೆ ಸಂಬಂಧಿಸಿದ ಸತ್ಯವಿಲ್ಲ ಎಂದು ಸರ್ಕಾರ ಆರೋಪಗಳನ್ನು ನಿರಾಕರಿಸಿದೆ.

10. ಸರ್ಕಾರಗಳು ಮತ್ತು ಸರ್ಕಾರಿ ಏಜೆನ್ಸಿಗಳಿಗೆ ಮಾತ್ರ ಪೆಗಾಸಸ್ ಅನ್ನು ಮಾರಾಟ ಮಾಡುವ NSO ಗುಂಪು, ಇದು ಫೋನ್ ಸಂಖ್ಯೆಗಳ ಸೋರಿಕೆಯಾದ ಡೇಟಾಬೇಸ್‌ಗೆ ಸಂಪರ್ಕ ಹೊಂದಿಲ್ಲ ಎಂದು ಹೇಳುತ್ತದೆ. ಈ ವರದಿಗಳಲ್ಲಿ ಯಾವುದೇ ಅಂಶವಿಲ್ಲ ಎಂದು ಸರ್ಕಾರ ಹೇಳಿದೆ.

ಇದನ್ನೂ  ಓದಿ:  Pegasus row: ಪೆಗಾಸಸ್ ವಿವಾದದ ಕುರಿತು ಕಾರ್ಯತಂತ್ರ ರೂಪಿಸಲು ವಿಪಕ್ಷ ನಾಯಕರನ್ನು ಉಪಾಹಾರ ಸಭೆಗೆ ಆಹ್ವಾನಿಸಿದ ರಾಹುಲ್ ಗಾಂಧಿ

(Pegasus spyware case Allegations serious if newspaper reports are correct says Supreme Court)

Follow us on

Related Stories

Most Read Stories

Click on your DTH Provider to Add TV9 Kannada