Pegasus row: ಪೆಗಾಸಸ್ ವಿವಾದದ ಕುರಿತು ಕಾರ್ಯತಂತ್ರ ರೂಪಿಸಲು ವಿಪಕ್ಷ ನಾಯಕರನ್ನು ಉಪಾಹಾರ ಸಭೆಗೆ ಆಹ್ವಾನಿಸಿದ ರಾಹುಲ್ ಗಾಂಧಿ

Rahul Gandhi: ಈ ವಿಷಯದ ಬಗ್ಗೆ ವಿರೋಧ ಪಕ್ಷಗಳ ನಡುವೆ ಒಗ್ಗಟ್ಟು ಮೂಡಿಸಲು ಸಭೆ ನಡೆಸಲಾಗುತ್ತಿದೆ. ತೃಣಮೂಲ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷದ ಸಂಸದರು ಮತ್ತು ವಿವಿಧ ಪಕ್ಷದ ನಾಯಕರನ್ನು ಆಹ್ವಾನಿಸಲಾಗಿದೆ. ಇದುವರೆಗೆ ರಾಹುಲ್ ಗಾಂಧಿ ಕರೆದ ಎಲ್ಲಾ ಸಭೆಗಳಿಗೆ ಟಿಎಂಸಿ ಗೈರಾಗಿದೆ.

Pegasus row: ಪೆಗಾಸಸ್ ವಿವಾದದ ಕುರಿತು ಕಾರ್ಯತಂತ್ರ ರೂಪಿಸಲು ವಿಪಕ್ಷ ನಾಯಕರನ್ನು ಉಪಾಹಾರ ಸಭೆಗೆ ಆಹ್ವಾನಿಸಿದ ರಾಹುಲ್ ಗಾಂಧಿ
ರಾಹುಲ್​ ಗಾಂಧಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 02, 2021 | 6:48 PM

ದೆಹಲಿ: ಪೆಗಾಸಸ್ ಬೇಹುಗಾರಿಕೆ ವಿಷಯದ ಕುರಿತು ಜಂಟಿ ಕಾರ್ಯತಂತ್ರವನ್ನು ರೂಪಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಬೆಳಗಿನ ಉಪಾಹಾರ ಕೂಟಕ್ಕೆ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಿದ್ದಾರೆ. ಪ್ರತಿಪಕ್ಷಗಳು ಪೆಗಾಸಸ್ ವಿವಾದದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಒತ್ತಾಯಿಸುತ್ತಿರುವಾಗ ಮತ್ತು ಕೇಂದ್ರದ ನಾಯಕರು ಪ್ರತಿ ದಿನ ಮುಂದೂಡುವ ನೋಟಿಸ್ ನೀಡುತ್ತಿರುವ ಸಮಯದಲ್ಲಿ ರಾಹುಲ್ ಈ ಸಭೆ ಕರೆದಿದ್ದಾರೆ. ಪ್ರತಿಪಕ್ಷಗಳು ಪೆಗಾಸಸ್ ಸ್ಪೈವೇರ್ ವಿವಾದದ ಬಗ್ಗೆ ಪೂರ್ಣ ಪ್ರಮಾಣದ ಚರ್ಚೆಗೆ ಒತ್ತಾಯಿಸುತ್ತಿದ್ದರೂ, ಪೆಗಾಸಸ್ ಹೊರತುಪಡಿಸಿ ಎಲ್ಲವನನೂ ಚರ್ಚಿಸಲು ಸಿದ್ಧ ಎಂಬುದು ಸರ್ಕಾರದ ನಿಲುವು ಆಗಿದೆ.

ಈ ವಿಷಯದ ಬಗ್ಗೆ ವಿರೋಧ ಪಕ್ಷಗಳ ನಡುವೆ ಒಗ್ಗಟ್ಟು ಮೂಡಿಸಲು ಸಭೆ ನಡೆಸಲಾಗುತ್ತಿದೆ. ತೃಣಮೂಲ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷದ ಸಂಸದರು ಮತ್ತು ವಿವಿಧ ಪಕ್ಷದ ನಾಯಕರನ್ನು ಆಹ್ವಾನಿಸಲಾಗಿದೆ. ಇದುವರೆಗೆ ರಾಹುಲ್ ಗಾಂಧಿ ಕರೆದ ಎಲ್ಲಾ ಸಭೆಗಳಿಗೆ ಟಿಎಂಸಿ ಗೈರಾಗಿದೆ.

“ಸಂಸತ್ತಿನಲ್ಲಿ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ” ಎಂದು ಪ್ರತಿಪಾದಿಸಿದ ಗಾಂಧಿ, ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು “ಭಾರತ, ಅದರ ಸಂಸ್ಥೆಗಳ ವಿರುದ್ಧ ಪೆಗಾಸಸ್ ಬಳಸುವ ಮೂಲಕ ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕ ತಂದಿದ್ದಾರೆ” ಎಂದು ಆರೋಪಿಸಿದ್ದರು.

ಕಳೆದ ಬುಧವಾರ ವಿರೋಧ ಪಕ್ಷಗಳ ನೆಲದ ನಾಯಕರೊಂದಿಗಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗಾಂಧಿ, ಪ್ರತಿಪಕ್ಷಗಳಿಗೆ ಒಂದೇ ಒಂದು ಪ್ರಶ್ನೆ ಇದೆ: ಭಾರತ ಸರ್ಕಾರವು ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನು “ತನ್ನದೇ ಜನರ ವಿರುದ್ಧ ಅಸ್ತ್ರ” ವಾಗಿ ಬಳಸಲು ಖರೀದಿಸಿದೆಯೇ ಎಂದು ಹೇಳಿದರು. ಈ ವಿಷಯವನ್ನು ಏಕೆ ಸದನದಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದು ಗಾಂಧಿ ಪ್ರಶ್ನಿಸಿದರು. ಪ್ರತಿಪಕ್ಷಗಳು ಸಂಸತ್ತಿನ ಕಲಾಪಕ್ಕೆ ತೊಂದರೆ ನೀಡುತ್ತಿಲ್ಲ ಆದರೆ ನಮ್ಮ ಜವಾಬ್ದಾರಿಯನ್ನು ಮಾತ್ರ ಪೂರೈಸುತ್ತಿವೆ ಎಂದು ಅವರು ಒತ್ತಿ ಹೇಳಿದರು.

ಪೆಗಾಸಸ್ ವಿವಾದವು ಸಂಸತ್ತನ್ನು ಹಲವು ದಿನಗಳವರೆಗೆ ಅಡ್ಡಿಪಡಿಸುತ್ತಿರುವುದರಿಂದ ಸರ್ಕಾರವು “ಮುಂಗಾರು ಅಧಿವೇಶನದ ಮೊಟಕುಗೊಳಿಸುವಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಿದೆ” ಎಂದು ಹೇಳಿದೆ.

ಇದನ್ನೂ ಓದಿ: ಪೆಗಾಸಸ್ ವಿವಾದ ಬಗ್ಗೆ ತನಿಖೆಗೆ ಒತ್ತಾಯಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್

ಇದನ್ನೂ ಓದಿ: ಪೆಗಾಸಸ್‌ ಬಳಸಿ ಇಬ್ಬರು ಪತ್ರಕರ್ತರ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ: ಫ್ರಾನ್ಸ್‌ನ ಸೈಬರ್‌ ಸೆಕ್ಯುರಿಟಿ ಏಜೆನ್ಸಿ

(Congress leader Rahul Gandhi has invited leaders of Opposition to a breakfast meeting on Pegasus row)