ಕಾಶ್ಮೀರಿಗಳು ನಿರ್ದೋಷಿಗಳೆಂದು ಸಾಬೀತಾಗುವವರೆಗೆ ದೋಷಿಗಳು, ಉಗ್ರರಿಗೆ ನೆರವಾದ ಪೊಲೀಸ್ ಅಧಿಕಾರಿಯದ್ದು ಅಪರಾಧವೇ ಅಲ್ಲ!: ಮೆಹಬೂಬಾ ಮುಫ್ತಿ
ಸಹಾಯಕ ಪೊಲೀಸ ಸೂಪರಿಂಟೆಂಡೆಂಟ್ ಆಗಿದ್ದ ಸಿಂಗ್ ಅವರನ್ನು ಸೇವೆಯಿಂದ ವಜಾ ಮಾಡಿದ ಬಗ್ಗೆ ಸರ್ಕಾರದ ಮೇ 20 ರ ಆದೇಶವೊಂದು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಅದ ನಂತರ ಮೆಹಬೂಬಾ ಅವರು ಪ್ರತಿಕ್ರಿಯಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಅವರು ಕಳೆದ ವರ್ಷ ಉಗ್ರಗಾಮಿಗಳನ್ನು ವಾಹನವೊಂದರಲ್ಲಿ ಸಾಗಿಸಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸದ ಕೇಂದ್ರ ಸರ್ಕಾರ ಅಮಾಯಕ ಕಾಶ್ಮೀರಿಗಳನ್ನು ಭಯೋತ್ಪಾದಕ ವಿರೋಧಿ ಕಾಯ್ದೆಗಳ ಅಡಿಯಲ್ಲಿ ಬಂಧಿಸಿ ಜೈಲಿನಲ್ಲಿ ಕೊಳೆಯುಂತೆ ಮಾಡಿದೆ ಎಂದು ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರು ಸೋಮವಾರ ಆರೋಪಿಸಿದ್ದಾರೆ. ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಹೇಳಿದ ಅವರು, ಕಾಶ್ಮೀರಿಗಳನ್ನು ಅಮಾಯಕರೆಂದು ಸಾಬೀತಾಗುವವರೆಗೆ ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತಿದೆ ಎಂದರು.
ಸಹಾಯಕ ಪೊಲೀಸ ಸೂಪರಿಂಟೆಂಡೆಂಟ್ ಆಗಿದ್ದ ಸಿಂಗ್ ಅವರನ್ನು ಸೇವೆಯಿಂದ ವಜಾ ಮಾಡಿದ ಬಗ್ಗೆ ಸರ್ಕಾರದ ಮೇ 20 ರ ಆದೇಶವೊಂದು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಅದ ನಂತರ ಮೆಹಬೂಬಾ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಹೊರಡಿಸಿರುವ ಅಧಿಕೃತ ಆದೇಶದಲ್ಲಿ ಭಾರತದ ಸಂವಿಧಾನದ 311ನೇ ವಿಧಿ ಅಡಿಯಲ್ಲಿ ಸಿಂಗ್ ಅವರನ್ನು ಸೇವೆಯಿಂದ ಕೂಡಲೇ ವಜಾ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಈ ನಿಬಂಧನೆಯು ಸರ್ಕಾರ ವಿಚಾರಣೆಯನ್ನು ನಡೆಸುವುದು ಅಧ್ಯಕ್ಷೀಯ ಆನಂದವನ್ನು ಹಿಂತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಅದನ್ನು ಹೈಕೋರ್ಟ್ ಪ್ರಶ್ನಿಸಬಹದಾಗಿದೆ.
‘ಭಯೋತ್ಪಾದಕ ವಿರೋಧಿ ಚಟುವಟಿಕೆಗಳ ಕಾಯ್ದೆ ಅಡಿಯಲ್ಲಿ ಬಂಧನಕ್ಕೊಳಗಾಗಿರುವ ಅಮಾಯಕ ಕಾಶ್ಮೀರಿಗಳು ವರ್ಷಗಳಿಂದ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ವಿಚಾರಣೆಯೇ ಅವರ ಪಾಲಿಗೆ ಶಿಕ್ಷೆಯಾಗಿ ಮಾರ್ಪಟ್ಟಿದೆ. ಆದರೆ, ಭಾರತ ಸರ್ಕಾರಕ್ಕೆ ಉಗ್ರರ ಜೊತೆ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದ ಸಿಂಗ್ ಅವರ ವಿರುದ್ಧ ವಿಚಾರಣೆ ನಡೆಸುವುದೂ ಬೇಕಿಲ್ಲ. ದ್ರೋಹದಂಥ ಪ್ರಕರಣಗಳಲ್ಲಿ ಸಿಂಗ್ ವ್ಯವಸ್ಥೆಯೊಂದಿಗೆ ಕೈಜೋಡಿಸಿದ ಕಾರಣಕ್ಕೆ ಅವರ ಅಪರಾಧವನ್ನು ಹಗುರವಾಗಿ ಪರಿಗಣಿಸಲಾಗುತ್ತಿದೆಯೇ? ಎಂದು ಮೆಹಬೂಬಾ ಟ್ವೀಟೊಂದರಲ್ಲಿ ಪ್ರಶ್ನಿಸಿದ್ದಾರೆ. ಕಾಶ್ಮೀರಿಗಳು ನಿರ್ದೋಷಿಗಳೆಂದು ಸಾಬೀತಾಗುವವರಗೆ ಅವರನ್ನು ದೋಷಿಗಳೆಂದು ಪರಿಗಣಿಸಲಾಗುತ್ತಿದೆ,’ ಎಂದು ಮಹೆಬೂಬಾ ಹೇಳಿದ್ದಾರೆ.
‘ಸರ್ಕಾರೀ ನೌಕರಿಗಳಿಗಾಗಲೀ, ಅಥವಾ ಪಾಸ್ಪೋರ್ಟ್ ಮಾಡಿಸುವುದಕ್ಕಾಗಲೀ, ಕಾಶ್ಮೀರಿಗಳನ್ನು ಬಹಳ ಕೆಟ್ಟದ್ದಾಗಿ ಸ್ಕ್ರೂಟಿನಿ ಮಾಡಲಾಗುತ್ತಿದೆ. ಆದರೆ ಭಯೋತ್ಪಾದಕರಿಗೆ ನೆರವಾದ ಒಬ್ಬ ಪೊಲೀಸ್ ಅಧಿಕಾರಿಯನ್ನು ಸುಮ್ಮನೆ ಬಿಟ್ಟುಬಿಡಲಾಗುತ್ತದೆ. ಸರ್ಕಾರದ ಇಬ್ಬಗೆ ನೀತಿ ಮತ್ತು ಹೊಲಸು ರಾಜಕೀಯ ಸ್ಪಷ್ಟವಾಗಿ ಕಾಣಿಸುತ್ತಿದೆ,’ ಎಂದು ಆಕೆ ಹೇಳಿದ್ದಾರೆ.
ಕಳೆದ ವರ್ಷ ಜನೆವರಿಯಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರರನ್ನು ಸಿಂಗ್ ಅವರು ಜಮ್ಮು ಮತ್ತು ಕಾಶ್ಮಿರಕ್ಕೆ ಸಾಗಿಸುತ್ತಿದ್ದಾಗ ಆ ರಾಜ್ಯದ ಪೋಲೀಸರಿಗೆ ಸಿಕ್ಕಿಬಿದ್ದಿದ್ದರು. ಸದರಿ ಕೇಸನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನಿಖೆ ನಡೆಸಿ ಸಿಂಗ್ ಹಾಗೂ ಇನ್ನೂ ಕೆಲವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು.
ಎನ್ಐಎ ಚಾರ್ಜ್ಶೀಟ್ ಪ್ರಕಾರ, ಪಾಕಿಸ್ತಾನದ ಹ್ಯಾಂಡ್ಲರ್ ಒಬ್ಬನ ಅಣತಿ ಮೇರಗೆ ಸಿಂಗ್ ಅವರು ಗೂಢಚರ್ಯೆ ಕೆಲಸಗಳನ್ನು ನಡೆಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಒಂದು ‘ಕಂಟ್ಯಾಕ್ಟ್’ ಸ್ಥಾಪಿಸುವ ಕೆಲಸಕ್ಕೆ ಒಪ್ಪಿಕೊಂಡಿದ್ದರು. ಹಿಜ್ಬುಲ್ ಮಿಜಾಹಿದೀನ್ ಉಗ್ರರನ್ನು ಸಾಗಿಸಲು ಸಿಂಗ್ ಅವರು ತಮ್ಮ ಸ್ವಂತ ವಾಹನವನ್ನು ಬಳಸಿದ್ದರು ಮತ್ತು ಶಸ್ತ್ರಾಸ್ತ್ರಗಳನ್ನು ಪಡೆಯಲು ಸಹಕರಿಸುವುದಾಗಿ ಹೇಳಿದ್ದರು, ಎಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದ ಕನಚಕ್ ಪ್ರದೇಶದಲ್ಲಿ ಸ್ಫೋಟಕ ಹೊತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿದ ಪೊಲೀಸರು