ಭಾರತದಲ್ಲಿ ಲಸಿಕೆ ಪ್ರಯೋಗಕ್ಕೆ ಅನುಮೋದನೆ ಕೇಳಿ ಸಲ್ಲಿಸಿದ್ದ ಪ್ರಸ್ತಾವನೆ ಹಿಂಪಡೆದ ಜಾನ್ಸನ್​ ಆ್ಯಂಡ್​ ಜಾನ್ಸನ್​; ಕಾರಣ ಅಸ್ಪಷ್ಟ

Johnson & Johnson Covid 19 Vaccine: ಅಮೆರಿಕದ ಆಹಾರ ಮತ್ತು ಔಷಧ ಆಡಳಿತ, ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿಯ ವೈರಲ್ ವೆಕ್ಟರ್ ಕೊವಿಡ್​ 19 ಲಸಿಕೆಯ ತುರ್ತು ಬಳಕೆಗೆ 2021ರ ಫೆಬ್ರವರಿಯಲ್ಲಿ ಅನುಮತಿ ನೀಡಿತ್ತು.

ಭಾರತದಲ್ಲಿ ಲಸಿಕೆ ಪ್ರಯೋಗಕ್ಕೆ ಅನುಮೋದನೆ ಕೇಳಿ ಸಲ್ಲಿಸಿದ್ದ ಪ್ರಸ್ತಾವನೆ ಹಿಂಪಡೆದ ಜಾನ್ಸನ್​ ಆ್ಯಂಡ್​ ಜಾನ್ಸನ್​; ಕಾರಣ ಅಸ್ಪಷ್ಟ
ಜಾನ್ಸನ್​ ಆ್ಯಂಡ್ ಜಾನ್ಸನ್ ಕೊವಿಡ್ 19 ಲಸಿಕೆ
Follow us
TV9 Web
| Updated By: Lakshmi Hegde

Updated on: Aug 02, 2021 | 5:24 PM

ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿ (Johnson & Johnson) ತನ್ನ ಜಾನ್​ಸೆನ್​ ಕೊವಿಡ್​ 19 ಲಸಿಕೆಯ ಕ್ಲಿನಿಕಲ್​ ಪ್ರಯೋಗವನ್ನು ಭಾರತದಲ್ಲಿ ನಡೆಸಲು ಅನುಮೋದನೆ ನೀಡುವಂತೆ ಡಿಸಿಜಿಐ (ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ-DCGI)ಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಈಗ ಯಾವುದೇ ಕಾರಣವನ್ನೂ ಹೇಳದೆ ಆ ಪಸ್ತಾವನೆಯನ್ನು ಹಿಂಪಡೆದಿದೆ. ಈ ಬಗ್ಗೆ ಡಿಸಿಜಿಐ ಅಧಿಕೃತ ಮಾಹಿತಿ ನೀಡಿದೆ.

ಜಾನ್ಸನ್​ ಆ್ಯಂಡ್​ ಜಾನ್ಸನ್ ಕಂಪನಿ ಮೂಲತಃ ಯುಸ್​ ಮೂಲದ ಸಂಸ್ಥೆಯಾಗಿದೆ. ಜಾನ್​ಸೆನ್ ಎಂಬ ಹೆಸರಿನಲ್ಲಿ ಕೊವಿಡ್​ 19 ಲಸಿಕೆ ತಯಾರಿಸಿದೆ. ಇದು ಒಂದೇ ಡೋಸ್​ನ ಲಸಿಕೆಯಾಗಿದ್ದು, ಭಾರತದಲ್ಲೂ ಪ್ರಯೋಗ ನಡೆಸಲು ಅನುಮೋದನೆ ನೀಡಿ ಎಂದು ಡಿಸಿಜಿಐ ಬಳಿ ಕೇಳಿತ್ತು. ಅಲ್ಲದೆ ತಮ್ಮ ಕಂಪನಿಯ ಸಾವಿರಕ್ಕೂ ಹೆಚ್ಚು ಡೋಸ್ ಲಸಿಕೆ ಜುಲೈನಲ್ಲಿ ಭಾರತ ತಲುಪಲಿದೆ ಎಂದೂ ಹೇಳಿಕೊಂಡಿತ್ತು.

ಇನ್ನು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ, ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿಯ ವೈರಲ್ ವೆಕ್ಟರ್ ಕೊವಿಡ್​ 19 ಲಸಿಕೆಯ ತುರ್ತು ಬಳಕೆಗೆ 2021ರ ಫೆಬ್ರವರಿಯಲ್ಲಿ ಅನುಮತಿ ನೀಡಿತ್ತು. ಹಾಗೇ, ಈ ಲಸಿಕೆ ಡೆಲ್ಟಾ ರೂಪಾಂತರಿ ಸೇರಿ, ಕೊವಿಡ್​ 19 ವೈರಸ್​ನ ಮತ್ತೂ ಕೆಲವು ರೂಪಾಂತರಿ ವೈರಾಣುಗಳ ವಿರುದ್ಧ ಹೋರಾಡಬಲ್ಲದು ಎಂದೂ ಜಾನ್ಸನ್​ ಆ್ಯಂಡ್ ಜಾನ್ಸನ್ ತಿಳಿಸಿತ್ತು. ಆದರೆ ಈ ಲಸಿಕೆಯಿಂದ ಗಂಭೀರ ಸ್ವರೂಪದ ರಕ್ತಹೆಪ್ಪುಗಟ್ಟುವಿಕೆ ಉಂಟಾಗಬಹುದು ಎಂಬುದೊಂದು ಅಧ್ಯಯನ ವರದಿಯೂ ಹೊರಬಿದ್ದಿತ್ತು. ಅಂದರೆ ಲಸಿಕೆ ತೆಗೆದುಕೊಂಡವರಿಗೆಲ್ಲ ರಕ್ತ ಹೆಪ್ಪುಗಟ್ಟುತ್ತದೆ ಎಂದಲ್ಲ. ಆದರೆ ಅದನ್ನು ಉಂಟು ಮಾಡುವ ಅಂಶಗಳು ಲಸಿಕೆಯಲ್ಲಿ ಇವೆ ಎನ್ನಲಾಗಿತ್ತು. ಆದರೆ ಈಗ ಜಾನ್ಸನ್​ ಆ್ಯಂಡ್ ಜಾನ್ಸನ್​ ತನ್ನ ಪ್ರಸ್ತಾವನೆಯನ್ನು ಯಾಕೆ ಹಿಂಪಡೆದಿದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಸದ್ಯ ಭಾರತದಲ್ಲಿ ಕೊವಿಶೀಲ್ಡ್​, ಕೊವ್ಯಾಕ್ಸಿನ್​, ಸ್ಪುಟ್ನಿಕ್​ ವಿ ಮತ್ತು ಮಾಡೆರ್ನಾ ಲಸಿಕೆಗಳನ್ನು ಬಳಸಲಾಗುತ್ತಿದ್ದು, ಅದರಲ್ಲಿ ಕೊವ್ಯಾಕ್ಸಿನ್​ ಮತ್ತು ಕೊವಿಶೀಲ್ಡ್ ಭಾರತದಲ್ಲೇ ತಯಾರಾಗಿದ್ದಾಗಿವೆ.

ಡಬ್ಲ್ಯೂಎಚ್​ಒ ವರದಿ ಇನ್ನು ಜಾನ್ಸನ್​ ಆ್ಯಂಡ್ ಜಾನ್ಸನ್​ ಕೊವಿಡ್​ 19 ಲಸಿಕೆ, ಕೊವಿಡ್ 19 ಸೋಂಕಿನ ಸೌಮ್ಯ ಮತ್ತು ಮಧ್ಯಮ ಲಕ್ಷಣಗಳ ಪ್ರಕರಣದಲ್ಲಿ ಶೇ.66.3 ಮತ್ತು ಗಂಭೀರ ಕೇಸ್​​ನಲ್ಲಿ ಶೇ.76.3ರಷ್ಟು ಪ್ರಭಾವ ಭೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಲಸಿಕೆ ತೆಗೆದುಕೊಂಡ ಮೇಲೆ ಕೂಡ ಯಾರಾದರೂ ಕೊವಿಡ್​ 19 ಸೋಂಕಿಗೆ ಒಳಗಾದರೆ ಅವರು ಖಂಡಿತ ಆಸ್ಪತ್ರೆಗೆ ದಾಖಲಾಗುವುದು ಬೇಕಾಗುವುದಿಲ್ಲ ಎಂದೂ ಹೇಳಿತ್ತು.

ಇದನ್ನೂ ಓದಿ: ಚೀನಾದಲ್ಲಿ ಹೆಚ್ಚುತ್ತಿದೆ ಡೆಲ್ಟಾ ರೂಪಾಂತರಿ ವೈರಸ್​ ಪ್ರಸರಣ; ನಾಲ್ಕು ನಗರಗಳು ತೀವ್ರ ಅಪಾಯದಲ್ಲಿ..

Johnson and Johnson withdraws Its proposal of Covid 19 vaccine approval in India

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ