AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಲ್ಲಿ ಹೆಚ್ಚುತ್ತಿದೆ ಡೆಲ್ಟಾ ರೂಪಾಂತರಿ ವೈರಸ್​ ಪ್ರಸರಣ; ನಾಲ್ಕು ನಗರಗಳು ತೀವ್ರ ಅಪಾಯದಲ್ಲಿ..

ಚೀನಾದಲ್ಲಿ ಸದ್ಯ 95 ನಗರಗಳಲ್ಲಿ ಡೆಲ್ಟಾ ಅಪಾಯ ಎದುರಾಗಿದೆ. ಅದರಲ್ಲಿ 91 ನಗರಗಳಲ್ಲಿ ಮಧ್ಯಮಮಟ್ಟದಲ್ಲಿ ಅಪಾಯವಿದ್ದರೆ, ಯುನಾನ್, ನಾನ್ಜಿಂಗ್, ಹೆನಾನ್‌ನ ಝೆಂಗ್​ಝುಗಳಲ್ಲಿ ಅತ್ಯಂತ ಹೆಚ್ಚು ಡೆಲ್ಟಾ ಅಪಾಯವಿದೆ.

ಚೀನಾದಲ್ಲಿ ಹೆಚ್ಚುತ್ತಿದೆ ಡೆಲ್ಟಾ ರೂಪಾಂತರಿ ವೈರಸ್​ ಪ್ರಸರಣ; ನಾಲ್ಕು ನಗರಗಳು ತೀವ್ರ ಅಪಾಯದಲ್ಲಿ..
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Aug 02, 2021 | 4:56 PM

Share

ಬೀಜಿಂಗ್​: ಚೀನಾ (China) ದಲ್ಲೀಗ ಕೊವಿಡ್​ 19 (Covid 19) ರೂಪಾಂತರಿ ವೈರಸ್​ ಡೆಲ್ಟಾ (Delta Variant​) ಹಾವಳಿ ಶುರುವಾಗಿದೆ. ಬೀಜಿಂಗ್ ಸೇರಿ ಸುಮಾರು 18 ಪ್ರಾಂತ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗಿರುವ ಡೆಲ್ಟಾ ಬಗ್ಗೆ ತುಂಬ ಎಚ್ಚರಿಕೆಯಿಂದ ಇರುವಂತೆ ಚೀನಾ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. 18 ಪ್ರಾಂತ್ಯಗಳ 27ನಗರಗಳಿಂದ ಸುಮಾರು 300 ಡೆಲ್ಟಾ ಪ್ರಕರಣಗಳು ಇತ್ತೀಚೆಗೆ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಕೊವಿಡ್​ 19 ಸೋಂಕಿಗೆ ಹೋಲಿಸಿದರೆ ಇದು ಕಡಿಮೆ ಆಗಿದ್ದರೂ, ಅತ್ಯಂತ ವೇಗವಾಗಿ ಪ್ರಸರಣಗೊಳ್ಳುತ್ತಿರುವುದು ಸಹಜವಾಗಿಯೇ ಕಳವಳ ಮೂಡಿಸಿದೆ.

ಚೀನಾದಲ್ಲಿ ಸದ್ಯ 95 ನಗರಗಳಲ್ಲಿ ಡೆಲ್ಟಾ ಅಪಾಯ ಎದುರಾಗಿದೆ. ಅದರಲ್ಲಿ 91 ನಗರಗಳಲ್ಲಿ ಮಧ್ಯಮಮಟ್ಟದಲ್ಲಿ ಅಪಾಯವಿದ್ದರೆ, ಯುನಾನ್, ನಾನ್ಜಿಂಗ್, ಹೆನಾನ್‌ನ ಝೆಂಗ್​ಝುಗಳಲ್ಲಿ ಅತ್ಯಂತ ಹೆಚ್ಚು ಡೆಲ್ಟಾ ಅಪಾಯವಿದೆ ಎಂದು ಗ್ಲೋಬಲ್ ಟೈಮ್ಸ್​ ವರದಿ ಮಾಡಿದೆ. ಸದ್ಯ ಬೀಜಿಂಗ್​ನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಲ್ಲಿನ ಸ್ಥಳೀಯ ಆಡಳಿತ ಮುಂದಾಗಿದೆ. ವೈರಸ್​ ಪ್ರಮಾಣ ಹೆಚ್ಚಾಗಿರುವ ಪ್ರದೇಶಗಳಿಂದ ಬೀಜಿಂಗ್​ಗೆ ಯಾವುದೇ ವಾಹನ ಪ್ರವೇಶ ಮತ್ತು ಜನರು ಬರುವುದನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಜೈ ಭೀಮ್​… ಸೂರ್ಯ ನಟನೆಯ ಹೊಸ ಚಿತ್ರದ ಕಥೆ ಬಗ್ಗೆ ಸಿಕ್ತು ಮಹತ್ವದ ಸುಳಿವು; ಪಾತ್ರ ರಿವೀಲ್

Published On - 4:54 pm, Mon, 2 August 21