ಜೈ ಭೀಮ್​… ಸೂರ್ಯ ನಟನೆಯ ಹೊಸ ಚಿತ್ರದ ಕಥೆ ಬಗ್ಗೆ ಸಿಕ್ತು ಮಹತ್ವದ ಸುಳಿವು; ಪಾತ್ರ ರಿವೀಲ್

‘ಜೈ ಭೀಮ್​’ ಸಿನಿಮಾದ ಕಥೆ ಏನಿರಬಹುದು ಎಂದು ಅಭಿಮಾನಿಗಳೆಲ್ಲ ತಲೆಗೆ ಹುಳ ಬಿಟ್ಟುಕೊಂಡಿದ್ದರು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಈ ಚಿತ್ರಕ್ಕೆ ಜ್ಞಾನವೇಲ್​ ನಿರ್ದೇಶನ ಮಾಡಲಿದ್ದಾರೆ.

ಜೈ ಭೀಮ್​... ಸೂರ್ಯ ನಟನೆಯ ಹೊಸ ಚಿತ್ರದ ಕಥೆ ಬಗ್ಗೆ ಸಿಕ್ತು ಮಹತ್ವದ ಸುಳಿವು; ಪಾತ್ರ ರಿವೀಲ್
‘ಜೈ ಭೀಮ್​’ ಚಿತ್ರದಲ್ಲಿ ನಟ ಸೂರ್ಯ
Follow us
TV9 Web
| Updated By: ಮದನ್​ ಕುಮಾರ್​

Updated on: Aug 02, 2021 | 4:50 PM

ಕಾಲಿವುಡ್​ನ ಖ್ಯಾತ ನಟ ಸೂರ್ಯ (Suriya) ಅಭಿನಯಿಸಲಿರುವ ಹೊಸ ಸಿನಿಮಾಗೆ ‘ಜೈ ಭೀಮ್​’ (Jai Bheem) ಎಂದು ಶೀರ್ಷಿಕೆ ಇಟ್ಟಿರುವ ವಿಚಾರ ಇತ್ತೀಚೆಗಷ್ಟೇ ಬಹಿರಂಗ ಆಗಿತ್ತು. ಇಂಥ ಪವರ್​ಫುಲ್​ ಶೀರ್ಷಿಕೆಯ ಜೊತೆಗೆ ಕೌತುಕ ಮೂಡಿಸುವಂತಹ ಫಸ್ಟ್​ಲುಕ್​ ಕೂಡ ಬಹಿರಂಗ ಆಗಿತ್ತು. ಕಪ್ಪು ಕೋಟು ಧರಿಸಿ ಲಾಯರ್​ ಗೆಟಪ್​ನಲ್ಲಿ ಸೂರ್ಯ ಕಾಣಿಸಿಕೊಂಡಿದ್ದರು. ಹಾಗಾದರೆ ಈ ಸಿನಿಮಾದ ಕಥೆ ಏನಿರಬಹುದು ಎಂದು ಅಭಿಮಾನಿಗಳೆಲ್ಲ ತಲೆಗೆ ಹುಳ ಬಿಟ್ಟುಕೊಂಡಿದ್ದರು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಈ ಸಿನಿಮಾ ಕಥೆಯ ಕುರಿತು ಒಂದು ಮಹತ್ವದ ಸುಳಿವು ಸಿಕ್ಕಿದೆ.

ಈ ಸಿನಿಮಾದ ಪೋಸ್ಟರ್​ ನೋಡಿದಾಗಲೇ ಕೆಲವು ಅನುಮಾನ ಮೂಡುವಂತಿತ್ತು. ಪೋಸ್ಟರ್​ನ ಹಿನ್ನೆಲೆಯಲ್ಲಿ ನ್ಯಾಯಾಲಯ ಕಟ್ಟಡ, ಮುನ್ನೆಲೆಯಲ್ಲಿ ಬುಡಕಟ್ಟು ಜನರು ನಿಂತಿರುವುದು ಹೈಲೈಟ್ ಆಗಿತ್ತು. ಅದರಲ್ಲೂ ಜೈ ಭೀಮ್​ ಎಂಬ ಶೀರ್ಷಿಕೆ ಗಮನಿಸಿದರೆ, ಈ ಚಿತ್ರದಲ್ಲಿ ದೀನ ದಲಿತರ ಪರವಾಗಿ ಕಥಾನಾಯಕ ಹೋರಾಡುತ್ತಾನೆ ಎಂಬುದು ಖಚಿತವಾಗುವಂತಿತ್ತು. ಆ ಊಹೆಗೆ ಈಗ ಪುಷ್ಠಿ ಸಿಕ್ಕಿದೆ. ಆ ಬಗ್ಗೆ ಕಾಲಿವುಡ್​ ಅಂಗಳದಲ್ಲಿ ಗುಸುಗುಸು ಕೇಳಿಬರುತ್ತಿದೆ.

ಚಂದ್ರು ಎಂಬ ಹಿರಿಯ ಲಾಯರ್​ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಳ್ಳಲಿದ್ದಾರಂತೆ. ಬುಡಕಟ್ಟು ಮಹಿಳೆಯೊಬ್ಬರಿಗೆ ಚಂದ್ರು ನ್ಯಾಯ ಕೊಡಿಸಿದ ರೋಚಕ ಕಥೆಯನ್ನು ಈ ಸಿನಿಮಾ ವಿವರಿಸಲಿದೆ. ಅದು 1993ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಸೂರ್ಯ ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಮನಸೆಳೆಯುವ ಸಿನಿಮಾಗಳ ಮೂಲಕ ಅವರು ದೇಶಾದ್ಯಂತ ತಮ್ಮ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಕಳೆದ ವರ್ಷ ತೆರೆಕಂಡ ‘ಸೂರರೈ ಪೋಟ್ರು’ ಸಿನಿಮಾ ಮೂಲಕ ಅವರು ಕನ್ನಡದ ಸಿನಿಪ್ರಿಯರಿಗೆ ಹೆಚ್ಚು ಹತ್ತಿರ ಆಗಿದ್ದರು. ಈಗ ನಿರ್ಮಾಣ ಆಗುತ್ತಿರುವ ‘ಜೈ ಭೀಮ್​’ ಚಿತ್ರ ಕೂಡ ಕನ್ನಡಕ್ಕೆ ಡಬ್​ ಆಗಿ ತೆರೆಕಾಣಲಿದೆ. ಹಾಗಾಗಿ ಕನ್ನಡದಲ್ಲೂ ಈ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕೆ ಜ್ಞಾನವೇಲ್​ ನಿರ್ದೇಶನ ಮಾಡಲಿದ್ದಾರೆ.

ಇದನ್ನೂ ಓದಿ:

‘ಅಳುವುದರ ಬಗ್ಗೆ ಸುದ್ದಿ ಪ್ರಕಟಿಸಿದರೆ ಮಾನನಷ್ಟ ಹೇಗಾಗುತ್ತೆ?’ ಶಿಲ್ಪಾ ಶೆಟ್ಟಿಗೆ ಕೋರ್ಟ್ ತರಾಟೆ

ವಂಚನೆ ಆರೋಪ; ಸ್ಯಾಂಡಲ್​ವುಡ್​ ನಿರ್ಮಾಪಕನಿಗೆ 5 ಕೋಟಿ ದಂಡ, ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​