ಪೆಗಾಸಸ್ ವಿವಾದ ಬಗ್ಗೆ ತನಿಖೆಗೆ ಒತ್ತಾಯಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್

Nitish Kumar: ನಿತೀಶ್ ಕುಮಾರ್ ಅವರ ಜೆಡಿಯು ಬಿಜೆಪಿ ಮೈತ್ರಿಕೂಟದಲ್ಲಿದ್ದು, ಪೆಗಾಸಸ್ ಬೇಹುಗಾರಿಕೆ ತನಿಖೆಗೆ ಆಗ್ರಹಿಸಿದ ಬಿಜೆಪಿಯ ಮೊದಲ ಮಿತ್ರಪಕ್ಷವಾಗಿದೆ.

ಪೆಗಾಸಸ್ ವಿವಾದ ಬಗ್ಗೆ ತನಿಖೆಗೆ ಒತ್ತಾಯಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 02, 2021 | 6:01 PM

ಪಟನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪೆಗಾಸಸ್ ಸ್ಪೈವೇರ್ ವಿವಾದದ ತನಿಖೆಗೆ ಸೋಮವಾರ ಕರೆ ನೀಡಿದ್ದಾರೆ. ನಿತೀಶ್ ಕುಮಾರ್ ಅವರ ಜೆಡಿಯು ಬಿಜೆಪಿ ಮೈತ್ರಿಕೂಟದಲ್ಲಿದ್ದು, ಪೆಗಾಸಸ್ ಬೇಹುಗಾರಿಕೆ ತನಿಖೆಗೆ ಆಗ್ರಹಿಸಿದ ಬಿಜೆಪಿಯ ಮೊದಲ ಮಿತ್ರಪಕ್ಷವಾಗಿದೆ. “ತನಿಖೆ ನಡೆಸಬೇಕು, ನಿಜ. ನಾವು ಹಲವು ದಿನಗಳಿಂದ ಟೆಲಿಫೋನ್ ಟ್ಯಾಪಿಂಗ್ ಬಗ್ಗೆ ಕೇಳುತ್ತಿದ್ದೆವು, ”ಎಂದು ಕುಮಾರ್ ಹೇಳಿರುವುದಾಗಿ ಎಎನ್ ಐ ಎಂದು ಸುದ್ದಿ ಸಂಸ್ಥೆ ಹೇಳಿದೆ.

ಬಿಜೆಪಿ ಸಹಕಾರದಿಂದ ಬಿಹಾರದಲ್ಲಿ ಸರ್ಕಾರದ ನೇತೃತ್ವ ವಹಿಸಿರುವ ಜೆಡಿಯು ಮುಖ್ಯಸ್ಥರು, ವಿಪಕ್ಷ ನಾಯಕರು “ಹಲವು ದಿನಗಳಿಂದ (ಮಾತುಕತೆಗೆ) ಒತ್ತಾಯಿಸುತ್ತಿರುವುದರಿಂದ ಆ ವಿಷಯವನ್ನು ಸಂಸತ್ತಿನಲ್ಲಿಯೂ ಚರ್ಚಿಸಬೇಕು” ಎಂದು ಹೇಳಿದರು.

ಸಂಸತ್ತಿನಲ್ಲಿ, ಪ್ರತಿಪಕ್ಷಗಳು ಒಗ್ಗಟ್ಟಾಗಿ ಆರೋಪದ ವಿರುದ್ಧ ಪ್ರತಿಭಟನೆ ನಡೆಸಲು ಮತ್ತು ಉಭಯ ಸದನಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆಗೆ ನಿರಂತರವಾಗಿ ಒತ್ತಾಯಿಸುತ್ತಿವೆ. ಆದಾಗ್ಯೂ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪೆಗಾಸಸ್ ಸ್ಪೈವೇರ್ ಅನ್ನು ಸಾರ್ವಜನಿಕ ವ್ಯಕ್ತಿಗಳ ಮೇಲೆ ಕಣ್ಣಿಡಲು ಬಳಸಲಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದೆ. ಇದು ವರದಿಯನ್ನು “ಸಂವೇದನಾಶೀಲ” ಮತ್ತು “ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸುಸ್ಥಾಪಿತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನ” ಎಂದೂ ಕರೆದಿದೆ.

ಕಳೆದ ವಾರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈ ವಿವಾದವು “ಸಮಸ್ಯೆಯಲ್ಲ” ಎಂದು ಹೇಳಿದ್ದು ಸರ್ಕಾರವು ಜನ-ಸಂಬಂಧಿತ ವಿಷಯಗಳ ಕುರಿತು ಚರ್ಚೆಗೆ ಸಿದ್ಧವಾಗಿದೆ ಎಂದಿದ್ದಾರೆ

ಏತನ್ಮಧ್ಯೆ, ಈ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಆದೇಶಿಸಬೇಕು ಅಥವಾ ಈ ಬಗ್ಗೆ ತನಿಖೆ ನಡೆಸಲು ಹಾಲಿ ನ್ಯಾಯಾಧೀಶರನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್‌ಗೆ ವಿನಂತಿಸಬೇಕು ಎಂದು ವಿರೋಧ ಪಕ್ಷಗಳು ಸರ್ಕಾರವನ್ನು ಒತ್ತಾಯಿಸಿವೆ.

ಇದನ್ನೂ ಓದಿ: ಮಸೂದೆಗೆ ಅಂಗೀಕಾರ ನೀಡುತ್ತಿರುವುದೋ ಅಥವಾ ಪಾಪ್ಡಿ ಚಾಟ್ ಮಾಡುತ್ತಿರುವುದೋ?: ಕೇಂದ್ರ ಸರ್ಕಾರ ವಿರುದ್ಧ ಡೆರಿಕ್ ಒಬ್ರೇನ್ ತರಾಟೆ

ಇದನ್ನೂ ಓದಿ: ಪೆಗಾಸಸ್‌ ಬಳಸಿ ಇಬ್ಬರು ಪತ್ರಕರ್ತರ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ: ಫ್ರಾನ್ಸ್‌ನ ಸೈಬರ್‌ ಸೆಕ್ಯುರಿಟಿ ಏಜೆನ್ಸಿ

(Bihar Chief Minister Nitish Kumar called for a probe in the Pegasus spyware controversy )