ಮಸೂದೆಗೆ ಅಂಗೀಕಾರ ನೀಡುತ್ತಿರುವುದೋ ಅಥವಾ ಪಾಪ್ಡಿ ಚಾಟ್ ಮಾಡುತ್ತಿರುವುದೋ?: ಕೇಂದ್ರ ಸರ್ಕಾರ ವಿರುದ್ಧ ಡೆರಿಕ್ ಒಬ್ರೇನ್ ತರಾಟೆ
Monsoon session 2021: ಮಾಹಿತಿಯ ಪ್ರಕಾರ, ಪ್ರತಿಯೊಂದು ಮಸೂದೆ ಪರಿಚಯಿಸಿದ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸಲಾಯಿತು. ತೆಂಗು ಅಭಿವೃದ್ಧಿ ಮಂಡಳಿ ಮಸೂದೆ (ಒಂದು ನಿಮಿಷದಲ್ಲಿ ಅಂಗೀಕಾರ) ಮತ್ತು ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಮಸೂದೆ 14 ನಿಮಿಷಗಳಲ್ಲಿ ಅಂಗೀಕಾರವಾಗಿದೆ.
ದೆಹಲಿ: ಸರಾಸರಿ ಏಳು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಮಸೂದೆ ಅಂಗೀಕಾರ ಮಾಡುತ್ತಿರುವುದರ ವಿರುದ್ಧ ಗುಡುಗಿದ ತೃಣಮೂಲ ಸಂಸದ ಡೆರೆಕ್ ಒಬ್ರೇನ್ (Derek O’Brien) ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇನು ಮಸೂದೆಗೆ ಅಂಗೀಕಾರ ನೀಡುತ್ತಿರುವುದೋ ಅಥವಾ ಪಾಪ್ಡಿ ಚಾಟ್ ಮಾಡುತ್ತಿರುವುದೋ ಎಂದು ಡೆರೆಕ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಅದೇ ವೇಳೆ ಸರ್ಕಾರವು ಸಂಸತ್ತಿನ ಪಾವಿತ್ರ್ಯತೆಯನ್ನು ಉಲ್ಲಂಘಿಸಿದೆ ಎಂದು ರಾಜ್ಯಸಭಾ ಸಂಸದರು ಆರೋಪಿಸಿದರು. ಸೋಮವಾರ ಬೆಳಿಗ್ಗೆ ಈ ಬಗ್ಗೆ ಟ್ವೀಟ್ ಮಾಡಿದ ಡೆರೆಕ್ “ಮೊದಲ 10 ದಿನಗಳಲ್ಲಿ ಮೋದಿ-ಶಾ ಅವರು 12 ಮಸೂದೆಗಳನ್ನು ಅಂಗೀಕಾರ ನೀಡಿದರು .ಪ್ರತಿ ಮಸೂದ ಅಂಗೀಕಾರವಾಗಿದ್ದ ಏಳು ನಿಮಿಷಗಳ ಸರಾಸರಿ ಅವಧಿಯಲ್ಲಿ …”. ಇದೇನು ಮಸೂದೆ ಅಂಗೀಕಾರವೋ, ಪಾಪ್ಡಿ ಚಾಟ್ ಮಾಡುತ್ತಿರುವುದೋ ಎಂದು ಅವರು ಪ್ರಶ್ನಿಸಿದ್ದಾರೆ.
ಸಂಸತ್ತಿನ ಉಭಯ ಸದನಗಳ ಮೂಲಕ ಅಂಗೀಕರಿಸಲಾದ ಮಸೂದೆಗಳ ಗ್ರಾಫಿಕ್ ಡೆರಿಕ್ ಲಗತ್ತಿಸಿದ್ದು ಆ ಮಾಹಿತಿಯ ಪ್ರಕಾರ, ಪ್ರತಿಯೊಂದು ಮಸೂದೆ ಪರಿಚಯಿಸಿದ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸಲಾಯಿತು. ತೆಂಗು ಅಭಿವೃದ್ಧಿ ಮಂಡಳಿ ಮಸೂದೆ (ಒಂದು ನಿಮಿಷದಲ್ಲಿ ಅಂಗೀಕಾರ) ಮತ್ತು ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಮಸೂದೆ 14 ನಿಮಿಷಗಳಲ್ಲಿ ಅಂಗೀಕಾರವಾಗಿದೆ.
In the first 10 days, Modi-Shah rushed through and passed 12 Bills at an average time of UNDER SEVEN MINUTES per Bill ?(See shocking chart?)
Passing legislation or making papri chaat! pic.twitter.com/9plJOr5YbP
— Derek O’Brien | ডেরেক ও’ব্রায়েন (@derekobrienmp) August 2, 2021
ಈ ಟ್ವೀಟ್‌ಗೆ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ. ಮಸೂದೆಗಳನ್ನು ತ್ವರಿತಗತಿಯಲ್ಲಿ ಅಂಗೀಕರಿಸುವುದರ ಬಗ್ಗೆ ಡೆರೆಕ್ ಒಬ್ರೇನ್ ಸರ್ಕಾರವನ್ನು ಟೀಕಿಸಿದ್ದು ಇದೇ ಮೊದಲಲ್ಲ. 2019 ರಲ್ಲಿ ಅವರು “ನಾವು ತ್ರಿವಳಿ ತಲಾಖ್” ಮಸೂದೆಯ “ಅವಸರದ” ಅಂಗೀಕಾರಕ್ಕೆ ಪ್ರತಿಕ್ರಿಯೆ ನೀಡಿ, “ನಾವು ಪಿಜ್ಜಾಗಳನ್ನು ನೀಡುತ್ತಿದ್ದೇವೆಯೇ … ಎಂದಿದ್ದರು.
#Parliament is supposed to scrutinize Bills. This chart explains the bulldozing this Session. Are we delivering pizzas or passing legislation? #ConstructiveOpposition pic.twitter.com/DKPDygpoV5
— Derek O’Brien | ডেরেক ও’ব্রায়েন (@derekobrienmp) July 31, 2019
ಜುಲೈ 19 ರಿಂದ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನವು ಕೃಷಿ ಕಾನೂನುಗಳು ಮತ್ತು ಪೆಗಾಸಸ್ ವಿವಾದ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಗೊಂದಲ ಮತ್ತು ವಿರೋಧದ ಪ್ರತಿಭಟನೆಗಳ ನಡುವೆ ಕೆಲವೇ ಗಂಟೆಗಳ ಕಾಲ ಕಲಾಪ ನಡೆಸಿದೆ.
ನಿರ್ದಿಷ್ಟವಾಗಿ ಪೆಗಾಸಸ್ ಫೋನ್ ಹ್ಯಾಕಿಂಗ್ ಆರೋಪಗಳ ವಿರುದ್ಧ ಪ್ರತಿಭಟನೆಗಳು ತೀವ್ರವಾಗಿವೆ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಪದೇ ಪದೇ ಸಂಸತ್ತನ್ನು ಸ್ಥಗಿತಗೊಳಿಸುತ್ತಿವೆ ಮತ್ತು ಸಂಸತ್ತಿನಲ್ಲಿ ಚರ್ಚೆಗೆ ತಮ್ಮ ಬೇಡಿಕೆಯಲ್ಲಿ ಒಂದಾಗುತ್ತಿವೆ.
ಇಸ್ರೇಲ್‌ನ ಎನ್ಎಸ್ ಒ (NSO) ಗ್ರೂಪ್‌ನ ಭಾರತೀಯ ಕಕ್ಷಿದಾರರು ವಿವಾದಾತ್ಮಕ ಸ್ಪೈವೇರ್ ಬಳಸಿ ಪತ್ರಕರ್ತರು, ಕಾರ್ಯಕರ್ತರು ಮತ್ತು ವಿರೋಧ ಪಕ್ಷದ ನಾಯಕರು ಹಾಗೂ ಸಾಂವಿಧಾನಿಕ ಪ್ರಾಧಿಕಾರ ಮತ್ತು ಹಾಲಿ ಕೇಂದ್ರ ಮಂತ್ರಿಗಳಿಗೆ ಸೇರಿದ 300 ಕ್ಕೂ ಹೆಚ್ಚು ಫೋನ್‌ಗಳನ್ನು ಹ್ಯಾಕ್ ಮಾಡಲು ಸ್ವತಂತ್ರ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.
ಶುಕ್ರವಾರ ಮತ್ತು ಉಭಯ ಸದನಗಳಲ್ಲಿ ಈ ವಿಷಯ ಮತ್ತು ಕೃಷಿ ಕಾನೂನುಗಳ ಬಗ್ಗೆ ಗದ್ದಲವುಂಟಾಯಿತು. ಕಲಾಪಗಳ ಅಡಚಣೆಗಳಿಂದಾಗಿ ಸರ್ಕಾರವು ₹ 133 ಕೋಟಿ ನಷ್ಟವನ್ನು ಹೇಳಿಕೊಂಡಿದೆ. ಶನಿವಾರ ಹೆಸರಿಸದ “ಮೂಲಗಳ” ಪ್ರಕಾರ ಲೋಕಸಭೆಯು 54 ಗಂಟೆಗಳಲ್ಲಿ ಕೇವಲ ಏಳು ಗಂಟೆಗಳವರೆಗೆ ಮತ್ತು ರಾಜ್ಯಸಭೆಯು 53 ರಲ್ಲಿ 11ಗಂಟೆ ಮಾತ್ರ ಕಾರ್ಯನಿರ್ವಹಿಸಿದೆ ಎಂದು ಹೇಳಿದೆ.
ಕೇಂದ್ರ ಸರ್ಕಾರ ಇದುವರೆಗೆ, ಪೆಗಾಸಸ್ ವಿವಾದದ ತನಿಖೆ ಮತ್ತು ಚರ್ಚೆಯನ್ನು ನಿರಾಕರಿಸಿದೆ. ಆದಾಗ್ಯೂ, ತೃಣಮೂಲ ಕಾಂಗ್ರೆಸ್ ಪೆಗಾಸಸ್ ತನಿಖೆಗಾಗಿ ನ್ಯಾಯಾಂಗ ಆಯೋಗವನ್ನು ಸ್ಥಾಪಿಸಿದೆ.
ಇದನ್ನೂ ಓದಿ: ಪೆಗಾಸಸ್ ಬಳಸಿ ಇಬ್ಬರು ಪತ್ರಕರ್ತರ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ: ಫ್ರಾನ್ಸ್‌ನ ಸೈಬರ್ ಸೆಕ್ಯುರಿಟಿ ಏಜೆನ್ಸಿ
ಇದನ್ನೂ ಓದಿ: Pegasus row ವಿಪಕ್ಷಗಳು ಸಮಸ್ಯೆಯಲ್ಲದ್ದನ್ನು ಸಮಸ್ಯೆಯಾಗಿ ಮಾಡುತ್ತಿವೆ: ಸರ್ಕಾರ
(Trinamool Congress MP Derek O’Brien has slammed Centre for rushing bills through Parliament )
Published On - 4:51 pm, Mon, 2 August 21