ಜಮ್ಮು ಮತ್ತು ಕಾಶ್ಮೀರದ ಕನಚಕ್ ಪ್ರದೇಶದಲ್ಲಿ ಸ್ಫೋಟಕ ಹೊತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿದ ಪೊಲೀಸರು

Jammu and Kashmir: ಜಮ್ಮು ಮತ್ತು ಕಾಶ್ಮೀರದ ಕನಚಕ್ ಪ್ರದೇಶದಲ್ಲಿ ಡ್ರೋನ್ ಒಂದನ್ನು ಹೊಡೆದುರುಳಿಸಲಾಗಿದೆ. ಅದು ಸ್ಫೋಟಕ ಸಾಮಗ್ರಿಗಳನ್ನು ಒಳಗೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕನಚಕ್ ಪ್ರದೇಶದಲ್ಲಿ ಸ್ಫೋಟಕ ಹೊತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿದ ಪೊಲೀಸರು
ವಶಪಡಿಸಿಕೊಂಡ ಡ್ರೋನ್

ಜಮ್ಮು ಮತ್ತು ಕಾಶ್ಮೀರದ ಕನಚಕ್ ಪ್ರದೇಶದಲ್ಲಿ ಡ್ರೋನ್​ ಒಂದನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಅದರಲ್ಲಿ ಸುಧಾರಿತ ಸ್ಫೋಟಕ ಸಾಮಗ್ರಿಗಳಿದ್ದವು; ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದು, ಉಳಿದ ಮಾಹಿತಿಗಳು ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಎನ್​ಐ ವರದಿ ಮಾಡಿದೆ. 

ಡ್ರೋನ್ ಹೆಕ್ಸಾಕಾಪ್ಟರ್ ಮಾದರಿಯಲ್ಲಿದ್ದು, ಗಡಿಯಿಂದ ಆರು ಕಿಲೋಮೀಟರ್ ಒಳಗೆ ಪತ್ತೆಯಾಗಿದೆ. ಅಂದಾಜು 5ಕೆಜಿಯಷ್ಟು ಸುಧಾರಿತ ಸ್ಫೋಟಕವನ್ನು ಅದರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಎನ್​ಐ ವರದಿ ಮಾಡಿರುವ ಟ್ವೀಟ್ ಇಲ್ಲಿದೆ:

ಘಟನೆಯನ್ನು ಹೆಚ್ಚುವರಿ ಪೊಲೀಸ್ ನಿರ್ದೇಶಕ ಮುಕೇಶ್ ಸಿಂಗ್ ಖಚಿತಪಡಿಸಿದ್ದು, ವಶಪಡಿಸಿಕೊಂಡ ಸುಧಾರಿತ ಸ್ಫೋಟಕಗಳನ್ನು ನಾಶಪಡಿಸಲಾಗಿದೆ ಎಂದಿದ್ದಾರೆ. ಕೃತ್ಯದ ಹಿಂದೆ ಲಷ್ಕರ್-ಎ-ತಯ್ಬಾ ಸಂಘಟನೆಯ ಕೈವಾಡವಿರಬಹುದು ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಹೆಚ್ಚಾಗಿ ಡ್ರೋನ್​ಗಳಲ್ಲಿ ಸ್ಫೋಟಕ ಪತ್ತೆಯಾಗುತ್ತಿದೆ. ಇತ್ತೀಚೆಗೆ ಭಾರತೀಯ ವಾಯುನೆಲೆಯ ಮೇಲೆ ಡ್ರೋನ್ ದಾಳಿ ನಡೆದ ನಂತರ ಕಾಶ್ಮೀರದಲ್ಲಿ ಡ್ರೋನ್​ಗಳ ಹಾರಾಟವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: Internet Outage: ಅಮೆಜಾನ್, ಝೊಮ್ಯಾಟೋ ಸೇರಿದಂತೆ ಹಲವು ಪ್ರಮುಖ ವೆಬ್​ಸೈಟ್​ಗಳಲ್ಲಿ ಇಂಟರ್​ನೆಟ್ ಸಮಸ್ಯೆ

ಇದನ್ನೂ ಓದಿ: ಸಂಸ್ಥೆಗಳು ಅವುಗಳ ಕೆಲಸ ಮಾಡುತ್ತಿವೆ, ನಮ್ಮ ಹಸ್ತಕ್ಷೇಪ ಇಲ್ಲ: ಮಾಧ್ಯಮಗಳ ವಿರುದ್ಧ ಐಟಿ ದಾಳಿ ಬಗ್ಗೆ ಕೇಂದ್ರ ಪ್ರತಿಕ್ರಿಯೆ

(A drone was shot down in Kanachak area says JK Police officials)

Click on your DTH Provider to Add TV9 Kannada