ಕೇಂದ್ರ ರಾಜಕೀಯ ಮಾಡಿದ್ರೆ ತಮಿಳುನಾಡಿನಲ್ಲಿ ಕಮಲ ಅರಳಬಹುದು, ಆದ್ರೆ ಕರ್ನಾಟಕದಲ್ಲಿ ಕಮಲ ಮುದುಡಲಿದೆ -ಪ್ರಜ್ವಲ್ ರೇವಣ್ಣ

ಕೇಂದ್ರ ರಾಜಕೀಯ ಮಾಡಿದ್ರೆ ತಮಿಳುನಾಡಿನಲ್ಲಿ ಕಮಲ ಅರಳಬಹುದು, ಆದ್ರೆ ಕರ್ನಾಟಕದಲ್ಲಿ ಕಮಲ ಮುದುಡಲಿದೆ -ಪ್ರಜ್ವಲ್ ರೇವಣ್ಣ
ಕೇಂದ್ರ ರಾಜಕೀಯ ಮಾಡಿದ್ರೆ ತಮಿಳುನಾಡಿನಲ್ಲಿ ಕಮಲ ಅರಳಬಹುದು, ಆದ್ರೆ ಕರ್ನಾಟಕದಲ್ಲಿ ಕಮಲ ಮುದುಡಲಿದೆ -ಬರ್ತ್​​ಡೇ ಬಾಯ್​ ಪ್ರಜ್ವಲ್ ರೇವಣ್ಣ


ದೆಹಲಿ: ಬರ್ತ್​​ಡೇ ಬಾಯ್​ ಪ್ರಜ್ವಲ್ ರೇವಣ್ಣ ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿ ವಿಚಾರವಾಗಿ ಇಂದು ಲೋಕಸಭೆಯಲ್ಲಿ ಜೋರಾಗಿಯೇ ಗುಡುಗಿದ್ದಾರೆ. ಸಂಸತ್​ ಕಲಾಪದಿಂದ ಹೊರಬಂದು ದೆಹಲಿಯಲ್ಲಿ ಟಿವಿ9 ಜೊತೆ ಮಾತನಾಡಿದ ಜೆಡಿಎಸ್ ಪಕ್ಷದ ಹಾಸನ​ ಸಂಸದ ಪ್ರಜ್ವಲ್ ರೇವಣ್ಣ ಅವರು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಮಾಹಿತಿ ಕೊರತೆ ಇದೆ ಅನಿಸುತ್ತದೆ. ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈಗೆ ಕೇಂದ್ರ ಸರಕಾರ, ಬಿಜೆಪಿ ನಾಯಕರು ತಿಳಿಯ ಹೇಳಬೇಕು ಎಂದು ಸೂಚ್ಯವಾಗಿ ಹೇಳಿದ್ದಾರೆ.

ಮೇಕೆದಾಟು ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಬಾರದು. ರಾಜಕೀಯ ಮಾಡಿದ್ರೆ ಕರ್ನಾಟಕದಲ್ಲಿ ಕಮಲ ಮುದುಡಲಿದೆ. ತಮಿಳುನಾಡು ರಾಜ್ಯದಲ್ಲಿ ಕಮಲ ಅರಳಲಿದೆ ಎಂದು ಪ್ರಜ್ವಲ್​​ ರೇವಣ್ಣ ಹೇಳಿದ್ದಾರೆ. ತಮಿಳುನಾಡಿನವರು 3 ಬೆಳೆ ಬೆಳೆಯಲು ನೀರು ಕೇಳುತ್ತಿದ್ದಾರೆ. ಆದರೆ ನಾವು ಕುಡಿಯೋದಕ್ಕೆ ಮಾತ್ರ ಮೇಕೆದಾಟು ಯೋಜನೆ ಜಾರಿಗೆ ತಂದು ನೀರು ಬಳಸಿಕೊಳ್ಳುತ್ತೇವೆ. ಸಿಎಂ ಬೊಮ್ಮಾಯಿಯವರಿಗೆ ನೀರಾವರಿ ಯೋಜನೆಗಳ ಬಗ್ಗೆ ಆಳವಾದ ಜ್ಞಾನವಿದೆ. ಅವರಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆಯನ್ನು ಕರೆಯಬೇಕು. ರಾಜ್ಯ ಸರ್ಕಾರದ ನಿರ್ಧಾರದ ಜೊತೆ ನಾವಿದ್ದೇವೆ. ಯಾವುದೇ ಹೋರಾಟಕ್ಕೆ ಜೆಡಿಎಸ್ ಸಿದ್ಧವಾಗಿರಲಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಹುಟ್ಟುಹಬ್ಬ ದಿನದಂದೇ ಲೋಕಸಭೆಯಲ್ಲಿ ಪ್ರಜ್ವಲ್ ರೇವಣ್ಣ ಅಬ್ಬರ; ಮೇಕೆ ದಾಟು ಯೋಜನೆ ಬಗ್ಗೆ ಕೇಂದ್ರ ಕೊಟ್ಟ ಉತ್ತರ ಇಲ್ಲಿದೆ

(JDS MP Prajwal Revanna spoke to tv9 on mekedatu project today august 5 in delhi)

Click on your DTH Provider to Add TV9 Kannada