‘ನಿಮ್ಮ ಮನೆ ವಾಚ್‌ಮನ್ ಮೇಲೆ ಇ.ಡಿ ದಾಳಿಯಾಗಿದೆ ಸರ್’ ಅಂದಿದ್ದಕ್ಕೆ ಬೆಚ್ಚಿಬಿದ್ದ ಮಾಜಿ ಸಿಎಂ ಯಡಿಯೂರಪ್ಪ!
ಈ ಹಿಂದೆ ಯಡಿಯೂರಪ್ಪ ಮತ್ತೆ ಸಿಎಂ ಆದರೆ ಅವರ ಮನೆ ವಾಚ್ ಮನ್ ಆಗುವುದಾಗಿ ಜಮೀರ್ ಅಹಮದ್ ಹೇಳಿದ್ದರು. ಅಂದು ಅದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು.
ಬೆಂಗಳೂರು: ಇಂದು ಬೆಳಗಿನ ಜಾವವೇ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇಡಿ) ದಾಳಿ ನಡೆಸಿದ್ದಾರೆ. ಈ ವಿಚಾರವನ್ನು ಮಾಜಿ ಸಚಿವರೊಬ್ಬರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಯಡಿಯೂರಪ್ಪ ಅವರ ರಿಯಾಕ್ಷನ್ ಕುತೂಹಲಕಾರಿಯಾಗಿತ್ತು.
ಜಮೀರ್ ಅಹ್ಮದ್ ಮನೆ ಮೇಲೆ ED ದಾಳಿ ವಿಚಾರವಾಗಿ ಇಂದು ಬೆಳಗ್ಗೆ ಮಾಜಿ ಸಚಿವರೊಬ್ಬರು ‘ನಿಮ್ಮ ಮನೆ ವಾಚ್‌ಮನ್ ಮೇಲೆ ED ದಾಳಿಯಾಗಿದೆ ಸರ್’ ಎಂದು ಯಡಿಯೂರಪ್ಪ ಎದುರು ತಮಾಷೆ ಮಾಡಿದ್ದಾರೆ. ಮಾಜಿ ಸಚಿವರ ಮಾತು ಕೇಳಿ ಬಿಎಸ್ ಯಡಿಯೂರಪ್ಪ ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಯಡಿಯೂರಪ್ಪ ಗಾಬರಿಗೊಂಡಿದ್ದನ್ನು ನೋಡಿ ಆ ಮಾಜಿ ಸಚಿವರಿಗೇ ಗಾಬರಿಯಾಗಿಬಿಟ್ಟಿದೆ.
ವಿಷಯ ಎಲ್ಲೆಲ್ಲಿಗೋ ಹೋಗೋದು ಬೇಡವೆಂದು ಬಿಡಿಸಿ ಹೇಳಿದ್ದಾರೆ. ಅದೇ ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಅವರ ಮನೆಯ ವಾಚ್‌ಮನ್ ಆಗ್ತೇನೆ ಎಂದು ಶಾಸಕ ಜಮೀರ್ ಅಹಮದ್ ಹೇಳಿದ್ದರಲ್ಲವಾ? ಅದೇ ‘ವಾಚ್‌ಮನ್’ ಜಮೀರ್ ಅಹಮದ್ ಮೇಲೆ ಇವತ್ತು ಇಡಿ ರೇಡು ಬಿದ್ದಿದೆ ಎಂದು ವಿವರಿಸಿದಾಗ ಮಾಜಿ ಸಿಎಂ ಯಡಿಯೂರಪ್ಪ ದೊಡ್ಡ ನಗೆ ನಕ್ಕಿದ್ದಾರೆ.
ಈ ಹಿಂದೆ ಯಡಿಯೂರಪ್ಪ ಮತ್ತೆ ಸಿಎಂ ಆದರೆ ಅವರ ಮನೆ ವಾಚ್ ಮನ್ ಆಗುವುದಾಗಿ ಜಮೀರ್ ಅಹಮದ್ ಹೇಳಿದ್ದರು. ಅಂದು ಅದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು.
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಇ.ಡಿ. ಶಾಕ್: ದೆಹಲಿಯಿಂದ ಬಂದಿರುವ 45 ಇ.ಡಿ. (ED) ಅಧಿಕಾರಿಗಳ ತಂಡ ಶಾಸಕ ಜಮೀರ್ ಅಹಮದ್ ನಿವಾಸಗಳ ಮೇಲೆ ದಾಳಿ ನಡೆಸಿದೆ. ವಸಂತನಗರದಲ್ಲಿರುವ ಜಮೀರ್ ಹಳೇ ನಿವಾಸ, ಬಂಬೂ ಬಜಾರ್ ನ ನಿವಾಸ, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸದಾಶಿವನಗರದ ಜಮೀರ್ ಆಪ್ತನ ನಿವಾಸ ಹಾಗೂ ಜಮೀರ್ ಪಿ.ಎ ಮನೆ ಸೇರಿ 6 ಕಡೆ ದಾಳಿ ನಡೆದಿದೆ.
ಜಮೀರ್ ಅಹ್ಮದ್ ನಿವಾಸ, ಕಚೇರಿ, ಫ್ಲ್ಯಾಟ್‌ನಲ್ಲಿ ಇ.ಡಿ. ಅಧಿಕಾರಿಗಳು ತಂಡೋಪಾದಿಯಲ್ಲಿ ದಾಖಲೆಗಳ ಪರಿಶೀಲನೆ, ಶೋಧ ನಡೆಸುತ್ತಿದ್ದಾರೆ. ಜಮೀರ್ ಅಹ್ಮದ್ ಗೆ ಸೇರಿದ ಮನೆ, ಯುಬಿ ಸಿಟಿಯಲ್ಲಿರುವ ಫ್ಲ್ಯಾಟ್, ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ರೇಡ್ ಮಾಡಲಾಗಿದೆ (ED Raid).
IT Raid: ಶಾಸಕ ಜಮೀರ್ ಅಹಮ್ಮದ್ ಭವ್ಯ ಬಂಗಲೆ ಮೇಲೆ ಐಟಿ ದಾಳಿ; ಶಾಸಕ ಜಮೀರ್ ಆಸ್ತಿಪಾಸ್ತಿ ಎಷ್ಟಿದೆ? ವಿವರ ಇಲ್ಲಿದೆ
(BS yediyurappa reaction on e d raid on mla zameer ahmed khan in bangalore)
Published On - 3:14 pm, Thu, 5 August 21