IT Raid: ಶಾಸಕ ಜಮೀರ್ ಅಹಮ್ಮದ್ ಭವ್ಯ ಬಂಗಲೆ ಮೇಲೆ ಐಟಿ ದಾಳಿ; ಶಾಸಕ ಜಮೀರ್ ಆಸ್ತಿಪಾಸ್ತಿ ಎಷ್ಟಿದೆ? ವಿವರ ಇಲ್ಲಿದೆ
zameer ahmed khan: ರಿಚ್ಮಂಡ್ ಟೌನ್ನ ಖಾಸಗಿ ಹೋಟೆಲಿನಲ್ಲಿ ಎರಡು ದಿನಗಳಿಂದ ತಂಗಿದ್ದ ಐಟಿ ಅಧಿಕಾರಿಗಳು 25 ಇನ್ನೋವಾ ಕಾರುಗಳಲ್ಲಿ ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ. ತದನಂತರ, ಬೆಂಗಳೂರಿನ ಇತರೆ ಐಟಿ ಅಧಿಕಾರಿಗಳೂ ಇವರಿಗೆ ಕೈಜೋಡಿಸಿದ್ದಾರೆ. ಐಟಿ ದಾಳಿ ಇಂದು ಮತ್ತು ನಾಳೆಯೂ ನಡೆಯುವ ಅಂದಾಜಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan ) ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣ ಬಳಿಯಿರುವ ಮನೆಯ ಮೇಲೆ ಬೆಳಗ್ಗೆ 6 ಗಂಟೆಗೆ ಐಟಿ ದಾಳಿ ನಡೆದಿದೆ. ಐಟಿ ಅಧಿಕಾರಿಗಳು 2 ಗಂಟೆಗಳಿಂದ ಸತತವಾಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಸ್ತುತ ಶಾಸಕ ಜಮೀರ್ ಅಹ್ಮದ್ ಬಂಬೂ ಬಜಾರ್ ಬಳಿಯಿರುವ ಮನೆಯಲ್ಲಿದ್ದಾರೆ.
ರಿಚ್ಮಂಡ್ ಟೌನ್ನ ಖಾಸಗಿ ಹೋಟೆಲಿನಲ್ಲಿ ಎರಡು ದಿನಗಳಿಂದ ತಂಗಿದ್ದ ಐಟಿ ಅಧಿಕಾರಿಗಳು 25 ಇನ್ನೋವಾ ಕಾರುಗಳಲ್ಲಿ ಇಂದು ಬೆಳಗಿನ ಜಾವ 5 ಗಂಟೆಗೆ ದಾಳಿ ನಡೆಸಿದ್ದಾರೆ. ತದನಂತರ, ಬೆಂಗಳೂರಿನ ಇತರೆ ಐಟಿ ಅಧಿಕಾರಿಗಳೂ ಇವರಿಗೆ ಕೈಜೋಡಿಸಿದ್ದಾರೆ. ಐಟಿ ದಾಳಿ ಇಂದು ಮತ್ತು ನಾಳೆಯೂ ನಡೆಯುವ ಅಂದಾಜಿದೆ. ಈ ಮಧ್ಯೆ ಬೆಂಗಳೂರು ಪೊಲೀಸರು ಐಟಿ ಅಧಿಕಾರಿಗಳಿಗೆ ಸಾಥ್ ನೀಡಿದ್ದು, ಭಾರೀ ಪ್ರಮಾಣದಲ್ಲಿ ಬಿಗಿ ಬಂದೋಬಸ್ ಮಾಡಲಾಗಿದೆ. ಭದ್ರತೆಗೆ 200ಕ್ಕೂ ಹೆಚ್ಚು CRPF ಪೊಲೀಸರ ನಿಯೋಜನೆ ಮಾಡಲಾಗಿದೆ.
ದೆಹಲಿಯಿಂದ ಬಂದಿರುವ 45 ಐಟಿ ಅಧಿಕಾರಿಗಳ ತಂಡದಿಂದ ದಾಳಿ ನಡೆಸಲಾಗಿದೆ. ವಸಂತನಗರದ ಜಮೀರ್ ಹಳೇ ನಿವಾಸ, ಬಂಬೂ ಬಜಾರ್ ನ ನಿವಾಸ, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸದಾಶಿವನಗರದ ಜಮೀರ್ ಆಪ್ತನ ನಿವಾಸ ಹಾಗೂ ಜಮೀರ್ ಪಿ.ಎ ಮನೆ ಸೇರಿ 6 ಕಡೆ ದಾಳಿ ನಡೆದಿದೆ.
ED raid: ಶಾಸಕ ಜಮೀರ್ ಅಹಮ್ಮದ್ ಮನೆ ಮೇಲೆ ನಡೆದಿರುವುದು ಐ.ಟಿ ದಾಳಿ ಅಲ್ಲ; ಅದು ಇ.ಡಿ ದಾಳಿ
ರೋಷನ್ ಬೇಗ್ ಮನೆಯ ಮೇಲೆ ED ದಾಳಿ: ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ದಾಳಿ ನಡೆಸಿದ್ದಾರೆ. ಬೆಂಗಳೂರಿನ ಶಿವಾಜಿ ನಗರದಲ್ಲಿರುವ ರೋಷನ್ ಬೇಗ್ ಮನೆಯ ಮೇಲೆ ED ದಾಳಿ ನಡೆದಿದೆ.
ಇನ್ನು, ಜಮೀರ್ ಸಾಮ್ರಾಜ್ಯದ ಮೇಲೆ ಐಟಿ ದಾಳಿ ನಡೆದಿದ್ದು, ಆದಾಯ ತೆರಿಗೆ ಪಾವತಿ ವೇಳೆ ಭಾರೀ ದೊಡ್ಡ ವ್ಯತ್ಯಾಸ ಕಂಡು ಬರುತ್ತಿತ್ತು. ಕಳೆದರಡು ವರ್ಷದಿಂದ ತೆರಿಗೆ ಸರಿಯಾಗಿ ಪಾವತಿ ಮಾಡಿರಲಿಲ್ಲ ಎನ್ನಲಾಗ್ತಿದೆ. ಗಳಿಸಿದ ಆದಾಯಕ್ಕೂ, ಕಟ್ಟುತ್ತಿದ್ದ ತೆರಿಗೆಗೂ ಭಾರೀ ವ್ಯತ್ಯಾಸವಿತ್ತು. ಈ ಹಿನ್ನೆಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಬೆಂಗಳೂರಿನ ಕೆ ಆರ್ ಮಾರ್ಕೆಟ್‌ನಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿಯ ಮೇಲೂ ಐಟಿ ದಾಳಿ ನಡೆದಿದ್ದು, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಐಟಿ ಅಧಿಕಾರಗಳು ದೊಡ್ಡ ಮಟ್ಟದ ಶಾಕ್ ನೀಡಿದ್ದಾರೆ. ಟ್ರಾವೆಲ್ಸ್ ಕಚೇರಿಯಲ್ಲಿ 6 ಮಂದಿ ಐಟಿ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ. ಇನ್ನು, ನ್ಯಾಷನಲ್ ಟ್ರಾವೆಲ್ಸ್ ಕಚೇರಿಯೊಳಗಿರುವ 5 ಮಂದಿ ಸಿಬ್ಬಂದಿ ಇದ್ದಾರೆ.
2018ರ ಚುನಾವಣಾ ನಾಮಪತ್ರದಲ್ಲಿ ಜಮೀರ್ ಘೋಷಿಯಿಕೊಂಡಿದ್ದ ಆಸ್ತಿಪಾಸ್ತಿ ಲೆಕ್ಕದ ಡೀಟೇಲ್ಸ್ ಇಲ್ಲಿದೆ: ಕಳೆದ ಬಾರಿ ಚುನಾವಣೆ ಆಯೋಗಕ್ಕೆ ಚಾಮರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಜಮೀರ್ ಅಹಮ್ಮದ್ ಖಾನ್ ಸುಮಾರು 40 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿದ್ದರು. ಜಮೀರ್ ಅಧಿಕೃತವಾಗಿ 40,34,43,699 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.
ವರ್ಷಕ್ಕೆ ಸುಮಾರು 26 ಲಕ್ಷ ರೂಪಾಯಿ ಆದಾಯ ಅಂತಾ ತೋರಿಸಿದ್ದ ಜಮೀರ್. 2011ರ ಮಾಡೆಲ್ ನ ಒಂದೇ ಒಂದು ಬೆಂಜ್ ಕಾರು ಇದೆ ಅಂತಾ ಮಾಹಿತಿ ನೀಡಿದ್ದರು. ಜಮೀರ್ ಹತ್ತಿರ 50 ಗ್ರಾಂ ಚಿನ್ನಾಭರಣ, ಜಮೀರ್ ಪತ್ನಿ ಬಳಿ ಕಾಲು ಕೆಜಿ ಚಿನ್ನಾಭರಣ, ಕಾಲು ಕೆಜಿ ಬೆಳ್ಳಿ ಆಭರಣ. ಸದಾಶಿವನಗರದಲ್ಲಿ ಸುಮಾರು 4.5 ಸಾವಿರ ಚದರ ಅಡಿ ಫ್ಲಾಟ್, ರಿಚ್ಮಂಡ್ ಟೌನ್ ನಲ್ಲಿ ಕೋಟ್ಯಂತರ ಮೌಲ್ಯದ ಸುಮಾರು 15 ಸಾವಿರ ಚದರ ಅಡಿ ಹಾಗೂ 33 ಸಾವಿರ ಚದರ ಅಡಿ ಜಮೀನು ಇದೆ.
ರಿಚ್ ಮಂಡ್ ಟೌನ್ ನಲ್ಲಿರುವ ಸ್ಥಿರಾಸ್ತಿ 7 ಕೋಟಿ ರೂ, ಶಿವಾಜಿನಗರದ ಸ್ಟೆಷನ್ ರೋಡ್ ಬಳಿಯ ಸ್ಥಿರಾಸ್ತಿ 30 ಕೋಟಿ, ಸದಾಶಿವನಗರದಲ್ಲಿರುವ ಸ್ಥಿರಾಸ್ತಿ 2.34 ಕೋಟಿ ರೂ ಮೌಲ್ಯ ಎಂದು ಅಂದಾಜಿಸಲಾಗಿದೆ.
ಜಮೀರ್ ಅಹ್ಮದ್ ವಿರುದ್ಧ ಇಡಿಗೆ ದೂರು ನೀಡಿದ್ದ ಎನ್.ಆರ್.ರಮೇಶ್ ಇಂದು (ಆಗಸ್ಟ್ 5) ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ರವರ ಮನೆ, ನ್ಯಾಷನಲ್ ಟ್ರಾವೆಲ್ಸ್ ಸೇರಿದಂತೆ ಹಲವು ಕಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿಗಳಿಗೆ ಜಮೀರ್ ಅಹ್ಮದ್ ವಿರುದ್ಧ ಎನ್.ಆರ್.ರಮೇಶ್ ಇಡಿಗೆ ದೂರು ನೀಡಿದ್ದರು. 80 ಕೋಟಿ ರೂಪಾಯಿಯನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ ಎನ್.ಆರ್.ರಮೇಶ್ ದೂರು ನೀಡಿದ್ದರು. 14984 ಚದರಡಿ ವಿಸ್ತೀರ್ಣ ಜಾಗವನ್ನ ಜಮೀರ್ ಮಾರಾಟ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಎನ್.ಆರ್.ರಮೇಶ್ ಇಡಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಜಮೀರ್ ವಿಚಾರಣೆಯನ್ನ ಎದುರಿಸಿದ್ದರು. ಮೂರು ತಿಂಗಳಲ್ಲಿ ಸಂಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದ್ದರು. ಆದರೆ ಮಾಹಿತಿ ನೀಡಿಲ್ಲವೆಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಶಾಸಕ ಜಮೀರ್ ಅಹ್ಮದ್ ಮನೆ, ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳಿಂದ ಐಟಿ ದಾಳಿ ಕ್ಯಾಸಿನೊ ರಾಜ ಫಾಜಿಲ್ ಜೊತೆಗಿನ ಪುರಾತನ ದೋಸ್ತಿ ಬಗ್ಗೆ ಶಾಸಕ ಜಮೀರ್ ಹೇಳಿದ್ದೇನು?
(IT Raid on chamrajpet congress mla zameer ahmed khan in bangalore assets details)
Published On - 9:08 am, Thu, 5 August 21