ISIS Link: ಇದ್ದಿನಬ್ಬ ಪುತ್ರ ಬಿ.ಎಂ.ಭಾಷಾರ ಸೊಸೆ ಎನ್‌ಐಎ ವಶಕ್ಕೆ?

ISIS Link: ಇದ್ದಿನಬ್ಬ ಪುತ್ರ ಬಿ.ಎಂ.ಭಾಷಾರ ಸೊಸೆ ಎನ್‌ಐಎ ವಶಕ್ಕೆ?
ಸಾಂಕೇತಿಕ ಚಿತ್ರ

ಉಳ್ಳಾಲದಲ್ಲಿ ಮಾಜಿ ಶಾಸಕ ಇದ್ದಿನಬ್ಬ ಪುತ್ರನ ಮನೆಗೆ ಎನ್ಐಎ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇದ್ದಿನಬ್ಬ ಪುತ್ರ ಬಿ.ಎಂ.ಭಾಷಾರ ಸೊಸೆಯನ್ನು ಎನ್ಐಎ ವಶಕ್ಕೆ ಪಡೆದಿದೆ ಎನ್ನಲಾಗುತ್ತಿದೆ.

TV9kannada Web Team

| Edited By: Ayesha Banu

Aug 05, 2021 | 12:05 PM


ಮಂಗಳೂರು: ರಾಷ್ಟ್ರೀಯ ಭದ್ರತಾ ದಳ ತನ್ನ ಬೇಟೆಯನ್ನ ಆರಂಭಿಸಿದೆ. ಮಂಗಳೂರು, ಬೆಂಗಳೂರು ಸೇರಿದಂತೆ ದೇಶದ ಐದು ಕಡೆ ಎನ್‌ಐಎ(NIA) ರೈಡ್ ಮಾಡಿದೆ. ಉಳ್ಳಾಲದಲ್ಲಿ ಮಾಜಿ ಶಾಸಕ ಇದ್ದಿನಬ್ಬ ಪುತ್ರನ ಮನೆಗೆ ಎನ್ಐಎ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇದ್ದಿನಬ್ಬ ಪುತ್ರ ಬಿ.ಎಂ.ಭಾಷಾರ ಸೊಸೆಯನ್ನು ಎನ್ಐಎ ವಶಕ್ಕೆ ಪಡೆದಿದೆ ಎನ್ನಲಾಗುತ್ತಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ಹಿಂದು ಯುವತಿ, ಹತ್ತು ವರ್ಷಗಳ ಹಿಂದೆ ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಬಿಡಿಎಸ್ ಕಲಿಯುತ್ತಿದ್ದರು ಈ ವೇಳೆ ಬಿ.ಎಂ.ಭಾಷಾರ ಮೂರನೇ ಮಗನ ಪರಿಚಯವಾಗಿ ಇಸ್ಲಾಂಗೆ ಮತಾಂತರವಾಗಿ ವಿವಾಹವಾಗಿದ್ದಾರೆ. ಇನ್ಸ್ಟಾಗ್ರಾಮ್ ಮತ್ತು ಬೇರೆ ಸಾಮಾಜಿಕ ತಾಣಗಳಲ್ಲಿ ಐಸಿಸ್ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ. ಕೇರಳ ಮೂಲದ ಮಹಮ್ಮದ್ ಅಮೀನ್ ಎಂಬಾತನ ತಂಡದ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಇನ್ನು ಎನ್ಐಎ ಅಮ್ಮರ್ ಅಬ್ದುಲ್ ಬಂಧನ ಖಚಿತ ಪಡಿಸಿದ್ದರೂ ಯುವತಿ ಬಂಧನದ ಬಗ್ಗೆ ಅಧಿಕೃತ ಮಾಹಿತಿ‌ ನೀಡಿಲ್ಲ.

ನಿನ್ನೆ(ಜುಲೈ 4) ಬೆಳ್ಳಂಬೆಳಗ್ಗೆ ಮಂಗಳೂರಿನ ಉಳ್ಳಾಲದ ಮಾಜಿ ಶಾಸಕ ದಿವಂಗತ. ಎಂ.ಕೆ.ಇದ್ದಿನಬ್ಬ ಪುತ್ರ ಬಾಷಾ ಮನೆ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ ಅಧಿಕಾರಿಗಳು ಮನೆಗೆ ಬಂದು ತನಿಖೆ ನಡೆಸಿದ್ರು. ಸಿರಿಯಾ ಮೂಲದ ಐಸಿಸ್ ಉಗ್ರ ಸಂಘಟನೆ ಜೊತೆ ನಂಟು ಇರುವ ಶಂಕೆ ಹಿನ್ನೆಲೆ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ. ನಾಲ್ಕು ಕಾರುಗಳಲ್ಲಿ 25 ಮಂದಿಯಿದ್ದ ತಂಡ ಉಳ್ಳಾಲದ ಮಾಸ್ತಿಕಟ್ಟೆಗೆ ಆಗಮಿಸಿತ್ತು. ಎನ್ಐಎ ಜೊತೆಗೆ ಮಂಗಳೂರಿನ ಸ್ಥಳೀಯ ಪೊಲೀಸರು ಕೂಡ ಭದ್ರತೆ ಒದಗಿಸಿದ್ದರು.

ದಿ. ಎಂ.ಕೆ.ಇದಿನಬ್ಬ ಮೊಮ್ಮಗ ಬಂಧನ
ಮೂರು ವರ್ಷಗಳ ಹಿಂದೆ ಇಸ್ಮಾಯಿಲ್ ಬಾಷಾರ ಪುತ್ರಿಯ ಮಗಳಾದ ಅಜ್ಮಲಾ ಕುಟುಂಬ ನಿಗೂಢವಾಗಿ ನಾಪತ್ತೆಯಾಗಿತ್ತು. ಅಜ್ಮಲಾಳನ್ನ ಕೇರಳ ಮೂಲದ ಎಂಬಿಎ ಪದವೀಧರ ಸಿಯಾಝ್ ಅನ್ನೋನ ಜೊತೆ ವಿವಾಹ ಮಾಡಿ ಕೊಡಲಾಗಿತ್ತು. ಆದ್ರೆ ಆ ಸಂದರ್ಭದಲ್ಲೇ ಕಾಸರಗೋಡಿನ 17 ಮಂದಿ ಸಿರಿಯಾದ ಐಸಿಸ್ ಉಗ್ರ ಸಂಘಟನೆ ಸೇರಿದ್ದರು. ಆ 17 ಜನರ ಪೈಕಿ ಅಜ್ಮಲಾ ಕುಟುಂಬವೂ ಇತ್ತು. ಈ ಬಗ್ಗೆ ಕೇರಳ ಆಂತರಿಕ ಭದ್ರತಾ ಹಾಗೂ ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ದಳ ತನಿಖೆ ಆರಂಭಿಸಿತ್ತು. ಅದೇ ತನಿಖೆಯ ಭಾಗವಾಗಿ ಅಜ್ಮಲಾ ಅಜ್ಜ ಇಸ್ಮಾಯಿಲ್ ಭಾಷಾ ಮನೆಗೆ ನಿನ್ನೆ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ದಾಳಿ ವೇಳೆ ಮಾಜಿ ಶಾಸಕ ದಿವಂಗತ ಇದಿನಬ್ಬ ಅವರ ಮೊಮ್ಮಗನಾದ ಅಮರ್ ಅಬ್ದುಲ್ ರೆಹಮಾನ್ ನನ್ನು ಬಂಧಿಸಲಾಗಿದೆ. ಇನ್ನು ದೇಶದಲ್ಲಿ ಒಟ್ಟು ಐದು ISIS ಶಂಕಿತ ಉಗ್ರರನ್ನು ಬಂಧಿಸಲಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಉಗ್ರರ ಬಂಧನ
ಇನ್ನು ಇದರ ಜೊತೆಗೆ ಮಂಗಳೂರು ಮಾತ್ರವಲ್ಲದೆ ಬೆಂಗಳೂರಿನಲ್ಲೂ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಇಬ್ಬರು ಐಸಿಸ್ ಉಗ್ರರು ಸೇರಿ ಐವರನ್ನ ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನ ಶಂಕರ್ ವೆಂಕಟೇಶ್ ಪೆರುಮಾಳ್, ಮಂಗಳೂರಿನ ಅಮರ್ ಅಬ್ದುಲ್ ರೆಹಮಾನ್ ಸೇರಿ ಐವರನ್ನ ಬಂಧಿಸಲಾಗಿದೆ. ಉಗ್ರ ಚಟುವಟಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಹಣಕಾಸು ಸಂಗ್ರಹ ಹಿನ್ನೆಲೆ ಎನ್ ಐಎ ಶೋಧ ನಡೆಸಿತ್ತು. ಕಾಶ್ಮೀರದ 3 ಕಡೆ, ರಾಜ್ಯದ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಶೋಧ ಮಾಡಿತ್ತು. ಮಾರ್ಚ್ 5 ರಂದು ಈ ಬಗ್ಗೆ ದಾಖಲಿಸಿಕೊಂಡಿದ್ದ ಸುಮೋಟೊ ಕೇಸ್ ತನಿಖೆ ಚುರುಕು ಮಾಡಿ ISIS ನಂಟು ಹೊಂದಿದ್ದ ಕೇರಳದ ಮಹಮ್ಮದ್ ಅಮೀನ್ ಜತೆಗೆ ನಂಟು ಹೊಂದಿದ್ದವರ ಬೇಟೆ ಆರಂಭಿಸಿದೆ. ಬಂಧಿತದಿಂದ ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ಪೆನ್ ಡ್ರೈವ್, ಹಲವು ಸಿಮ್ ಗಳು, ಎಲೆಕ್ಟ್ರಾನಿಕ್ ವಸ್ತುಗಳು ವಶಕ್ಕೆ ಪಡೆಯಲಾಗಿದೆ.

ಮಾಜಿ ಶಾಸಕ ದಿ. ಎಂ.ಕೆ.ಇದಿನಬ್ಬ ಮೊಮ್ಮಗನನ್ನ ಬಂಧಿಸಿದ ಎನ್ಐಎ ಹೆಚ್ಚಿನ ವಿಚಾರಣೆ ನಡೆಸುತ್ತಿದೆ. ಒಟ್ಟಿನಲ್ಲಿ ಎನ್.ಐ.ಎ ಅಧಿಕಾರಿಗಳ ಈ ದಾಳಿ ಬಾರಿ ಕುತೂಹಲ, ಆತಂಕಕ್ಕೂ ಕಾರಣವಾಗಿರುವುದು ಮಾತ್ರ ಸುಳ್ಳಲ್ಲ.

ಇದನ್ನೂ ಓದಿ: ಮಾಜಿ ಶಾಸಕನ ಕುಟುಂಬಕ್ಕೆ ಉಗ್ರರ ನಂಟು? ಬಿಎಂ ಇದಿನಬ್ಬ ಮಗನ ಮನೆ ಮೇಲೆ ಎನ್ಐಎ ದಾಳಿ


Follow us on

Related Stories

Most Read Stories

Click on your DTH Provider to Add TV9 Kannada