ಕ್ಯಾಸಿನೊ ರಾಜ ಫಾಜಿಲ್ ಜೊತೆಗಿನ ಪುರಾತನ ದೋಸ್ತಿ ಬಗ್ಗೆ ಶಾಸಕ ಜಮೀರ್ ಹೇಳಿದ್ದೇನು?

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್ ಜಾಲದ ನಂಟ ಪ್ರಕರಣ ಸಂಬಂಧ ಶಾಸಕ ಜಮೀರ್ ಅಹಮ್ಮದ್ ಕ್ಯಾಸಿನೊ ರಾಜ ಫಾಜಿಲ್ ಜೊತೆಗಿನ ಪುರಾತನ ದೋಸ್ತಿ ಬಗ್ಗೆ ಮಾತನಾಡಿದ್ದಾರೆ. ಫಾಜಿಲ್ ನಾಲ್ಕು ವರ್ಷದ ಹಿಂದೆ ನನಗೆ ಪರಿಚಯ. ಆದರೆ ಈಗ ಇಲ್ಲ. ನಾಲ್ಕು ವರ್ಷದಿಂದ ಫೋನು ಇಲ್ಲ, ಮೆಸೇಜೂ ಇಲ್ಲ. ಯಾರ್ ಯಾರೋ ನನ್ನನ್ನ ಭೇಟಿ ಮಾಡಲು ಬರುತ್ತಿರುತ್ತಾರೆ. ಭೇಟಿ ಮಾಡಲು ಬಂದವರೆಲ್ಲ ನನ್ನ ಆಪ್ತರು ಅನ್ನೋಕಾಗುತ್ತಾ ಸರ್ಕಾರ ಯಾವುದಿದೆ ? ಕಾಂಗ್ರೆಸ್ ಸರ್ಕಾರ ಇದೆಯಾ ? ಬಿಜೆಪಿ ಸರ್ಕಾರ ಇದೆ? […]

ಕ್ಯಾಸಿನೊ ರಾಜ ಫಾಜಿಲ್ ಜೊತೆಗಿನ ಪುರಾತನ ದೋಸ್ತಿ ಬಗ್ಗೆ ಶಾಸಕ ಜಮೀರ್  ಹೇಳಿದ್ದೇನು?
Follow us
ಸಾಧು ಶ್ರೀನಾಥ್​
|

Updated on: Sep 11, 2020 | 12:57 PM

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್ ಜಾಲದ ನಂಟ ಪ್ರಕರಣ ಸಂಬಂಧ ಶಾಸಕ ಜಮೀರ್ ಅಹಮ್ಮದ್ ಕ್ಯಾಸಿನೊ ರಾಜ ಫಾಜಿಲ್ ಜೊತೆಗಿನ ಪುರಾತನ ದೋಸ್ತಿ ಬಗ್ಗೆ ಮಾತನಾಡಿದ್ದಾರೆ. ಫಾಜಿಲ್ ನಾಲ್ಕು ವರ್ಷದ ಹಿಂದೆ ನನಗೆ ಪರಿಚಯ. ಆದರೆ ಈಗ ಇಲ್ಲ. ನಾಲ್ಕು ವರ್ಷದಿಂದ ಫೋನು ಇಲ್ಲ, ಮೆಸೇಜೂ ಇಲ್ಲ. ಯಾರ್ ಯಾರೋ ನನ್ನನ್ನ ಭೇಟಿ ಮಾಡಲು ಬರುತ್ತಿರುತ್ತಾರೆ. ಭೇಟಿ ಮಾಡಲು ಬಂದವರೆಲ್ಲ ನನ್ನ ಆಪ್ತರು ಅನ್ನೋಕಾಗುತ್ತಾ ಸರ್ಕಾರ ಯಾವುದಿದೆ ? ಕಾಂಗ್ರೆಸ್ ಸರ್ಕಾರ ಇದೆಯಾ ? ಬಿಜೆಪಿ ಸರ್ಕಾರ ಇದೆ? ತನಿಖೆ ಮಾಡಲಿ ಎಂದು ಹೇಳಿದ್ದಾರೆ.

ಸಂಜನಾ ಜತೆ ಇದ್ದಿದ್ದು ಸಾಬೀತಾದ್ರೆ ಆಸ್ತಿ ಬರೆದು ಕೊಡ್ತೀನಿ: ಇನ್ನು ಇದೇ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟಿ ಸಂಜನಾ ಬಗ್ಗೆ ಮಾತನಾಡಿದ ಅವರು ಸಂಜನಾ ಜತೆ ನಾನು ಇದ್ದಿದ್ದು ಸಾಬೀತಾದ್ರೆ ನನ್ನ ಎಲ್ಲಾ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದ್ರು. ಪ್ರಶಾಂತ್ ಸಂಬರಗಿ ಯಾರೋ ಕಾಂಜಿಪೀಂಜಿ ನಟಿ ಸಂಜನಾರನ್ನ ಬೆಂಗಳೂರಲ್ಲೂ, ಶ್ರೀಲಂಕಾದಲ್ಲೂ ನೋಡಿಲ್ಲ. ಏರ್​ಪೋರ್ಟ್ ಅಥವಾ ಬಸ್​ಸ್ಟ್ಯಾಂಡ್​ನಲ್ಲೂ ನಾನು ನೋಡಿಲ್ಲ. ಈಗ ನಮ್ಮ ಸರ್ಕಾರವಿಲ್ಲ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ನಟಿ ಸಂಜನಾ ಗಲ್ರಾನಿ ಈಗ ಪೊಲೀಸ್ ಕಸ್ಟಡಿಯಲ್ಲೇ ಇದ್ದಾರೆ. ಹೀಗಾಗಿ ಸಿಎಂ ಬಿಎಸ್​ವೈಗೆ ತನಿಖೆಗೆ ಮನವಿ ಮಾಡುತ್ತೇನೆ. ಸಂಬರಗಿ ಆರೋಪದ ಬಗ್ಗೆ ಯಾವ ತನಿಖೆ ಬೇಕಾದ್ರೂ ಮಾಡಲಿ ಎಂದಿದ್ದಾರೆ.