ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ಸೋನು ಸೂದ್ ವಿಲನ್? ಫ್ಯಾನ್ಸ್ ಇದನ್ನು ಸಹಿಸೋದು ಹೇಗೆ?
ಬಡವರ ಬಂಧುವಾಗಿ, ರಿಯಲ್ ಹೀರೋ ಎನಿಸಿಕೊಂಡಿರುವ ಸೋನು ಸೂದ್ ಅವರನ್ನು ಯಾವುದೇ ಸಿನಿಮಾದಲ್ಲಿ ವಿಲನ್ ಆಗಿ ಮಾಡಿದರೆ ಅದು ಜನರ ಸೆಂಟಿಮೆಂಟ್ಗೆ ಹೊಡೆತಕೊಟ್ಟಂತೆ ಆಗಲಿದೆ. ಆದರೂ ‘ಪುಷ್ಪ’ ತಂಡ ಇಂಥ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ?
ನಟ ಸೋನು ಸೂದ್ (Sonu Sood) ಮಾಡಿರುವ ಸಮಾಜಮುಖಿ ಕಾರ್ಯಗಳಿಗೆ ಜನರು ಶರಣು ಎಂದಿದ್ದಾರೆ. ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಈ ನಟನಿಗೆ ನಿಜಜೀವನದಲ್ಲಿ ‘ರಿಯಲ್ ಹೀರೋ’ ಎಂಬ ಪಟ್ಟ ಸಿಕ್ಕಿದೆ. ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಆರಂಭವಾದ ಅವರ ಜನಪರ ಕಾರ್ಯಗಳು ಇಂದಿಗೂ ಮುಂದುವರಿದಿವೆ. ಸೋನು ಸೂದ್ಗೆ ಸಿನಿಮಾ ಆಫರ್ಗಳು ಹೆಚ್ಚಾಗಿವೆ. ಆದರೆ ಅದರಲ್ಲಿ ಒಂದು ಟ್ವಿಸ್ಟ್ ಇದೆ. ಇಷ್ಟು ವರ್ಷ ವಿಲನ್ ಆಗಿ ನಟಿಸುತ್ತಿದ್ದ ಅವರನ್ನು ಜನರು ಇನ್ಮುಂದೆ ನೆಗೆಟಿವ್ ಪಾತ್ರಗಳಲ್ಲಿ ಒಪ್ಪಿಕೊಳ್ಳುವುದು ಕಷ್ಟ. ಅದರ ನಡುವೆಯೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ’ (Pushpa) ಚಿತ್ರದ ಕುರಿತು ಒಂದು ಅಚ್ಚರಿಯ ಸುದ್ದಿ ಹರಿದಾಡುತ್ತಿದೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿರುವ ‘ಪುಷ್ಪ’ ಚಿತ್ರ ಎರಡು ಪಾರ್ಟ್ಗಳಲ್ಲಿ ಮೂಡಿಬರುತ್ತಿದೆ. ಎರಡನೇ ಪಾರ್ಟ್ನಲ್ಲಿ ವಿಲನ್ ಪಾತ್ರಕ್ಕೆ ಸೋನು ಸೂದ್ ಅವರಿಗೆ ಆಫರ್ ನೀಡಲಾಗಿದೆ ಎಂಬ ಸುದ್ದು ಕೇಳಿಬಂದಿದೆ. ಆದರೆ ಈ ಸುದ್ದಿಯ ಬಗ್ಗೆ ಚಿತ್ರತಂಡದವರಾಗಲೀ, ಸೋನು ಸೂದ್ ಆಗಲೀ ಈವರೆಗೆ ಸ್ಪಷ್ಟನೆ ನೀಡಿಲ್ಲ. ಆದರೆ ದಟ್ಟವಾಗಿ ಹಬ್ಬಿರುವ ಈ ಸುದ್ದಿ ಬಗ್ಗೆ ಸೋನು ಸೂದ್ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಡವರ ಬಂಧುವಾಗಿ, ರಿಯಲ್ ಹೀರೋ ಎನಿಸಿಕೊಂಡಿರುವ ಸೋನು ಸೂದ್ ಅವರನ್ನು ಯಾವುದೇ ಸಿನಿಮಾದಲ್ಲಿ ವಿಲನ್ ಆಗಿ ಮಾಡಿದರೆ ಅದು ಜನರ ಸೆಂಟಿಮೆಂಟ್ಗೆ ಹೊಡೆತಕೊಟ್ಟಂತೆ ಆಗಲಿದೆ. ಹಾಗಾಗಿ ‘ಪುಷ್ಪ’ ಚಿತ್ರದ ನಿರ್ದೇಶಕ ಸುಕುಮಾರ್ ಅವರು ಸೋನು ಸೂದ್ಗೆ ವಿಲನ್ ಪಾತ್ರ ನೀಡುವುದು ಅಸಾಧ್ಯ ಎಂದು ಒಂದು ವರ್ಗದ ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ. ಕಡೆಗೂ ಅಸಲಿಯತ್ತು ಏನು ಎಂಬುದು ಚಿತ್ರತಂಡದಿಂದಲೇ ಸ್ಪಷ್ಟವಾಗಬೇಕು.
ಪಾತ್ರವರ್ಗದ ಕಾರಣದಿಂದಲೂ ‘ಪುಷ್ಪ’ ಚಿತ್ರ ಹೈಪ್ ಸೃಷ್ಟಿ ಮಾಡಿದೆ. ಡಾಲಿ ಧನಂಜಯ, ಪ್ರಕಾಶ್ ರೈ, ಫಹಾದ್ ಫಾಸಿಲ್, ಜಗಪತಿ ಬಾಬು ಮುಂತಾದವರು ನಟಿಸುತ್ತಿದ್ದಾರೆ. ಸನ್ನಿ ಲಿಯೋನ್ ಕೂಡ ಈ ಚಿತ್ರದಲ್ಲಿ ಒಂದು ಐಟಂ ಡ್ಯಾನ್ಸ್ ಮಾಡಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಆ ಹಾಡಿಗಾಗಿ ಅವರು ಬರೋಬ್ಬರಿ 50 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:
ಇಷ್ಟೆಲ್ಲ ಸಹಾಯ ಮಾಡಿದ ಸೋನು ಸೂದ್ಗೆ ಜನರಿಂದ ಸಿಕ್ಕಿದ್ದೇನು? ಅದನ್ನು ಅಳತೆ ಮಾಡಲು ಸಾಧ್ಯವಿಲ್ಲ
ತಾಯಿ ಫೋಟೋ ಜೊತೆ ಸೋನು ಸೂದ್ ಭಾವುಕ ಪತ್ರ; ಮನಮುಟ್ಟುವ ಸಾಲುಗಳು ಇಲ್ಲಿವೆ..