‘ಸುದೀಪ್ ಅನುಮತಿ ಕೊಟ್ಟರೆ ಪ್ರಶಾಂತ್ ಸಂಬರಗಿ ವಿರುದ್ಧ ನಾನು ನ್ಯಾಯಾಲಯಕ್ಕೆ ಹೋಗ್ತೀನಿ’: ಚಕ್ರವರ್ತಿ ಚಂದ್ರಚೂಡ್
ಬಿಗ್ ಬಾಸ್ನಲ್ಲಿ ತಾವು ಮಾಡಿದ ಬಹುತೇಕ ತಪ್ಪುಗಳಿಗೆ ಚಕ್ರವರ್ತಿ ಚಂದ್ರಚೂಡ್ ಕಾರಣ ಎಂದು ಪ್ರಶಾಂತ್ ಹೇಳುತ್ತಿರುವುದು ಚಂದ್ರಚೂಡ್ ಅಸಮಾಧಾನಕ್ಕೆ ಗುರಿ ಆಗಿದೆ. ಹಾಗಾಗಿ ಅವರು ಕೋಪಗೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರು ಆಪ್ತವಾಗಿದ್ದರು. ಬಿಗ್ ಬಾಸ್ಗೆ ಬರುವುದಕ್ಕಿಂತಲೂ ಮುನ್ನವೇ ಅವರಿಬ್ಬರ ನಡುವೆ ಸ್ನೇಹವಿತ್ತು. ಆದರೆ ಬಿಗ್ ಬಾಸ್ನಿಂದ ಹೊರಬಂದ ಬಳಿಕ ಬಿರುಕು ಮೂಡಿದೆ. ದೊಡ್ಮನೆಯಲ್ಲಿ ತಾವು ಮಾಡಿದ ಬಹುತೇಕ ತಪ್ಪುಗಳಿಗೆ ಚಕ್ರವರ್ತಿ ಚಂದ್ರಚೂಡ್ ಕಾರಣ ಎಂದು ಪ್ರಶಾಂತ್ ಹೇಳುತ್ತಿರುವುದು ಚಂದ್ರಚೂಡ್ ಅಸಮಾಧಾನಕ್ಕೆ ಕಾರಣ ಆಗಿದೆ. ಹಾಗಾಗಿ ಅವರು ಕೋಪಗೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ. ‘ಸುದೀಪ್ ಸರ್ ಅನುಮತಿ ಕೊಟ್ಟರೆ ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ನಾನು ತಯಾರಿದ್ದೇನೆ’ ಎಂದು ಎಚ್ಚರಿಕೆ ನೀಡಿದ್ದಾರೆ.
‘ನಾಲ್ಕು ಜನರ ಪ್ರೀತಿ ಗಳಿಸಿದವನು ಆ ಪ್ರೀತಿಯನ್ನು ಉಳಿಸಿಕೊಳ್ಳಬೇಕಾದರೆ ತುಂಬ ಪ್ರಯತ್ನ ಪಡಬೇಕಾಗುತ್ತದೆ. ನಾನು ಈಗ ಅದೇ ಹಾದಿಯಲ್ಲಿ ಇದ್ದೀನಿ. ಒಂದು ಆಟ ಮುಗಿದಿದೆ. ಇನ್ನೊಂದು ಆಟ ಶುರುಮಾಡುತ್ತಿದ್ದೀರಿ. ಸಂಜನಾ ಗಲ್ರಾನಿ ನಿಮ್ಮನ್ನು ಹಂದಿ ಎಂದು ಕರೆದಾಗ ನನಗೆ ಫೋನ್ ಮಾಡಿ ಸಲಹೆ ಕೇಳಿದ್ರಿ. ಬಿಗ್ ಬಾಸ್ ಮನೆಯಲ್ಲೂ ಮೆಂಟರ್, ಗುರು ಎಂದೆಲ್ಲ ಹೇಳಿದ್ರಿ. ಆದರೆ ಈಗ ನೀವು ಮಾಡಿದ ಅಪರಾಧಗಳನ್ನೆಲ್ಲ ನನ್ನ ತಲೆ ಮೇಲೆ ಹಾಕುತ್ತಿದ್ದೀರಿ’ ಎಂದು ಚಂದ್ರಚೂಡ್ ಹೇಳಿದ್ದಾರೆ.
ಇದನ್ನೂ ಓದಿ:
ಮಂಜು ಜತೆ ಫ್ರೆಂಡ್ಶಿಪ್ ಹಾಳಾಗೋಕೆ ಚಕ್ರವರ್ತಿ ಕಾರಣ; ಪ್ರಶಾಂತ್ ಸಂಬರಗಿ ಗಂಭೀರ ಆರೋಪ
Published on: Aug 10, 2021 09:54 AM
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ

