AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Winner: ‘ನಾನು ಬಿಗ್​ ಬಾಸ್​ ವಿನ್ನರ್​’; ಎಲಿಮಿನೇಟ್​ ಆದ್ಮೇಲೂ ಸುದೀಪ್​ ಎದುರು ಪ್ರಶಾಂತ್​ ಸಂಬರಗಿ ಹೀಗೆ ಹೇಳಿದ್ದೇಕೆ?

Bigg Boss Winner: ‘ಬಿಗ್​ ಬಾಸ್​ ಟ್ರೋಫಿ ಗೆಲ್ಲುವಲ್ಲಿ ಇಷ್ಟು ಹತ್ತಿರ ಬಂದು, ಜಸ್ಟ್​ ಮಿಸ್​ ಆಗಿರುವ ಈ ಸಂದರ್ಭದಲ್ಲಿ ನಿಮ್ಮ ಭಾವನೆಗಳು ಹೇಗಿವೆ’ ಎಂದು ಸುದೀಪ್​ ಕೇಳಿದ ಪ್ರಶ್ನೆಗೆ ಪ್ರಶಾಂತ್​ ಈ ರೀತಿ ಉತ್ತರಿಸಿದರು. ಅದಕ್ಕೆ ಕಾರಣವನ್ನೂ ಅವರು ನೀಡಿದರು.

Bigg Boss Winner: ‘ನಾನು ಬಿಗ್​ ಬಾಸ್​ ವಿನ್ನರ್​’; ಎಲಿಮಿನೇಟ್​ ಆದ್ಮೇಲೂ ಸುದೀಪ್​ ಎದುರು ಪ್ರಶಾಂತ್​ ಸಂಬರಗಿ ಹೀಗೆ ಹೇಳಿದ್ದೇಕೆ?
ಪ್ರಶಾಂತ್​ ಸಂಬರಗಿ, ಕಿಚ್ಚ ಸುದೀಪ್​
TV9 Web
| Edited By: |

Updated on:Aug 08, 2021 | 4:11 PM

Share

120 ದಿನಗಳ ಕಾಲ ನಡೆದ ಬಿಗ್​ ಬಾಸ್​ ಕನ್ನಡ (Bigg Boss Kannada) ಸೀಸನ್​ 8ರ ಜರ್ನಿಗೆ ಇಂದು (ಆ.8) ಕೊನೇ ದಿನ. ಶನಿವಾರವೇ (ಆ.7) ಅದ್ದೂರಿ ಫಿನಾಲೆ (, Bigg Boss Finale) ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಟಾಪ್​ 5 ಸ್ಪರ್ಧಿಗಳಲ್ಲಿ ಪ್ರಶಾಂತ್​ ಸಂಬರಗಿ (Prashanth Sambargi), ದಿವ್ಯಾ ಉರುಡುಗ, ಅರವಿಂದ್​ ಕೆ.ಪಿ., ಮಂಜು ಪಾವಗಡ ಹಾಗೂ ವೈಷ್ಣವಿ ಗೌಡ ಇದ್ದರು. ಈ ಐವರಲ್ಲಿ ಮೊದಲು ಎಲಿಮಿನೇಟ್​ ಆಗಿದ್ದೇ ಪ್ರಶಾಂತ್​ ಸಂಬರಗಿ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತು. ಆದರೂ ಜನರ ಆಯ್ಕೆಯನ್ನು ಒಪ್ಪಿಕೊಳ್ಳಲೇಬೇಕು. ಆದರೆ ಎಲಿಮಿನೇಟ್​ ಆಗಿ ಹೊರಬಂದು ಸುದೀಪ್​ (Kichcha Sudeep) ಎದುರಲ್ಲಿ ನಿಂತುಕೊಂಡ ಪ್ರಶಾಂತ್​ ಸಂಬರಗಿ, ‘ನಾನು ಬಿಗ್​ ಬಾಸ್​ ವಿನ್ನರ್​’ ಎಂದರು. ಅವರ ಈ ಮಾತಿನ ಅರ್ಥವೇನು? 

‘ಬಿಗ್​ ಬಾಸ್​ ಟ್ರೋಫಿ ಗೆಲ್ಲುವಲ್ಲಿ ಇಷ್ಟು ಹತ್ತಿರ ಬಂದು, ಜಸ್ಟ್​ ಮಿಸ್​ ಆಗಿರುವ ಈ ಸಂದರ್ಭದಲ್ಲಿ ನಿಮ್ಮ ಭಾವನೆಗಳು ಹೇಗಿವೆ’ ಎಂದು ಸುದೀಪ್​ ಕೇಳಿದ ಪ್ರಶ್ನೆಗೆ ಪ್ರಶಾಂತ್​ ಈ ರೀತಿ ಉತ್ತರಿಸಿದರು. ‘ಟ್ರೋಫಿ ಒಂದು ನನ್ನ ಕೈಯಲ್ಲಿ ಇಲ್ಲ ಸರ್. 53 ಲಕ್ಷ ರೂ. ಬಹುಮಾನ ಮೊತ್ತ ಕೂಡ ನನ್ನ ಕೈಯಲ್ಲಿ ಇಲ್ಲ. ಇವೆರಡನ್ನು ಹೊರತು ಪಡಿಸಿ ನಾನು ವಿನ್ನರ್​ ಆಗಿದ್ದೇನೆ’ ಎಂದು ಪ್ರಶಾಂತ್​ ಹೇಳಿದರು. ಅದಕ್ಕೆ ಕಾರಣವನ್ನೂ ಅವರು ನೀಡಿದರು.

‘ಟಾಪ್​ 5 ಸ್ಥಾನಕ್ಕೆ ಬಂದಿರುವ ನಾವೆಲ್ಲರೂ ವಿನ್ನರ್​. ಕರ್ನಾಟಕದ ಜನತೆ ಎದುರು ನಾನು ಗೆದ್ದಿದ್ದೇನೆ. ನಿಮ್ಮೆಲ್ಲರ ಹೃದಯದಲ್ಲಿ ಜಾಗ ಪಡೆದುಕೊಂಡಿದ್ದೇನೆ. ಕಲರ್ಸ್​ ಕನ್ನಡ ವಾಹಿನಿ ಮುಖಾಂತರ ಕರ್ನಾಟಕದ ಜನತೆಯ ಆಶೀರ್ವಾದ ಪಡೆದುಕೊಂಡಿದ್ದೇನೆ. ಈ ಮೊದಲೇ ನಾನು ಸಾಮಾಜಿಕ ಪಿಡುಗುಗಳ ಬಗ್ಗೆ ಮಾತನಾಡಿದ್ದನ್ನು ಸುದ್ದಿ ವಾಹಿನಿಗಳ ಮೂಲಕ ಜನರು ನೋಡಿದ್ದರು. ಅದನ್ನು ನೋಡಿ ನಾನೊಬ್ಬ ಭಯಪಡಿಸುವ ವ್ಯಕ್ತಿ ಅಂತ ಜನರು ಎಂದುಕೊಂಡಿರಬಹುದು. ಆದರೆ ನಾನು ಮಾಡುತ್ತಿದ್ದುದು ಸಮಾಜದ ಒಳಿತಿಗಾಗಿ. ನನ್ನ ನೇರ ನುಡಿ ಮತ್ತು ನಿಷ್ಠುರ ಗುಣ ಜನರಿಗೆ ಇಷ್ಟ ಆಗಿದೆ ಎನಿಸುತ್ತದೆ. ಆ ಕಾರಣಕ್ಕಾಗಿಯೇ ನಾನು ಟಾಪ್​ 5ರ ಸ್ಥಾನಕ್ಕೆ ಬಂದೆ’ ಎಂದು ಅವರು ಹೇಳಿದರು.

6.69 ಲಕ್ಷ ಮತಗಳು ಪ್ರಶಾಂತ್​ ಸಂಬರಗಿಗೆ ಬಂದಿದ್ದವು. ಇದು ದೊಡ್ಡ ಸಂಖ್ಯೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಟಾಪ್​ 5ರಲ್ಲಿ ಇದ್ದ ಇನ್ನುಳಿದ ಸ್ಪರ್ಧಿಗಳು ಪ್ರಶಾಂತ್​ಗಿಂತಲೂ ಹೆಚ್ಚು ವೋಟ್​ ಪಡೆದುಕೊಂಡಿದ್ದಾರೆ. 10,21,831 ವೋಟ್​ಗಳನ್ನು ಪಡೆದ ವೈಷ್ಣವಿ ಗೌಡ ಅವರು ಟಾಪ್​ ನಾಲ್ಕನೇ ಸ್ಪರ್ಧಿಯಾಗಿ ಎಲಿಮಿನೇಟ್​ ಆದರು.

ಇದನ್ನೂ ಓದಿ:

‘ಪ್ರಶಾಂತ್​ ಸಂಬರಗಿ ನೋಡಿದ್ರೆ ಮೇಟಿ ನೆನಪಾಗ್ತಾರೆ’; ಬಿಗ್​ ಬಾಸ್​ನಿಂದ ಹೊರಬಂದ ಚಂದ್ರಚೂಡ್​ ಹೋಲಿಕೆ

ನಿಧಿ ಸುಬ್ಬಯ್ಯಗೆ ಬಿಗ್​ ಬಾಸ್​ ವೇದಿಕೆ ಮೇಲೆ ಕ್ಷಮೆ ಕೇಳಿದ ಅರವಿಂದ್​

Published On - 3:17 pm, Sun, 8 August 21

Follow Us
TV9 Web
TV9 Web

TV9 Kannada

Read More
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ