ಸೆನ್ಸಾರ್​ ಇಲ್ಲದೆ ನಾಚಿಕೆ ಆಗುವಂತಹ ಟಾಸ್ಕ್​ ನೀಡಿದ ಸನ್ನಿ ಲಿಯೋನ್​; ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​

Bigg Boss OTT: ಶಮಿತಾ ಶೆಟ್ಟಿ, ರಾಕೇಶ್​ ಬಾಪಟ್​, ನೇಹಾ ಭಾಸಿನ್​ ಮುಂತಾದವರು ಈ ಟಾಸ್ಕ್​ನಲ್ಲಿ ಭಾಗವಹಿಸಿದರು. ದಿವ್ಯಾ ಅಗರ್​ವಾಲ್​ ನಾಚಿ ನೀರಾದರು. ದೂರದಿಂದಲೇ ಎಲ್ಲವನ್ನೂ ನೋಡಿ ಅವರು ಕಣ್ಣರಳಿಸಿದರು.

ಸೆನ್ಸಾರ್​ ಇಲ್ಲದೆ ನಾಚಿಕೆ ಆಗುವಂತಹ ಟಾಸ್ಕ್​ ನೀಡಿದ ಸನ್ನಿ ಲಿಯೋನ್​; ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​
ಶಮಿತಾ ಶೆಟ್ಟಿ, ರಾಕೇಶ್​ ಬಾಪಟ್​, ನೇಹಾ ಭಾಸಿನ್​ ಮುಂತಾದವರು ಈ ಟಾಸ್ಕ್​ನಲ್ಲಿ ಭಾಗವಹಿಸಿದರು.


ಟಿವಿಯಲ್ಲಿ ‘ಬಿಗ್​ ಬಾಸ್​ ಓಟಿಟಿ’ (Bigg Boss OTT) ಪ್ರಸಾರ ಆಗುತ್ತಿಲ್ಲ. ವಯಸ್ಕರನ್ನೇ ಟಾರ್ಗೆಟ್​ ಆಗಿಟ್ಟುಕೊಂಡಿರುವ ಈ ಕಾರ್ಯಕ್ರಮ ಕೇವಲ ಓಟಿಟಿ (ವೂಟ್​) ಮೂಲಕ ಪ್ರಸಾರ ಆಗುತ್ತಿದೆ. ಇದಕ್ಕೀಗ ಸನ್ನಿ ಲಿಯೋನ್​ (Sunny Leone) ಎಂಟ್ರಿ ಆಗಿದೆ. ಸ್ಪರ್ಧಿಗಳಿಗೆ ಚಿತ್ರ ವಿಚಿತ್ರವಾದ ಟಾಸ್ಕ್​ಗಳನ್ನು ಅವರು ನೀಡಲು ಆರಂಭಿಸಿದ್ದಾರೆ. ಅವರು ಅಖಾಡಕ್ಕೆ ಕಾಲಿಟ್ಟ ಮೇಲೆ ಅಲ್ಲಿನ ವಾತಾವರಣವೇ ಬದಲಾಗಿದೆ. ಈಗ ಅವರು ನೀಡಿದ ಟಾಸ್ಕ್​ ನೋಡಿ ಬಿಗ್​ ಬಾಸ್​ ಮನೆಯ ಸ್ಪರ್ಧಿಗಳೇ ಶಾಕ್​ ಆಗಿದ್ದಾರೆ. ಕೆಲವರಂತೂ ನಾಚಿಕೊಂಡು ಹಿಂದೆ ಸರಿದಿದ್ದಾರೆ!

ಬಿಗ್​ ಬಾಸ್​ ಓಟಿಟಿಗೆ ಸದ್ಯಕ್ಕೆ ಸೆನ್ಸಾರ್​ನ ಹಂಗಿಲ್ಲ. ಅದರ ಸಂಪೂರ್ಣ ಲಾಭವನ್ನು ಪಡೆಯಲು ಈ ಶೋನ ಆಯೋಜಕರು ತೀರ್ಮಾನಿಸಿದಂತಿದೆ. ಅಷ್ಟಕ್ಕೂ ಸನ್ನಿ ಲಿಯೋನ್​ ನೀಡಿದ ಟಾಸ್ಕ್​ ಏನು? ಬಿಗ್​ ಬಾಸ್ ಮನೆಯಲ್ಲಿ ಕೆಲವು ಜೋಡಿಗಳ ನಡುವೆ ಆಪ್ತತೆ ಬೆಳೆದಿದೆ. ಅವರ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಪರೀಕ್ಷಿಸಲು ಅವರೊಂದು ಟಾಸ್ಕ್​ ನೀಡಿದರು. ಅದರ ನಿಯಮ ಹೀಗಿದೆ; ಇಬ್ಬರ ಸ್ಪರ್ಧಿಗಳು ತಬ್ಬಿಕೊಳ್ಳುವಂತೆ ನಿಂತು, ತಮ್ಮಿಬ್ಬರ ದೇಹದ ಮಧ್ಯೆ ತೆಂಗಿನ ಕಾಯಿ ಇಟ್ಟುಕೊಳ್ಳಬೇಕು. ಕೈಗಳನ್ನು ಬಳಸದೇ ಅದನ್ನು ತಮ್ಮ ಮುಖದವರೆಗೆ ತರಬೇಕು. ಈ ಟಾಸ್ಕ್​ ತುಂಬ ಬೋಲ್ಡ್​ ಆಗಿತ್ತು.

ಶಮಿತಾ ಶೆಟ್ಟಿ, ರಾಕೇಶ್​ ಬಾಪಟ್​, ಬೇಹಾ ಭಾಸಿನ್​ ಮುಂತಾದವರು ಈ ಟಾಸ್ಕ್​ನಲ್ಲಿ ಭಾಗವಹಿಸಿದರು. ದಿವ್ಯಾ ಅಗರ್​ವಾಲ್​ ನಾಚಿ ನೀರಾದರು. ದೂರದಿಂದಲೇ ಎಲ್ಲವನ್ನೂ ನೋಡಿ ಅವರು ಕಣ್ಣರಳಿಸಿದರು. ಇನ್ನೂ ಎಷ್ಟು ದಿನಗಳ ಕಾಲ ಸನ್ನಿ ಲಿಯೋನ್​ ಇರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರು ಕಾಲಿಟ್ಟ ಮೇಲಂತೂ ಈ ಶೋನ ಸ್ವರೂಪವೇ ಬದಲಾಗಿರುವುದು ನಿಜ.

ಬಿಗ್​ ಬಾಸ್​ ಜೊತೆ ಸನ್ನಿಗೆ ಹಳೇ ನಂಟು:

ಸನ್ನಿ ಲಿಯೋನ್​ ಅವರಿಗೂ ಬಿಗ್​ ಬಾಸ್​ ಮನೆಗೂ ತುಂಬ ಹಳೆಯ ಸಂಬಂಧ. ನೀಲಿ ಸಿನಿಮಾ ಲೋಕಕ್ಕೆ ಗುಡ್​ಬೈ ಹೇಳಿದ ಬಳಿಕ ಅವರು ಮೊದಲು ಕಾಲಿಟ್ಟಿದ್ದೇ ಹಿಂದಿ ಬಿಗ್​ ಬಾಸ್ ಕಾರ್ಯಕ್ರಮಕ್ಕೆ. 2011-12ರಲ್ಲಿ ಪ್ರಸಾರವಾದ ‘ಹಿಂದಿ ಬಿಗ್​ ಬಾಸ್​ ಸೀಸನ್​ 5’ರಲ್ಲಿ ಅವರು ಸ್ಪರ್ಧಿಸಿದ್ದರು. ಆ ಬಳಿಕವೇ ಅವರಿಗೆ ಬಾಲಿವುಡ್​ನಲ್ಲಿ ಅವಕಾಶ ಬರಲು ಆರಂಭ ಆದವು. ನಂತರ ಅನೇಕ ಹಿಂದಿ ಸಿನಿಮಾಗಳಲ್ಲಿ ನಟಿಸಿ ಅವರು ಇನ್ನಷ್ಟು ಫೇಮಸ್​ ಆದರು. ಈಗ ಬರೋಬ್ಬರಿ 10 ವರ್ಷಗಳ ಬಳಿಕ ಅವರು ಮತ್ತೆ ಬಿಗ್​ ಬಾಸ್​ ಮನೆಗೆ ಕಾಲಿಟ್ಟಿರುವುದು ವಿಶೇಷ.

ಇದನ್ನೂ ಓದಿ:

‘ಸನ್ನಿ ಲಿಯೋನ್​ ಅವರನ್ನೇ ಒಪ್ಪಿಕೊಂಡ ನಾವು ಶಿಲ್ಪಾ ಶೆಟ್ಟಿಯನ್ನು ಯಾಕೆ ದ್ವೇಷಿಸುತ್ತೇವೆ?’; ಹಿಮಾಂಶ್​ ಕೊಹ್ಲಿ ಪ್ರಶ್ನೆ

ಮುಂದುವರಿದಿದೆ ಶಿಲ್ಪಾ ಶೆಟ್ಟಿ ತಂಗಿಯ ಮುತ್ತಿನಾಟ; ‘ಈಗಲೇ ನನಗೆ ಕಿಸ್​ ಮಾಡು’ ಎಂದ ಶಮಿತಾ ವಿಡಿಯೋ ವೈರಲ್​

Click on your DTH Provider to Add TV9 Kannada