AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಗೆ ಮುತ್ತಿನ ಮಳೆ; ‘ಬಿಗ್​ ಬಾಸ್​ ಮನೆಗೆ ಬಂದು ಮೂರ್ಖಳಾದೆ’ ಎಂದ ನಟಿ

‘ಬಿಗ್​ ಬಾಸ್​ ಓಟಿಟಿ’ ಕಾರ್ಯಕ್ರಮವು ವೂಟ್​ನಲ್ಲಿ ಪ್ರಸಾರ ಆಗುತ್ತಿದೆ. ಆರು ವಾರಗಳ ಕಾಲ ನಡೆಯುವ ಈ ಶೋಗೆ ಕರಣ್​ ಜೋಹರ್​ ನಿರೂಪಕರಾಗಿದ್ದಾರೆ. ಟಿವಿಯಲ್ಲಿ ಪ್ರಸಾರ ಆಗುವ ಮಾಮೂಲಿ ಬಿಗ್​ ಬಾಸ್​ಗಿಂತಲೂ ಈ ಶೋ ಸ್ವಲ್ಪ ಸ್ಟ್ರಾಂಗ್​ ಆಗಿದೆ.

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಗೆ ಮುತ್ತಿನ ಮಳೆ; ‘ಬಿಗ್​ ಬಾಸ್​ ಮನೆಗೆ ಬಂದು ಮೂರ್ಖಳಾದೆ’ ಎಂದ ನಟಿ
ಶಮಿತಾ ಶೆಟ್ಟಿ, ರಾಕೇಶ್​ ಬಾಪಟ್​
TV9 Web
| Edited By: |

Updated on:Aug 25, 2021 | 5:20 PM

Share

ಒಂದೆಡೆ ಶಿಲ್ಪಾ ಶೆಟ್ಟಿ (Shilpa Shetty) ಕುಟುಂಬ ಕಷ್ಟಪಡುತ್ತಿದೆ. ಮತ್ತೊಂದೆಡೆ ಅವರ ತಂಗಿ ಶಮಿತಾ ಶೆಟ್ಟಿ (Shamita Shetty) ಅವರು ಬಿಗ್​ ಬಾಸ್​ (Bigg Boss OTT) ಮನೆಯಲ್ಲಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಶಿಲ್ಪಾ ಪತಿ ರಾಜ್​ ಕುಂದ್ರಾ (Raj Kundra) ಅಶ್ಲೀಲ ಸಿನಿಮಾ ದಂಧೆಯ ಆರೋಪಿ ಆಗಿದ್ದಾರೆ. ಒಟ್ಟಿನಲ್ಲಿ ಅವರ ಇಡೀ ಫ್ಯಾಮಿಲಿ ಮೇಲೆ ಜನರು ಈಗ ಕಣ್ಣಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಶಮಿತಾ ಶೆಟ್ಟಿಗೆ ಬಿಗ್​ ಬಾಸ್​ ಮನೆಯೊಳಗೆ ಸ್ಪರ್ಧಿಯೊಬ್ಬರು ಕಿಸ್​ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಚಾರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಶಮಿತಾ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.

‘ಬಿಗ್​ ಬಾಸ್​ ಓಟಿಟಿ’ ಕಾರ್ಯಕ್ರಮವು ವೂಟ್​ನಲ್ಲಿ ಪ್ರಸಾರ ಆಗುತ್ತಿದೆ. ಆರು ವಾರಗಳ ಕಾಲ ನಡೆಯುವ ಈ ಶೋಗೆ ಕರಣ್​ ಜೋಹರ್​ ನಿರೂಪಕರಾಗಿದ್ದಾರೆ. ಟಿವಿಯಲ್ಲಿ ಪ್ರಸಾರ ಆಗುವ ಮಾಮೂಲಿ ಬಿಗ್​ ಬಾಸ್​ಗಿಂತಲೂ ಈ ಶೋ ಸ್ವಲ್ಪ ಸ್ಟ್ರಾಂಗ್​ ಆಗಿದೆ. ಬಿಗ್​ ಬಾಸ್​ ಸ್ಪರ್ಧಿಗಳನ್ನು ಎಬ್ಬಿಸಲು ಪ್ರತಿ ದಿನ ಬೆಳಗ್ಗೆ ಹಾಡು ಪ್ಲೇ ಮಾಡಲಾಗುತ್ತಿದೆ. ಈ ವೇಳೆ ಶಮಿತಾ ಶೆಟ್ಟಿ ಮಲಗಿದ್ದ ಜಾಗಕ್ಕೆ ತೆರಳಿದ ರಾಕೇಶ್​ ಬಾಪಟ್​ ಅವರು ಕಿಸ್​ ಮಾಡಿದ್ದಾರೆ. ಅವರು ಶಮಿತಾ ಕೈಗೆ ಮುತ್ತಿಟ್ಟಿರುವ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ನಿಧಾನವಾಗಿ ಶಮಿತಾ ಮತ್ತು ರಾಕೇಶ್​ ಬಾಪಟ್​ ನಡುವೆ ಆತ್ಮೀಯತೆ ಹೆಚ್ಚುತ್ತಿರುವುದನ್ನು ವೀಕ್ಷಕರು ಗಮನಿಸುತ್ತಿದ್ದಾರೆ.

ಇತ್ತೀಚೆಗೆ ನಡೆದ ಟಾಸ್ಕ್​ನಲ್ಲಿ ಶಮಿತಾ ಶೆಟ್ಟಿ ಸೋಲಬೇಕಾಯಿತು. ಬಳಿಕ ಅವರಿಗೆ ಬಿಗ್​ ಬಾಸ್​ ಸಾದಾ ಶಿಕ್ಷೆ ನೀಡಿದರು. ಅದನ್ನು ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಶಮಿತಾ ಅಳಲು ಪ್ರಾರಂಭಿಸಿದರು. ‘ಬಿಗ್​ ಬಾಸ್​ ಮನೆಯಲ್ಲಿ ತಾರತಮ್ಯ ಆಗುತ್ತಿದೆ. ಪದೇಪದೇ ನಾವು ಒಳ್ಳೆಯವರು ಎಂಬುದನ್ನು ಸಾಬೀತು ಮಾಡಲು ಪ್ರಯತ್ನಿಸಬೇಕಾಗಿದೆ. ನನ್ನ ಕುಟುಂಬ ಈಗ ಕಷ್ಟದ ಪರಿಸ್ಥಿತಿಯಲ್ಲಿದೆ. ಇಂಥ ಸಂದರ್ಭದಲ್ಲಿ ನಾನು ಬಿಗ್ ಬಾಸ್​ಗೆ ಬಂದು ಮೂರ್ಖಳಾದೆ’ ಎಂದು ಅವರು ಕಣ್ಣೀರು ಹಾಕಿದ್ದಾರೆ.

ಇದನ್ನ ಓದಿ:

‘ಅಮ್ಮನಷ್ಟು ವಯಸ್ಸಾಗಿದೆ, ಆದ್ರೂ ಬುದ್ಧಿ ಇಲ್ಲ’; ಶಮಿತಾ ಶೆಟ್ಟಿಗೆ ಬಿಗ್​ ಬಾಸ್​ನಲ್ಲಿ ಚುಚ್ಚು ಮಾತು: ಶಿಲ್ಪಾ ತಂಗಿಗೆ ವಯಸ್ಸೆಷ್ಟು?

‘ನೀನು ಡೈಪರ್​ ಹಾಕ್ಕೋ’; ಪುರುಷ ಸ್ಪರ್ಧಿಗೆ ಖಡಕ್​ ಆದೇಶ ನೀಡಿದ ಶಮಿತಾ ಶೆಟ್ಟಿ

(Raqesh Bapat wakes Shamita Shetty up with a kiss in Bigg Boss OTT)

Published On - 5:19 pm, Wed, 25 August 21

Follow Us
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ