ನೀಲಿ ಚಿತ್ರ ನಿರ್ಮಾಣ ಪ್ರಕರಣ; ಜೈಲಿನಲ್ಲಿರುವ ರಾಜ್ ಕುಂದ್ರಾಗೆ ಮಧ್ಯಂತರ ರಿಲೀಫ್ ನೀಡಿದ ಬಾಂಬೆ ಹೈಕೋರ್ಟ್
ವಾರದ ಹಿಂಎ ರಾಜ್ ಕುಂದ್ರಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂಬೈನ ಸೆಷನ್ ಕೋರ್ಟ್ ನಡೆಸಿ, ಈ ವಿಚಾರಣೆಯನ್ನು ಕೋರ್ಟ್ ಆಗಸ್ಟ್ 20ರವರೆಗೆ ಮುಂದೂಡಿತ್ತು.
ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನಕ್ಕೆ ಒಳಗಾಗಿ ತಿಂಗಳಾಗುತ್ತಾ ಬಂದಿದೆ. ಅವರ ವಿರುದ್ಧ ಆರೋಪ ತುಂಬಾನೇ ಗಂಭೀರವಾಗಿದೆ. ಜತೆಗೆ ಅವರಿಗೆ ಜಾಮೀನು ಸಿಕ್ಕರೆ ಸಾಕ್ಷ್ಯ ನಾಶವಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ಎಷ್ಟೇ ಪ್ರಯತ್ನ ಮಾಡಿದರೂ ಅವರಿಗೆ ಜಾಮೀನು ಸಿಗುತ್ತಿಲ್ಲ. ಈ ಬೆನ್ನಲ್ಲೇ ಅವರಿಗೆ ಬಾಂಬೆ ಹೈಕೋರ್ಟ್ ಕಡೆಯಿಂದ ರಿಲೀಫ್ ಒಂದು ಸಿಕ್ಕಿದೆ. ಅವರ ಜಾಮೀನು ಅರ್ಜಿಯನ್ನು ಆಗಸ್ಟ್ 25ರಂದು ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ.
ವಾರದ ಹಿಂಎ ರಾಜ್ ಕುಂದ್ರಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂಬೈನ ಸೆಷನ್ ಕೋರ್ಟ್ ನಡೆಸಿ, ಈ ವಿಚಾರಣೆಯನ್ನು ಕೋರ್ಟ್ ಆಗಸ್ಟ್ 20ರವರೆಗೆ ಮುಂದೂಡಿತ್ತು. ರಾಜ್ ಕುಂದ್ರಾಗೆ ಜಾಮೀನು ನೀಡಿದರೆ ಆಗುವ ತೊಂದರೆಗಳೇನು? ಅವರಿಗೆ ಏಕೆ ಜಾಮೀನು ನೀಡಬಾರದು ಎನ್ನುವ ಬಗ್ಗೆ ಮುಂಬೈ ಕ್ರೈಮ್ ಬ್ರ್ಯಾಂಚ್ನವರು 19 ಕಾರಣಗಳನ್ನು ನೀಡಿದ್ದರು. ಈ ಕಾರಣಕ್ಕೆ ಸೆಷನ್ ಕೋರ್ಟ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದೆ ಎನ್ನಲಾಗಿದೆ. ಈ ಕಾರಣಕ್ಕೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿ ರಾಜ್ ಕುಂದ್ರಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಅರ್ಜಿ ವಿಚಾರಣೆಗೆ ಹೈಕೋರ್ಟ್ ಸಮ್ಮತಿಸಿದೆ.
ನೀಲಿ ಸಿನಿಮಾ ನಿರ್ಮಾಣ ಮಾಡಿ ಅದನ್ನು ಹಂಚುವ ಕೆಲಸವನ್ನು ರಾಜ್ ಕುಂದ್ರಾ ಮಾಡುತ್ತಿದ್ದರು. ಆದರೆ, ತಾವು ನಿರ್ಮಾಣ ಮಾಡುತ್ತಿದ್ದುದು ನೀಲಿ ಚಿತ್ರ ಅಲ್ಲ ಎಂದಿದ್ದಾರೆ ರಾಜ್ ಕುಂದ್ರಾ. ಈಗ ಅವರು ಜೈಲಿನಿಂದ ಹೊರ ಬರೋಕೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದು ಸಾಧ್ಯವಾಗುತ್ತಿಲ್ಲ. ಇನ್ನು, ರಾಜ್ ಕುಂದ್ರಾ ಬಂಧನದ ನಂತರ ಶಿಲ್ಪಾ ಶೆಟ್ಟಿ ಜನಪ್ರಿಯತೆಗೆ ಪೆಟ್ಟು ಬಿದ್ದಿದೆ. ಅನೇಕ ಬ್ರ್ಯಾಂಡ್ಗಳು ಅವರ ಜತೆಗಿನ ಒಪ್ಪಂದ ರದ್ದು ಮಾಡಿಕೊಳ್ಳಲು ಮುಂದಾಗಿವೆ ಎನ್ನಲಾಗಿದೆ.
ಇದನ್ನೂ ಓದಿ: Shilpa Shetty: ರಾಜ್ ಕುಂದ್ರಾ ಜೈಲಿನಲ್ಲಿರುವಾಗಲೇ ಗುಡ್ ನ್ಯೂಸ್ ನೀಡಿದ ಶಿಲ್ಪಾ ಶೆಟ್ಟಿ
Published On - 1:58 pm, Wed, 18 August 21