ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಮಾಡಿಕೊಂಡ ಕತ್ರಿನಾ-ವಿಕ್ಕಿ? ಸಲ್ಲುಗೆ ಬೇಕಂತೆ ಮದುವೆ ಲೊಕೇಷನ್​

Katrina Kaif Vicky Kaushal:  ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ ಒಟ್ಟಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಿದೆ. ಇವರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದನ್ನು ಇಬ್ಬರೂ ಅಲ್ಲಗಳೆದಿದ್ದರು.

ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಮಾಡಿಕೊಂಡ ಕತ್ರಿನಾ-ವಿಕ್ಕಿ? ಸಲ್ಲುಗೆ ಬೇಕಂತೆ ಮದುವೆ ಲೊಕೇಷನ್​
ವಿಕ್ಕಿ-ಕತ್ರಿನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 18, 2021 | 5:50 PM

ನಟಿ ಕತ್ರಿನಾ ಕೈಫ್​ ರಿಲೇಶನ್​​ಶಿಪ್​ ವಿಚಾರದಲ್ಲಿ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ರಣಬೀರ್​ ಕಪೂರ್​, ಸಲ್ಮಾನ್​ ಖಾನ್​ ಜತೆ ಸುತ್ತಾಟ ನಡೆಸಿದ್ದ ಅವರು, ನಂತರ ಸೈಲೆಂಟ್​ ಆದರು. ಮತ್ತೆ ಯಾರ ಸುದ್ದಿಗೂ ಹೋಗುವ ಸೂಚನೆಯನ್ನು ಅವರು ನೀಡಿರಲಿಲ್ಲ. ಸದ್ಯ, ಬಾಲಿವುಡ್​ ಯಂಗ್​ ಹೀರೋ ವಿಕ್ಕಿ ಕೌಶಲ್​ ಜತೆ ಕತ್ರಿನಾ ಸುತ್ತಾಟ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈಗ ಇಬ್ಬರೂ ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಕೂಡ ಮಾಡಿಕೊಂಡಿದ್ದಾರಂತೆ.

ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ ಒಟ್ಟಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಿದೆ. ಇವರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದನ್ನು ಇಬ್ಬರೂ ಅಲ್ಲಗಳೆದಿದ್ದರು. ನಾವಿಬ್ಬರೂ ಬೆಸ್ಟ್​ ಫ್ರೆಂಡ್ಸ್​​ ಅಷ್ಟೇ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಆದರೆ, ನೆಟ್ಟಿಗರು ಸುಮ್ಮನೆ ಕೂತಿಲ್ಲ. ವಿಕ್ಕಿ ಹಾಗೂ ಕತ್ರಿನಾ ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಈ ಸುದ್ದಿ ನೋಡಿ ಸಲ್ಮಾನ್​ ಖಾನ್​​ ಬೇಸರ ಮಾಡಿಕೊಳ್ಳಬಹುದು, ಸಲ್ಲು ಮದುವೆ ಲೊಕೇಷನ್​ ಕೇಳಬಹುದು ಎಂಬಿತ್ಯಾದಿ ಚರ್ಚೆ ನಡೆದಿದೆ.

ಅನಿಲ್​ ಕಪೂರ್​ ಮಗ ಹರ್ಷವರ್ಧನ್​ ಕಪೂರ್​ ಕತ್ರಿನಾ-ವಿಕ್ಕಿ ಸಂಬಂಧದ ಬಗ್ಗೆ ಮೌನ ಮುರಿದಿದ್ದರು. ಈ ಬಗ್ಗೆ ಮಾತನಾಡಿದ್ದ ಹರ್ಷವರ್ಧನ್​, ‘ಕತ್ರಿನಾ-ವಿಕ್ಕಿ ಆಪ್ತರಾಗಿದ್ದಾರೆ. ಇಬ್ಬರೂ ಮದುವೆ ಆಗುವ ಆಲೋಚನೆಯಲ್ಲಿ ಕೂಡ ಇದ್ದಾರೆ. ಬಹುಶಃ ಈ ವಿಚಾರ ಹೇಳಿದ ನಂತರದಲ್ಲಿ ನಾನು ತೊಂದರೆಗೆ ಸಿಲುಕಬಹುದು’ ಎಂದಿದ್ದರು.

ಅದು, 2018ರ ಸಮಯ. ‘ಕಾಫಿ ವಿತ್​ ಕರಣ್’​ ಶೋನಲ್ಲಿ ಕತ್ರಿನಾ ಪಾಲ್ಗೊಂಡಿದ್ದರು. ಈ ವೇಳೆ ವಿಕ್ಕಿ ಜತೆ ತೆರೆ ಹಂಚಿಕೊಳ್ಳುವ ಆಸಕ್ತಿ ತೋರಿದ್ದರು ಕತ್ರಿನಾ. ಇದಾದ ನಂತರ ಅಂದರೆ, 2019ರಲ್ಲಿ ಇಬ್ಬರೂ ಮುಂಬೈನಲ್ಲಿ ಊಟಕ್ಕೆ ಒಟ್ಟಾಗಿ ಸೇರಿದ್ದರು. ಇದರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಕತ್ರಿನಾ ಕೈಫ್​ ಸದ್ಯ, ‘ಫೋನ್​ ಬೂತ್’ ಹಾಗೂ ‘ಟೈಗರ್​ 3’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ರಷ್ಯಾಗೆ ಹೊರಟ ಸಲ್ಮಾನ್​ ಖಾನ್​-ಕತ್ರಿನಾ ಕೈಫ್​; ಏನಿದು ಸಮಾಚಾರ?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ