ರಷ್ಯಾಗೆ ಹೊರಟ ಸಲ್ಮಾನ್​ ಖಾನ್​-ಕತ್ರಿನಾ ಕೈಫ್​; ಏನಿದು ಸಮಾಚಾರ?

ಕೊವಿಡ್ ಎರಡನೇ ಅಲೆ​ ಕಾರಣದಿಂದ ಸಿನಿಮಾ ಶೂಟಿಂಗ್​ ನಿಂತಿತ್ತು. ಭಾರತದಲ್ಲಿ ಕೊರೊನಾ ವೈರಸ್​ ಹೆಚ್ಚಾದ ಕಾರಣಕ್ಕೆ ಅನೇಕ ರಾಷ್ಟ್ರಗಳು ಭಾರತದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ಹೇರಿತ್ತು.

ರಷ್ಯಾಗೆ ಹೊರಟ ಸಲ್ಮಾನ್​ ಖಾನ್​-ಕತ್ರಿನಾ ಕೈಫ್​; ಏನಿದು ಸಮಾಚಾರ?
ರಷ್ಯಾಗೆ ಹೊರಟ ಸಲ್ಮಾನ್​ ಖಾನ್​-ಕತ್ರಿನಾ ಕೈಫ್​; ಏನಿದು ಸಮಾಚಾರ?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 16, 2021 | 5:27 PM

‘ಏಕ್​ ಥಾ ಟೈಗರ್​’, ‘ಟೈಗರ್​ ಜಿಂದಾ ಹೈ’ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿದ್ದವು. ಈಗ ಸಲ್ಮಾನ್​ ಖಾನ್ ‘ಟೈಗರ್​ 3’ಗೆ ಸಿದ್ಧತೆ ನಡೆಸಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿರುವ ಅವರಿಗೆ ಈ ಸಿನಿಮಾ ಬಹಳ ಮಹತ್ವದ್ದಾಗಿದೆ. ಈ ಕಾರಣಕ್ಕೆ ಅವರು ಈ ಚಿತ್ರದ ಬಗ್ಗೆ ಹೆಚ್ಚು ಆಸ್ತೆ ವಹಿಸಿದ್ದಾರೆ. ಈ ಸಿನಿಮಾದ ಆ್ಯಕ್ಷನ್​ ದೃಶ್ಯಗಳ ಶೂಟಿಂಗ್​ ರಷ್ಯಾದಲ್ಲಿ ನಡೆಯುತ್ತಿದ್ದು, ಸಲ್ಮಾನ್​ ಖಾನ್​, ಕತ್ರಿನಾ ಕೈಫ್ ಬುಧವಾರ (ಆಗಸ್ಟ್​ 18) ರಷ್ಯಾಗೆ ಪ್ರಯಾಣ ಬೆಳೆಸಲಿದ್ದಾರೆ.

ಕೊವಿಡ್ ಎರಡನೇ ಅಲೆ​ ಕಾರಣದಿಂದ ಸಿನಿಮಾ ಶೂಟಿಂಗ್​ ನಿಂತಿತ್ತು. ಭಾರತದಲ್ಲಿ ಕೊರೊನಾ ವೈರಸ್​ ಹೆಚ್ಚಾದ ಕಾರಣಕ್ಕೆ ಅನೇಕ ರಾಷ್ಟ್ರಗಳು ಭಾರತದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ಹೇರಿತ್ತು. ಆದರೆ, ಈಗ ಕೊವಿಡ್​ ಕಡಿಮೆ ಆಗಿದೆ. ಹೀಗಾಗಿ, ಬೇರೆ ದೇಶಗಳಿಗೆ ಭಾರತದ ವಿಮಾನಗಳು ತೆರಳುತ್ತಿವೆ. ಈ ಕಾರಣಕ್ಕೆ ‘ಟೈಗರ್​ 3’ ತಂಡ ರಷ್ಯಾಗೆ ಪ್ರಯಾಣ ಬೆಳೆಸಿದೆ. ರಷ್ಯಾ ಮಾತ್ರವಲ್ಲದೆ, ಆಸ್ಟ್ರೇಲಿಯಾ ಹಾಗೂ ಟರ್ಕಿಗೆ ತಂಡ ಪ್ರಯಾಣ ಬೆಳೆಸಲಿದೆ.

‘ಸಲ್ಮಾನ್, ಕತ್ರಿನಾ, ನಿರ್ದೇಶಕ ಮನೀಶ್ ಶರ್ಮಾ ಸೇರಿದಂತೆ ಎಲ್ಲರನ್ನೂ ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ. ಟೈಗರ್ ತಂಡ ಆಗಸ್ಟ್  18ರಂದು ವಿಮಾನ ಏರುತ್ತಿದೆ. ಕೊವಿಡ್​ನಿಂದ ಬಚಾವ್​ ಆಗಲು ಎಲ್ಲರೂ ಬಯೋಬಬಲ್​ ನಿಯಮ ನಿರ್ವಹಣೆ ಮಾಡುವುದು ಕಡ್ಡಾಯವಾಗಿದೆ. ರಷ್ಯಾದಿಂದ ಟರ್ಕಿ ಹಾಗೂ ಆಸ್ಟ್ರೇಲಿಯಾಗೆ ಈ ತಂಡ ಪ್ರಯಾಣ ಬೆಳೆಸಲಿದೆ ಎಂದು ಮೂಲಗಳು ಹೇಳಿವೆ.

‘ಟೈಗರ್​ 3’ ಮೇಲೆ ಅಭಿಮಾನಿಗಳು ಇಟ್ಟುಕೊಂಡಿರುವ ನಿರೀಕ್ಷೆಯ ಮಟ್ಟವನ್ನು ತಲುಪಲು ನಿರ್ಮಾಪಕರು ಕೋಟಿ ಕೋಟಿ ರೂ. ಹಣ ಖರ್ಚು ಮಾಡುತ್ತಿದ್ದಾರೆ. ‘ಟೈಗರ್​ 3’ ಚಿತ್ರದಲ್ಲಿ ವಿಲನ್​ ಇಂಟ್ರಡಕ್ಷನ್​ ಸೀನ್​ಗಾಗಿ ನಿರ್ಮಾಪಕರು ಬರೋಬ್ಬರಿ 10 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು.  ‘ಏಕ್​ ಥಾ ಟೈಗರ್​’, ‘ಟೈಗರ್​ ಜಿಂದಾ ಹೈ’ ಬಳಿಕ ಟೈಗರ್​ ಸರಣಿಯಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಈ ಬಾರಿಯೂ ಸಲ್ಮಾನ್​ ಖಾನ್​ಗೆ ಜೋಡಿಯಾಗಿ ಕತ್ರಿನಾ ಕೈಫ್​ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಕೂಡ ಒಂದು ಅತಿಥಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.

ಇದನ್ನೂ ಓದಿ: ‘ಟೈಗರ್​3’ ಚಿತ್ರದ​ ತರಬೇತಿಯ ಆ್ಯಕ್ಷನ್​ ವಿಡಿಯೋ ಕ್ಲಿಪ್​ ಹಂಚಿಕೊಂಡ ಕತ್ರಿನಾ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್