ಅನಿಲ್​ ಕಪೂರ್​ ಮಗಳ ಮದುವೆಗೆ ಕೇವಲ 30 ಅತಿಥಿಗಳು; ಸ್ಟಾರ್​ಗಳಿಗಾಗಿ ನಡೆಯಲಿದೆ ವಿಶೇಷ ಆರತಕ್ಷತೆ

ಸೋಮವಾರ ರಾತ್ರಿ ಕರಣ್​ ಅವರು ರಿಯಾಗೆ ತಾಳಿ ಕಟ್ಟಲಿದ್ದಾರೆ. ಕಪೂರ್​ ಕುಟುಂಬ ತುಂಬಾನೇ ದೊಡ್ಡದಿದೆ. ಹೀಗಾಗಿ, ಕಪೂರ್​ ಫ್ಯಾಮಿಲಿ ಹಾಗೂ ಕರಣ್​ ಕಡೆಯವರು ಒಂದಷ್ಟು ಮಂದಿ ಮದುವೆಗೆ ಆಗಮಿಸುತ್ತಿದ್ದಾರೆ.

ಅನಿಲ್​ ಕಪೂರ್​ ಮಗಳ ಮದುವೆಗೆ ಕೇವಲ 30 ಅತಿಥಿಗಳು; ಸ್ಟಾರ್​ಗಳಿಗಾಗಿ ನಡೆಯಲಿದೆ ವಿಶೇಷ ಆರತಕ್ಷತೆ
ಅನಿಲ್​ ಕಪೂರ್​ ಮಗಳ ಮದುವೆಗೆ ಕೇವಲ 30 ಅತಿಥಿಗಳು; ಸ್ಟಾರ್​ಗಳಿಗಾಗಿ ನಡೆಯಲಿದೆ ವಿಶೇಷ ಆರತಕ್ಷತೆ
Follow us
| Updated By: ರಾಜೇಶ್ ದುಗ್ಗುಮನೆ

Updated on: Aug 16, 2021 | 7:14 PM

ಸ್ಟಾರ್​ ನಟರ ಮಕ್ಕಳ ಮದುವೆ ಎಂದರೆ ಅಲ್ಲೊಂದು ಅದ್ದೂರಿತನ ಇರುತ್ತದೆ. ಚಿತ್ರರಂಗದ ಕಲಾವಿದರ ದಂಡೇ ಅಲ್ಲಿ ನೆರೆದಿರುತ್ತದೆ. ಆದರೆ, ಈಗ ಕೊರೊನಾ ವೈರಸ್​ ಕಾಟ. ಹೀಗಾಗಿ, ಆಪ್ತರ ಸಮ್ಮುಖದಲ್ಲಿ ಮದುವೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಅನಿಲ್​ ಕಪೂರ್​ ಮಗಳು ರಿಯಾ ಕಪೂರ್​ ಕೂಡ ಮದುವೆ ಆಗಿದ್ದಾರೆ. 13 ವರ್ಷಗಳ ಕಾಲ ಕರಣ್​ ಬೂಲಾನಿ ಅವರನ್ನು ಪ್ರೀತಿಸಿ, ಈಗ ಮದುವೆ ಆಗುತ್ತಿದ್ದಾರೆ. ಈ ಮದುವೆಗೆ ಕೇವಲ 30 ಅತಿಥಿಗಳು ಮಾತ್ರ ಆಗಮಿಸಿದ್ದರು.

ಕಪೂರ್​ ಕುಟುಂಬ ತುಂಬಾನೇ ದೊಡ್ಡದಿದೆ. ಹೀಗಾಗಿ, ಕಪೂರ್​ ಫ್ಯಾಮಿಲಿ ಹಾಗೂ ಕರಣ್​ ಕಡೆಯವರು ಒಂದಷ್ಟು ಮಂದಿ ಮದುವೆಗೆ ಆಗಮಿಸಿದ್ದರು. 2018ರಲ್ಲಿ ಸೋನಮ್​ ಕಪೂರ್​ ಮದುವೆ ನೆರವೇರಿತ್ತು. ಆ ಮದುವೆಯಲ್ಲಿ ಸ್ಟಾರ್​ ನಟರ ದಂಡೇ ನೆರೆದಿತ್ತು. ಆದರೆ, ಕೊವಿಡ್​ನಿಂದ ರಿಯಾ ಮದುವೆಗೆ ಆ ಅದ್ದೂರಿತನಕ್ಕೆ ಆಸ್ಪದ ಸಿಗುತ್ತಿಲ್ಲ. ಇದು ಅನೀಲ್​ ಕಪೂರ್​ಗೆ ಬೇಸರ ತರಿಸಿದೆ. ಹೀಗಾಗಿ, ದೊಡ್ಡಮಟ್ಟದಲ್ಲಿ ರಿಸೆಪ್ಷನ್​ ನಡೆಸುವ ಆಲೋಚನೆ ಅನಿಲ್​ ಕಪೂರ್​ ಹೊಂದಿದ್ದಾರೆ.

ಇನ್ನು, ರಿಯಾ ಮದುವೆಯನ್ನು ಕುಟುಂಬ ಸಂಭ್ರಮಿಸುತ್ತಿದೆ. ರಿಯಾ ಅಕ್ಕ ಸೋನಮ್​ ಕಪೂರ್​ ಅಹೂಜಾ, ರಿಯಾ ಭಾವ ಆನಂದ್​ ಅಹೂಜಾ, ಶ್ರೀದೇವಿ ಮಗಳು ಜಾಹ್ನವಿ ಕಪೂರ್​, ಅರ್ಜುನ್​ ಕಪೂರ್​ ಸೇರಿ ಸಾಕಷ್ಟು ಮಂದಿ ಮದುವೆಯಲ್ಲಿ ಹಾಜರಿ ಹಾಕಿದ್ದಾರೆ. ಖುಷಿ, ಶಯಾನಾ ಸೇರಿ ಸಾಕಷ್ಟು ಮಂದಿ ಮದುವೆ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಕೊವಿಡ್​ ಎರಡನೇ ಅಲೆ ಈಗ ತಾನೇ ತಣ್ಣಗಾಗುತ್ತಿದೆ. ಇನ್ನು, ಮೂರನೇ ಅಲೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಎಲ್ಲವನ್ನೂ ನೋಡಿಕೊಂಡು ರಿಸೆಪ್ಷನ್​ ನಿರ್ಧರಿಸೋಕೆ ಅನಿಲ್​ ಕಪೂರ್​ ಆಲೋಚಿಸಿದ್ದಾರೆ. ಈ ಆರತಕ್ಷತೆಗೆ ಬಾಲಿವುಡ್​ನ ಸೆಲೆಬ್ರಿಟಿಗಳು, ರಾಜಕಾರಣಿಗಳು, ದೊಡ್ಡದೊಡ್ಡ ಅಧಿಕಾರಿಗಳು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: 64ರ ಪ್ರಾಯದ ಅನಿಲ್​ ಕಪೂರ್​ ಈಗಲೂ ಬಾಡಿ ಫಿಟ್​ ಆಗಿ ಇಟ್ಟುಕೊಂಡಿರುವುದು ಹೇಗೆ? ಇಲ್ಲಿದೆ ಉತ್ತರ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ