Kareena Kapoor: ಮಕ್ಕಳು ಫಿಲ್ಮ್ ಸ್ಟಾರ್ಸ್ ಆಗೋದು ತನಗಿಷ್ಟವಿಲ್ಲ ಎಂದ ಕರೀನಾ; ಹಾಗಾದರೆ ಕರೀನಾ ಕನಸೇನು?

Saif Ali Khan: ಬಾಲಿವುಡ್​ನ ತಾರಾ ನಟಿ ಕರೀನಾ ಕಪೂರ್ ಖಾನ್ ತಮ್ಮ ಮಕ್ಕಳು ಏನಾಗಬೇಕು ಎಂಬ ಕನಸನ್ನು ಹಂಚಿಕೊಂಡಿದ್ದಾರೆ. ಮಕ್ಕಳನ್ನು ಫಿಲ್ಮ್ ಸ್ಟಾರ್ ಮಾಡುವುದಕ್ಕೆ ಅವರಿಗಿಷ್ಟವಿಲ್ಲವಂತೆ. ಹಾಗಾದರೆ ಮಕ್ಕಳು ಏನಾಗಬೇಕು ಎಂಬುದು ಕರೀನಾ ಕನಸು? ಮುಂದೆ ಓದಿ.

Kareena Kapoor: ಮಕ್ಕಳು ಫಿಲ್ಮ್ ಸ್ಟಾರ್ಸ್ ಆಗೋದು ತನಗಿಷ್ಟವಿಲ್ಲ ಎಂದ ಕರೀನಾ; ಹಾಗಾದರೆ ಕರೀನಾ ಕನಸೇನು?
ಕರೀನಾ ಕಪೂರ್ ತನ್ನ ಮಕ್ಕಳೊಂದಿಗೆ(ಎಡಗಡೆಯ ಚಿತ್ರದಲ್ಲಿ ಜೇಹ್, ಬಲದಲ್ಲಿ ತೈಮೂರ್)
Follow us
TV9 Web
| Updated By: shivaprasad.hs

Updated on: Aug 17, 2021 | 11:54 AM

ಬಾಲಿವುಡ್​ನ ತಾರಾ ಜೋಡಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಈಗ ಇಬ್ಬರು ಗಂಡು ಮಕ್ಕಳ ಪೋಷಕರು. ಮಕ್ಕಳಿಗೆ ತೈಮೂರ್ ಹಾಗೂ ಜೇಹ್(ಜಹಾಂಗೀರ್) ಎಂದು ಹೆಸರನ್ನಿಟ್ಟಿರುವ ಈ ಜೋಡಿ ಸದ್ಯ ಮಾಲ್ಡೀವ್ಸ್​ನಲ್ಲಿ ಜಾಲಿಯಿಂದ ಸಮಯವನ್ನು ಕಳೆಯುತ್ತಿದ್ದಾರೆ. ಹೇಳಿ ಕೇಳಿ ಇಬ್ಬರೂ ಸಿನಿ ಹಿನ್ನೆಲೆಯ ಕುಟುಂಬದಿಂದ ಬಂದವರು. ಈಗ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆಯೆಂದರೆ ತೈಮೂರ್ ಮತ್ತು ಜೇಹ್ ಕೂಡಾ ನಟರಾಗಿ ಚಿತ್ರರಂಗದಲ್ಲಿ ಮಿಂಚುತ್ತಾರಾ ಎಂಬುದು. ಅದಕ್ಕೆ ಕರೀನಾ ಉತ್ತರಿಸಿದ್ದು, ಮಕ್ಕಳನ್ನು ಫಿಲ್ಮ್ ಸ್ಟಾರ್ ಮಾಡೋದು ತನಗಿಷ್ಟವಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕರೀನಾ ಕಪೂರ್ ಮಕ್ಕಳನ್ನು ಬೆಳೆಸುವುದರ ಕುರಿತು ಮಾತನಾಡಿದ್ದಾರೆ. ಮಕ್ಕಳನ್ನು ನಟರನ್ನಾಗಿ ಮಾಡಬೇಕು ಎಂಬುದರ ಕಡೆಗೆ ಕರೀನಾ ಗಮನವೇ ಹರಿಸಿಲ್ಲವಂತೆ. ಅವರ ಉದ್ದೇಶವಿರುವುದು ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕು. ಅವರು ಒಳ್ಳೆಯ ಪ್ರಜೆಗಳಾಗಬೇಕು. ‘‘ಭವಿಷ್ಯದಲ್ಲಿ ನನ್ನ ಮಕ್ಕಳ ಕುರಿತು ಜನರು, ಈ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ದೊರೆತಿದೆ. ಅವರು ಬಹಳ ಸಹೃದಯವಂತರು ಎಂದು ಹೇಳಬೇಕು. ನನ್ನ ಮಕ್ಕಳು ನಟರಾಗುವುದು ನನಗಿಷ್ಟವಿಲ್ಲ. ಅವರು ವಿಭಿನ್ನವಾಗಿ ಏನನ್ನಾದರೂ ಮಾಡಬೇಕು. ಉದಾಹರಣೆಗೆ ಟಿಮ್(ತೈಮೂರ್) ಬಂದು ತಾನು ಮೌಂಟ್ ಎವರೆಸ್ಟ್ ಏರುತ್ತೇನೆ ಎಂಬ ಇಚ್ಛೆ ವ್ಯಕ್ತಪಡಿಸಿದರೆ ನನಗೆ ಬಹಳ ಖುಷಿಯಾಗುತ್ತದೆ. ಅವನಿಗೆ ಕನಸಿಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ’’ ಎಂದಿದ್ದಾರೆ ಕರೀನಾ.

ಕರೀನಾ ಪ್ರಕಾರ ಮಕ್ಕಳು ತಪ್ಪು ಮಾಡಬೇಕಂತೆ. ಅದರ ನಂತರವೇ ಮಕ್ಕಳಿಗೆ ಸತ್ಯದ ಅರಿವಾಗುತ್ತದೆ ಎನ್ನುತ್ತಾರವರು. ಕರೀನಾ ಅವರ ತಾಯಿಯೂ ಹಾಗೆಯೇ ಕಲಿಸಿದ್ದಂತೆ. ‘‘ನಿನ್ನದೇ ಹಾದಿಯಲ್ಲಿ ಸಾಗು. ತಪ್ಪುಗಳನ್ನು ಮಾಡು. ಅದನ್ನು ಸರಿಪಡಿಸುವುದನ್ನು ಕಲಿ.’’ ಇದು ಕರೀನಾ ಅವರ ತಾಯಿ ಕರೀನಾಗೆ ಹೇಳಿದ ಪಾಠ. ತಾನೂ ಇದೇ ಹಾದಿಯಲ್ಲಿ ಮಕ್ಕಳನ್ನು ಬೆಳೆಸುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ‘‘ಜೇಹ್ ಸಣ್ಣವನು. ತೈಮೂರ್ ಅರ್ಥ ಮಾಡಿಕೊಳ್ಳುವಷ್ಟು ಬೆಳೆದಿದ್ದಾನೆ. ಒಂದು ವೇಳೆ ಅವನೇನಾದರೂ ತಪ್ಪು ಮಾಡಿದರೆ, ಅದನ್ನು ಸರಿಪಡಿಸುವಂತೆ ಅವನಿಗೇ ಹೇಳುತ್ತೇನೆ. ಮಕ್ಕಳಿಗೆ ತಪ್ಪುಗಳನ್ನು ಅರ್ಥ ಮಾಡಿಸಲು ಇದೇ ಸರಿಯಾದ ಮಾರ್ಗ’’ ಎನ್ನುತ್ತಾರೆ ಕರೀನಾ.

ಸೈಫ್ ಜನ್ಮದಿನಕ್ಕೆ ಕರೀನಾ ಶುಭಕೋರಿದ್ದು ಹೀಗೆ:

ಕರೀನಾ ಮತ್ತು ಸೈಫ್ ದಂಪತಿಗೆ 2016ರ ಡಿಸೆಂಬರ್​ನಲ್ಲಿ ಮೊದಲ ಮಗು ಜನಿಸಿದ್ದು, ಅದಕ್ಕೆ ತೈಮೂರ್ ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚೆಗೆ ಎರಡನೇ ಮಗುವಿನ ತಾಯಿಯಾಗಿರುವ ಕರೀನಾ- ಸೈಫ್, ಅದಕ್ಕೆ ಜಹಾಂಗೀರ್ ಎಂದು ಹೆಸರಿಟ್ಟಿದ್ದಾರೆ. ಮಗುವಿನ ಮುಖವನ್ನು ಸೈಫ್ ಜನ್ಮದಿನದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಈ ದಂಪತಿ, ಮಕ್ಕಳ ಹೆಸರಿನ ಕುರಿತು ಸಾಕಷ್ಟು ಟೀಕೆಯನ್ನು ಎದುರಿಸುತ್ತಿದ್ದಾರೆ. ಆದರೆ ಕರೀನಾ ಈ ಕುರಿತು ತಕ್ಕ ಪ್ರತ್ಯುತ್ತರವನ್ನೂ ನೀಡಿದ್ದಾರೆ.

ಇತ್ತೀಚೆಗೆ ಇಂಡಿಯಾ ಟುಡೆಯೊಂದಿಗೆ ಮಾತನಾಡಿದ್ದ ಕರೀನಾ ಹೆಸರಿನ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿರುವವರಿಗೆ ಪರೋಕ್ಷವಾಗಿ ಉತ್ತರಿಸಿದ್ದರು. ‘‘ನಾನು ತುಂಬಾ ಸಕಾರಾತ್ಮಕ ವ್ಯಕ್ತಿ. ಕೋವಿಡ್​ನಂತಹ ಸಮಯದಲ್ಲಿ ಸಾಧ್ಯವಾದಷ್ಟು ಸಂತೋಷ ಮತ್ತು ಸಕಾರಾತ್ಮಕತೆಯನ್ನು ಹರಡಲು ಬಯಸುತ್ತೇನೆ. ಯಾವುದೇ ರೀತಿಯ ನಕಾರಾತ್ಮಕತೆಯ ಬಗ್ಗೆ ನಾನು ಯೋಚಿಸುವುದಿಲ್ಲ.’’ ಎಂದಿದ್ದರು. ನಕಾರಾತ್ಮಕತೆಯನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ, ಧ್ಯಾನ ಮಾಡುವುದು ಮಾತ್ರ ತನಗೆ ಉಳಿದಿರುವ ಆಯ್ಕೆ ಎಂದು ಅವರು ಹೇಳಿದ್ದರು. ‘‘ಸಕಾರಾತ್ಮಕತೆ ಇದ್ದಲ್ಲಿ ನಕಾರಾತ್ಮಕತೆಯೂ ಇರುತ್ತದೆ. ಹಾಗಾಗಿ ಇದನ್ನು ಸ್ವೀಕರಿಸಲೇಬೇಕು. ಆದರೆ ಮಾನಸಿಕ ಶಾಂತಿಗಾಗಿ ಧ್ಯಾನವೊಂದೇ ನನಗೆ ಉಳಿದಿರುವ ಆಯ್ಕೆ’’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:

ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳ ಸಂಭಾವನೆ ಎಷ್ಟು?; ಶಮಿತಾ ಶೆಟ್ಟಿಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ನಟಿ

Nee Sigovaregu: ಶಿವಣ್ಣನ ಹೊಸ ಚಿತ್ರ ‘ನೀ ಸಿಗೋವರೆಗೂ’ ಮುಹೂರ್ತ ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ

(Kareena Kapoor says that she does not want her sons to become Cine stars)

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು