ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳ ಸಂಭಾವನೆ ಎಷ್ಟು?; ಶಮಿತಾ ಶೆಟ್ಟಿಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ನಟಿ

Big Boss OTT: ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಈಗ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಕರಣ್ ಜೋಹರ್ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲಿ ಭಾಗಿಯಾಗಿರುವ ಸ್ಪರ್ಧಿಗಳು ಪ್ರತೀ ವಾರ ಎಷ್ಟು ಸಂಭಾವನೆ ಪಡೆಯುತ್ತಾರೆ? ಇಲ್ಲಿದೆ ಮಾಹಿತಿ.

ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳ ಸಂಭಾವನೆ ಎಷ್ಟು?; ಶಮಿತಾ ಶೆಟ್ಟಿಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ನಟಿ
ಬಿಗ್​ಬಾಸ್ ಒಟಿಟಿ ಸ್ಪರ್ಧಿಗಳು(ಎಡದಿಂದ- ರಿಧಿಮಾ ಪಂಡಿತ್, ಶಮಿತಾ ಶೆಟ್ಟಿ, ಜೀಶಾನ್ ಖಾನ್)
TV9kannada Web Team

| Edited By: shivaprasad.hs

Aug 17, 2021 | 10:26 AM

ಬಿಗ್​ಬಾಸ್ ಒಟಿಟಿ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಕರಣ್ ಜೋಹರ್ ನಡೆಸಿಕೊಡ್ಡುತ್ತಿರುವ ಈ ಕಾರ್ಯಕ್ರಮ ವಿವಾದಾತ್ಮಕವಾಗಿ ಗುರುತಿಸಿಕೊಳ್ಳುತ್ತಿದ್ದರೂ, ವೀಕ್ಷಕರ ಮನರಂಜನೆಗೆ ಕೊರತೆಯನ್ನುಂಟು ಮಾಡಿಲ್ಲ. ಇತ್ತೀಚೆಗಷ್ಟೇ ಹಲವು ಕಾರಣದಿಂದ ಸದ್ದು ಮಾಡಿರುವ ನಟಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಯೂ ಇದರಲ್ಲಿ ಭಾಗಿಯಾಗಿದ್ದಾರೆ. ಈ ಶೋದಲ್ಲಿ ಈಗಾಗಲೇ ಮೊದಲ ಎಲಿಮೇನಷನ್ ನಡೆದಿದ್ದು, ಉರ್ಫಿ ಜಾವೇದ್ ಮನೆಯಿಂದ ಹೊರಹೋಗಿದ್ದಾರೆ. ಮನೆಯ ಒಳಭಾಗದ ವಿಷಯಗಳೊಂದಿಗೆ, ಈಗ ಕಲಾವಿದರ ಸಂಭಾವನೆಯ ವಿಷಯ ಸಾಕಷ್ಟು ಸದ್ದು ಮಾಡುತ್ತಿದೆ. ಜಾಗರಣ್ ವರದಿ ಮಾಡಿರುವ ಪ್ರಕಾರ, ಬಿಗ್​ಬಾಸ್​ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವುದು ಶಮಿತಾ ಶೆಟ್ಟಿಯಲ್ಲ. ಮತ್ತೊಬ್ಬರು ನಟಿ. ಆಶ್ಚರ್ಯವಾದರೂ ಇದು ಸತ್ಯ. ನಟಿ ರಿಧಿಮಾ ಪಂಡಿತ್ ಎಲ್ಲರಿಗಿಂತ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಾರೆ.

ಯಾರ್ಯಾರಿಗೆ ಎಷ್ಟೆಷ್ಟು ಸಂಭಾವನೆ?

ರಿಧಿಮಾ ಪಂಡಿತ್: ‘ಬಹು ಹಮಾರಿ ರಜನಿ ಕಾಂತ್’ ಖ್ಯಾತಿಯ ರಿಧಿಮಾ ಪಂಡಿತ್ ಪ್ರತೀ ವಾರ 5ಲಕ್ಷ ಸಂಭಾವನೆ ಪಡೆಯುತ್ತಾರಂತೆ.

ಶಮಿತಾ ಶೆಟ್ಟಿ: ಬಿಗ್​ಬಾಸ್ 3ರಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದ ನಟಿ ಶಮಿತಾ ಶೆಟ್ಟಿ ವಾರವೊಂದಕ್ಕೆ ಪಡೆಯುತ್ತಿರುವುದು 3.75ಲಕ್ಷ ರೂಗಳು.

ಉರ್ಫಿ ಜಾವೇದ್: ಬಿಗ್​ಬಾಸ್ ಮನೆಯಿಂದ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಉರ್ಫಿ ಜಾವೇದ್​ರ ಸಂಭಾವನೆ ಪ್ರತೀ ವಾರಕ್ಕೆ 2.75ಲಕ್ಷ.

ಜೀಶಾನ್ ಖಾನ್: ‘ಕುಂಕುಮ್ ಭಾಗ್ಯ’ ಸೀರಿಯಲ್ ಮೂಲಕ ಗಮನ ಸೆಳೆದಿದ್ದ ಜೀಶಾನ್​ರ ಸಂಬಾವನೆ ವಾರವೊಂದಕ್ಕೆ 2.5ಲಕ್ಷ.

ದಿವ್ಯಾ ಅಗರವಾಲ್, ನೇಹಾ ಭಾಸಿನ್: ಪ್ರತೀ ವಾರ ತಲಾ 2ಲಕ್ಷರೂಗಳು.

ಅಕ್ಷರಾ ಸಿಂಗ್, ಮಿಲಿಂದ್ ಗಾಬಾ, ಮೂಸೆ ಜಟ್ಟನಾ, ಕರಣ್ ನಾಥ್: ಈ ಸದಸ್ಯರು ಪ್ರತೀ ವಾರ ಪಡೆಯುತ್ತಿರುವುದು ತಲಾ 1.75ಲಕ್ಷ.

ನಿಶಾಂತ್ ಭಟ್, ರಾಕೇಶ್ ಬಾಪಟ್: ಈ ಸದಸ್ಯರು ತಲಾ 1.2ಲಕ್ಷ ಸಂಭಾವನೆಯನ್ನು ಪ್ರತೀ ವಾರ ಪಡೆಯುತ್ತಿದ್ದಾರೆ.

ಪ್ರತೀಕ್ ಸೆಹಜ್ಪಾಲ್: ಬಿಗ್​ಬಾಸ್​ನಲ್ಲಿ ಎಲ್ಲರಿಗಿಂತ ಅತೀ ಕಡಿಮೆ ಸಂಬಳ ಪಡೆಯುತ್ತಿರುವುದು ಪ್ರತೀಕ್ ಸೆಹಜ್ಪಾಲ್. ಅವರು ಪ್ರತೀ ವಾರ 1ಲಕ್ಷವನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.

ಬಿಗ್​ ಬಾಸ್​ ಓಟಿಟಿ ಕೇವಲ ಆರು ವಾರಗಳ ಕಾಲ ನಡೆಯಲಿದೆ. ಹಾಗಾಗಿ ಇಲ್ಲಿ ಸ್ಪರ್ಧಿಗಳಿಗೆ ಗುರುತಿಸಿಕೊಳ್ಳಲು ಹೆಚ್ಚು ಸಮಯಾವಕಾಶ ಇಲ್ಲ. ಇರುವ ಸಮಯದಲ್ಲೇ ಏನಾದರೂ ಮಾಡಿ ಎಲಿಮಿನೇಷನ್​ನಿಂದ ಸೇವ್​ ಆಗಬೇಕಿದೆ. ಇಷ್ಟು ದಿನ ವೀಕ್ಷಕರು ನೋಡಿದ ಬಿಗ್​ ಬಾಸ್​ ಒಂದು ರೀತಿ ಇತ್ತು. ಆದರೆ ಈಗ ನೋಡುತ್ತಿರುವ ಬಿಗ್​ ಬಾಸ್​ ಬೇರೆ ರೀತಿ ಇದೆ. ಅಂದರೆ, ವೂಟ್​ನಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್​ ಓಟಿಟಿ’ ಕಾರ್ಯಕ್ರಮ ಸಿಕ್ಕಾಪಟ್ಟೆ ಭಿನ್ನವಾಗಿ ಮೂಡಿಬರುತ್ತಿದೆ. ಓಟಿಟಿಯಲ್ಲಿ ಪ್ರಸಾರವಾಗುತ್ತಿರುವುದರಿಂದ ಅದರಲ್ಲಿ ಸೆನ್ಸಾರ್​ನ ಹಂಗಿಲ್ಲ. ಹಾಗಾಗಿ​ ಸ್ಪರ್ಧಿಗಳು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚು ಹಾಟ್​ ಆಗಿ ಈಗ ಬಿಗ್​ಬಾಸ್ ಶೋ ಮೂಡಿಬರುತ್ತಿದೆ.

ಇದನ್ನೂ ಓದಿ:

Nee Sigovaregu: ಶಿವಣ್ಣನ ಹೊಸ ಚಿತ್ರ ‘ನೀ ಸಿಗೋವರೆಗೂ’ ಮುಹೂರ್ತ ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ

ಬಿಗ್​ ಬಾಸ್​ ನಿರೂಪಣೆ ಬಗ್ಗೆ ಸುದೀಪ್​ ಫ್ಯಾನ್ಸ್​ಗೆ ಇದ್ದ ಅನುಮಾನಕ್ಕೆ ಪರಮ್ ಫುಲ್​ ಸ್ಟಾಪ್​

(Who is the highest paid contestant in Big Boss OTT not Shamitha Shetty)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada