ಬಿಗ್​ ಬಾಸ್​ ನಿರೂಪಣೆ ಬಗ್ಗೆ ಸುದೀಪ್​ ಫ್ಯಾನ್ಸ್​ಗೆ ಇದ್ದ ಅನುಮಾನಕ್ಕೆ ಪರಮ್ ಫುಲ್​ ಸ್ಟಾಪ್​

Kichcha Sudeep: ವೀಕ್ಷಕರ ಮನದಲ್ಲಿದ್ದ ಅನುಮಾನಕ್ಕೆ ಕಲರ್ಸ್ ಕನ್ನಡ ವಾಹಿನಿ ಬ್ಯುಸಿನೆಸ್​ ಹೆಡ್​ ಪರಮೇಶ್ವರ ಗುಂಡ್ಕಲ್​ ಅವರು ಪೂರ್ಣವಿರಾಮ ಇಟ್ಟಿದ್ದಾರೆ. ಸುದೀಪ್​ ಜೊತೆಗಿನ ಫೋಟೋವೊಂದನ್ನು ​ಹಂಚಿಕೊಂಡು ಅವರು ಗುಡ್​ ನ್ಯೂಸ್​ ನೀಡಿದ್ದಾರೆ.

ಬಿಗ್​ ಬಾಸ್​ ನಿರೂಪಣೆ ಬಗ್ಗೆ ಸುದೀಪ್​ ಫ್ಯಾನ್ಸ್​ಗೆ ಇದ್ದ ಅನುಮಾನಕ್ಕೆ ಪರಮ್ ಫುಲ್​ ಸ್ಟಾಪ್​
ಬಿಗ್​ ಬಾಸ್​ ನಿರೂಪಣೆ ಬಗ್ಗೆ ಸುದೀಪ್​ ಫ್ಯಾನ್ಸ್​ಗೆ ಇದ್ದ ಅನುಮಾನಕ್ಕೆ ಪರಮ್ ಫುಲ್​ ಸ್ಟಾಪ್​
Follow us
| Updated By: ಮದನ್​ ಕುಮಾರ್​

Updated on: Aug 17, 2021 | 9:37 AM

‘ಬಿಗ್​ ಬಾಸ್ ಕನ್ನಡ ಸೀಸನ್​ 8’ ಯಶಸ್ವಿಯಾಗಿ ಮುಗಿಯಿತು. ಮಂಜು ಪಾವಗಡ ವಿನ್ನರ್​ ಆಗುವ ಮೂಲಕ 120 ದಿನಗಳ ಜರ್ನಿಗೆ ತೆರೆ ಎಳೆಯಲಾಯಿತು. ಅದರ ಬೆನ್ನಲ್ಲೇ ಶುರುವಾಗಿದ್ದು ‘ಬಿಗ್ ಬಾಸ್​ ಮಿನಿ ಸೀಸನ್​’​. ಇದು ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹೊಸತು. ಈ ರೀತಿಯ ಚಿನಕುರಳಿ ಬಿಗ್​ ಬಾಸ್​ ಅನ್ನು ವೀಕ್ಷಕರು ಈ ಹಿಂದೆ ಕಂಡಿರಲಿಲ್ಲ. ಇದೇ ಮೊದಲ ಬಾರಿಗೆ ಕಲರ್ಸ್​ ಕನ್ನಡ ವಾಹಿನಿ ಇಂಥದ್ದೊಂದು ಪ್ರಯತ್ನ ಮಾಡಿದೆ. ಆದರೆ ಈ ಶೋ ನಿರೂಪಣೆ ಮಾಡುವುದು ಯಾರು? ಕಿಚ್ಚ ಸುದೀಪ್​ ಬದಲಿಗೆ ಬೇರೆ ಯಾರಾದರೂ ಬರುತ್ತಾರಾ? ಇಂಥ ಹಲವು ಪ್ರಶ್ನೆಗಳು ವೀಕ್ಷಕರ ಮನದಲ್ಲಿ ಮೂಡಿದ್ದವು. ಅವುಗಳಿಗೆ ಈಗ ಉತ್ತರ ಸಿಕ್ಕಿದೆ.

ಬಿಗ್​ ಬಾಸ್​ ಮಿನಿ ಸೀಸನ್​ನಲ್ಲಿ ಕಲರ್ಸ್​ ಕನ್ನಡ ವಾಹಿನಿಯ ಧಾರಾವಾಹಿ ಕಲಾವಿದರು ಭಾಗವಹಿಸುತ್ತಿದ್ದಾರೆ. ಅಕುಲ್​ ಬಾಲಾಜಿ, ಕಿರಣ್​ ರಾಜ್​, ಕೌಸ್ತುಭ, ಗಗನ್​ ಚಿನ್ನಪ್ಪ, ಭವ್ಯ, ರಿತ್ವಿಕ್​ ಸೇರಿದಂತೆ ಒಟ್ಟು 15 ಸೆಲೆಬ್ರಿಟಿಗಳು ದೊಡ್ಮನೆ ಪ್ರವೇಶ ಮಾಡಿದ್ದು, ಹಲವು ಟಾಸ್ಕ್​ನಲ್ಲಿ ಪಾಲ್ಗೊಂಡಿದ್ದಾರೆ. ಈ ಶೋಗೂ ಒಂದು ಫಿನಾಲೆ ನಡೆಯಲಿದೆ. ಅದಕ್ಕೆ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ ಎಂಬುದು ಈಗ ಖಚಿತ ಆಗಿದೆ.

ಸುದೀಪ್​ ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ‘ವಿಕ್ರಾಂತ್​ ರೋಣ’, ‘ಕೋಟಿಗೊಬ್ಬ 3’ ಸಿನಿಮಾಗಳು ಬಿಡುಗಡೆಗೆ ಹತ್ತಿರ ಆಗುತ್ತಿವೆ. ಈ ನಡುವೆ ಅವರು ಬಿಗ್​ ಬಾಸ್​ ಮಿನಿ ಸೀಸನ್​ ನಿರೂಪಣೆಗಾಗಿ ಸಮಯ ಹೊಂದಿಸಿಕೊಳ್ಳುತ್ತಾರೋ ಇಲ್ಲವೋ ಎಂಬ ಅನುಮಾನ ಕೆಲವರಿಗೆ ಇತ್ತು. ಅಂಥ ಅನುಮಾನಕ್ಕೆ ಕಲರ್ಸ್ ಕನ್ನಡ ವಾಹಿನಿ ಬ್ಯುಸಿನೆಸ್​ ಹೆಡ್​ ಪರಮೇಶ್ವರ ಗುಂಡ್ಕಲ್​ ಅವರು ಪೂರ್ಣವಿರಾಮ ಇಟ್ಟಿದ್ದಾರೆ.

ಸುದೀಪ್​ ಜೊತೆ ತಾವು ಇರುವ ಫೋಟೋವೊಂದನ್ನು ​ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ಪರಮ್​ ಅವರು ಗುಡ್​ ನ್ಯೂಸ್​ ನೀಡಿದ್ದಾರೆ. ‘ಕಿಚ್ಚ ಸುದೀಪ್​ ಅವರೇ ಬಿಗ್​ ಬಾಸ್​ ಮಿನಿ ಸೀಸನ್​ ಫಿನಾಲೆಯನ್ನು ಹೋಸ್ಟ್​ ಮಾಡಲಿದ್ದಾರೆ’ ಎಂದು ಪರಮೇಶ್ವರ ಗುಂಡ್ಕಲ್​ ಅಧಿಕೃತವಾಗಿ ತಿಳಿಸಿದ್ದಾರೆ. ಈ ಶೋನ ಫಿನಾಲೆ ಹೇಗಿರಲಿದೆ? ಎಷ್ಟು ಭಿನ್ನವಾಗಿರಲಿದೆ? ಯಾರು ವಿನ್ನರ್​ ಆಗುತ್ತಾರೆ ಎಂಬುದನ್ನೆಲ್ಲ ತಿಳಿದುಕೊಳ್ಳಲು ಕಿರುತೆರೆ ವೀಕ್ಷಕರು ಕಾಯುತ್ತಿದ್ದಾರೆ. ಧಾರಾವಾಹಿ ನಟ-ನಟಿಯರ ರಿಯಲ್​ ಲೈಫ್​ ವ್ಯಕ್ತಿತ್ವ ಈ ಶೋನಲ್ಲಿ ಅನಾವರಣ ಆಗುತ್ತಿದೆ. ಹಲವು ಇಂಟರೆಸ್ಟಿಂಗ್​ ಕಹಾನಿಗಳು ಹೊರಬರುತ್ತಿವೆ. ಹಾಗಾಗಿ ವೀಕ್ಷಕರಿಗೆ ಈ ಕಾರ್ಯಕ್ರಮ ಇಷ್ಟವಾಗುತ್ತಿದೆ.

ಇದನ್ನೂ ಓದಿ:

ಆನ್​ಲೈನ್​ ಕ್ಲಾಸ್​ ಕಿರಿಕಿರಿ ತಪ್ಪಿಸಲು ಇಲ್ಲಿದೆ ಉಪಾಯ; ಕಿಚ್ಚ ಸುದೀಪ್​ ಟ್ರಸ್ಟ್​ ಕಡೆಯಿಂದ ಮಕ್ಕಳಿಗಾಗಿ ಹೊಸ ಆ್ಯಪ್​

‘ರಾಷ್ಟ್ರಗೀತೆ ಬಗ್ಗೆ ಕಾಮನ್​ ಸೆನ್ಸ್​ ಇಲ್ವಾ?’; ಸುದೀಪ್​ಗೆ ನೆಟ್ಟಿಗನ ನೇರ ಪ್ರಶ್ನೆ: ತಪ್ಪೊಪ್ಪಿಕೊಂಡ ಕಿಚ್ಚನ ಉತ್ತರ ಸೂಪರ್​