Paaru: 700 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿ ‘ಪಾರು’

Paaru: ಕನ್ನಡದ ಹಿಟ್ ಧಾರವಾಹಿಗಳಲ್ಲೊಂದಾದ ‘ಪಾರು’ 700 ಸಂಚಿಕೆಗಳನ್ನು ಪೂರೈಸಿದೆ. ಈ ಸಂಭ್ರಮಕ್ಕೆ ತಂಡ ಸಂಭ್ರಮಾಚರಣೆ ಆಚರಿಸಿದೆ.

Paaru: 700 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿ ‘ಪಾರು’
700 ಸಂಚಿಕೆ ಪೂರೈಸಿರುವ ‘ಪಾರು’
Follow us
TV9 Web
| Updated By: shivaprasad.hs

Updated on:Aug 17, 2021 | 5:26 PM

ಕನ್ನಡದ ಜೀ ಕನ್ನಡ ವಾಹಿನಿಯ ಹಿಟ್ ಧಾರವಾಹಿಗಳಲ್ಲೊಂದಾದ ‘ಪಾರು’, 700 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ತಂಡವು ಸೆಟ್​ನಲ್ಲಿ ಕೇಕ್ ಕಟ್ ಮಾಡುವ ಮುಖಾಂತರ ಸಂಭ್ರಮವನ್ನು ಆಚರಿಸಿಕೊಂಡಿದೆ.  ‘ಪಾರು’ವನ್ನು ಗುರು ಪ್ರಸಾದ್ ನಿರ್ದೇಶನ ಮಾಡುತ್ತಿದ್ದು, ಮೋಕ್ಷಿತಾ ಪೈ ಹಾಗೂ ಶರತ್ ಪದ್ಮನಾಭನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾರು ಪಾತ್ರದಲ್ಲಿ ಮೋಕ್ಷಿತಾ ಕಾಣಿಸಿಕೊಳ್ಳುತ್ತಿದ್ದು, ಆದಿ ಪಾತ್ರದಲ್ಲಿ ಶರತ್ ಬಣ್ಣ ನಟಿಸುತ್ತಿದ್ದಾರೆ. ಈ ಜೋಡಿಯ ಕೆಮಿಸ್ಟ್ರಿ ವೀಕ್ಷಕರಿಗೆ ಬಹಳ ಪ್ರಿಯವಾಗಿದ್ದು, ಧಾರವಾಹಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

‘ಪಾರು’ವಿನ ವಿಶೇಷತೆಯೆಂದರೆ ಕನ್ನಡ ಬೆಳ್ಳಿತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಹಿರಿಯ ನಟಿ ವಿನಯಾ ಪ್ರಸಾದ್ ಈ ಧಾರವಾಹಿಯ ಮೂಲಕ ಕಿರುತೆರೆಗೆ ಮರಳಿ ಕಾಲಿಟ್ಟಿದ್ದಾರೆ. ಮುಖ್ಯಪಾತ್ರಗಳಲ್ಲೊಂದಾದ ‘ಅಖಿಲಾಂಡೇಶ್ವರಿ’ ಪಾತ್ರವನ್ನು ವಿನಯಾಪ್ರಸಾದ್ ನಿರ್ವಹಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಿಟ್ ನಿರ್ದೇಶಕ ಎಸ್.ನಾರಾಯಣ್ ಕೂಡಾ ‘ಪಾರು’ವಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ವಿನಯಾ ಪ್ರಸಾದ್ ಅವರ ಹಿರಿಯಣ್ಣ ‘ವೀರಪ್ಪ ನಾಯಕ’ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಜೀ ಕನ್ನಡ ವಾಹಿನಿ ಪಾರು 700 ಸಂಚಿಕೆ ಪೂರೈಸಿದ ಸಂತಸಕ್ಕೆ ಹಂಚಿಕೊಂಡಿರುವ ಪೋಸ್ಟ್:

View this post on Instagram

A post shared by Zee Kannada (@zeekannada)

ಅರಸನಕೋಟೆ ಕುಟುಂಬದ ಅಖಿಲಾಂಡೇಶ್ವರಿ ಮನೆಯಲ್ಲಿ ಕೆಲಸ ಮಾಡುವ ಪಾರುವಿನ ಕುರಿತಾದ ಕತೆಯನ್ನು ಧಾರವಾಹಿ ಹೊಂದಿದೆ. ಸದ್ಯ ಧಾರವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ವೀಕ್ಷಕರು ಕಾತರದಿಂದ ಕಾದು ವೀಕ್ಷಿಸುತ್ತಿದ್ದಾರೆ. ಆದಿಗೆ ತಾನು ಹುಡುಕುತ್ತಿರುವ ಹುಡುಗಿ ಪಾರುವೇ ಎಂದು ತಿಳಿದು, ತನ್ನ ಪ್ರೀತಿಯನ್ನು ಅವಳಲ್ಲಿ ಅರಿಕೆ ಮಾಡಿಕೊಂಡಿದ್ದಾನೆ. ಪಾರು ಸಹ ಈ ಕೋರಿಕೆಗೆ ಒಪ್ಪಿರುವುದು ಸದ್ಯ ಧಾರವಾಹಿ ಪಡೆದುಕೊಂಡಿರುವ ತಿರುವು. ಈ ಧಾರವಾಹಿಯು ‘ಸೆಂಬಾರುತಿ’ಯ ಕನ್ನಡ ಅವತರಣಿಕೆಯಾಗಿದ್ದು, ಕನ್ನಡಕ್ಕೆ ಬೇಕಾದ ಬದಲಾವಣೆಗಳನ್ನು ಮಾಡಿಕೊಂಡು, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ಇದನ್ನೂ ಓದಿ:

Anandha Kannan: ಖ್ಯಾತ ನಿರೂಪಕ, ನಟ ಆನಂದ ಕಣ್ಣನ್ ಕ್ಯಾನ್ಸರ್​ನಿಂದ ನಿಧನ; ಸೆಲೆಬ್ರಿಟಿಗಳ ಸಂತಾಪ

ಶೇರ್​ಷಾ ಚಿತ್ರಕ್ಕೆ ತನ್ನ ಸಂಬಂಧಿಯನ್ನು ನಾಯಕನನ್ನಾಗಿಸಿ ಎಂದು ಮೂಗು ತೂರಿಸಿದ್ದ ಸಲ್ಮಾನ್ ಖಾನ್; ಆಮೇಲೇನಾಯ್ತು?

(Paaru Daily soup of Kannada completes 700 episodes)

Published On - 5:26 pm, Tue, 17 August 21

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ