ಬಿಗ್​ ಬಾಸ್​ ಮನೆಯಲ್ಲಿರುವ ತಪ್ಪು ಕಲ್ಪನೆ ಬಗ್ಗೆ ಬಾಯ್ಬಿಟ್ಟ ಕೌಸ್ತುಭ; ಅವರು ಟೀಕಿಸಿದ್ದು ಯಾರನ್ನ?

‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ತುಂಬಾನೇ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ ಕೌಸ್ತುಭ. ಅಗಸ್ತ್ಯ ಮತ್ತು ಇಂಚರ ಕಾಂಬಿನೇಷನ್​ ಎಲ್ಲರಿಗೂ ಇಷ್ಟವಾಗಿದೆ. ಕೌಸ್ತುಭ ಮಾಡಿರುವ ಇಂಚರ ಪಾತ್ರ ತುಂಬಾ ಜನರಿಗೆ ಇಷ್ಟವಾಗಿದೆ.

ಬಿಗ್​ ಬಾಸ್​ ಮನೆಯಲ್ಲಿರುವ ತಪ್ಪು ಕಲ್ಪನೆ ಬಗ್ಗೆ ಬಾಯ್ಬಿಟ್ಟ ಕೌಸ್ತುಭ; ಅವರು ಟೀಕಿಸಿದ್ದು ಯಾರನ್ನ?
ಬಿಗ್​ ಬಾಸ್​ ಮನೆಯಲ್ಲಿರುವ ತಪ್ಪು ಕಲ್ಪನೆ ಬಗ್ಗೆ ಬಾಯ್ಬಿಟ್ಟ ಕೌಸ್ತುಭ; ಅವರು ಟೀಕಿಸಿದ್ದು ಯಾರನ್ನ?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 18, 2021 | 3:50 PM

ಬಿಗ್​ ಬಾಸ್​ ಮಿನಿ ಸೀಸನ್​ ಪ್ರಸಾರ ಆರಂಭವಾಗಿದೆ. ಸೀರಿಯಲ್​ ಮೂಲಕ ಮಿಂಚಿದ್ದ ನಟ-ನಟಿಯರು ಈಗ ಮಿನಿ ಸೀಸನ್​ನಲ್ಲಿ ತಮ್ಮ ಟ್ಯಾಲೆಂಟ್​ ತೋರಿಸುತ್ತಿದ್ದಾರೆ. ನಾನಾ ರೀತಿಯ ಟಾಸ್ಕ್​ಗಳನ್ನು ಎದುರಿಸುತ್ತಾ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ. ಇದು ವೀಕ್ಷಕರಿಗೂ ಇಷ್ಟವಾಗುತ್ತಿದೆ. ಈ ಮಧ್ಯೆ ‘ನನ್ನರಸಿ ರಾಧೆ’ ನಟಿ ಕೌಸ್ತುಭ ಅವರು ಬಿಗ್​ ಬಾಸ್​ ಮನೆಯಲ್ಲಿರುವ ತಪ್ಪು ಕಲ್ಪನೆ ಬಗ್ಗೆ ಹೇಳಿಕೊಂಡಿದ್ದಾರೆ.

‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ತುಂಬಾನೇ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ ಕೌಸ್ತುಭ. ಅಗಸ್ತ್ಯ ಮತ್ತು ಇಂಚರ ಕಾಂಬಿನೇಷನ್​ ಎಲ್ಲರಿಗೂ ಇಷ್ಟವಾಗಿದೆ. ಕೌಸ್ತುಭ ಮಾಡಿರುವ ಇಂಚರ ಪಾತ್ರ ತುಂಬಾ ಜನರಿಗೆ ಇಷ್ಟವಾಗಿದೆ. ಬಿಗ್​ ಬಾಸ್​ ಮನೆಯಲ್ಲಿ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರು ಪ್ರಮುಖ ವಿಚಾರವೊಂದರ ಬಗ್ಗೆ ಮಾತನಾಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಬಿಗ್​ ಬಾಸ್​ ಮನೆಯಲ್ಲಿ ಕಿಚನ್​ ಎಲ್ಲರ ಹಾಟ್​ಸ್ಪಾಟ್​. ಅಡುಗೆ ಮನೆಯಲ್ಲಿ ಸಾಕಷ್ಟು ಜಗಳಗಳು ನಡೆದಿವೆ. ಅಲ್ಲಿದ್ದರೆ ಹೈಲೈಟ್​ ಆಗುತ್ತೇವೆ ಎನ್ನುವ ನಂಬಿಕೆ ಅನೇಕರಲ್ಲಿದೆ. ಆದರೆ, ಅದು ತಪ್ಪು ಅನ್ನೋದು ಕೌಸ್ತುಭ ಮಾತು. ‘ಅಡುಗೆ ಮನೆಗೆ ಹೋದರೆ ಹೈಲೈಟ್​ ಆಗ್ತೀವಿ, ಎಲ್ಲರ ಗಮನ ನಮ್ಮ ಕಡೆ ಇರುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಅದು ತಪ್ಪಲ್ವಾ? ಎಲ್ಲರೂ ಒಂದೇ ಕಡೆ ಸೇರಿಕೊಳ್ಳುತ್ತಾರೆ. ನನಗನ್ನಿಸೋ ಹಾಗೆ ಅದು ಒಂದೇ ಜಾಗದಿಂದ ಹೈಲೈಟ್​ ಆಗೋಕೆ ಆಗಲ್ಲ. ಅಟೆನ್ಶನ್​ಗೋಸ್ಕರ ಈ ರೀತಿ ಮಾಡೋ ಅವಶ್ಯಕತೆ ಇಲ್ಲ ಎಂದು ನನಗನ್ನಿಸುತ್ತದೆ. ನಾನು ಯಾರನ್ನೋ ಒಬ್ಬರನ್ನು ಉದ್ದೇಶಿಸಿ ಇದನ್ನು ಹೇಳುತ್ತಿಲ್ಲ’ ಎಂದಿದ್ದಾರೆ ಅವರು.

ಬಿಗ್​ ಬಾಸ್​ ಮಿನಿ ಸೀಸನ್​ ಆರು ದಿನಗಳ ಕಾಲ ನಡೆಯಲಿದೆ. ಸಾಕಷ್ಟು ಸೆಲೆಬ್ರಿಟಿಗಳು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದ್ದಾರೆ. ಇಷ್ಟು ದಿನ ಕೇವಲ ಹೊರಗಿನಿಂದ ಬಿಗ್​ ಬಾಸ್​ ಮನೆ ನೋಡುತ್ತಿದ್ದ ಸೀರಿಯಲ್​ ಕಲಾವಿದರಿಗೆ ಬಿಗ್​ ಬಾಸ್​ ಮನೆ ಒಳಗೆ ಕಾಲಿಡುವ ಅವಕಾಶ ಸಿಕ್ಕಿದೆ.

ಇದನ್ನೂ ಓದಿ: ಬಿಗ್​ ಬಾಸ್​ ನಿರೂಪಣೆ ಬಗ್ಗೆ ಸುದೀಪ್​ ಫ್ಯಾನ್ಸ್​ಗೆ ಇದ್ದ ಅನುಮಾನಕ್ಕೆ ಪರಮ್ ಫುಲ್​ ಸ್ಟಾಪ್​

‘ನನ್ನರಸಿ ರಾಧೆ’ ನಟಿ ಕೌಸ್ತುಭ ಅವರ ಮೈನಸ್​ ಪಾಯಿಂಟ್​ ಏನು? ಬಿಗ್​ ಬಾಸ್​ ಮನೆಯಲ್ಲಿ ಸತ್ಯ ಬಾಯ್ಟಿಟ್ಟ ಇಂಚರ

Published On - 3:48 pm, Wed, 18 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ