AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನರಸಿ ರಾಧೆ’ ನಟಿ ಕೌಸ್ತುಭ ಅವರ ಮೈನಸ್​ ಪಾಯಿಂಟ್​ ಏನು? ಬಿಗ್​ ಬಾಸ್​ ಮನೆಯಲ್ಲಿ ಸತ್ಯ ಬಾಯ್ಟಿಟ್ಟ ಇಂಚರ

‘ನನ್ನರಸಿ ರಾಧೆ’ ಧಾರಾವಾಹಿಯ ಕೌಸ್ತುಭ ಎರಡನೇ ಸ್ಪರ್ಧಿಯಾಗಿ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಮೊದಲ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದು ಅಕುಲ್​.

‘ನನ್ನರಸಿ ರಾಧೆ’ ನಟಿ ಕೌಸ್ತುಭ ಅವರ ಮೈನಸ್​ ಪಾಯಿಂಟ್​ ಏನು? ಬಿಗ್​ ಬಾಸ್​ ಮನೆಯಲ್ಲಿ ಸತ್ಯ ಬಾಯ್ಟಿಟ್ಟ ಇಂಚರ
Kaustubha Mani Inchara Talks About her Big Minus Point
TV9 Web
| Edited By: |

Updated on:Aug 14, 2021 | 5:15 PM

Share

‘ನನ್ನರಸಿ ರಾಧೆ’ ಧಾರಾವಾಹಿ ಮೂಲಕ ಇಂಚರ ಎಂದೇ ಹೆಚ್ಚು ಪರಿಚಿತರಾದವರು ಕೌಸ್ತುಭ. ‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ತುಂಬಾನೇ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ ಅವರು. ಅಗಸ್ತ್ಯ ಮತ್ತು ಇಂಚರ ಕಾಂಬಿನೇಷನ್​ ಎಲ್ಲರಿಗೂ ಇಷ್ಟವಾಗಿದೆ. ಕೌಸ್ತುಭ ಮಾಡಿರುವ ಇಂಚರ ಪಾತ್ರ ತುಂಬಾ ಜನರಿಗೆ ಇಷ್ಟವಾಗಿದೆ. ಈಗ ಅವರು ದೊಡ್ಡ ಮೈನಸ್​ ಪಾಯಿಂಟ್​ ಹೇಳಿಕೊಂಡಿದ್ದಾರೆ.

ಬಿಗ್​ ಬಾಸ್​ ಮಿನಿ ಸೀಸನ್​ ಆರು ದಿನಗಳ ಕಾಲ ನಡೆಯಲಿದೆ. ಸಾಕಷ್ಟು ಸೆಲೆಬ್ರಿಟಿಗಳು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದ್ದಾರೆ. ಇಷ್ಟು ದಿನ ಕೇವಲ ಹೊರಗಿನಿಂದ ಬಿಗ್​ ಬಾಸ್​ ಮನೆ ನೋಡುತ್ತಿದ್ದ ಸೀರಿಯಲ್​ ಕಲಾವಿದರಿಗೆ ಬಿಗ್​ ಬಾಸ್​ ಮನೆ ಒಳಗೆ ಕಾಲಿಡುವ ಅವಕಾಶ ಸಿಕ್ಕಿದೆ. ಶನಿವಾರ (ಆಗಸ್ಟ್​ 14) ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

‘ನನ್ನರಸಿ ರಾಧೆ’ ಧಾರಾವಾಹಿಯ ಕೌಸ್ತುಭ ಎರಡನೇ ಸ್ಪರ್ಧಿಯಾಗಿ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಮೊದಲ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದು ಅಕುಲ್​. ಮನೆಗೆ ಬಂದ ಎಲ್ಲಾ ಸದಸ್ಯರನ್ನು ಅಕುಲ್​ ಮಾತನಾಡಿಸಿದ್ದಾರೆ. ಈ ವೇಳೆ ಕೌಸ್ತುಭ ಅವರು ಅಕುಲ್​ ಜತೆ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ.

ನಿಮಗೆ ಕೋಪ ಬೇಗ ಬರುತ್ತದೆಯಂತೆ ನಿಜವೇ ಎಂದು ಕೌಸ್ತುಭ ಅವರನ್ನು ಪ್ರಶ್ನೆ ಮಾಡಿದರು ಅಕುಲ್​. ಇದನ್ನು ಕೌಸ್ತುಭ ಒಪ್ಪಿಕೊಂಡಿದ್ದಾರೆ. ‘ನನಗೆ ಕೋಪ ತುಂಬಾ ಬೇಗ ಬರುತ್ತದೆ. ಬಂದ ಕೋಪ ಹಾಗೆಯೇ ಉಳಿಯುತ್ತದೆ. ಬೇಗ ಹೋಗಲ್ಲ. ಕೋಪ ಕೂಡ ನಾನ್​ ಸ್ಟಾಪ್​. ನಾನು ಜಗಳ ಆಡೋದು ತುಂಬಾ ಕಡಿಮೆ. ನಾನು ಕ್ಲೋಸ್​ ಇದ್ರಷ್ಟೇ ಜಗಳ ಆಡ್ತೀನಿ’ ಎನ್ನುವ ಮೂಲಕ ಕೌಸ್ತುಭ ತಮ್ಮ ಮೈನಸ್​ ಪಾಯಿಂಟ್​ ಹೇಳಿಕೊಂಡರು. ಬೇಗ ಕೋಪ ಬಂದು ಅದು ತಡವಾಗಿ ತಣ್ಣಗಾಗುವುದರಿಂದ ಅವರ ಸುತ್ತಮುತ್ತ ಇರುವವರಿಗೆ ಕೆಲವೊಮ್ಮೆ ತೊಂದರೆ ಆದ ಉದಾಹರಣೆ ಇದೆಯಂತೆ,.

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಪೂರ್ಣಗೊಂಡ ಬೆನ್ನಲ್ಲೇ ಮಿನಿ ಬಿಗ್​ ಬಾಸ್​ ಆರಂಭವಾಗಿದೆ. ಕಲರ್ಸ್​ ಕನ್ನಡ ವಾಹಿನಿ ಸೀರಿಯಲ್​ನಲ್ಲಿ ನಟಿಸುತ್ತಿರುವ ಕಲಾವಿದರು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿರೋದು ವಿಶೇಷ. ಕೊನೆಯ ಎಪಿಸೋಡ್​ಅನ್ನು ಕಿಚ್ಚ ಸುದೀಪ್​ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ: ಜಾತಿ ನಿಂದನೆ ಆರೋಪದಡಿ ಬಿಗ್​ ಬಾಸ್​ ಸ್ಪರ್ಧಿ ಅರೆಸ್ಟ್​; ಬಂಧನಕ್ಕೂ ಮೊದಲು ರಂಪಾಟ ಮಾಡಿದ ನಟಿ

ಬಿಗ್​ ಬಾಸ್​ ಮಿನಿ ಸೀಸನ್​ ನಿರೂಪಣೆಗೆ ಸುದೀಪ್​ ಬರೋದು ಪಕ್ಕಾ; ಆದರೆ ಯಾವಾಗ?

Published On - 5:14 pm, Sat, 14 August 21

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್