AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಹಾನಾಯಕ ಡಾ. ಬಿ.ಆರ್​. ಅಂಬೇಡ್ಕರ್​’ ಧಾರಾವಾಹಿಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲ; ಹೊಸ ಯುಗ ಶುರು

ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ಈ ಸೀರಿಯಲ್​ಗೆ ದೊಡ್ಡ ಪ್ರೇಕ್ಷಕವರ್ಗ ಮನ ಸೋತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಇದರ ಹೊಸ ಪ್ರೋಮೋ ಅನಾವರಣ ಆಗಿರುವುದು ವಿಶೇಷ.

‘ಮಹಾನಾಯಕ ಡಾ. ಬಿ.ಆರ್​. ಅಂಬೇಡ್ಕರ್​’ ಧಾರಾವಾಹಿಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲ; ಹೊಸ ಯುಗ ಶುರು
‘ಮಹಾನಾಯಕ ಡಾ. ಬಿ.ಆರ್​. ಅಂಬೇಡ್ಕರ್​’ ಧಾರಾವಾಹಿಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲ
TV9 Web
| Edited By: |

Updated on:Aug 19, 2021 | 9:21 AM

Share

ಕನ್ನಡ ಕಿರುತೆರೆ ಲೋಕದಲ್ಲಿ ‘ಮಹಾನಾಯಕ ಬಿ.ಆರ್​. ಅಂಬೇಡ್ಕರ್‌ʼ ಧಾರಾವಾಹಿ ತನ್ನದೇ ಛಾಪು ಮೂಡಿಸಿದೆ. ಈ ಸೀರಿಯಲ್​ನಲ್ಲಿ ಈಗ ಹೊಸ ಯುಗ ಶುರು ಆಗುತ್ತಿದೆ. ಅಂದರೆ, ಇಷ್ಟು ದಿನಗಳ ಕಾಲ ಅಂಬೇಡ್ಕರ್​ ಅವರ ಬಾಲ್ಯಾವಸ್ಥೆಯ ಕಥೆ ಸಾಗುತ್ತಿತ್ತು. ಈಗ ಅಂಬೇಡ್ಕರ್‌ ಜೀವನದ ಮತ್ತೊಂದು ಘಟ್ಟವನ್ನು ತೋರಿಸಲು ಜೀ ಕನ್ನಡ ವಾಹಿನಿ ಸಜ್ಜಾಗಿದೆ. ಶುಕ್ರವಾರದಿಂದ (ಆ.20) ಈ ಎಪಿಸೋಡ್​ಗಳು ಬಿತ್ತರ ಆಗಲಿವೆ. ಇದರ ಪ್ರೋಮೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿರುವುದು ವಿಶೇಷ. ಆ ಮೂಲಕ ‘ಮಹಾನಾಯಕ’ ಸೀರಿಯಲ್​ಗೆ ದೊಡ್ಡ ಬೆಂಬಲ ಸಿಕ್ಕಂತಾಗಿದೆ.

ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ಈ ಸೀರಿಯಲ್​ಗೆ ದೊಡ್ಡ ಪ್ರೇಕ್ಷಕವರ್ಗ ಮನ ಸೋತಿದೆ. ಮಹಾನಾಯಕ ಅಂಬೇಡ್ಕರ್ ಜೀವನದ ಕಥೆ ಬೆರಗು ಮೂಡಿಸುವಂತಿದೆ. ಈವರೆಗೆ ಎಲ್ಲರನ್ನೂ ಮೋಡಿ ಮಾಡಿದ ಬಾಲಕ ಭೀಮ ಇನ್ನುಮುಂದೆ ಯುವಕನಾಗಿ ವೀಕ್ಷಕರ ಮುಂದೆ ಬರಲಿದ್ದಾರೆ. ಆ ಮೂಲಕ ಸೀರಿಯಲ್​ನಲ್ಲಿ ಅಂಬೇಡ್ಕರ್ ಬದುಕಿನ ಮತ್ತೊಂದು ಮುಖ್ಯ ಘಟ್ಟ ತೆರೆದುಕೊಳ್ಳಲಿದೆ. ಬಸವರಾಜ ಬೊಮ್ಮಾಯಿ ಅವರಿಂದ ಇದರ ಪ್ರೋಮೋ ಅನಾವರಣಗೊಂಡಿದ್ದು ವಿಶೇಷ.

ಅನೇಕ ಕಾರಣಗಳಿಂದಾಗಿ ಈ ಸೀರಿಯಲ್​ ಒಂದು ಬಗೆಯ ಸಂಚಲನ ಮೂಡಿಸಿದೆ. ಆರಂಭದಿಂದಲೂ ಈ ಧಾರಾವಾಹಿಗೆ ಜನರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ನೂರಾರು ಜನರು ಒಟ್ಟಾಗಿ ಕೂತು ಎಲ್.ಇ.ಡಿ. ಸ್ಕ್ರೀನ್​ಗಳಲ್ಲಿ ವೀಕ್ಷಿಸಿದ್ದನ್ನು ಸ್ಮರಿಸಿಕೊಳ್ಳಬಹುದು. ಇದರ ಟೈಟಲ್ ಸಾಂಗ್​ ಕೂಡ ಸೂಪರ್​ ಹಿಟ್​. ಇದೆಲ್ಲದರ ಪರಿಣಾಮ ಬೇಡಿಕೆ ಕೂಡ ಹೆಚ್ಚಿತು. ಮೊದಲು ಕೇವಲ ವೀಕೆಂಡ್​ನಲ್ಲಿ ಪ್ರಸಾರವಾಗುತ್ತಿದ್ದ ಮಹಾನಾಯಕ ಸೀರಿಯಲ್​ ಬಳಿಕ ದೈನಂದಿನ ಧಾರಾವಾಹಿಯಾಗಿ ಬದಲಾಯಿತು!

(ಬಸವರಾಜ ಬೊಮ್ಮಾಯಿ ಅವರಿಂದ ಪ್ರೋವೋ ಅನಾವರಣ)

‘ದೇಶ ಸ್ವಾತಂತ್ರ್ಯ ಪಡೆದ 75ನೇ ವರ್ಷದ ಸಂದರ್ಭದಲ್ಲಿ ಯುವ ಅಂಬೇಡ್ಕರ್ ಅವರ ಜೀವನಗಾಥೆ ಹೇಳುವ ‘ಮಹಾನಾಯಕ ಅಂಬೇಡ್ಕರ್‌’ ಧಾರಾವಾಹಿಯ ವಿಶೇಷ ಪ್ರೊಮೋವನ್ನು ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಅಭೂತಪೂರ್ವ ಯಶಸ್ಸು ನೀಡಿದ ಜೀ ಕನ್ನಡ ವೀಕ್ಷಕರಿಗೆ ನಮ್ಮ ಕೃತಜ್ಞತೆಗಳು. ಮಹಾನಾಯಕನ ಬಾಲ್ಯದ ಜೀವನ, ಅವರ ಹೋರಾಟದ ಬದುಕಿನ ಕಥೆಗೆ ನೀಡಿದಂತಹ ಬೆಂಬಲವನ್ನು ಯುವ ಅಂಬೇಡ್ಕರ್ ಕಥೆಗೂ ನೀಡಿ ಆದರಿಸುತ್ತಾರೆ ಎಂಬ ಭರವಸೆ ನಮ್ಮದು’ ಎಂದು ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದ್ದಾರೆ.

‘ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್’ ಧಾರಾವಾಹಿ ಮಾಡಿರುವ ಸಾಧನೆಗಳು ಒಂದೆರಡಲ್ಲ. ಇದರ ಶೀರ್ಷಿಕೆ ಗೀತೆಯ ಕಾಲರ್ ಟ್ಯೂನ್​ ಬಿಡುಗಡೆ ಮಾಡಲಾಗಿದೆ. ಧಾರಾವಾಹಿಯ ಪೋಸ್ಟರ್​ಗಳು ಮಾರುಕಟ್ಟೆಗೆ ಬಂದಿವೆ. ಒಂದು ಧಾರಾವಾಹಿಗೆ ಈ ರೀತಿಯ ಪ್ರತಿಕ್ರಿಯೆ ಹಿಂದೆಂದೂ ಸಿಕ್ಕಿರಲಿಲ್ಲ ಎಂದು ಹೆಮ್ಮೆಪಡುತ್ತಿದೆ ಜೀ ಕನ್ನಡ ವಾಹಿನಿ.

ಇದನ್ನೂ ಓದಿ:

ಆರ್ಯವರ್ಧನ್​-ಅನು ಸಿರಿಮನೆ ಅದ್ದೂರಿ ಮದುವೆ; ಅಬ್ಬಬ್ಬಾ ಎಂಥ ವೈಭೋಗ

ಪರ್ಫೆಕ್ಟು ಮತ್ತು ಎಡವಟ್ಟು ನಡುವಿನ ಹಿಟ್ಲರ್​ ಕಲ್ಯಾಣಕ್ಕೆ ಜೀ ಕನ್ನಡದಲ್ಲಿ ಮಂಟಪ ಸಜ್ಜು

Published On - 9:08 am, Thu, 19 August 21

Follow Us
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ