AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಯವರ್ಧನ್​-ಅನು ಸಿರಿಮನೆ ಅದ್ದೂರಿ ಮದುವೆ; ಅಬ್ಬಬ್ಬಾ ಎಂಥ ವೈಭೋಗ

Jothe Jotheyali serial: ಅಗರ್ಭ ಶ್ರೀಮಂತನಾಗಿರುವ ಆರ್ಯವರ್ಧನ್​ ಮನೆಗೆ ಅನು ಸಿರಿಮನೆ ಕಾಲಿಡುತ್ತಿದ್ದಾಳೆ. ಈ ಮದುವೆ ಸಮಾರಂಭವನ್ನು ಜೀ ಕನ್ನಡ ವಾಹಿನಿ ತುಂಬ ವೈಭವದಿಂದ ಚಿತ್ರೀಕರಿಸುತ್ತಿದೆ.

ಆರ್ಯವರ್ಧನ್​-ಅನು ಸಿರಿಮನೆ ಅದ್ದೂರಿ ಮದುವೆ; ಅಬ್ಬಬ್ಬಾ ಎಂಥ ವೈಭೋಗ
ಆರ್ಯವರ್ಧನ್​-ಅನು ಸಿರಿಮನೆ ಅದ್ದೂರಿ ಮದುವೆ; ಅಬ್ಬಬ್ಬಾ ಎಂಥ ವೈಭೋಗ
TV9 Web
| Edited By: |

Updated on: Aug 16, 2021 | 1:22 PM

Share

ಕನ್ನಡ ಕಿರುತೆರೆ ಲೋಕದಲ್ಲಿ ಎಲ್ಲ ಸೀರಿಯಲ್​ಗಳ ನಡುವೆ ಸಿಕ್ಕಾಪಟ್ಟೆ ಪೈಪೋಟಿ ಇದೆ. ಹಾಗಾಗಿ ಒಂದಕ್ಕಿಂತ ಮತ್ತೊಂದು ಧಾರಾವಾಹಿ (Kannada serials) ಅದ್ದೂರಿಯಾಗಿ ಮೂಡಿಬರುತ್ತಿದೆ. ಯಾವ ಸಿನಿಮಾಗೂ ಕಮ್ಮಿ ಇಲ್ಲ ಎಂಬ ರೀತಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಅದರಲ್ಲೂ ಮದುವೆ ಸನ್ನಿವೇಶದ ಶೂಟಿಂಗ್​ ಇದ್ದರೆ ಅಲ್ಲಿ ಬಜೆಟ್​ಗೆ ಮಿತಿಯೇ ಇಲ್ಲ! ಈಗ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್​ ಕೂಡ ಒಂದು ಅದ್ದೂರಿ ಮದುವೆ ಸಂಭ್ರಮಕ್ಕೆ ಸಜ್ಜಾಗಿದೆ. ಅನಿರುದ್ಧ್​ ಮತ್ತು ಮೇಘಾ ಶೆಟ್ಟಿ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ಈ ಧಾರಾವಾಹಿಯಲ್ಲಿ ಮದುವೆ ಚಿತ್ರೀಕರಣ ಸಡಗರದಿಂದ ಸಾಗುತ್ತಿದೆ.

ಅರೂರು ಜಗದೀಶ್​ ನಿರ್ದೇಶನ ಮಾಡುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಹಲವು ತಿರುವುಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಅನು ಸಿರಿಮನೆ ಮತ್ತು ಆರ್ಯವರ್ಧನ್​ ಮದುವೆ ಆಗುತ್ತಾರೋ ಇಲ್ಲವೋ ಎಂಬ ಕುತೂಹಲ ಹಲವು ದಿನಗಳಿಂದ ವೀಕ್ಷಕರನ್ನು ಕಾಡುತ್ತಿತ್ತು. ಅಂತೂ ಇಬ್ಬರ ಕುಟುಂಬದ ಒಪ್ಪಿಗೆ ಮೇರೆಗೆ ಈ ಮದುವೆ ನೆರವೇರುತ್ತಿದೆ. ಅಗರ್ಭ ಶ್ರೀಮಂತನಾಗಿರುವ ಆರ್ಯವರ್ಧನ್​ ಮನೆಗೆ ಅನು ಸಿರಿಮನೆ ಕಾಲಿಡುತ್ತಿದ್ದಾಳೆ. ಈ ಮದುವೆ ಸಮಾರಂಭವನ್ನು ಜೀ ಕನ್ನಡ ವಾಹಿನಿ ತುಂಬ ವೈಭವದಿಂದ ಚಿತ್ರೀಕರಿಸುತ್ತಿದೆ.

ಎಕರೆಗಟ್ಟಲೆ ವಿಶಾಲವಾದ ಜಾಗದಲ್ಲಿ ಮದುವೆಯ ಸೆಟ್​ ಹಾಕಲಾಗಿದೆ. ಹೂವುಗಳಿಂದ ಅಲಂಕಾರಗೊಳಿಸಲಾಗಿದೆ. ದಾರಿಯುದ್ದಕ್ಕೂ ತಳಿರು ತೋರಣಗಳನ್ನು ಕಟ್ಟಲಾಗಿದೆ. ನೂರಾರು ವಾದ್ಯಗಳನ್ನು ನುಡಿಸಲಾಗುತ್ತಿದೆ. ನಿಜವಾದ ಮದುವೆಯೂ ಕೂಡ ಇಷ್ಟು ಸಡಗರದಲ್ಲಿ ನಡೆಯುವುದು ಅನುಮಾನ ಎಂಬ ರೀತಿಯಲ್ಲಿ ಅದ್ದೂರಿತನ ಮೆರೆಯಲಾಗುತ್ತಿದೆ. ಅನು ಮತ್ತು ಆರ್ಯವರ್ಧನ್​ ಮದುವೆ ಸಂಚಿಕೆಗಳು ಇಂದಿನಿಂದ (ಆ.16) ಪ್ರಸಾರ ಆಗಲಿವೆ.

ಈಗಾಗಲೇ ಬೇರೆ ಬೇರೆ ಧಾರಾವಾಹಿಗಳು ಮದುವೆ ಸನ್ನಿವೇಶಗಳನ್ನು ತುಂಬ ಭಿನ್ನವಾಗಿ ಚಿತ್ರಿಸಿವೆ. ಅವುಗಳಿಗಿಂತಲೂ ಡಿಫರೆಂಟ್​ ಆಗಿ ಅನು-ಆರ್ಯ ಮದುವೆ ದೃಶ್ಯವನ್ನು ಕಟ್ಟಿಕೊಡಲು ‘ಜೊತೆ ಜೊತೆಯಲಿ’ ಧಾರಾವಾಹಿ ತಂಡ ಪ್ರಯತ್ನಿಸುತ್ತಿದೆ. ಇಂಥ ಅದ್ದೂರಿ ಸೆಟ್​ನಲ್ಲಿ ಚಿತ್ರೀಕರಣ ಮಾಡುತ್ತಿರುವುದಕ್ಕೆ ಈ ಧಾರಾವಾಹಿ ಕಲಾವಿದರು ತುಂಬ ಖುಷಿ ಆಗಿದ್ದಾರೆ.

‘ಇಷ್ಟು ದಿನಗಳ ಕಾಲ ಜನರು ನೋಡಿದ್ದು ಬರೀ ಟ್ರೇಲರ್​. ಈಗ ನಾವು ಸಿನಿಮಾ ತೋರಿಸುತ್ತಿದ್ದೇವೆ’ ಎನ್ನುವ ಮೂಲಕ ಜನರ ನಿರೀಕ್ಷೆಯನ್ನು ನಿರ್ದೇಶಕರು ಹೆಚ್ಚಿಸಿದ್ದಾರೆ. ಮುಂಬರುವ ಕೆಲವು ದಿನಗಳ ಕಾಲ ಈ ಮದುವೆ ಎಪಿಸೋಡ್​ಗಳು ಬಿತ್ತರ ಆಗಲಿವೆ. ಇದರ ನಡುವೆಯೂ ಏನಾದರೂ ಟ್ವಿಸ್ಟ್​ ಇರಬಹುದಾ ಎಂದು ವೀಕ್ಷಕರು ನಿರೀಕ್ಷಿಸುತ್ತಿದ್ದಾರೆ. ಶಿವಾಜಿ ರಾವ್​ ಜಾದವ್​, ವಿಜಯ ಲಕ್ಷೀ ಸಿಂಗ್​, ಮಾನಸಾ ಮನೋಹರ್​ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:

ಬಾಲಿವುಡ್​ನಲ್ಲಿ ಸ್ಟಾರ್​ ಆದಮೇಲೂ ಸುಶಾಂತ್​ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?

‘ಸಂಚಾರಿ ವಿಜಯ್ ರೀತಿ ನನಗೂ ಅವಮಾನ ಆಗಿದೆ‘; ‘ಜೊತೆ ಜೊತೆಯಲಿ’ ಅನಿರುದ್ಧ ಹೇಳಿದ ಕಹಿ ಸತ್ಯ

ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ
ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ
ಗಂಡನ ಮನೆಯಲ್ಲಿ ನೇಣುಬಿಗಿದ ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಗಂಡನ ಮನೆಯಲ್ಲಿ ನೇಣುಬಿಗಿದ ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್​​ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್​​ಡಿ ಕುಮಾರಸ್ವಾಮಿ
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!