ಬಿಗ್​ ಬಾಸ್​ ಬಗ್ಗೆ ಕಿರಣ್​ ರಾಜ್​ಗಿದೆ ಒಂದು ಭಯ; ದೊಡ್ಮನೆ ಆಫರ್​ ತಿರಸ್ಕರಿಸೋಕೆ ಕಾರಣವಾಯ್ತು ಈ ಅಂಶ

ಬಿಗ್​ ಬಾಸ್​ ಮಿನಿ ಸೀಸನ್​ ಆರಂಭಗೊಂಡಿದೆ. ಕಲರ್ಸ್​ ಕನ್ನಡ ಧಾರಾವಾಹಿಯ ಕಲಾವಿದರು ಬಿಗ್​ ಬಾಸ್​ ಮನೆ ಒಳಗೆ ತೆರಳಿದ್ದಾರೆ. ಒಂದು ವಾರಗಳ ಕಾಲ ವಿವಿಧ ರೀತಿಯ ಟಾಸ್ಕ್​ಗಳನ್ನು ಆಡಲಿದ್ದಾರೆ.

ಬಿಗ್​ ಬಾಸ್​ ಬಗ್ಗೆ ಕಿರಣ್​ ರಾಜ್​ಗಿದೆ ಒಂದು ಭಯ; ದೊಡ್ಮನೆ ಆಫರ್​ ತಿರಸ್ಕರಿಸೋಕೆ ಕಾರಣವಾಯ್ತು ಈ ಅಂಶ
ಕಿರಣ್​ ರಾಜ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 16, 2021 | 7:12 AM

ಬಿಗ್​ ಬಾಸ್​ ಮನೆ ಪ್ರವೇಶಿಸೋಕೆ ಸಾಕಷ್ಟು ಜನರು ಪ್ರಯತ್ನಿಸುತ್ತಿರುತ್ತಾರೆ. ಆದರೆ, ಕೆಲವರು ಈ ಬಗ್ಗೆ ಹೆಚ್ಚು ಆಸಕ್ತಿ ತೋರುವುದಿಲ್ಲ. ತಮ್ಮ ಬಳಿ ಆಫರ್​ ಬಂದರೂ ಅದನ್ನು ತಿರಸ್ಕರಿಸುತ್ತಾರೆ. ಇದಕ್ಕೆ ಅವರು ನೀಡೋ ಕಾರಣ ಬೇರೆಬೇರೆ. ಕೆಲವರಿಗೆ ಬಿಗ್​ ಬಾಸ್​ ಮನೆ ಒಳಗೆ ಹೋದರೆ ಅಲ್ಲಿ ಬರುವ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ಗೊತ್ತಿರುವುದಿಲ್ಲ. ಜಗಳಗಳು ನಡೆದಾಗ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಅದರ ಭಾಗವಾಗಬೇಕಾಗುತ್ತದೆ. ಈ ಕಾರಣಕ್ಕೆ ಕೆಲವರು ಬಿಗ್​ ಬಾಸ್​ ಆಫರ್​ ತಿರಸ್ಕರಿಸುತ್ತಾರೆ. ‘ಕನ್ನಡತಿ’ ಕಿರಣ್​ ರಾಜ್ ಅವರಿಗೂ ಬಿಗ್​ ಬಾಸ್​ ಆಫರ್​ ಬಂದಿತ್ತಂತೆ. ಆದರೆ, ಅದನ್ನು ಅವರು ತಿರಸ್ಕರಿಸಿದ್ದರು. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.

ಬಿಗ್​ ಬಾಸ್​ ಮಿನಿ ಸೀಸನ್​ ಆರಂಭಗೊಂಡಿದೆ. ಕಲರ್ಸ್​ ಕನ್ನಡ ಧಾರಾವಾಹಿಯ ಕಲಾವಿದರು ಬಿಗ್​ ಬಾಸ್​ ಮನೆ ಒಳಗೆ ತೆರಳಿದ್ದಾರೆ. ಒಂದು ವಾರಗಳ ಕಾಲ ವಿವಿಧ ರೀತಿಯ ಟಾಸ್ಕ್​ಗಳನ್ನು ಆಡಲಿದ್ದಾರೆ. ಕಿರಣ್​ ರಾಜ್​ ಕೂಡ ಬಿಗ್​ ಬಾಸ್​ ಮನೆಯಲ್ಲಿದ್ದಾರೆ. ಅವರು ಬಿಗ್​ ಬಾಸ್​ ಆಫರ್​ ಬಗ್ಗೆ ಮಾತನಾಡಿದ್ದಾರೆ.

‘ಕನ್ನಡತಿ’ ಧಾರಾವಾಹಿಗಿಂತ ಮೊದಲು ಬಿಗ್​ ಬಾಸ್ ಆಫರ್​ ಬಂದಿತ್ತು. ಆದರೆ, ಒಪ್ಪಿಕೊಂಡಿರಲಿಲ್ಲ. ಸ್ವಲ್ಪ ಆರೋಗ್ಯದ ಸಮಸ್ಯೆ ಆಗಿತ್ತು. ಹಾಗಾಗಿ ಬಿಗ್​ ಬಾಸ್​ ಆಫರ್​ ತಿರಸ್ಕರಿಸಿದ್ದೆ’ ಎಂದಿದ್ದಾರೆ. ಇದರ ಜತೆಗೆ ಅವರು ಮತ್ತೊಂದಷ್ಟು ಕಾರಣವನ್ನು ನೀಡಿದ್ದಾರೆ.

‘ಭವಿಷ್ಯದಲ್ಲಿ ಬಿಗ್​ ಬಾಸ್​ ಆಫರ್​ ಬಂದ್ರೆ ಮಾಡ್ತೀರಾ’ ಎಂದು ಅಕುಲ್​ ಬಾಲಾಜಿ ಪ್ರಶ್ನೆ ಮಾಡಿದರು. ಇದಕ್ಕೆ ಕಿರಣ್​ ರಾಜ್​, ‘ಆ ಸಮಯ ನೋಡಿಕೊಂಡು ನಿರ್ಧಾರ ಮಾಡ್ತೀನಿ. ಆಗ ಏನಾಗಿರುತ್ತೆ ಎಂದು ಹೇಳೋಕೆ ಆಗಲ್ಲ’ ಎಂದರು. ‘ಬಿಗ್​ ಬಾಸ್​ ಬಗ್ಗೆ ಇರೋ ಭಯಗಳೇನು’ ಎನ್ನುವ ಪ್ರಶ್ನೆ ಅಕುಲ್​ ಕಡೆಯಿಂದ ಬಂತು. ‘ನನ್ನ ತಪ್ಪಿದ್ದಾಗ ನಾನು ಎದುರಿನವರು ಹೇಳಿದ್ದನ್ನು ಕೇಳುತ್ತೇನೆ. ಆದರೆ, ಸುಖಾಸುಮ್ಮನೆ ಇನ್ಸಲ್ಟ್​ ಸ್ವೀಕರಿಸೋಕೆ ನಾನು ರೆಡಿ ಇಲ್ಲ. ಆಗ ಕೋಪ ಬರುತ್ತದೆ. ನಾನು ಎಲ್ಲರಿಗೂ ಗೌರವ ಕೊಡ್ತೀನಿ, ಎದುರಿನ ವ್ಯಕ್ತಿಗಳಿಂದಲೂ ನಾನು ಅದನ್ನೇ ನಿರೀಕ್ಷೆ ಮಾಡುತ್ತೇನೆ ’ ಎಂದರು ಕಿರಣ್​ ರಾಜ್​.

ಕಿರಣ್​ ರಾಜ್​ ಹೇಳಿದಂತೆ ಬಿಗ್​ ಬಾಸ್​ ಮನೆಯಲ್ಲಿ ನಡೆಯುವುದಿಲ್ಲ. ಕೆಲವೊಮ್ಮೆ ಪರಿಸ್ಥಿತಿಗಳು ಬದಲಾಗುತ್ತವೆ. ಅನಾವಶ್ಯಕ ಜಗಳಗಳು ಹುಟ್ಟಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ಬೇಸರ ತರಬಹುದು ಎನ್ನುವ ಭಯಕ್ಕೆ ಕಿರಣ್​ ರಾಜ್​ ಈ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ.

ಇದನ್ನೂ ಓದಿ:

ಅರೆಸ್ಟ್​ ಆದ ಬಿಗ್​ ಬಾಸ್​ ಸ್ಪರ್ಧಿಗೆ ಶಾಕ್​; ನಟಿಯ ಜತೆಗೆ ಬಾಯ್​ಫ್ರೆಂಡ್ಅನ್ನೂ ಜೀಪು ಹತ್ತಿಸಿದ ಪೊಲೀಸರು ​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ