AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alia Bhatt: ಚಿತ್ರೀಕರಣದ ಸೆಟ್​ಗೆ ರಿಕ್ಷಾದಲ್ಲಿ ಬಂದ ಆಲಿಯಾ; ಅದೇನು ದೊಡ್ಡ ವಿಷಯ ಅಲ್ಲ ಎಂದು ಕುಟುಕಿದ ನೆಟ್ಟಿಗರು

ಬಾಲಿವುಡ್ ನಟಿ ಆಲಿಯಾ ಭಟ್ ಇತ್ತೀಚೆಗೆ ಚಿತ್ರೀಕರಣಕ್ಕೆ ಆಟೊದಲ್ಲಿ ಬಂದು ಸುದ್ದಿಯಾಗಿದ್ದಾರೆ. ಆದರೆ ಇದಕ್ಕೆ ಅವರ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Alia Bhatt: ಚಿತ್ರೀಕರಣದ ಸೆಟ್​ಗೆ ರಿಕ್ಷಾದಲ್ಲಿ ಬಂದ ಆಲಿಯಾ; ಅದೇನು ದೊಡ್ಡ ವಿಷಯ ಅಲ್ಲ ಎಂದು ಕುಟುಕಿದ ನೆಟ್ಟಿಗರು
ಆಲಿಯಾ ಭಟ್
TV9 Web
| Updated By: shivaprasad.hs|

Updated on:Aug 18, 2021 | 9:47 AM

Share

ಪ್ರಸ್ತುತ ಬಾಲಿವುಡ್​ನಲ್ಲಿ ಮುಂಚೂಣಿಯಲ್ಲಿರುವ ನಾಯಕ ನಟಿಯರಲ್ಲೊಬ್ಬರಾದ ಆಲಿಯಾ ಭಟ್ ತಮ್ಮ ನಡೆನುಡಿಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ಚಿತ್ರೀಕರಣ ನಡೆಯುವ ಸ್ಥಳಕ್ಕೆ ಆಟೊವೊಂದರಲ್ಲಿ ತೆರಳಿ ಸುದ್ದಿಯಲ್ಲಿದ್ದಾರೆ. ಆಲಿಯಾ ಶೂಟಿಂಗ್​ಗೆಂದು ವರ್ಸೊವಾ ಜೆಟ್ಟಿಗೆ ಬಂದಿಳಿಯುವಾಗ ಛಾಯಾಗ್ರಾಹಕರು ಆಕೆಯನ್ನು ಎಸ್​ಯುವಿಯಲ್ಲಿ ಬರುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ ಆಲಿಯಾ ಆಟೊವೊಂದರಲ್ಲಿ ಬಂದಿಳಿದು ಅಚ್ಚರಿ ನೀಡಿದ್ದಾರೆ.

ಆಲಿಯಾ ಆಟೊದಿಂದಿಳಿದು ಸೆಟ್​ಗೆ ತೆರಳುವಾಗ ಛಾಯಾಚಿತ್ರಗಳನ್ನು ಸೆರೆಹಿಡಿಯಲಾಗಿದ್ದು, ಅದರಲ್ಲಿ ಆಲಿಯಾ ಸಾಮಾನ್ಯರಂತೆ ಹೆಜ್ಜೆಹಾಕಿದ್ದಾರೆ. ಇದು ನೆಟ್ಟಿಗರ ಮನಗೆದ್ದಿದೆ. ಆದರೆ ಕೆಲವರಿಗೆ ಆಲಿಯಾ ನಡೆ ತೀರಾ ಅಚ್ಚರಿ ಮೂಡಿಸಿಲ್ಲ. ಒಬ್ಬರಂತೂ, ‘‘ಎಷ್ಟೇ ದೊಡ್ಡವರಾದರೂ, ಎಲ್ಲರೂ ಆಟೊದಲ್ಲಿ ಪ್ರಯಾಣಿಸಬಹುದು. ಅದೇನು ದೊಡ್ಡ ವಿಷಯವಲ್ಲ’’ಎಂದು ಕುಟುಕಿದ್ದಾರೆ. ಮತ್ತೊಬ್ಬರು, ಬಾಲಿವುಡ್​ನ ಅತ್ಯಂತ ಬ್ಯುಸಿ ನಟಿಯನ್ನು ಹೊತ್ತುತಂದ ಆಟೊ ಡ್ರೈವರ್​ನ ಅದೃಷ್ಟವನ್ನು ಕೊಂಡಾಡಿದ್ದಾರೆ. ಮತ್ತೆ ಕೆಲವರಿಗೆ ಆಲಿಯಾ ಧರಿಸಿದ ಉಡುಪು ಬಹಳ ಇಷ್ಟವಾಗಿದೆ.

ಈಗಾಗಲೇ ಹಲವಾರು ಚಿತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಆಲಿಯಾ ಈಗಾಗಲೇ ತಮ್ಮ ಪಾಲಿನ ಚಿತ್ರೀಕರಣ ಮುಗಿದಿರುವ ಚಿತ್ರಗಳ ಬಿಡುಗಡೆಗೆ ಕಾಯುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಆಕೆಯ ಪ್ರಿಯಕರ ರಣಬೀರ್ ಕಪೂರ್​ ಜೊತೆ ತೆರೆ ಹಂಚಿಕೊಂಡಿರುವ ‘ಬ್ರಹ್ಮಾಸ್ತ್ರ’ದ ಬಿಡುಗಡೆಗೆ ಆಲಿಯಾ ಕಾತರದಿಂದ ಕಾಯುತ್ತಿದ್ದಾರೆ. ಆ ಚಿತ್ರ ಈಗಾಗಲೇ ಸೆಟ್ಟೇರಿ ಮೂರು ವರ್ಷಕ್ಕೂ ಮೇಲಾಗಿದೆ. ಚಿತ್ರೀಕರಣ ನಿಂತು, ಪ್ರಾರಂಭವಾಗಿ, ಮತ್ತೆ ನಿಂತು… ಹೀಗೆ ಹಲವಾರು ಬಾರಿ ಮುಂದೂಡಲ್ಪಟ್ಟು ಕೊನೆಗೂ ಮುಕ್ತಾಯವಾಗಿದೆ. ರಣಬೀರ್​ ಜೊತೆ ಆಲಿಯಾ ತೆರೆ ಹಂಚಿಕೊಂಡಿರುವ ಮೊತ್ತಮೊದಲ ಚಿತ್ರ ಇದಾಗಿದ್ದು, ಅಯಾನ್ ಮುಖರ್ಜಿ ನಿರ್ದೇಶಿಸಿದ್ದಾರೆ.

ಸೆಟ್​ಗೆ ಆಟೊದಲ್ಲಿ ಬಂದ ಆಲಿಯಾ:

ಬಾಲಿವುಡ್​ನ ಹಿಟ್ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿಯವರ ‘ಗಂಗೂಬಾಯಿ ಕಥೈವಾಡಿ’ ಚಿತ್ರದಲ್ಲೂ ಆಲಿಯಾ ಬಣ್ಣ ಹಚ್ಚಿದ್ದು, ಈ ಚಿತ್ರದ ಟ್ರೈಲರ್ ಈಗಾಗಲೇ ಎಲ್ಲರಿಂದ ಮೆಚ್ಚುಗೆ ಪಡೆದಿದೆ. ತೆಲುಗಿನ ಖ್ಯಾತ ನಿರ್ದೇಶಕ ಎಸ್,ಎಸ್.ರಾಜಮೌಳಿ ನಿರ್ದೇಶನದ ಆರ್​ಆರ್​ಆರ್  ಚಿತ್ರದಲ್ಲೂ ಆಲಿಯಾ ಬಣ್ಣಹಚ್ಚಿದ್ದಾರೆ. ಹೀಗೆ ಆಲಿಯಾ ಬತ್ತಳಿಕೆಯಲ್ಲಿ ಬಹು ನಿರೀಕ್ಷೆಯ ಅದ್ದೂರಿ ಬಜೆಟ್​ನ ದೊಡ್ಡ ದೊಡ್ಡ ಚಿತ್ರಗಳಿವೆ.

ಇವುಗಳಲ್ಲದೇ ಆಲಿಯಾ ಸ್ವತಃ ನಿರ್ಮಾಣಕ್ಕೂ ಮುಂದಾಗಿದ್ದು, ‘ಡಾರ್ಲಿಂಗ್ಸ್’ ಚಿತ್ರಕ್ಕೆ ಹಣಹೂಡಲಿದ್ದಾರೆ. ಇದರಲ್ಲಿ ಆಲಿಯಾ, ವಿಜಯ್ ವರ್ಮಾ ಹಾಗೂ ಶೆಫಾಲಿ ಶಾ ಕಾಣಿಸಿಕೊಳ್ಳಲಿದ್ದಾರೆ. ಇವುಗಳಲ್ಲದೇ ಕರಣ್ ಜೋಹರ್ ನಿರ್ದೇಶನಕ್ಕೆ ಕಮ್​ಬ್ಯಾಕ್ ಮಾಡಲಿದ್ದು ಅವರ ಚಿತ್ರದಲ್ಲೂ ಆಲಿಯಾ ನಟಿಸಲಿದ್ದಾರೆ. ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಎಂದು ಚಿತ್ರಕ್ಕೆ ಹೆಸರಿಡಲಾಗಿದ್ದು, ರಣವೀರ್ ಸಿಂಗ್ ಜೊತೆ ಎರಡನೇ ಬಾರಿ ಆಲಿಯಾ ಕಾಣಿಸಿಕೊಳ್ಳಿದ್ದಾರೆ. ಹಾಗೆಯೇ ಫರ್ಹಾನ್ ಅಖ್ತರ್ ನಿರ್ದೇಶನದ ‘ಜೀ ಲೆ ಜರಾ’ ಚಿತ್ರದಲ್ಲಿ ಆಲಿಯಾ ಪ್ರಿಯಾಂಕಾ ಚೋಪ್ರಾ ಹಾಗೂ ಕತ್ರಿನಾ ಕೈಫ್ ಜೊತೆ ಬಣ್ಣ ಹಚ್ಚಲಿದ್ದು, ಈ ಚಿತ್ರ ರೋಡ್ ಟ್ರಿಪ್ ಮಾದರಿಯಲ್ಲಿದೆ.

ಇದನ್ನೂ ಓದಿ:

ಅವಕಾಶ ಕೊಡಿ ಸಾಕು, ಒಂದು ರೂಪಾಯಿ ಸಂಭಾವನೆಯೂ ಬೇಡ; ನಿರ್ದೇಶಕನ ಎದುರು ಗೋಗರೆದ ಆಲಿಯಾ

ನವರಂಗಿ ಆಟ, ಮೈ ಮಾಟದಿಂದ ಹನಿಟ್ರ್ಯಾಪ್ ಮಾಡುತ್ತಿದ್ದ ಕಿರಾತಕರ ಗ್ಯಾಂಗ್ ಅರೆಸ್ಟ್

(Alia Bhatt Comes in an auto to set netizens have mixed reactions)

Published On - 9:46 am, Wed, 18 August 21

ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ