ನವರಂಗಿ ಆಟ, ಮೈ ಮಾಟದಿಂದ ಹನಿಟ್ರ್ಯಾಪ್ ಮಾಡುತ್ತಿದ್ದ ಕಿರಾತಕರ ಗ್ಯಾಂಗ್ ಅರೆಸ್ಟ್
ದುನಿಯಾ ದುಡ್ಡಿನ ಹಿಂದೆ ಓಡ್ತಿದೆ.. ಜನ ಹಣ ಮಾಡೋಕೆ ನಾನಾ ದಾರಿ ಹಿಡೀತಿದ್ದಾರೆ. ಬ್ಯುಸಿನೆಸ್, ರಿಯಲ್ ಎಸ್ಟೇಟ್ ಅಂತಾ ಫುಲ್ ಬ್ಯುಸಿಯಾಗಿದ್ದಾರೆ. ಆದ್ರೆ, ಇಲ್ಲೊಂದು ಗ್ಯಾಂಗ್ ಹನಿಟ್ರ್ಯಾಪ್ ಮಾಡ್ಕೊಂಡು ಫುಲ್ ಮಜಾ ಮಾಡ್ತಿತ್ತು. ಮೆಲ್ಲಗೆ ಮಂಚಕ್ಕೆ ಕರೆದು ಮೋಸ ಮಾಡ್ತಿದ್ರು.. ಬಟ್ ಇವರ ಆಟಕ್ಕೆ ಖಾಕಿ ಈಗ ಬ್ರೇಕ್ ಹಾಕಿದೆ.
ಚಿಕ್ಕಮಗಳೂರು: ಒಬ್ರಲ್ಲ.. ಇಬ್ರಲ್ಲ.. 13 ಜನರ ಗ್ಯಾಂಗ್.. ಈ ಖತರ್ನಾಕ್ಗಳು ಪ್ಲ್ಯಾನ್ ಮಾಡಿ, ಟಾರ್ಗೆಟ್ ಮಾಡಿ ಮುಹೂರ್ತ ಫಿಕ್ಸ್ ಮಾಡ್ತಿದ್ರು. ಚಿಕ್ಕಮಗಳೂರು ನಗರ ಮತ್ತು ಸಕಲೇಶಪುರ ಮೂಲದ ಈ ಖತರ್ನಾಕ್ಗಳು ಹನಿಟ್ರ್ಯಾಪ್ ಮಾಡ್ಕೊಂಡು ಫುಲ್ ಹಣ ಮಾಡ್ತಿದ್ರು. ಮೊದ್ಲು ಮಾಯಾಂಗನೆಯರು ಪುರುಷರಿಗೆ ಬಲೆ ಬೀಸ್ತಿದ್ರು. ಮಿಕ ಹಿಂದೆ ಬಿತ್ತು ಅಂತಾ ಗೊತ್ತಾಗ್ತಿದ್ದಂತೆ ಮನೆಗೆ ಕರೆದು, ಆಟ ಶುರು ಮಾಡ್ತಿದ್ರು. ಮೆಲ್ಲಗೆ ನಗ್ನ ಮಾಡಿ ವಿಡಿಯೋ ಮಾಡಿಕೊಳ್ತಿದ್ರು. ಇದೇ ಸಮಯಕ್ಕೆ ಪುರುಷರ ಗ್ಯಾಂಗ್ ಪೊಲೀಸರ ರೀತಿ ಎಂಟ್ರಿ ಕೊಟ್ಟು, ಅರೆಸ್ಟ್ ಮಾಡಿ ಅಂತಿದ್ರು. ಎಫ್ಐಆರ್ ದಾಖಲು ಮಾಡ್ತೀವಿ ಅಂತಾ ಭಯ ಪಡಿಸ್ತಿದ್ರು. ಈ ವೇಳೆ ಸೆಟಲ್ಮೆಂಟ್ ಮಾಡಿಕೊಳ್ಳುವುದಾದ್ರೆ ಇಲ್ಲೇ ಕೇಸ್ ಮುಗಿಸುತ್ತೇವೆ ಅಂತಾ, ಆಫರ್ ಕೊಡ್ತಿದ್ರು. ಮಾಯಾಂಗನೆಯ ಜಾಲದಲ್ಲಿ ಬಿದ್ದ ಪುರುಷರು ವಿಷ್ಯ ಹೊರಗಡೆ ಗೊತ್ತಾದ್ರೆ ಮಾನ ಹೋಗುತ್ತೆ ಅಂತಾ, ಹಣ ಕೊಟ್ಟು ತೆಪ್ಪಗೆ ಹೋಗ್ತಿದ್ರು.
ಆದ್ರೆ, ಹನಿಟ್ರ್ಯಾಪ್ ಗ್ಯಾಂಗ್ನ ಆಟ ಇಲ್ಲಿಗೆ ನಿಲ್ಲುತ್ತಿರಲಿಲ್ಲ. ಫೋನ್ ಮಾಡಿ ಮತ್ತಷ್ಟು ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡ್ತಿದ್ರು. ಇಲ್ಲವಾದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ರಿಲೀಸ್ ಮಾಡೋದಾಗಿ ಭಯಪಡಿಸ್ತಿದ್ರು, ಇದ್ರಿಂದ ಬೇಸತ್ತ ವ್ಯಕ್ತಿಗಳು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ತಕ್ಷಣ ಅಲರ್ಟ್ ಆದ ಖಾಕಿ, ಹನಿಟ್ರ್ಯಾಪ್ ತಂಡ 13 ಮಂದಿಯನ್ನ ಬಂಧಿಸಿದೆ.
ಇನ್ನು ಈ ಗ್ಯಾಂಗ್, ಮಧ್ಯವಯಸ್ಕ, ಆರ್ಥಿಕವಾಗಿ ಚೆನ್ನಾಗಿರೋ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡ್ತಿತ್ತು. ಅವರ ಪರ್ಸನಲ್ ಡೇಟಾವನ್ನ ಸೋಶಿಯಲ್ ಮೀಡಿಯಾದಲ್ಲಿ ಕಲೆಹಾಕಿ, ಸೈಲೆಂಟಾಗಿ ಬಲೆಗೆ ಬೀಳಿಸಿಕೊಳ್ತಿತ್ತು. ಸದ್ಯ ಬಂಧಿತರಿಂದ 2ಲಕ್ಷದಷ್ಟು ಹಣ, 5 ಕಾರುಗಳು, ಮೊಬೈಲ್, ಸಿಮ್ ಕಾರ್ಡ್ಗಳು ಸೇರಿದ್ದಂತೆ ಚಿನ್ನಾಭರಣವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಒಟ್ನಲ್ಲಿ, ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ವ್ಯಕ್ತಿಗಳು ನೀಡಿರೋ ಮಾಹಿತಿಯಿಂದ ಹನಿಟ್ರ್ಯಾಪ್ ಗ್ಯಾಂಗ್ ಅಂದರ್ ಆಗಿದೆ. ಇಷ್ಟೇ ಅಲ್ಲ, ಹಣಕ್ಕಾಗಿ ತಾಯಿ-ಮಗಳು ಕೂಡ ಹನಿಟ್ರ್ಯಾಪ್ ನಂತಹ ನೀಚ ಕೆಲಸದಲ್ಲಿ ಭಾಗಿಯಾಗಿದ್ರಂತೆ.. ಇದು ನಿಜಕ್ಕೂ ದುರಂತವೇ ಸರಿ.
ಇದನ್ನೂ ಓದಿ: Rain : ‘ಬಿತ್ತೊಂದು ಹನಿ, ಉಲಿದಂತೆ ಅವನ ಧ್ವನಿ ರೊಯ್ಯರೊಯ್ಯನೆ ಪಾರಿವಾಳದ ದಾರಿ’