AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ಗೆ ಶಾರುಖ್​ ಖಾನ್​ ಮಗಳ ಬ್ಯಾಂಗ್ ಎಂಟ್ರಿ; ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ ಸ್ಟಾರ್​ ನಿರ್ದೇಶಕಿ

2019ರಲ್ಲಿ ತೆರೆಗೆ ಬಂದಿದ್ದ ‘ಗಲ್ಲಿ ಬಾಯ್​’ ಸಿನಿಮಾ ನಿರ್ದೇಶನ ಮಾಡಿದ್ದು ಇದೇ ಜೋಯಾ. ಆಸ್ಕರ್​ ಅವಾರ್ಡ್​ ರೇಸ್​ಗೆ ಈ ಚಿತ್ರ ಭಾರತದಿಂದ ಆಯ್ಕೆ ಆಗಿತ್ತು ಅನ್ನೋದು ವಿಶೇಷ.

ಬಾಲಿವುಡ್​ಗೆ ಶಾರುಖ್​ ಖಾನ್​ ಮಗಳ ಬ್ಯಾಂಗ್ ಎಂಟ್ರಿ; ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ ಸ್ಟಾರ್​ ನಿರ್ದೇಶಕಿ
ಸುಹಾನಾ ಖಾನ್
TV9 Web
| Edited By: |

Updated on:Aug 18, 2021 | 12:07 PM

Share

ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ ಈ ಮೊದಲಿನಿಂದಲೂ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸ್ಟಾರ್​ ನಟನ ಮಗಳು ಎನ್ನುವ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಹಿಂಬಾಲಕರನ್ನು ಹೊಂದಿರುವ ಅವರು, ತಮ್ಮ ಬೋಲ್ಡ್​ ಪೋಸ್ಟ್​ಗಳ ಮೂಲಕ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಅವರು ಬಾಲಿವುಡ್​ಗೆ ಕಾಲಿಡೋಕೆ ರೆಡಿ ಆಗಿದ್ದಾರೆ. ಸುಹಾನಾ ಅವರನ್ನು ಸ್ಟಾರ್​ ನಿರ್ದೇಶಕಿ ಜೋಯಾ ಅಖ್ತರ್​ ಬಾಲಿವುಡ್​ಗೆ ಪರಿಚಯಿಸುವ ಜವಾಬ್ದಾರಿ ಹೊತ್ತಿದ್ದಾರೆ.

2019ರಲ್ಲಿ ತೆರೆಗೆ ಬಂದಿದ್ದ ‘ಗಲ್ಲಿ ಬಾಯ್​’ ಸಿನಿಮಾ ನಿರ್ದೇಶನ ಮಾಡಿದ್ದು ಇದೇ ಜೋಯಾ. ಆಸ್ಕರ್​ ಅವಾರ್ಡ್​ ರೇಸ್​ಗೆ ಈ ಚಿತ್ರ ಭಾರತದಿಂದ ಆಯ್ಕೆ ಆಗಿತ್ತು ಅನ್ನೋದು ವಿಶೇಷ. ಈ ಸಿನಿಮಾವನ್ನು ಜೋಯಾ ಅವರೇ ನಿರ್ಮಾಣ ಮಾಡಿದ್ದರು. ಈಗ ಅವರು ಎಸ್​ಆರ್​​ಕೆ ಮಗಳನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಒಂದು ಕಾಮಿಕ್​ ಪುಸ್ತಕವನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ಸುಹಾನಾ ಜತೆ ಇನ್ನೂ ಕೆಲ ಯುವ ನಟ-ನಟಿಯರು ಸಿನಿಮಾದಲ್ಲಿ ಇರಲಿದ್ದಾರಂತೆ. ಸುಹಾನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಹಾನಾ ಈಗಾಗಲೇ ಕಿರುಚಿತ್ರದ ಮೂಲಕ ನಟನೆ ತೋರಿಸಿದ್ದಾರೆ. ಈಗ ಅವರನ್ನು ಬೆಳ್ಳಿ ಪರದೆ ಮೇಲೆ ನೋಡೋಕೆ ಅಭಿಮಾನಿಗಳು ಕಾತುರರಾಗಿದ್ದಾರೆ.

ಸ್ಟಾರ್​ ಮಕ್ಕಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಎಂದರೆ ನೆನಪಾಗೋದು ನಿರ್ಮಾಪಕ ಕರಣ್​ ಜೋಹರ್​. ಬಾಲಿವುಡ್​ಗೆ ಸಾಕಷ್ಟು ಸ್ಟಾರ್​ ಕಿಡ್​ಗಳನ್ನು ಪರಿಚಯಿಸಿದ ಖ್ಯಾತಿ ಅವರಿಗಿದೆ.  ಹೀಗಾಗಿ ಈ ಸಿನಿಮಾಗೆ ಕರಣ್​ ನಿರ್ಮಾಣ ಇರುತ್ತದೆಯೋ ಅಥವಾ ಜೋಯಾ ಅವರೇ ಈ ಜವಾಬ್ದಾರಿ ಹೊತ್ತುಕೊಳ್ಳುತ್ತಾರೋ ಅನ್ನೋದು ಸದ್ಯದ ಕುತೂಹಲ.

‘ಜೀರೋ’ ಚಿತ್ರ ಸೋತ ನಂತರದಲ್ಲಿ ಶಾರುಖ್ ಖಾನ್​​​ ಒಂದು ಗ್ಯಾಪ್​ ತೆಗೆದುಕೊಂಡಿದ್ದರು. ಈಗ ಅವರ ಮುಂದಿನ ಸಿನಿಮಾ ‘ಪಠಾಣ್​’ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ​ ಸಿನಿಮಾದ ಶೂಟಿಂಗ್​ ಸದ್ಯ ಪ್ರಗತಿಯಲ್ಲಿದೆ. ಇದಲ್ಲದೆ, ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಜತೆ ಶಾರುಖ್​ ಕೈ ಜೋಡಿಸುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

ಇದನ್ನೂ ಓದಿ: ಅಟ್ಲೀ-ಶಾರುಖ್​ ಖಾನ್​ ಸಿನಿಮಾದ ಬಗ್ಗೆ ಹೊಸ​ ಅಪ್​ಡೇಟ್​; ಆಗಸ್ಟ್ 15ಕ್ಕೆ ಅಭಿಮಾನಿಗಳಿಗೆ ಸಿಗುತ್ತಿದೆ ಸರ್​ಪ್ರೈಸ್

Published On - 11:42 am, Wed, 18 August 21

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್