ಅಟ್ಲೀ-ಶಾರುಖ್​ ಖಾನ್​ ಸಿನಿಮಾದ ಬಗ್ಗೆ ಹೊಸ​ ಅಪ್​ಡೇಟ್​; ಆಗಸ್ಟ್ 15ಕ್ಕೆ ಅಭಿಮಾನಿಗಳಿಗೆ ಸಿಗುತ್ತಿದೆ ಸರ್​ಪ್ರೈಸ್

ಅಟ್ಲೀ-ಶಾರುಖ್​ ಖಾನ್​ ಸಿನಿಮಾದ ಬಗ್ಗೆ ಹೊಸ​ ಅಪ್​ಡೇಟ್​; ಆಗಸ್ಟ್ 15ಕ್ಕೆ ಅಭಿಮಾನಿಗಳಿಗೆ ಸಿಗುತ್ತಿದೆ ಸರ್​ಪ್ರೈಸ್
ಅಟ್ಲೀ-ಶಾರುಖ್​ ಖಾನ್​ ಸಿನಿಮಾದ ಬಗ್ಗೆ ಹೊಸ​ ಅಪ್​ಡೇಟ್​; ಆಗಸ್ಟ್ 15ಕ್ಕೆ ಅಭಿಮಾನಿಗಳಿಗೆ ಸಿಗುತ್ತಿದೆ ಸರ್​ಪ್ರೈಸ್

ವಿಜಯ್​ ನಟನೆಯ ‘ಬಿಗಿಲ್’​, ‘ಮೆರ್ಸಲ್’​ ಹಾಗೂ ‘ತೇರಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಅಟ್ಲೀ ಅವರಿಗಿದೆ. ಈ ಮೂರು ಚಿತ್ರಗಳು ಹಿಟ್​ ಚಿತ್ರಗಳು.

TV9kannada Web Team

| Edited By: Rajesh Duggumane

Aug 04, 2021 | 4:26 PM

‘ಜೀರೋ’ ಚಿತ್ರ ಸೋತ ನಂತರದಲ್ಲಿ ಶಾರುಖ್​ ಒಂದು ಗ್ಯಾಪ್​ ತೆಗೆದುಕೊಂಡಿದ್ದರು. ಈಗ ಅವರ ಮುಂದಿನ ಸಿನಿಮಾ ‘ಪಠಾಣ್​’ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ​ ಸಿನಿಮಾದ ಶೂಟಿಂಗ್​ ಸದ್ಯ ಪ್ರಗತಿಯಲ್ಲಿದೆ. ಇದಲ್ಲದೆ, ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಜತೆ ಶಾರುಖ್​ ಕೈ ಜೋಡಿಸುತ್ತಿದ್ದಾರೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಿದೆ. ಈಗ ಈ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​ ಒಂದು ಸಿಕ್ಕಿದೆ. ಆಗಸ್ಟ್​ 15ರಂದು ಈ ಚಿತ್ರದ ಟೀಸರ್​ ರಿಲೀಸ್​ ಆಗಲಿದೆಯಂತೆ. ಸದ್ಯ, ಈ ವಿಚಾರ ಶಾರುಖ್​ ಅಭಿಮಾನಿಗಳಿಗೆ ಖುಷಿ ನೀಡಿದೆ.

ವಿಜಯ್​ ನಟನೆಯ ‘ಬಿಗಿಲ್’​, ‘ಮೆರ್ಸಲ್’​ ಹಾಗೂ ‘ತೇರಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಅಟ್ಲೀ ಅವರಿಗಿದೆ. ಈ ಮೂರು ಚಿತ್ರಗಳು ಹಿಟ್​ ಚಿತ್ರಗಳು. ಈಗ ಶಾರುಖ್​ ಮುಂದಿನ ಸಿನಿಮಾಗೆ ಅಟ್ಲೀ ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಆಗಸ್ಟ್​ 15ರಂದು ಅಧಿಕೃತ ಘೋಷಣೆ ಆಗಲಿದೆ.

ಇಂದು (ಆಗಸ್ಟ್4) ಅಟ್ಲೀ ಮುಂಬೈಗೆ ತೆರಳಿದ್ದಾರೆ. ಈ ವಿಶೇಷ ಟೀಸರ್​ನ ಶೂಟಿಂಗ್​ ಮುಂಬೈ ಸ್ಟುಡಿಯೋ ಒಂದರಲ್ಲಿ ನಡೆಯುತ್ತಿದೆ. ಕೆಲವು ದಿನಗಳ ಕಾಲ ಶೂಟಿಂಗ್​, ಎಡಿಟಿಂಗ್​ ನಡೆಸಿ ಆಗಸ್ಟ್​ 15ರಂದು ಟೀಸರ್​ ರಿಲೀಸ್​ ಮಾಡುವ ಆಲೋಚನೆ ಚಿತ್ರತಂಡದ್ದು.

ವಿಜಯ್​ ನಟನೆಯ ‘ಬಿಗಿಲ್’​ ಸಿನಿಮಾ ಅಟ್ಲೀ ಅವರ ಕೊನೆಯ ಚಿತ್ರ. ಈ ಸಿನಿಮಾ ತೆರೆಕಂಡ ನಂತರದಲ್ಲಿ ಅವರು ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ. ಈಗ ಆಗಸ್ಟ್​ 15ಕ್ಕೆ ಹೊಸ ಘೋಷಣೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಬಾಕಿ ಇದೆ.

ಸದ್ಯ, ಶಾರುಖ್​ ಖಾನ್​ ‘ಪಠಾಣ್​’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದಕ್ಕಿಂತ ಮೊದಲೇ ಅಟ್ಲೀ-ಶಾರುಖ್​ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಕೆಲಸಗಳು ಆರಂಭವಾಗೋದು ತಡವಾಗಿದೆ. ಹೀಗಾಗಿ, ಶಾರುಖ್​ ‘ಪಠಾಣ್​’ ನಂತರ ಈ ಚಿತ್ರ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: ‘ಶಾರುಖ್​ ಖಾನ್​ರದ್ದು ಅತಿ ಕೆಟ್ಟ ಮತ್ತು ಸಹಿಸಲಾಗದ ನಟನೆ’; ಪತ್ನಿ ಗೌರಿ ಹೀಗೆ ಹೇಳಿದ್ದು ಯಾಕೆ?

ನಯನತಾರಾ-ಉದಯನಿಧಿ ಲಿವ್​ಇನ್​ನಲ್ಲಿದ್ದರೆ ನಾನೇನು ಮಾಡಲಿ?: ವಿವಾದ ಎಬ್ಬಿಸಿದ ಹೇಳಿಕೆ

Follow us on

Related Stories

Most Read Stories

Click on your DTH Provider to Add TV9 Kannada