Sunny Leone: ಸನ್ನಿ ಲಿಯೋನ್ ಅವರ ಹೊಸ ಮನೆಯಲ್ಲಿ ಜಿರಲೆ ಕಾಟವಂತೆ!

Sunny Leone: ಸನ್ನಿ ಲಿಯೋನ್ ಅವರ ಹೊಸ ಮನೆಯಲ್ಲಿ ಜಿರಲೆ ಕಾಟವಂತೆ!
ಸಾಂದರ್ಭಿಕ ಚಿತ್ರ

Daniel Weber: ಬಾಲಿವುಡ್ ನಟಿ ಸನ್ನಿ ಲಿಯೋನ್ ತಮ್ಮ ಪತಿ ಡೇನಿಯಲ್ ವೆಬರ್ ಜೊತೆಗೂಡಿ ಮನೆಯಲ್ಲಿದ್ದ ಜಿರಲೆಯೊಂದರ ಬೆನ್ನು ಬಿದ್ದಿದ್ದಾರೆ. ಆದರೆ ಇವರಿಗಿಂತ ಜಿರಲೆ ಬಹಳ ಚುರುಕಾಗಿದ್ದಿದ್ದರಿಂದ ತಪ್ಪಿಸಿಕೊಂಡು ಹೋಯಿತಂತೆ.. ಹೀಗೆ ತಮ್ಮ ಜಿರಲೆ ಪುರಾಣವನ್ನು ಹಂಚಿಕೊಂಡಿದ್ದಾರೆ ಸನ್ನ.

TV9kannada Web Team

| Edited By: shivaprasad.hs

Aug 04, 2021 | 3:16 PM

ಬಾಲಿವುಡ್ ನಟಿ ಸನ್ನಿ ಲಿಯೋನ್‌ ಅವರಿಗೆ ಮನೆಯಲ್ಲಿ‌ ಜಿರಲೆ ಕಾಟವಂತೆ. ಅದನ್ನು ಸಾಮಾಜಿಕ‌ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು ಅದಕ್ಕೆ ವುಮೆನ್ vs ವೈಲ್ಡ್ ಎಂದು ಭರ್ಜರಿ ಶೀರ್ಷಿಕೆ ನೀಡಿದ್ದಾರೆ. ಅಲ್ಲದೇ ಆ ಜಿರಲೆಯನ್ನು‌ ಮನೆಯಿಂದ ಹೊರಹಾಕಲು ಅವರು ಪಡುತ್ತಿರುವ ಪಡಿಪಾಟಲನ್ನೂ ವಿಡಿಯೊದೊಂದಿಗೆ ಶೇರ್ ಮಾಡಿದ್ದಾರೆ.‌ ಇತ್ತೀಚೆಗಷ್ಟೇ ಹೊಸ ಮನೆಗೆ ಪ್ರವೇಶ ಮಾಡಿದ ಸುದ್ದಿಯನ್ನು ಸನ್ನಿ ಹಂಚಿಕೊಂಡಿದ್ದರು. ಇದನ್ನು ನೋಡಿದ ನೆಟ್ಟಿಗರು, ‘ಛೇ, ಸನ್ನಿಯವರ ಹೊಸ ಮನೆಯಲ್ಲೂ ಜಿರಲೆ ಕಾಟವೇ!’ ಎಂದು ಅಚ್ಚರಿಪಟ್ಟಿದ್ದಾರೆ.

ಸನ್ನಿ ಲಿಯೋ‌ನ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹಾರುವ ಜಿರಳೆಯೊಂದನ್ನು ಅಟ್ಟಿಸಿಕೊಂಡು ಹೋಗಿದ್ದು, ಅದನ್ನು ಮನೆಯಿಂದ ಹೊರಹಾಕಲು ಬಹಳ ಪ್ರಯತ್ನಪಟ್ಟಿದ್ದಾರೆ. ಸನ್ನಿಯವರಿಂದ ಸಾಧ್ಯವಾಗದ ಈ ಕೆಲಸಕ್ಕೆ ಅವರ ಪತಿ ಡೇನಿಯಲ್ ವೆಬರ್ ಕೂಡಾ ಸಹಾಯಕ್ಕೆ ಧುಮುಕಿದ್ದಾರೆ. ಇನ್ನೇನು ಸಿಕ್ಕಿತು ಅನ್ನುವಷ್ಟರಲ್ಲಿ ಉಣುಚಿಕೊಂಡು ತಪ್ಪಿಸಿಕೊಂಡ ಆ ಕೀಟವನ್ನು ಬಡಿಯಲು ತಮ್ಮ ಅಂಗಿಯನ್ನೂ ತೆಗೆದು ಅದರ ಮೂಲಕ ಹಿಡಿಯಲು ವೆಬರ್ ಪ್ರಯತ್ನಿಸುತ್ತಾರೆ. ಆದರೆ ಅವರ ಯತ್ನ ಫಲ ನೀಡಿಲ್ಲ.

ದಂಪತಿಗಳಿಬ್ಬರೂ ಈ ಕೆಲಸದಲ್ಲಿ ಬಹಳ ಖುಷಿಯಿಂದ, ತಲ್ಲೀನರಾಗಿ ಪ್ರಯತ್ನಪಟ್ಟರೂ ಕೀಟವನ್ನು ಹೊರಹಾಕಲು ಸಾಧ್ಯವಾಗಿಲ್ಲ. ಸನ್ನಿ ಮತ್ತು ಅವರ ಪತಿ ಡೇನಿಯಲ್ ಅವರ ಈ ಪಡಿಪಾಟಲನ್ನು ವಿಡಿಯೊ ಮೂಲಕ ಸೆರೆಹಿಡಿಯಲಾಗಿದ್ದು, ಸ್ವತಃ ಸನ್ನಿ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅದಕ್ಕೆ ತಮಾಷೆಯ ಅಡಿಬರಹವನ್ನೂ ಅವರು ನೀಡಿದ್ದು, ‘ವುಮೆನ್ vs ವೈಲ್ಡ್’ ಎಂದು ಶೀರ್ಷಿಕೆ ನೀಡಿದ್ದಾರೆ.

ತಮ್ಮ ಪತಿ ಡೇನಿಯಲ್ ಅವರ ಕಾಲೆಳೆದಿರುವ ಸನ್ನಿ, ವಿಡಿಯೊ ಕೊನೆಯಲ್ಲಿ ವೆಬರ್ ಅವಾಂತರವನ್ನು ನೋಡಿ ಎಂದು ಬರೆದಿದ್ದಾರೆ. ಜೊತೆಗೆ ಒಂದು ಸೂಚನೆಯನ್ನೂ ನೀಡಿರುವ ಅವರು, ಈ ವಿಡಿಯೊ ಚಿತ್ರೀಕರಣದಲ್ಲಿ ಯಾವ ಕೀಟಕ್ಕೂ (ಜಿರಲೆಗೂ) ಹಾನಿಯನ್ನುಂಟು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಜಿರಲೆಯ ಚುರುಕುತನವನ್ನೂ ಕೊಂಡಾಡಿರುವ ಸನ್ನಿ, ಅದು ನಮಗಿಂತ ಬಹಳ ಚುರುಕಾಗಿತ್ತು. ಬಹುಶಃ ಅದಕ್ಕೇ ಜಿರಲೆ ನಮಗೆ ಸಿಗಲಿಲ್ಲ ಎಂದಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದ್ದು, ಸನ್ನಿ ಲಿಯೋನ್ ಅವರ ಹಾಸ್ಯ ಪ್ರಜ್ಞೆಗೆ ನೆಟ್ಟಿಗರು ಮನದುಂಬಿ ನಗುತ್ತಿದ್ದಾರೆ.

ಸನ್ನಿ ಲಿಯೋನ್ ಹಂಚಿಕೊಂಡಿರುವ ವಿಡಿಯೊ:

View this post on Instagram

A post shared by Sunny Leone (@sunnyleone)

ಡೇನಿಯಲ್ ವೆಬರ್ ಹಾಗೂ ಸನ್ನಿ ಲಿಯೋನ್ ಅವರು ದಾಂಪತ್ಯಕ್ಕೆ ಕಾಲಿರಿಸಿ ಹತ್ತು ವರ್ಷಗಳು ಕಳೆದಿದ್ದು, ಮೂವರು ಮಕ್ಕಳಿದ್ದಾರೆ. ಇತ್ತೀಚೆಗಷ್ಟೇ ಈ ಸ್ಟಾರ್ ದಂಪತಿ ತಮ್ಮ ತುಂಬು ಸಂಸಾರದೊಂದಿಗೆ ಹೊಸ ಮನೆಯನ್ನು ಪ್ರವೇಶಿಸಿದ್ದರು. ಅವರ ಮಕ್ಕಳಾದ ನಿಶಾ, ನೋಹಾ ಮತ್ತು ಆಶೆರ್ ಅವರೊಂದಿಗೆ ಹೊಸ ಮನೆಯಲ್ಲಿ ತೆಗೆಸಿಕೊಂಡ ಚಿತ್ರವನ್ನೂ ಸನ್ನಿ ಹಂಚಿಕೊಂಡಿದ್ದರು.

ನಮ್ಮ‌ ಜೀವನದ ಹೊಸ ಪಯಣ ಪ್ರಾರಂಭವಾಗಿದೆ ಎಂದು ಸನ್ನಿ ಹೇಳಿಕೊಂಡಿದ್ದರು. ಸನ್ನಿ‌ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದು, ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೆ. ತಮ್ಮ‌ಹಾಸ್ಯಪ್ರಜ್ಞೆಯಿಂದ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದ್ಯ ಚಿತ್ರರಂಗದಲ್ಲೂ ಸಖತ್ ಬ್ಯುಸಿ ಇರುವ ಸನ್ನಿ ಲಿಯೊನ್, ಹಲವಾರು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಪುಶ್ ಅಪ್ಸ್ ಮಾಡಿದ ವಧು! ವಿಡಿಯೋ ವೈರಲ್

ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ ಐಶ್ವರ್ಯಾ ರೈ ತದ್ರೂಪಿ ಆಶಿತಾ ಸಿಂಗ್; ವಿಡಿಯೊ ನೋಡಿ

(Sunny Leone’s woman vs wild program goes wrong and netizens gives comedy reactions)

Follow us on

Related Stories

Most Read Stories

Click on your DTH Provider to Add TV9 Kannada