ಅನುಷ್ಕಾ ಮೊದಲ ಭೇಟಿ ಹೇಗಿತ್ತು? ಸಂದರ್ಭ ಸಹಿತ ವಿವರಿಸಿದ ವಿರಾಟ್ ಕೊಹ್ಲಿ
ವಮಿಕಾ ಜನಿಸಿದ್ದು ವಿರಾಟ್ ಕುಟುಂಬಕ್ಕೆ ಖುಷಿ ತಂದಿದೆ. ಆದರೆ, ಇದನ್ನು ನೋಡೋಕೆ ಅವರ ತಂದೆ ಇಲ್ಲ ಎನ್ನುವ ವಿಚಾರ ಬೇಸರ ತರಿಸಿದೆ.
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮದುವೆ ಆಗಿ ಅನೇಕ ವರ್ಷ ಕಳೆದಿದೆ. ಹಲವು ವರ್ಷಗಳ ಕಾಲ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ 2017ರಲ್ಲಿ ಮದುವೆ ಆಗಿತ್ತು. ಈ ವರ್ಷದ ಆರಂಭದಲ್ಲಿ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ವಿರಾಟ್ ಅನುಷ್ಕಾ ಮೊದಲ ಭೇಟಿ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಾದರೆ, ಇಬ್ಬರೂ ಮೊದಲು ಭೇಟಿ ಆಗಿದ್ದು ಎಲ್ಲಿ? ಹೇಗಿತ್ತು ಆ ಭೇಟಿ ಎನ್ನುವ ಬಗ್ಗೆ ವಿರಾಟ್ ವಿವರಿಸಿದ್ದಾರೆ.
ವಿರಾಟ್ ಅವರು ಅನುಷ್ಕಾ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದು 2013ರಲ್ಲಿ. ಈ ಬಗ್ಗೆ ಮಾತನಾಡಿರುವ ವಿರಾಟ್, ‘ನಾನು ಸೆಟ್ನಲ್ಲಿ ಅನುಷ್ಕಾ ಅವರನ್ನು ಭೇಟಿ ಮಾಡಿದ್ದೆ. ಆಗ ತುಂಬಾನೇ ನರ್ವಸ್ ಆಗಿದ್ದೆ. ಹೀಗಾಗಿ, ಒಂದು ಜೋಕ್ ಹೇಳಿದೆ. ನನಗೆ ಏನು ಮಾಡಬೇಕು ಎಂಬುದೇ ಗೊತ್ತಿರಲಿಲ್ಲ. ಈ ಕಾರಣಕ್ಕೆ ನಾನು ಜೋಕ್ ಹೇಳಿದೆ. ಅನುಷ್ಕಾ ತುಂಬಾನೇ ಎತ್ತರವಾಗಿ ಕಾಣುತ್ತಿದ್ದರು. ಹೀಲ್ಸ್ ಹಾಕಿಕೊಂಡಿದ್ದರು. ಅವರು ತುಂಬಾನೇ ಕಾನ್ಫಿಡೆಂಟ್ ಆಗಿದ್ದರು’ ಎಂದು ವಿರಾಟ್ ಮೊದಲ ಭೇಟಿ ಅನುಭವ ಹಂಚಿಕೊಂಡಿದ್ದಾರೆ.
ವಮಿಕಾ ಜನಿಸಿದ್ದು ವಿರಾಟ್ ಕುಟುಂಬಕ್ಕೆ ಖುಷಿ ತಂದಿದೆ. ಆದರೆ, ಇದನ್ನು ನೋಡೋಕೆ ಅವರ ತಂದೆ ಇಲ್ಲ ಎನ್ನುವ ವಿಚಾರ ಬೇಸರ ತರಿಸಿದೆ. ಈ ಬಗ್ಗೆ ಮಾತನಾಡಿರುವ ವಿರಾಟ್, ‘ನಾನು ಕ್ರಿಕೆಟ್ ಆಡುವುದನ್ನು ನೋಡುವುದಕ್ಕೂ ನನ್ನ ತಂದೆ ಇಲ್ಲ. ಈಗ ನನ್ನ ಮಗಳನ್ನು ನೋಡೋಕು ನನ್ನ ತಂದೆ ಇಲ್ಲ. ನನ್ನ ಅಮ್ಮನ ಮುಖದಲ್ಲಿ ಎಲ್ಲಾ ಖುಷಿಯನ್ನು ಕಾಣುತ್ತಿದ್ದೇನೆ’ ಎಂದಿದ್ದಾರೆ ಕೊಹ್ಲಿ.
ವಿರಾಟ್ ಹಾಗೂ ಅನುಷ್ಕಾ 2017ರಲ್ಲಿ ದೂರದ ಇಟಲಿಗೆ ತೆರಳಿ ಮದುವೆ ಆಗಿದ್ದರು. ಜನವರಿಯಲ್ಲಿ ಜನಿಸಿದ ಮಗಳಿಗೆ ಈ ಜೋಡಿ ವಮಿಕಾ ಎಂದು ಹೆಸರಿಟ್ಟಿದ್ದರು. ವಮಿಕಾ ಮುಖವನ್ನು ಅನುಷ್ಕಾ ಹಾಗೂ ವಿರಾಟ್ ಅಭಿಮಾನಿಗಳಿಗೆ ತೋರಿಸಿಲ್ಲ. ಸದ್ಯ, ಇಂಗ್ಲೆಂಡ್ನಲ್ಲಿ ಆಂಗ್ಲರ ವಿರುದ್ಧ ಪಂದ್ಯ ನಡೆಯುತ್ತಿದೆ. ಈ ಕಾರಣಕ್ಕೆ ಟೀಂ ಇಂಡಿಯಾ ಅಲ್ಲಿಗೆ ತೆರಳಿದೆ. ಅನುಷ್ಕಾ ಕೂಡ ಅಲ್ಲಿಯೇ ಇದ್ದಾರೆ.