ಸ್ಟೋಕ್ಸ್ ಅವರಂತೆ ಬೇರೆ ಆಟಗಾರರು ಸಹ ಬಯೊ-ಬಬಲ್ ಬದುಕಿನಿಂದ ಬೇಸತ್ತು ಕ್ರಿಕೆಟ್​ನಿಂದ ಬ್ರೇಕ್ ತೆಗೆದುಕೊಳ್ಳಬಹುದು: ವಿರಾಟ್ ಕೊಹ್ಲಿ

ಭಾರತದ ಮಟ್ಟಿಗೆ ಹೇಳುವುದಾದರೆ ಟೀಮಿನ ಆಟಗಾರರು ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆಡಿದ ನಂತರ ಹೆಚ್ಚು ಕಡಿಮೆ ಒಂದೂವರೆ ತಿಂಗಳು ಇಂಗ್ಲೆಂಡ್​​ನಲ್ಲೇ ವಿಶ್ರಾಂತಿ ಪಡೆದಿದ್ದಾರೆ.

ಸ್ಟೋಕ್ಸ್ ಅವರಂತೆ ಬೇರೆ ಆಟಗಾರರು ಸಹ ಬಯೊ-ಬಬಲ್ ಬದುಕಿನಿಂದ ಬೇಸತ್ತು ಕ್ರಿಕೆಟ್​ನಿಂದ ಬ್ರೇಕ್ ತೆಗೆದುಕೊಳ್ಳಬಹುದು: ವಿರಾಟ್ ಕೊಹ್ಲಿ
ವಿರಾಟ್​ ಕೊಹ್ಲಿ ಮತ್ತು ಬೆನ್​​ ಸ್ಟೋಕ್ಸ್
Follow us
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 04, 2021 | 1:07 AM

ಇಂಗ್ಲೆಂಡ್ ಸ್ಟಾರ್ ಆಲ್-ರೌಂಡರ್ ಬೆನ್ ಸ್ಟೋಕ್ಸ್ ಅವರು ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಭಾರತದ ವಿರುದ್ಧ ಬುಧವಾರದಿಂದ ಆರಂಭವಾಗಲಿರುವ 5-ಪಂದ್ಯಗಳ ಟೆಸ್ಟ್ ಸರಣಿಯಿಂದ ಹಿಂದೆ ಸರಿದ ಹಾಗೆಯೇ ಬೇರೆ ಆಟಗಾರರು ಸಹ ಅವರ ಮಾದರಿಯನ್ನು ಅನುಸರಿಸುವ ಸಾಧ್ಯತೆಯಿದೆ ಎಂದು ಟೀಮ್ ಇಂಡಿಯ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ. ಆಯಾ ದೇಶಗಳ ಕ್ರಿಕೆಟ್ ಮಂಡಳಿ ಎಚ್ಚೆತ್ತುಕೊಂಡು ಆಟಗಾರರಿಗೆ ಸಾಕಷ್ಟು ವಿಶ್ರಾಂತಿ ಸಿಗುವ ಹಾಗೆ ಸರಣಿಗಳನ್ನು ಅಯೋಜಿಸದಿದ್ದರೆ ಅಟಗಾರರು ಮಾನಸಿಕ ಬಳಲಿಕೆಗೆ ಒಳಗಾಗಿ ಬ್ರೇಕ್ ತೆಗೆದುಕೊಳ್ಳುವ ನಿರ್ಧಾರ ಮಾಡಿದರೆ ಅಚ್ಚರಿ ಪಡುವಂಥದೇನೂ ಇರುವುದಿಲ್ಲ ಎಂದು ಕೊಹ್ಲಿ ಹೇಳಿದರು.

ಭಾರತದ ಮಟ್ಟಿಗೆ ಹೇಳುವುದಾದರೆ ಟೀಮಿನ ಆಟಗಾರರು ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆಡಿದ ನಂತರ ಹೆಚ್ಚು ಕಡಿಮೆ ಒಂದೂವರೆ ತಿಂಗಳು ಇಂಗ್ಲೆಂಡ್​​ನಲ್ಲೇ ವಿಶ್ರಾಂತಿ ಪಡೆದಿದ್ದಾರೆ.

ಮಂಗಳವಾರದಂದು ನಾಟಿಂಗ್ಹ್ಯಾಮ್​ನಲ್ಲಿ ಸುದ್ದಿ ಮಾಧ್ಯಮವೊಂದರ ಕಾನ್ಫರೆನ್ಸ್ ಕಾಲ್​ಗೆ ಉತ್ತರಿಸಿದ ಕೊಹ್ಲಿ ಅವರು, ಭಾರತದ ಆಟಗಾರರಿಗೆ ಬ್ರೇಕ್ ಸಿಕ್ಕಿದ್ದು ಬಹಳ ಪ್ರಯೋಜನಕಾರಿಯಾಗಿದೆ ಎಂದರು. ‘ಕ್ರಿಕೆಟ್​ನಿಂದ ಗಮನವನ್ನು ಬೇರೆಡೆ ಹರಿಸಲು ಬ್ರೇಕ್ ಬಹಳ ಸಹಕಾರಿಯಾಯಿತು. ಎಲ್ಲ ಆಟಗಾರರಿಗೆ ಅದರ ಅವಶ್ಯಕತೆಯಿತ್ತು,’ ಎಂದರು.

‘ಬೆನ್ ಸ್ಟೋಕ್ಸ್ ಅವರು ಕ್ರಿಕೆಟ್​ನಿಂದ ಬ್ರೇಕ್ ತೆಗೆದುಕೊಂಡಿರುವುದು ನಮಗೆಲ್ಲ ಗೊತ್ತಿದೆ. ಕಳೆದ ಒಂದೂವರೆ ವರ್ಷದಿಂದ ಭಾರತೀಯ ಆಟಗಾರರ ಹೆಚ್ಚಿನ ಸಮಯ ಬಯೊ-ಬಬಲ್ಗಳಲ್ಲಿ ಕಳೆದಿದ್ದಾರೆ. ಇದು ಸುಲಭವಲ್ಲ. ಈಗ ನಮಗೆ ಸಿಕ್ಕಂಥ ಬ್ರೇಕ್ಗಳು ಎಲ್ಲರಿಗೂ ಸಿಗಬೇಕು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಆಟಗಾರರನ್ನು ಕ್ರೀಡಯಿಂದ ದೂರ ತೆಗೆದುಕೊಡು ಹೋಗಿ ಅವರು ಪುನಶ್ಚೇತನಗೊಳ್ಳವಂತೆ ಮಾಡಿ ಪುನಃ ಮೈದಾನಕ್ಕೆ ಕರೆತಂದರೆ ಅವರ ಪ್ರದರ್ಶನವೂ ಉತ್ತಮಗೊಳ್ಳುತ್ತದೆ,’ ಎಂದು ಕೊಹ್ಲಿ ಹೇಳಿದರು.

‘ಆಟಗಾರರನ್ನು ಬಬಲ್​ನಲ್ಲಿ ಕಟ್ಟಿಹಾಕಿದರೆ ಅದು ಅವರ ಮಾನಸಿಕ ಸ್ವಾಸ್ಥ್ಯದ ಮೇಲೆ ಪ್ರಭಾವ ಬೀರುವ ಚಾನ್ಸ್ ಇರುತ್ತದೆ. ಆಗ ಅವರೊಂದಿಗೆ ತಂಡವೂ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಆಟಗಾರರಿಗೆ ಆಗಾಗ ಇಂಥ ಬ್ರೇಕ್ಗಳನ್ನು ನೀಡುತ್ತಿರಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಆಟಗಾರರ ಕ್ಷಮತೆ ಮತ್ತು ಸಾಮರ್ಥ್ಯ ಕುಂದುತ್ತಾ ಹೋಗುತ್ತದೆ. ಆಟದಲ್ಲಿ ಗುಣಮಟ್ಟದ ಪ್ರದರ್ಶನ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ,’ ಎಂದು ಕೊಹ್ಲಿ ಹೇಳಿದರು.

‘ಸ್ಟೋಕ್ಸ್ ಅವರು ಅನಿರ್ದಿಷ್ಟಾವಧಿಯವರೆಗೆ ಕ್ರಿಕೆಟ್​ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಅವರ ಹಾಗೆ ಬೇರೆ ಆಟಗಾರರು ಸಹ ಬಬಲ್ ಬದುಕಿನಿಂದ ಬೇಸತ್ತು ಬ್ರೇಕ್ ಬಯಸಬಹುದು,’ ಎಂದು ಕೊಹ್ಲಿ ಹೇಳಿದರು.

‘ನಮಗೆ ಬ್ರೇಕ್ನಿಂದ ಎಷ್ಟು ಪ್ರಯೋಜನವಾಗಿದೆ ಎಂಬ ಪ್ರಶ್ನೆ ಉದ್ಭವಿಸಿವುದು ಸಹಜವೇ. ಈ ಸರಣಿಯಲ್ಲಿ ನಾವು ಫ್ರೆಶ್ ಆಗಿ ಪ್ರವೇಶಿಸಲಿದ್ದೇವೆ. ನಾವೀಗ ಉತ್ತಮ ಮನಸ್ಥಿತಿಯಲ್ಲಿದ್ದೇವೆ ಮತ್ತು ಎಲ್ಲ 5 ಟೆಸ್ಟ್ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದೇವೆ,’ ಎಂದು ಕೊಹ್ಲಿ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್ನಲ್ಲಿ ಆಡಿರುವ 14 ಟೆಸ್ಟ್​ಗಳ ಪೈಕಿ ಭಾರತ ಕೇವಲ ಎರಡರಲ್ಲಿ ಮಾತ್ರ ಜಯಗಳಿಸಿದೆ. ‘ಇಲ್ಲಿನ ಕಂಡೀಷನ್​ಗಲು ನಮಗೆ ಸೂಟ್ ಆಗಲಾರವು ಅಂತ ನಮಗೆ ಗೊತ್ತಿದೆ. ಆದರೆ ಪ್ರತಿಕೂಲ ವಾತಾವರಣದಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯಗಳನ್ನು ಗೆಲ್ಲುವ ಸಂಕಲ್ಪ ನಮ್ಮದು,’ ಎಂದು ಕೊಹ್ಲಿ ಹೇಳಿದರು.

ಹೆಚ್ಚು ಕಡಿಮೆ ಎರಡು ವರ್ಷದಿಂದ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ದಾಖಲಿಸಲು ಕೊಹ್ಲಿ ವಿಫಲರಾಗಿರುವುದು ನಿಜವಾದರೂ ಇಂಗ್ಲೆಂಡ್​ಗೆ  ಈ ಹಿಂದೆ ಪ್ರವಾಸ ಹೋಗಿರುವ ಹಲವು ಆಟಗಾರರಲ್ಲಿ ಅವರೂ ಒಬ್ಬರಾಗಿದ್ದಾರೆ. ‘ನಿಮ್ಮಲ್ಲಿ ಬೆಟ್ಟದಷ್ಟು ಅನುಭವ ಇರಬಹುದು, ಆದರೆ ಸಂದಿಗ್ಧ ಪರಿಸ್ಥಿಯಲ್ಲಿ ಟೀಮನ್ನು ಅಪಾಯದಿಂದ ಪಾರು ಮಾಡುವುದರಲ್ಲಿ ಆಟಗಾರನೊಬ್ಬನ ಸಾಮರ್ಥ್ಯ ಅಡಗಿರತ್ತದೆ,’ ಎಂದು ಕೊಹ್ಲಿ ಹೇಳಿದರು.

ಇದುವರೆಗೆ ಆಡಿರುವ 92 ಟೆಸ್ಟ್​ಗಳಲ್ಲಿ  32 ವರ್ಷ ವಯಸ್ಸಿನ ಕೊಹ್ಲಿ ಅವರು 52 ಕ್ಕಿಂತ ಹೆಚ್ಚಿನ ಸರಾಸರಿ ಹೊಂದಿದ್ದಾರೆ.

‘ನಿಮ್ಮ ಕಂಫರ್ಟ್ ಜೋನ್​ಗೆ ವ್ಯತಿರಿಕ್ತವಾದ ಸನ್ನಿವೇಶಗಳಲ್ಲಿ ಆಡುವಂಥ ಪರಿಸ್ಥಿತಿ ತಲೆದೋರಿದರೆ ಈ ಫಾರ್ಮಾಟ್ನಲ್ಲಿ ಒಬ್ಬ ಆಟಗಾರ ಬಹಳ ಸಮಯದವರೆಗೆ ಆಡಲಾರ, ಬಾಳಲಾರ,’ ಎಂದು ಕೊಹ್ಲಿ ಹೇಳಿದರು.

ಇದನ್ನೂ ಓದಿ: India vs England 1st Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್​ನ ನೇರ ಪ್ರಸಾರ ಸೇರಿದಂತೆ ಪೂರ್ಣ ಮಾಹಿತಿ ಇಲ್ಲಿದೆ

Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?