India vs England: ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್​: ಪ್ಲೇಯಿಂಗ್ XI,​ ಮಳೆ, ಪಿಚ್ ರಿಪೋರ್ಟ್​: ಇಲ್ಲಿದೆ ಮಾಹಿತಿ

India vs England: ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್​: ಪ್ಲೇಯಿಂಗ್ XI,​ ಮಳೆ, ಪಿಚ್ ರಿಪೋರ್ಟ್​: ಇಲ್ಲಿದೆ ಮಾಹಿತಿ
India vs England

India vs England Preview: ನ್ಯಾಟಿಂಗ್​ಹ್ಯಾಮ್​ನ ಟ್ರೆಂಟ್​ಬ್ರಿಡ್ಜ್ ಮೈದಾನದಲ್ಲಿ ಭಾರತದ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಐದು ದಿನಗಳ ಕಾಲ ನಡೆಯಲಿರುವ ಈ ಪಂದ್ಯಕ್ಕೆ ವರುಣನ ಕಾಟ ಇದೆಯೇ ಎಂಬುದನ್ನ ನೋಡುವುದಾದರೆ…

TV9kannada Web Team

| Edited By: Vinay Bhat

Aug 04, 2021 | 12:28 PM

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಐದು ಪಂದ್ಯಗಳ ಟೆಸ್ಟ್​ ಸರಣಿ ಪೈಕಿ ಮೊದಲ ಪಂದ್ಯಕ್ಕೆ ಇಂದು ಚಾಲನೆ ಸಿಗಲಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ (ICC World Test Championships) ಎರಡನೇ ಆವೃತ್ತಿಯ ಚೊಚ್ಚಲ ಪಂದ್ಯ ಇದಾಗಿದ್ದು, ನ್ಯಾಟಿಂಗ್​ಹ್ಯಾಮ್ ಕ್ರೀಡಾಂಗಣ ಸಂಪೂರ್ಣ ಸಜ್ಜಾಗಿ ನಿಂತಿದೆ. ಕಳೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಂಡ ಬಳಿಕ ಗೆಲುವಿನ ಲಯಕ್ಕೆ ಭಾರತ ಮರಳಬೇಕಿದೆ. ಇತ್ತ ಕ್ಯಾಪ್ಟನ್ ವಿರಾಟ್ ಕೊಹ್ಲಿಗೂ (Virat Kohli) ಗೆಲುವು ಅನಿವಾರ್ಯವಾಗಿದೆ. ಹೀಗೆ ಅನೇಕ ಕಾರಣಗಳಿಂದ ಈ ಟೆಸ್ಟ್​ ಸರಣಿ ಸಾಕಷ್ಟು ಕುತೂಹಲ ಕೆರಳಿಸಿದೆ.

ನ್ಯಾಟಿಂಗ್​ಹ್ಯಾಮ್​ನ ಟ್ರೆಂಟ್​ಬ್ರಿಡ್ಜ್ ಮೈದಾನದಲ್ಲಿ ಭಾರತದ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಮೂರು ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಐದು ದಿನಗಳ ಕಾಲ ನಡೆಯಲಿರುವ ಈ ಪಂದ್ಯಕ್ಕೆ ವರುಣನ ಕಾಟ ಇದೆಯೇ ಎಂಬುದನ್ನ ನೋಡುವುದಾದರೆ…

ಇಂಗ್ಲೆಂಡಿನಲ್ಲಿ ಈ ವರ್ಷ ಹವಾಮಾನ ತುಂಬಾನೆ ಪರಿಣಾಮಕಾರಿಯಾಗಿ ಗೋಚರಿಸಿದೆ. ಮುಂಗಾರು ಜೋರಾಗಿದ್ದು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿವೆ. ನಿರಂತರ ಮಳೆ ಅಥವಾ ಮಂದ ಬೆಳಕಿನಿಂದಾಗಿ ಕೆಲವು ಪಂದ್ಯಗಳನ್ನು ರದ್ದುಗೊಳಿಸಿದರೆ ಇನ್ನೂ ಕೆಲವು ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಲಾಯಿತು. ಭಾರತ ಹಾಗೂ ಇಂಗ್ಲೆಂಡ್ ನಡುವಣ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ್ದು ಗೊತ್ತೇಯಿದೆ.

ಮಳೆ ಸಾಧ್ಯತೆ:

ವೆದರ್.ಕಾಮ್ ಪ್ರಕಾರ, ನ್ಯಾಟಿಂಗ್​ಹ್ಯಾಮ್​ನಲ್ಲಿ ಪಂದ್ಯ ಆರಂಭದ ಮೊದಲನೇ ದಿನ ಕೊಂಚ ಬಿಸಿಲಿನ ಜೊತೆ ಮೋಡ ಕವಿದ ವಾತಾವರಣ ಇರಲಿದೆ. ಮಳೆಯ ಸಾಧ್ಯತೆ ಕಡಿಮೆಯಂತೆ. ಆದಾಗ್ಯೂ, 2ನೇ ದಿನದಂದು ಸಾಧಾರಣವಾದ ತಂಗಾಳಿಯೊಂದಿಗೆ ಲಘು ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.  3ನೇ ದಿನ ಮತ್ತು 4ನೇ ದಿನ, 5ನೇ ದಿನ ಕೂಡ ಮಳೆ ಅಡ್ಡಿಪಡಿಸುವಿಕೆಯೊಂದಿಗೆ ತಂಗಾಳಿ ಮತ್ತು ಮೋಡ ಕವಿದ ವಾತಾವರಣ ಇರಲಿದೆಯಂತೆ.

ಒಟ್ಟಾರೆಯಾಗಿ ನಿರೀಕ್ಷೆಯಂತೆ ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲಿ ಲಘು ಮಳೆಯಾಗಲಿದೆ. ಹೀಗಾಗಿ ಪಂದ್ಯಕ್ಕೆ ವರುಣ ಅಡ್ಡಿ ಪಡಿಸುವುದು ಖಚಿತ. ಸರಾಸರಿ ತಾಪಮಾನವು ಐದು ದಿನಗಳಲ್ಲಿ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ವೆದರ್.ಕಾಮ್ ಹೇಳಿದೆ.

ಪಿಚ್ ಹೇಗಿದೆ?:

ನಾಟಿಂಗ್‍ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ತಂಡ ಉತ್ತಮ ರನ್ ಕಲೆ ಹಾಕುವ ಸಾಧ್ಯತೆಯಿದೆ. ಹೆಚ್ಚಾಗಿ ವೇಗದ ಬೌಲರ್‌ಗಳಿಗೆ ಈ ಪಿಚ್ ಅನುಕೂಲಕರವಾಗಲಿದ್ದು, 3 ದಿನಗಳು ಕಳೆದ ಬಳಿಕ ಸ್ಪಿನ್ ಬೌಲರ್‌ಗಳಿಗೂ ಈ ಟ್ರೆಂಡ್ ಬ್ರಿಡ್ಜ್ ಪಿಚ್ ಸಹಕಾರಿಯಾಗಲಿದೆ.

ಮೊದಲ ಟೆಸ್ಟ್​ಗೆ ಭಾರತದ ಸಂಭಾವ್ಯ ತಂಡ:

ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯಾ ರಹಾನೆ (ಉಪನಾಯಕ), ರಿಷಬ್ ಪಂತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದುಲ್ ಠಾಕೂರ್/ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ

ಮೊದಲ ಟೆಸ್ಟ್​ಗೆ ಇಂಗ್ಲೆಂಡ್​ನ ಸಂಭಾವ್ಯ ತಂಡ:

ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಜಾಕ್ ಕ್ರಾಲಿ, ಜೋ ರೂಟ್ (ನಾಯಕ), ಡೇನಿಯಲ್ ಲಾರೆನ್ಸ್/ ಜಾಕ್ ಲೀಚ್, ಜಾನಿ ಬೇರ್​ಸ್ಟೋ (ವಿಕೆಟ್ ಕೀಪರ್), ಆಲಿ ಪೋಪ್/ಜಾಕ್ ಲೀಚ್, ಆಲಿ ರಾಬಿನ್​ಸನ್, ಸ್ಟುವರ್ಟ್ ಬ್ರಾಡ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್.

India vs England: ಇಂದಿನಿಂದ ಮೊದಲ ಟೆಸ್ಟ್: ಹೊಸ ದಾಖಲೆ ಬರೆಯಲು ಸಜ್ಜಾದ ಟೀಮ್ ಇಂಡಿಯಾದ 7 ಆಟಗಾರರು

IND vs ENG: ಟೆಸ್ಟ್​​ ಸರಣಿ ಆರಂಭಕ್ಕೂ ಮುನ್ನ ಕೊಹ್ಲಿ ಪತ್ರಿಕಾಗೋಷ್ಠಿ; ಭಾರತದ ಪ್ಲೇಯಿಂಗ್ ಇಲೆವೆನ್ ಬಗ್ಗೆ ವಿರಾಟ್ ಹೇಳಿದ್ದೇನು?

(India vs England Test Series 2021 Nottingham Weather Today Day 1 Probable Playing XIs Pitch Report)

Follow us on

Most Read Stories

Click on your DTH Provider to Add TV9 Kannada