India vs England: ಇಂದಿನಿಂದ ಮೊದಲ ಟೆಸ್ಟ್: ಹೊಸ ದಾಖಲೆ ಬರೆಯಲು ಸಜ್ಜಾದ ಟೀಮ್ ಇಂಡಿಯಾದ 7 ಆಟಗಾರರು

ಟೀಮ್ ಇಂಡಿಯಾದ ಕೆಲವು ಆಟಗಾರರು ಈ ಸರಣಿಯಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿ ನಿಂತಿದ್ದಾರೆ. ಆ ಪ್ಲೇಯರ್ಸ್ ಯಾರು, ಏನು ಸಾಧನೆ ಎಂಬುದನ್ನು ನೋಡೋಣ…

India vs England: ಇಂದಿನಿಂದ ಮೊದಲ ಟೆಸ್ಟ್: ಹೊಸ ದಾಖಲೆ ಬರೆಯಲು ಸಜ್ಜಾದ ಟೀಮ್ ಇಂಡಿಯಾದ 7 ಆಟಗಾರರು
Team India
Follow us
| Updated By: Vinay Bhat

Updated on: Aug 04, 2021 | 8:59 AM

ಆಂಗ್ಲರ ನಾಡಿನಲ್ಲಿ ಬೀಡುಬಿಟ್ಟಿರುವ ಭಾರತ ಕ್ರಿಕೆಟ್ ತಂಡ ಇಂದಿನಿಂದ ಇಂಗ್ಲೆಂಡ್ ವಿರುದ್ಧ (India vs England) ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆರಂಭಿಸಲಿದೆ. ಈ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೂ (ICC World Test Championship) ಚಾಲನೆ ಸಿಗಲಿದೆ. ಟೀಮ್ ಇಂಡಿಯಾಕ್ಕೆ ಈ ಸರಣಿ ಅತ್ಯಂತ ಮಹತ್ವದ್ದು. ಯಾಕಂದ್ರೆ ಇಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ್ದು ಹಾಗೂ ಭಾರತದ ಗೆಲುವಿನ ಪ್ರಶ್ನೆಯೆದ್ದಿದೆ. ಅಲ್ಲದೆ ಟೀಮ್ ಇಂಡಿಯಾದ ಹಲವು ಆಟಗಾರರು ಇಂಜುರಿಗೆ ತುತ್ತಾಗಿದ್ದರೆ, ಇನ್ನೂ ಕೆಲವರು ಫಾರ್ಮ್ ಕಳೆದುಕೊಂಡಿದ್ದಾರೆ. ಹೀಗಾಗಿ ಇದು ಭಾರತ ಹಾಗೂ ಕೊಹ್ಲಿಗೆ ದೊಡ್ಡ ಅಗ್ನಿಪರೀಕ್ಷೆಯಾಗಿದೆ.

ಇದರ ನಡುವೆ ಟೀಮ್ ಇಂಡಿಯಾದ ಕೆಲವು ಆಟಗಾರರು ಈ ಸರಣಿಯಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿ ನಿಂತಿದ್ದಾರೆ. ಆ ಪ್ಲೇಯರ್ಸ್ ಯಾರು, ಏನು ಸಾಧನೆ ಎಂಬುದನ್ನು ನೋಡೋಣ…

ಆರ್. ಅಶ್ವಿನ್: ವಿದೇಶಿ ಪಿಚ್​ನಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶನ ನೀಡುವ ಟೀಮ್ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸದ್ಯ 413 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಸರಣಿಯಲ್ಲಿ 5 ವಿಕೆಟ್‌ ಲಭ್ಯವಾದರೆ 3ನೇ ಸ್ಥಾನಕ್ಕೇರಿ ಟರ್ಬನೇಟರ್‌ ಖ್ಯಾತಿಯ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ (417) ಅವರನ್ನು ಹಿಂದಿಕ್ಕಲಿದ್ದಾರೆ. ಈ ಪಟ್ಟಿಯಲ್ಲಿ ಅನಿಲ್‌ ಕುಂಬ್ಳೆ (619) ಮತ್ತು ಕಪಿಲ್‌ ದೇವ್‌ (434) ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಇದರ ಜೊತೆಗೆ ಇಂಗ್ಲೆಂಡ್ ವಿರುದ್ಧ 100 ವಿಕೆಟ್ ಪಡೆದ ಮೊದಲ ಭಾರತೀಯನಾಗಲು ಅಶ್ವಿನ್​ಗೆ 12 ವಿಕೆಟ್​​ಗಳ ಅಗತ್ಯವಿದೆ.

ಮೊಹಮ್ಮದ್ ಶಮಿ: ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್​ನಲ್ಲಿ ವಿಶೇಷ ಸಾಧನೆ ಮಾಡಲು ಕೆಲವೇ ಕೆಲವು ಹೆಜ್ಜೆ ದೂರದಲ್ಲಿದ್ದಾರೆ. ಟೀಂ ಇಂಡಿಯಾ ಪರ 51 ಟೆಸ್ಟ್ ಪಂದ್ಯಗಳನ್ನು ಆಡಿರುವ ಶಮಿ 184 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶಮಿ ಒಟ್ಟು 16 ವಿಕೆಟ್ ಕಬಳಿಸಿದರೆ ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಪಡೆದ ವಿಶೇಷ ಸಾಧನೆ ಮಾಡಲಿದ್ದಾರೆ.

ವಿರಾಟ್ ಕೊಹ್ಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೂ ಈ ಸರಣಿ ಮಹತ್ತರವಾಗಿದ್ದು ಹಲವು ಸಾಧನೆಗಳನ್ನು ಮೆಟ್ಟಿ ನಿಲ್ಲಲು ಕಾತರರಾಗಿದ್ದಾರೆ. ಕೊಹ್ಲಿ ಈ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 453 ರನ್‍ಗಳನ್ನು ಗಳಿಸಿದರೆ 8 ಸಾವಿರ ಮೈಲುಗಲ್ಲು ಮುಟ್ಟುವ ಅವಕಾಶವಿದೆ. ಅಂತೆಯೇ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 70 ಶತಕ ಬಾರಿಸಿದ್ದು, ಅವರ ಕೊನೆಯ ಟೆಸ್ಟ್ ಶತಕವು 2019 ರಲ್ಲಿ ಬಾಂಗ್ಲಾದೇಶದ ವಿರುದ್ಧವಾಗಿತ್ತು. ಹಾಲಿ ಸರಣಿಯಲ್ಲಿ ಒಂದೇ ಒಂದು ಶತಕ ಸಿಡಿಸಿದರೂ ಕೊಹ್ಲಿ ಆಸಿಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ 70 ಶತಕಗಳ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಮತ್ತು ಅತೀ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನ ಅಂದರೆ ಎರಡನೇ ಸ್ಥಾನಕ್ಕೇರಲಿದ್ದಾರೆ.

ಇದಿಷ್ಟೇ ಅಲ್ಲದೆ ಕೊಹ್ಲಿ ಇಂಗ್ಲೆಂಡ್ ವಿರುದ್ಧ 23 ಟೆಸ್ಟ್ ಗಳಲ್ಲಿ 1742 ರನ್ ಗಳಿಸಿದ್ದು, ಇನ್ನೂ 258 ರನ್ ಗಳನ್ನು ಗಳಿಸಿದರೆ ಇಂಗ್ಲೆಂಡ್ ವಿರುದ್ಧ ಅವರ ರನ್ ಗಳಿಕೆ 2000 ರನ್‌ಗಳಿಗೇರುತ್ತದೆ. ಇನ್ನೂ ಈ ವರೆಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ 90 ಕ್ಯಾಚ್ ಗಳನ್ನು ಪಡೆದಿದ್ದು, ಈ ಸರಣಿಯಲ್ಲಿ ಇನ್ನು 10 ಕ್ಯಾಚ್ ಗಳನ್ನು ಪಡೆದರೆ, ಕ್ಯಾಚ್ ಗಳಲ್ಲಿಯೂ ಕೊಹ್ಲಿ ಶತಕ ಬಾರಿಸಲಿದ್ದಾರೆ.

ಅಜಿಂಕ್ಯಾ ರಹಾನೆ: ಟೀಮ್ ಇಂಡಿಯಾ ಉಪನಾಯಕ ಅಜಿಂಕ್ಯಾ ರಹಾನೆ ಈವರೆಗೆ ಒಟ್ಟು 74 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 4647 ರನ್ ಗಳಿಸಿದ್ದಾರೆ. ಇನ್ನು ಕೇವಲ 353 ರನ್ ಗಳಿಸಿದರೆ ಅವರ ರನ್ ಗಳಿಕೆ 5000ಕ್ಕೇರಲಿದೆ. ಅಂತೆಯೇ ರಹಾನೆ ಕೂಡ 96 ಕ್ಯಾಚ್ ಗಳನ್ನು ಪಡೆದಿದ್ದು, ಈ ಸರಣಿಯಲ್ಲಿ 4 ಕ್ಯಾಚ್ ಪಡೆದರೆ ಅವರೂ ಕೂಡ ಕ್ಯಾಚ್ ಗಳ ಶತಕ ಸಿಡಿಸುವ ಸಾಧ್ಯತೆ ಇದೆ.

ರೋಹಿತ್ ಶರ್ಮಾ: ಟೆಸ್ಟ್​ ಕ್ರಿಕೆಟ್​ನಲ್ಲೂ ಯಶಸ್ಸು ಸಾಧಿಸುತ್ತಿರುವ ರೋಹಿತ್ ಶರ್ಮಾ 2679 ರನ್ ಗಳಿಸಿದ್ದು, ಅವರು ಈ ಸರಣಿಯಲ್ಲಿ 321ರನ್ ಗಳಿಸಿದರೆ ಅವರ ರನ್ ಗಳಿಗೆ 3 ಸಾವಿರಕ್ಕೇರಲಿದೆ. ರವೀಂದ್ರ ಜಡೇಜಾ 15 ರನ್ ಗಳಿಸಿದರೆ 2000 ಟೆಸ್ಟ್ ರನ್ ಪೂರೈಸಿದಂತಾಗುತ್ತದೆ.

ಜಸ್​ಪ್ರೀತ್ ಬುಮ್ರಾ: ಯಾರ್ಕರ್ ಕಿಂಗ್ ಜಸ್​ಪ್ರೀತ್ ಬುಮ್ರಾ 83 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದು, ಅವರು ಈ ಸರಣಿಯಲ್ಲಿ 17 ವಿಕೆಟ್ ಪಡೆದರೆ ಒಟ್ಟು ವಿಕೆಟ್​ಗಳ ಸಂಖ್ಯೆ 100ಕ್ಕೇರಲಿದೆ. ಬುಮ್ರಾ ಈ ವರೆಗೂ 20 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅವರು ಇಂಗ್ಲೆಂಡ್ ಸರಣಿಯಲ್ಲಿ 17 ವಿಕೆಟ್ ಗಳಿಸಿದ್ದೇ ಆದರೆ ಬುಮ್ರಾ ಭಾರತದ ಪರ ವೇಗವಾಗಿ 100 ಟೆಸ್ಟ್ ವಿಕೆಟ್ ಗಳಿಸಿದ ಬೌಲರ್ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

Lovlina Borgohain: ಊರಿನ ಭವಿಷ್ಯ ಬದಲಿಸಿದ ಆ ಒಂದು ಗೆಲುವು: ದಶಕಗಳಿಂದ ಅಭಿವೃದ್ದಿ ಕಾಣದ ಲವ್ಲಿನಾ ಹಳ್ಳಿಗೆ ಹೊಸ ರಸ್ತೆ ನಿರ್ಮಾಣ

ಸ್ಟೋಕ್ಸ್ ಅವರಂತೆ ಬೇರೆ ಆಟಗಾರರು ಸಹ ಬಯೊ-ಬಬಲ್ ಬದುಕಿನಿಂದ ಬೇಸತ್ತು ಕ್ರಿಕೆಟ್​ನಿಂದ ಬ್ರೇಕ್ ತೆಗೆದುಕೊಳ್ಳಬಹುದು: ವಿರಾಟ್ ಕೊಹ್ಲಿ

(India vs England 1st Test 7 players of Team India ready to break new records in cricket)

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ