Lovlina Borgohain: ಊರಿನ ಭವಿಷ್ಯ ಬದಲಿಸಿದ ಆ ಒಂದು ಗೆಲುವು: ದಶಕಗಳಿಂದ ಅಭಿವೃದ್ದಿ ಕಾಣದ ಲವ್ಲಿನಾ ಹಳ್ಳಿಗೆ ಹೊಸ ರಸ್ತೆ ನಿರ್ಮಾಣ

ಟೋಕಿಯೋ ಒಲಂಪಿಕ್ಸ್‌ ಕ್ರೀಡಾ ಕೂಟದ ಮಹಿಳಾ ಬಾಕ್ಸಿಂಗ್​​ನಲ್ಲಿ ವಾಲ್ಟರ್​ ಬೆಲ್ಟ್​​​ 64 ರಿಂದ 69 ಕೆಜಿ ವಿಭಾಗದಲ್ಲಿ ನಡೆದ ಕ್ವಾರ್ಟರ್​ಫೈನಲ್​ ಕಾದಾಟದಲ್ಲಿ ಚೈನೀಸ್ ತೈಪೆಯ ಮಾಜಿ ಚಾಂಪಿಯನ್​ ನಿಯೆನ್​ ಚಿನ್ ಚೆನ್ ಅವರನ್ನು ಲವ್ಲಿನಾ ಬೊರ್ಗೊಹೈನ್​ ಅವರು ಸೋಲಿಸಿ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿದ್ದರು.

Lovlina Borgohain: ಊರಿನ ಭವಿಷ್ಯ ಬದಲಿಸಿದ ಆ ಒಂದು ಗೆಲುವು: ದಶಕಗಳಿಂದ ಅಭಿವೃದ್ದಿ ಕಾಣದ ಲವ್ಲಿನಾ ಹಳ್ಳಿಗೆ ಹೊಸ ರಸ್ತೆ ನಿರ್ಮಾಣ
Lovlina Borgohain
Follow us
| Updated By: Vinay Bhat

Updated on:Aug 04, 2021 | 7:49 AM

ಟೋಕಿಯೋ ಒಲಿಂಪಿಕ್ಸ್​ನಲ್ಲಿ (Tokyo Olympics) ಭಾರತದ ಯುವ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ (Lovlina Borgohain) ಅವರು ಮಾಜಿ ವಿಶ್ವ ಚಾಂಪಿಯನ್ ಚೀನಾನ ತೈಪೆಯ ಚಿನ್ ಚೆನ್ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಈ ಮೂಲಕ ಭಾರತಕ್ಕೆ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದು, ಇಂದು ಸೆಮೀಸ್ ಪಂದ್ಯ ನಡೆಯಲಿದೆ. ಲವ್ಲಿನಾ ಬೊರ್ಗೊಹೈನ್ ಈ ಸಾಧನೆ ಬೆನ್ನಲ್ಲೇ ಅಸ್ಸಾಂ ಸರ್ಕಾರ iವರ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ.

ಲವ್ಲಿನಾ ಅಸ್ಸಾಂನ ಗೋಲಘಾಟ್ ಜಿಲ್ಲೆಯ ಬಾರೋ ಮುಖಿಯಾದ ಗ್ರಾಮಕ್ಕೆ ಸೇರಿದವರು. ಇದು ಗುವಾಹಟಿಯಿಂದ ಪೂರ್ವಕ್ಕೆ 320 ಕಿಮೀ ದೂರದಲ್ಲಿದೆ. ಈ ಗ್ರಾಮವಾದ ಬಾರೋ ಮುಖಿಯಾದಲ್ಲಿ 2,000 ನಿವಾಸಿಗಳಿದ್ದಾರೆ. ಆದರೆ, ಈ ಗ್ರಾಮದಲ್ಲಿ ಯಾವುದೇ ಮೂಲಭೂತ ಸೌಕರ್ಯ ಇಲ್ಲ. ಯೋಗ್ಯವಾದ ಕಾಂಕ್ರೀಟ್ ರಸ್ತೆಯಾಗಲೀ, ನೀರು ಸರಬರಾಜು ವ್ಯವಸ್ಥೆಯಾಗಲಿ ಇಲ್ಲ. ಎಷ್ಟು ಬಾರಿ ಮನವಿ ಮಾಡಿದರೂ ಸರ್ಕಾರದ ನಿರ್ಲಕ್ಷ್ಯದಿಂದ ಕೆಲಸಗಳು ಆಗುತ್ತಿಲ್ಲ. ಇದಕ್ಕಾಗಿ ತಾನು ಭಾರತಕ್ಕೆ ಪದಕ ಗೆಲ್ಲುವ ಮೂಲಕ ತನ್ನ ಗ್ರಾಮಕ್ಕೆ ಮೂಲಭೂತ ಸೌಕರ್ಯ ತರಬೇಕು ಎಂಬುದು ಲವ್ಲಿನಾ ಆಸೆ.

ಅದರಂತೆ ಇದೀಗ ಜಿಲ್ಲಾಡಳಿತ ಈ ರಸ್ತೆಯ ದುರಸ್ತಿಗೆ ಮುಂದಾಗಿದೆ. ಇದುವರೆಗೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಆ ರಸ್ತೆಗೆ ಲವ್ಲಿನಾ ಕಾರಣಕ್ಕೆ ಮುಕ್ತಿಯ ಸಿಕ್ಕಿದೆ. ಲವ್ಲಿನಾ ಪದಕದೊಂದಿಗೆ ಹಳ್ಳಿಗೆ ವಾಪಸಾಗುವಾಗ ಈ ಕಳಪೆ ರಸ್ತೆಯೇ ಸುದ್ದಿಗೆ ಗ್ರಾಸವಾಗಬಾರದು ಎನ್ನುವುದು ಇಲ್ಲಿನ ಕಳಕಳಿ. ಒಟ್ಟು 3.5 ಕಿ.ಮೀ. ದೂರದ ಈ ರಸ್ತೆಯನ್ನು ನಿರ್ಮಿಸಲು ಸ್ಥಳೀಯ ಶಾಸಕ ಬಿಸ್ವಜಿತ್‌ ಫ‌ುಕನ್‌ ಖುದ್ದು ಆಸಕ್ತಿ ವಹಿಸಿದ್ದಾರೆ.

ಅಸ್ಸಾಂ ಲೋಕೋಪಯೋಗಿ ಇಲಾಖೆಯಿಂದ ಈ ರಸ್ತೆಗೆ ಡಾಮರೀಕರಣದ ಮೊದಲ ಹಂತದ ಕಾಮಗಾರಿ ನಡೆಯುತ್ತಿದೆ. ಸ್ಥಳೀಯ ಶಾಸಕ ಬಿಸ್ವಜಿತ್ ಇದರ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ. ‘ಇದು ಲವ್ಲಿನಾಗೆ ನಾವು ನೀಡುತ್ತಿರುವ ಉಡುಗೊರೆ. ಅವಳು ಚಿನ್ನದ ಪದಕದೊಂದಿಗೆ ತವರಿಗೆ ಮರಳಲಿ ಎಂದು ಅಸ್ಸಾಂ ಮತ್ತು ದೇಶದ ಜನತೆ ಈಗ ಪ್ರಾರ್ಥಿಸುತ್ತಿದ್ದಾರೆ’ ಎಂದು ಬಿಸ್ವಜಿತ್ ಹೇಳಿದ್ದಾರೆ.

ಟೋಕಿಯೋ ಒಲಂಪಿಕ್ಸ್‌ ಕ್ರೀಡಾ ಕೂಟದ ಮಹಿಳಾ ಬಾಕ್ಸಿಂಗ್​​ನಲ್ಲಿ ವಾಲ್ಟರ್​ ಬೆಲ್ಟ್​​​ 64 ರಿಂದ 69 ಕೆಜಿ ವಿಭಾಗದಲ್ಲಿ ನಡೆದ ಕ್ವಾರ್ಟರ್​ಫೈನಲ್​ ಕಾದಾಟದಲ್ಲಿ ಚೈನೀಸ್ ತೈಪೆಯ ಮಾಜಿ ಚಾಂಪಿಯನ್​ ನಿಯೆನ್​ ಚಿನ್ ಚೆನ್ ಅವರನ್ನು ಲವ್ಲಿನಾ ಬೊರ್ಗೊಹೈನ್​ ಅವರು ಸೋಲಿಸಿ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿದ್ದರು.

ಮೊದಲಿಗೆ ಮುಯಿತೈ ಪಟುವಾಗಿದ್ದ 23 ವರ್ಷದ ಲವ್ಲಿನಾ ಇದೀಗ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೂರನೇ ಬಾಕ್ಸರ್ ಎನಿಸಿದ್ದಾರೆ. ವಿಜೇಂದರ್ ಸಿಂಗ್ (2008) ಮತ್ತು ಮೇರಿ ಕೋಮ್ (2012) ಮೊದಲಿಬ್ಬರು. ಲವ್ಲಿನಾ ಬುಧವಾರ ಉಪಾಂತ್ಯದ ಹೋರಾಟ ನಡೆಸಲಿದ್ದು, ಗೆದ್ದರೆ ಕನಿಷ್ಠ ಬೆಳ್ಳಿ ಖಚಿತವಾಗಲಿದೆ. ಈ ಮೂಲಕ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆಲುವಿನ ಸನಿಹಕ್ಕೇರಿದ ಮೊದಲ ಭಾರತೀಯರೆನಿಸಲಿದ್ದಾರೆ. ಸೋತರೆ ಕಂಚಿನ ಪದಕಕ್ಕೆ ತೃಪ್ತಿಪಡಲಿದ್ದಾರೆ.

Tokyo Olympic: ಜಾವೆಲಿನ್ ಥ್ರೋನಲ್ಲಿ ಫೈನಲ್​ಗೆ ಲಗ್ಗೆಯಿಟ್ಟ ಭಾರತದ ನೀರಜ್ ಚೋಪ್ರಾ

Tokyo Olympics: ಕಂಚಿನ ಪದಕಕ್ಕಾಗಿ ಜರ್ಮನಿಯನ್ನು ಎದುರಿಸಲಿದೆ ಭಾರತದ ಹಾಕಿ ತಂಡ; ಪಂದ್ಯ ಆರಂಭ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

(Tokyo Olympics Lovlina Borgohain medal-winning Olympics campaign gets her native village in Assam a new road)

Published On - 7:48 am, Wed, 4 August 21