‘ಶಾರುಖ್​ ಖಾನ್​ರದ್ದು ಅತಿ ಕೆಟ್ಟ ಮತ್ತು ಸಹಿಸಲಾಗದ ನಟನೆ’; ಪತ್ನಿ ಗೌರಿ ಹೀಗೆ ಹೇಳಿದ್ದು ಯಾಕೆ?

‘ಶಾರುಖ್​ ಖಾನ್​ರದ್ದು ಅತಿ ಕೆಟ್ಟ ಮತ್ತು ಸಹಿಸಲಾಗದ ನಟನೆ’; ಪತ್ನಿ ಗೌರಿ ಹೀಗೆ ಹೇಳಿದ್ದು ಯಾಕೆ?
‘ಶಾರುಖ್​ ಖಾನ್​ರದ್ದು ಅತಿ ಕೆಟ್ಟ ಮತ್ತು ಸಹಿಸಲಾಗದ ನಟನೆ’; ಪತ್ನಿ ಗೌರಿ ಹೀಗೆ ಹೇಳಿದ್ದು ಯಾಕೆ?

Shah Rukh Khan: ಶಾರುಖ್​ ಖಾನ್​ ಅವರನ್ನು ಅಭಿಮಾನಿಗಳು ಹೊಗಳುತ್ತಾರೆ. ಅವರ ನಟನೆ ಬಗ್ಗೆ ನೆಗೆಟಿವ್​ ಕಮೆಂಟ್​ ಮಾಡಲು ಬಹುತೇಕರು ಹಿಂಜರಿಯುತ್ತಾರೆ. ಆದರೆ ಅವರ ಪತ್ನಿ ಗೌರಿ ಖಾನ್​ ಹಾಗಲ್ಲ.

TV9kannada Web Team

| Edited By: Apurva Kumar Balegere

Jul 27, 2021 | 10:38 AM

ನಟ ಶಾರುಖ್​ ಖಾನ್​ (Shah Rukh Khan) ಅವರಿಗೆ ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕಷ್ಟಪಟ್ಟು ಬಾಲಿವುಡ್​ನಲ್ಲಿ ನೆಲೆ ಕಂಡುಕೊಂಡ ಅವರು ಉತ್ತಮ ನಟ ಎಂಬುದರಲ್ಲಿ ಅನುಮಾನವೇ ಇಲ್ಲ. ಹಲವು ಸಿನಿಮಾಗಳಲ್ಲಿ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಅದೃಷ್ಟ ಕೈ ಹಿಡಿಯುತ್ತಿಲ್ಲ ಎಂಬುದು ನಿಜ. ಮಾಡಿದ ಎಲ್ಲ ಸಿನಿಮಾಗಳೂ ಸಾಲು ಸಾಲಾಗಿ ಸೋಲುತ್ತಿವೆ. ಈ ನಡುವೆ ಶಾರುಖ್​ ಖಾನ್ ಪತ್ನಿ ಗೌರಿ ಖಾನ್​ ಹೇಳಿದ ಒಂದು ಮಾತು ಈಗ ಮತ್ತೆ ಚರ್ಚೆ ಆಗುತ್ತಿದೆ. ಈ ಹಿಂದೆ ‘ಕಾಫಿ ವಿಥ್​ ಕರಣ್​’ ಚಾಟ್​ ಶೋನಲ್ಲಿ ಭಾಗವಹಿಸಿದ್ದ ವೇಳೆ ಗೌರಿ ಖಾನ್​ (Gauri Khan) ಅವರು ತಮ್ಮ ಗಂಡನ ನಟನೆ ಬಗ್ಗೆ ಕಟುವಾಗಿ ವಿಮರ್ಶೆ ಮಾಡಿದ್ದರು.

ಶಾರುಖ್​ ಖಾನ್​ ಸ್ಟಾರ್​ ನಟ ಎಂಬ ಕಾರಣಕ್ಕೆ ಅವರ ನಟನೆಯ ಬಗ್ಗೆ ನೆಗೆಟಿವ್​ ಅಂಶಗಳನ್ನು ಹೇಳಲು ಬಹುತೇಕರು ಹಿಂಜರಿಯಬಹುದು. ಆದರೆ ಅವರ ಪತ್ನಿ ಗೌರಿ ಖಾನ್​ಗೆ ಈ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲ. ಮೊದಲಿನಿಂದಲೂ ಅವರು ತಮ್ಮ ಪ್ರಾಮಾಣಿಕ ವಿಮರ್ಶೆಯನ್ನು ತಿಳಿಸುತ್ತ ಬಂದಿದ್ದಾರಂತೆ. ‘ನಾನು ಅತಿಯಾಗಿ ವಿಮರ್ಶೆ ಮಾಡುತ್ತೇನೆ ಎಂದು ನನಗೆ ಅನಿಸುವುದಿಲ್ಲ. ಒಂದು ದೃಶ್ಯದಲ್ಲಿ ಅವರು ಕೆಟ್ಟದಾಗಿ ನಟಿಸಿದ್ದರೆ ಅವರನ್ನು ಹೊಗಳುವ ಅವಶ್ಯಕತೆ ಇಲ್ಲ. ನಟನೆ ಚೆನ್ನಾಗಿ ಇಲ್ಲದಿದ್ದರೆ ಅದನ್ನು ಅವರು ಒಪ್ಪಿಕೊಳ್ಳಬೇಕು. ಅವರು ಓವರ್​ ಆ್ಯಕ್ಟಿಂಗ್​ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಾದಾಗ ನಾನು ಅದನ್ನು ಅವರಿಗೆ ಹೇಳಲೇಬೇಕಲ್ಲವೇ?’ ಎಂದು ಕರಣ್​ ಜೋಹರ್​ ಜೊತೆ ಗೌರಿ ಮಾತನಾಡಿದ್ದರು.

2002ರಲ್ಲಿ ಶಾರುಖ್​ ನಟನೆಯ ‘ಶಕ್ತಿ: ದ ಪವರ್​’ ಸಿನಿಮಾ ಬಿಡುಗಡೆ ಆಗಿತ್ತು. ಅದರಲ್ಲಿ ಅವರ ಅಭಿನಯ ಕಳಪೆ ಆಗಿತ್ತು ಎಂಬುದು ಗೌರಿ ಖಾನ್​ ಅಭಿಪ್ರಾಯ. ‘ಹೌದು, ಅದು ನಿಜಕ್ಕೂ ಸಹಿಸಲು ಸಾಧ್ಯವಿರಲಿಲ್ಲ. ಅದು ಅವರ ಅತಿ ಕೆಟ್ಟ ನಟನೆ. ಈ ವಿಚಾರಗಳನ್ನು ಬೇರೆ ಯಾರೂ ಹೇಳುವುದಿಲ್ಲ. ಅದು ಅವರಿಗೂ ಗೊತ್ತು. ಹಾಗಾಗಿ ಅವರು ಒಪ್ಪಿಕೊಳ್ಳಲೇಬೇಕು’ ಎಂದು ಗೌರಿ ಹೇಳಿದ್ದರು.

ಸದ್ಯ ‘ಪಠಾಣ್​’ ಸಿನಿಮಾ ಕೆಲಸಗಳಲ್ಲಿ ಶಾರುಖ್​ ಖಾನ್​ ಬ್ಯುಸಿ ಆಗಿದ್ದಾರೆ. ‘ಜೀರೋ’ ಸಿನಿಮಾದ ಸೋಲಿನ ಬಳಿಕ ಅವರು ತುಂಬ ಆಲೋಚಿಸಿ ಈ ಪ್ರಾಜೆಕ್ಟ್​ ಕೈಗೆತ್ತಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ‘ಪಠಾಣ್​’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ:

ಶಾರುಖ್​ ಪುತ್ರಿ ಸುಹಾನಾ ಖಾನ್​ ಹಾಟ್​ ಫೋಟೋಶೂಟ್ ವೈರಲ್​; ಅಪ್ಪನ ಕಮೆಂಟ್​ ಏನು?​

‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್​ಫ್ರೆಂಡ್​ ಬಗ್ಗೆ ಶಾರುಖ್​ ಖಡಕ್​ ವಾರ್ನಿಂಗ್​

Follow us on

Related Stories

Most Read Stories

Click on your DTH Provider to Add TV9 Kannada