64ರ ಪ್ರಾಯದ ಅನಿಲ್​ ಕಪೂರ್​ ಈಗಲೂ ಬಾಡಿ ಫಿಟ್​ ಆಗಿ ಇಟ್ಟುಕೊಂಡಿರುವುದು ಹೇಗೆ? ಇಲ್ಲಿದೆ ಉತ್ತರ

Anil Kapoor: ಅನಿಲ್​ ಕಪೂರ್​ ಅವರು ಲಾಕ್​ಡೌನ್​ನ ಕಠಿಣ ಸಮಯವನ್ನು ವರ್ಕೌಟ್​ಗಾಗಿ ಮೀಸಲಿರಿಸಿದ್ದಾರೆ. ಕಳೆದ ಹಲವು ದಿನಗಳಿಂದ ಕಟ್ಟುನಿಟ್ಟಾಗಿ ಕಸರತ್ತು ಮಾಡಿದ ಪರಿಣಾಮವಾಗಿ ಅವರ ದೇಹ ಕಟ್ಟುಮಸ್ತಾಗಿದೆ.

64ರ ಪ್ರಾಯದ ಅನಿಲ್​ ಕಪೂರ್​ ಈಗಲೂ ಬಾಡಿ ಫಿಟ್​ ಆಗಿ ಇಟ್ಟುಕೊಂಡಿರುವುದು ಹೇಗೆ? ಇಲ್ಲಿದೆ ಉತ್ತರ
ಅನಿಲ್​ ಕಪೂರ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: May 24, 2021 | 4:45 PM

ಬಾಲಿವುಡ್​ ನಟ ಅನಿಲ್​ ಕಪೂರ್​ ಅವರು ಈಗಲೂ ತಮ್ಮ ಚಾರ್ಮ್​ ಉಳಿಸಿಕೊಂಡಿದ್ದಾರೆ. 1980ರ ಕಾಲದಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅವರಿಗೆ ಇಂದಿಗೂ ಅದೇ ಬೇಡಿಕೆ ಇದೆ. ಫಿಟ್ನೆಸ್​ ವಿಚಾರದಲ್ಲಿಯೂ ಅನಿಲ್​ ಕಪೂರ್​ ಅನೇಕರಿಗೆ ಮಾದರಿ ಆಗಿದ್ದಾರೆ. ಹದಿಹರೆಯದ ಯುವಕರೂ ನಾಚುವಂತೆ ಅವರು ತಮ್ಮ ದೇಹವನ್ನು ಫಿಟ್​ ಆಗಿ ಇಟ್ಟುಕೊಂಡಿದ್ದಾರೆ. ಹೊಸದಾಗಿ ಚಿತ್ರರಂಗಕ್ಕೆ ಕಾಲಿಡುವ ಯುವ ನಟನ ರೀತಿಯಲ್ಲಿ ಅನಿಲ್​ ಕಪೂರ್​ ಉತ್ಸಾಹ ಹೊಂದಿದ್ದಾರೆ. ತಮ್ಮ ಫಿಟ್ನಸ್​ ಸೀಕ್ರೆಟ್​ ಬಗ್ಗೆ ಅವರು ಇತ್ತೀಚೆಗೆ ಒಂದೇ ವಾಕ್ಯದಲ್ಲಿ ಹೇಳಿದ್ದಾರೆ.

ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿರುವುದರಿಂದ ದೇಶದೆಲ್ಲೆಡೆ ಲಾಕ್​ ಡೌನ್​ ಜಾರಿಗೊಳಿಸಲಾಗಿದೆ. ಮುಂಬೈನಲ್ಲೂ ಕಟ್ಟುನಿಟ್ಟಿನ ಲಾಕ್​ಡೌನ್​ ಪಾಲಿಸಲಾಗುತ್ತಿದೆ. ಹಾಗಾಗಿ ಎಲ್ಲ ಸಿನಿಮಾ, ಧಾರಾವಾಹಿ ಶೂಟಿಂಗ್​ ನಿಲ್ಲಿಸಲಾಗಿದೆ. ಪರಿಣಾಮವಾಗಿ ಸೆಲೆಬ್ರಿಟಿಗಳೆಲ್ಲ ಮನೆಯಲ್ಲೇ ಇದ್ದಾರೆ. ಅನಿಲ್​​ ಕಪೂರ್​ ಕೂಡ ಮನೆಯಲ್ಲಿ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ ಅವರು ಬಾಡಿ ಟ್ರಾನ್ಸ್​ಫಾರ್ಮೇಶನ್​ ಕೂಡ ಮಾಡಿಕೊಂಡಿದ್ದಾರೆ.

ಲಾಕ್​ಡೌನ್​ನ ಕಠಿಣ ಸಮಯವನ್ನು ಅವರು ವರ್ಕೌಟ್​ಗಾಗಿ ಮೀಸಲಿರಿಸಿದ್ದಾರೆ. ಕಳೆದ ಹಲವು ದಿನಗಳಿಂದ ಕಟ್ಟುನಿಟ್ಟಾಗಿ ಕಸರತ್ತು ಮಾಡಿದ ಪರಿಣಾಮವಾಗಿ ಬಾಡಿ ಕಟ್ಟುಮಸ್ತಾಗಿದೆ. ಆ ಫೋಟೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ‘ಲಾಕ್​ಡೌನ್ ಎಲ್ಲರಿಗೂ ಕಡ್ಡಾಯ. ಆದರೆ ಆ ಲಾಕ್​ಡೌನ್​ನಲ್ಲಿ ಏನು ಮಾಡಬೇಕು ಎಂಬುದು ಅವರವರ ಆಯ್ಕೆಗೆ ಬಿಟ್ಟ ವಿಚಾರ’ ಎಂದು ಆ ಫೋಟೋದ ಜೊತೆ ಅನಿಲ್​ ಕಪೂರ್​ ಕ್ಯಾಪ್ಷನ್​ ನೀಡಿದ್ದಾರೆ. ಈ ಪೋಸ್ಟ್​ಗೆ ಹಲವು ಸೆಲೆಬ್ರಿಟಿಗಳು ಕಮೆಂಟ್​ ಮಾಡಿದ್ದಾರೆ.

View this post on Instagram

A post shared by anilskapoor (@anilskapoor)

ನಟಿ ಶಿಲ್ಪಾ ಶೆಟ್ಟಿ ಈ ಫೋಟೋ ಕಂಡು ‘ವಾಹ್​’ ಎಂದು ಕಮೆಂಟ್​ ಮಾಡಿದ್ದಾರೆ. ನೀವೇ ನಮಗೆಲ್ಲ ಮಾದರಿ ಎಂದು ನಟಿ ನೀನಾ ಗುಪ್ತಾ ಹೇಳಿದ್ದಾರೆ. ಈ ವಯಸ್ಸಿನಲ್ಲೂ ಫಿಟ್ನೆಸ್​ ಬಗ್ಗೆ ಅನಿಲ್​ ಕಪೂರ್​ ಹೊಂದಿರುವ ಕಾಳಜಿಗೆ ಎಲ್ಲರೂ ಭೇಷ್​ ಎಂದಿದ್ದಾರೆ. ಈಗಲೂ ಚಿತ್ರರಂಗದಲ್ಲಿ ಅವರು ಸಕ್ರಿಯರಾಗಿದ್ದಾರೆ. ಕಳೆದ ವರ್ಷ ಲಾಕ್​ಡೌನ್​ ಸಂದರ್ಭದಲ್ಲಿ ಅವರ ‘ಎಕೆ ವರ್ಸಸ್​ ಎಕೆ’ ವೆಬ್​ ಸಿರೀಸ್​ ಬಿಡುಗಡೆ ಆಗಿತ್ತು. ‘ಜುಗ್​ ಜುಗ್​ ಜಿಯೋ’ ಸಿನಿಮಾದಲ್ಲೂ ಅನಿಲ್​ ಕಪೂರ್​ ನಟಿಸುತ್ತಿದ್ದಾರೆ.

ಇದನ್ನೂ ಓದಿ:‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್​ಫ್ರೆಂಡ್​ ಬಗ್ಗೆ ಶಾರುಖ್​ ಖಡಕ್​ ವಾರ್ನಿಂಗ್​ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ