Katrina Kaif: ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಎಂಗೇಜ್ಮೆಂಟ್ ಸುದ್ದಿಗೆ ಹೊಸ ಟ್ವಿಸ್ಟ್
Katrina Kaif Vicky Kaushal Engagement: ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಒಟ್ಟಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಿದೆ. ಇವರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದನ್ನು ಇಬ್ಬರೂ ಅಲ್ಲಗಳೆದಿದ್ದರು.
ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಸುತ್ತಾಟದ ವಿಚಾರ ಈ ಮೊದಲಿನಿಂದಲೂ ಚರ್ಚೆಯಲ್ಲಿದೆ. 2018ರಲ್ಲಿ ‘ಕಾಫಿ ವಿತ್ ಕರಣ್’ ಶೋನಲ್ಲಿ ಕತ್ರಿನಾ ಪಾಲ್ಗೊಂಡಿದ್ದರು. ಈ ವೇಳೆ ವಿಕ್ಕಿ ಜತೆ ತೆರೆ ಹಂಚಿಕೊಳ್ಳುವ ಆಸಕ್ತಿ ತೋರಿದ್ದರು. ಇದಾದ ನಂತರ ಅಂದರೆ, 2019ರಲ್ಲಿ ಇಬ್ಬರೂ ಮುಂಬೈನಲ್ಲಿ ಊಟಕ್ಕೆ ಒಟ್ಟಾಗಿ ಸೇರಿದ್ದರು. ಇದರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈಗ ಅವರ ಎಂಗೇಜ್ಮೆಂಟ್ ಬಗ್ಗೆ ಸುದ್ದಿ ಹರಿದಾಡಿತ್ತು. ಇದಕ್ಕೆ ಕತ್ರಿನಾ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಒಟ್ಟಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಿದೆ. ಇವರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದನ್ನು ಇಬ್ಬರೂ ಅಲ್ಲಗಳೆದಿದ್ದರು. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಆದರೆ, ನೆಟ್ಟಿಗರು ಸುಮ್ಮನೆ ಕೂತಿಲ್ಲ. ವಿಕ್ಕಿ ಹಾಗೂ ಕತ್ರಿನಾ ಸೈಲೆಂಟ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿಬಿಟ್ಟಿದ್ದರು. ಆದರೆ, ಇದರಲ್ಲಿ ಹುರುಳಿಲ್ಲ ಎಂದು ಕತ್ರಿನಾ ತಂಡ ಸ್ಪಷ್ಟಪಡಿಸಿದೆ. ಇದು ಒಂದು ವರ್ಗದ ಅಭಿಮಾನಿಗಳಿಗೆ ಖುಷಿ ನೀಡಿದರೆ, ಇನ್ನೊಂದಷ್ಟು ಜನರಿಗೆ ಬೇಸರ ತರಿಸಿದೆ.
ಕತ್ರಿನಾ-ವಿಕ್ಕಿ ಸಂಬಂಧದ ಬಗ್ಗೆ ಅನಿಲ್ ಕಪೂರ್ ಮಗ ಹರ್ಷವರ್ಧನ್ ಕಪೂರ್ ಮೌನ ಮುರಿದಿದ್ದರು. ಈ ಬಗ್ಗೆ ಮಾತನಾಡಿದ್ದ ಹರ್ಷವರ್ಧನ್, ‘ಕತ್ರಿನಾ-ವಿಕ್ಕಿ ಆಪ್ತರಾಗಿದ್ದಾರೆ. ಇಬ್ಬರೂ ಮದುವೆ ಆಗುವ ಆಲೋಚನೆಯಲ್ಲಿ ಕೂಡ ಇದ್ದಾರೆ. ಬಹುಶಃ ಈ ವಿಚಾರ ಹೇಳಿದ ನಂತರದಲ್ಲಿ ನಾನು ತೊಂದರೆಗೆ ಸಿಲುಕಬಹುದು’ ಎಂದಿದ್ದರು.
ಇದನ್ನೂ ಓದಿ:
ವಿಕ್ಕಿ ಕೌಶಲ್- ಕತ್ರಿನಾ ಸಂಬಂಧದ ಬಗ್ಗೆ ಬಾಯ್ಬಿಟ್ಟ ಕಪೂರ್ ಕುಟುಂಬದ ಕುಡಿ; ಶೀಘ್ರವೇ ಮದುವೆ?
ರಷ್ಯಾಗೆ ಹೊರಟ ಸಲ್ಮಾನ್ ಖಾನ್-ಕತ್ರಿನಾ ಕೈಫ್; ಏನಿದು ಸಮಾಚಾರ?
Published On - 7:20 am, Thu, 19 August 21