‘ಬೆಲ್ಬಾಟಂ’ ಚಿತ್ರ ಮಸ್ಟ್ ವಾಚ್ ಎಂದ ಟ್ವಿಂಕಲ್; ಹೆಂಡತಿ ಮಾತು ಕೇಳಿ ಪಾರ್ಕಿನಲ್ಲಿ ನಡೆದಷ್ಟೇ ಖುಷಿಯಾಗುತ್ತಿದೆ ಎಂದ ಅಕ್ಕಿ!
Bell Bottom: ಇಂದು ಬಿಡುಗಡೆಯಾದ ‘ಬೆಲ್ಬಾಟಂ’ ಚಿತ್ರಕ್ಕೆ ವಿಶೇಷ ಸರ್ಟಿಫಿಕೇಟ್ ಕೊಟ್ರು ಟ್ವಿಂಕಲ್; ಅಕ್ಕಿ ರಿಯಾಕ್ಷನ್ ಏನು?: ಕೊರೊನಾ ಎರಡನೇ ಅಲೆಯ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸ್ಟಾರ್ ಚಿತ್ರ ಬೆಲ್ಬಾಟಂ. ಈ ಕುರಿತು ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಚಿತ್ರ ನೋಡಿ ತಮ್ಮ ಮೊದಲ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಕೊರೊನಾ ನಿಯಮಾವಳಿಗಳ ನಡುವೆ ಬೆಲ್ಬಾಟಂ ಬಿಡುಗಡೆಯಾಗಬೇಕಾದ ಪರಿಸ್ಥಿಯನ್ನೂ ಅಕ್ಷಯ್ ವಿವರಿಸಿದ್ದಾರೆ.
ಕೊರೊನಾ ಎರಡನೇ ಅಲೆಯ ಪರಿಣಾಮಗಳಿಂದ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದಕ್ಕೆ ಮತ್ತಷ್ಟು ವೇಗ ನೀಡುವಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್(Akshay Kumar) ನಟನೆಯ ಬಹು ನಿರೀಕ್ಷಿತ ಬೆಲ್ಬಾಟಂ(Bell Bottom) ಚಿತ್ರ ಇಂದು ಬಿಡುಗಡೆಯಾಗಿದೆ. ಬಾಲಿವುಡ್ನ ಕೇಂದ್ರ ಸ್ಥಾನ ಮಹಾರಾಷ್ಟ್ರದಲ್ಲಿ ಚಿತ್ರಬಿಡುಗಡೆಗೆ ಅವಕಾಶವಿಲ್ಲದೇ ಇದ್ದರೂ ಚಿತ್ರತಂಡ ಬಹುದೊಡ್ಡ ರಿಸ್ಕ್ಗೆ ಕೈ ಹಾಕಿದೆ. ಪ್ರಸ್ತುತ ನಟ ಅಕ್ಷಯ್ ಕುಮಾರ್ ತಮ್ಮ ಪತ್ನಿ ಟ್ವಿಂಕಲ್ ಖನ್ನಾ(Twinkle Khanna) ಅವರೊಂದಿಗೆ ಲಂಡನ್ಗೆ ತೆರಳಿದ್ದು, ಅಲ್ಲಿ ಚಿತ್ರದ ಪ್ರೀಮಿಯರ್ನಲ್ಲಿ ಭಾಗವಹಿಸಿದ್ದಾರೆ.
‘ಬೆಲ್ಬಾಟಂ’ನ ಮೊದಲ ರೀವ್ಯೂ ಹಂಚಿಕೊಂಡಿರುವ ಟ್ವಿಂಕಲ್ ಖನ್ನಾ, ಈ ಚಿತ್ರ ಎಲ್ಲರೂ ನೋಡಲೇ ಬೇಕಾದ ಚಿತ್ರ ಎಂದು ಬರೆದುಕೊಂಡಿದ್ದಾರೆ. ನಟಿ, ಬರಹಗಾರ್ತಿ ಟ್ವಿಂಕಲ್ ತಮ್ಮ ಅಭಿಪ್ರಾಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಕ್ಷಯ್ ಹಾಗೂ ಟ್ವಿಂಕಲ್ ಪ್ರೀಮಿಯರ್ಗೆ ತೆರಳುತ್ತಿರುವ ಚಿತ್ರವನ್ನು ಹಂಚಿಕೊಂಡು, ಅದಕ್ಕೆ ಟ್ವಿಂಕಲ್ ಕ್ಯಾಪ್ಶನ್ ನೀಡಿದ್ದಾರೆ. ‘ನಾವೀಗ ಪಾರ್ಕ್ನಲ್ಲಿ ನಡೆಯುತ್ತಿದ್ದೇವೆ. ಆದರೆ ನಾವು ತೆರಳುತ್ತಿರುವುದು ಬೆಲ್ಬಾಟಂ ಪ್ರೀಮಿಯರ್ಗೆ. ಎಲ್ಲರೂ ನೋಡಲೇ ಬೇಕಾದ ಚಿತ್ರವಿದು’ ಎಂದು ಟ್ವಿಂಕಲ್ ಸರ್ಟಿಫಿಕೇಟ್ ನೀಡಿದ್ದಾರೆ. ಇದಕ್ಕೆ ನಟ ಅಕ್ಷಯ್ ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ‘ಟ್ವಿಂಕಲ್ ಬೆಲ್ಬಾಟಂ ಚಿತ್ರವನ್ನು ಮಸ್ಟ್ ವಾಚ್ ಅಂದಿದ್ದು ನೋಡಿ ಪಾರ್ಕಿನಲ್ಲಿ ನಡೆದಷ್ಟೇ ಖುಷಿಯಾಗುತ್ತಿದೆ. ಇದನ್ನು ಹೇಳಿದ್ದು ಅವಳೇ. ನಾನು ಹೇಳಿಲ್ಲ’ ಎಂದು ಕಣ್ಣು ಹೊಡೆಯುತ್ತಿರುವ ಎಮೋಜಿ ಹಂಚಿಕೊಂಡಿದ್ದಾರೆ. ಬೆಲ್ಬಾಟಂ ಚಿತ್ರಕ್ಕೆ ಈಗಾಗಲೇ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ.
ಟ್ವಿಂಕಲ್ ಖನ್ನಾ ಹಂಚಿಕೊಂಡಿರುವ ಪೋಸ್ಟ್:
View this post on Instagram
ಕೊರೊನಾ ಎರಡನೇ ಅಲೆಯ ನಂತರ ತೆರೆಕಾಣುತ್ತಿರುವ ಮೊದಲ ಸ್ಟಾರ್ ಚಿತ್ರ ಬೆಲ್ಬಾಟಂ:
ಕೊರೊನಾ ಎರಡನೇ ಅಲೆಯ ಪರಿಣಾಮಗಳು ಇನ್ನೂ ಕಡಿಮೆಯಾಗಿಲ್ಲ. ಚಿತ್ರರಂಗ ಇನ್ನೂ ಚೇತರಿಕೆಯ ಹಾದಿಯಲ್ಲಿರುವಾಗ ಇದಕ್ಕೆ ಮತ್ತಷ್ಟು ಶಕ್ತಿ ತುಂಬುವಂತೆ ಬೆಲ್ಬಾಟಂ ಬಿಡುಗಡೆಯಾಗಿದೆ. ಬಾಲಿವುಡ್ನ ಬೃಹತ್ ಮಾರುಕಟ್ಟೆಗಳಲ್ಲೊಂದಾದ ಮಹಾರಾಷ್ಟ್ರದಲ್ಲಿ ಇನ್ನೂ ಬಿಗಿ ನಿಯಮಾವಳಿಗಳು ಇದ್ದು, ಚಿತ್ರಮಂದಿರಗಳು ತೆರೆದಿಲ್ಲ. ಅದಾಗ್ಯೂ ಬೆಲ್ಬಾಟಂ ಚಿತ್ರತಂಡ ಬಹುದೊಡ್ಡ ರಿಸ್ಕ್ ತೆಗೆದುಕೊಂಡಿದೆ. ಈ ಕುರಿತು ಅಕ್ಷಯ್ ಮಾತನಾಡಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿರುವ ಪ್ರಕಾರ, ಇತ್ತೀಚೆಗೆ ಮಾತನಾಡಿರುವ ಅಕ್ಷಯ್ ಬೆಲ್ಬಾಟಂ ಸಂಕಷ್ಟದ ನಡುವೆಯೂ ಎಂತಹ ದೊಡ್ಡ ರಿಸ್ಕ್ ತೆಗೆದುಕೊಂಡಿದೆ ಎಂಬುದನ್ನು ವಿವರಿಸಿದ್ದಾರೆ. ‘‘ಬಾಲಿವುಡ್ನ ಮಾರುಕಟ್ಟೆಯಲ್ಲಿ 30 ಪ್ರತಿಶತ ಕೊಡುಗೆಯನ್ನು ಮಹಾರಾಷ್ಟ್ರ ನೀಡುತ್ತದೆ. ಪ್ರಸ್ತುತ ಅದು ನಮಗೆ ಲಭ್ಯವಿಲ್ಲ. ಉಳಿದ 70 ಪ್ರತಿಶತ ಮಾರುಕಟ್ಟೆ ಇಡೀ ದೇಶದ್ದು. ಆದರೆ ಅದರಲ್ಲೂ ಚಿತ್ರಮಂದಿರ ಅರ್ಧ ಮಾತ್ರ ಭರ್ತಿಯಾಗಲು ಅವಕಾಶವಿದೆ. ಹಾಗಾಗಿ ಗಳಿಕೆಯ ಸಾಧ್ಯತೆ ಇರುವುದು 70ರ ಅರ್ಧದಷ್ಟು ಮಾತ್ರ. ಅದಾಗ್ಯೂ ಯಾರಾದರೊಬ್ಬರು ಮುಂದೆ ಬಂದು ಸವಾಲನ್ನು ತೆಗೆದುಕೊಳ್ಳಲೇ ಬೇಕು. ನಾವು ತೆಗೆದುಕೊಂಡಿದ್ದೇವೆ’’ ಎಂದಿದ್ದಾರೆ ಅಕ್ಷಯ್.
ಬೆಲ್ಬಾಟಂಗೆ ಶುಭಹಾರೈಸಿರುವ ಅಜಯ್ ದೇವಗನ್:
Dear Akki, I’ve been hearing good reviews of Bell Bottom. Congratulations ? Also, your leap of faith in making it a theatrical release is praiseworthy. With you in this??@akshaykumar#BellBottom
— Ajay Devgn (@ajaydevgn) August 19, 2021
ಬೆಲ್ಬಾಟಂ ಚಿತ್ರವು 1980ರ ಕಾಲಘಟ್ಟದ ಕತೆಯನ್ನು ಒಳಗೊಂಡಿದೆ. ವಾಣಿ ಕಪೂರ್, ಲಾರಾ ದತ್ತ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ರಾ ಏಜೆಂಟ್ ಒಬ್ಬನ ಕತೆಯನ್ನು ಚಿತ್ರವು ಕಟ್ಟಿಕೊಡಲಿದೆ.
ಇದನ್ನೂ ಓದಿ:
‘ಆ ಕಾಲದಲ್ಲೇ ಶಂಕರ್ ನಾಗ್ ಲ್ಯಾಪ್ಟಾಪ್ ಬಳಸುತ್ತಿದ್ರು’; ಅಚ್ಚರಿ ವಿಚಾರ ಹಂಚಿಕೊಂಡ ಬಿರಾದಾರ್
(Bell Bottom movie released and Twinkle Khanna shares her first reaction with Akshay Kumar in UK)
Published On - 11:47 am, Thu, 19 August 21