ಆಲಿಯಾ ಭಟ್, ಸಂಜಯ್ ಲೀಲಾ ಬನ್ಸಾಲಿಗೆ ಬಾಂಬೇ ಹೈಕೋರ್ಟ್ನಿಂದ ಮಧ್ಯಂತರ ರಿಲೀಫ್
ಮುಂಬೈನ ಕಮಾಟಿಪುರದ ಡಾನ್ ಆಗಿ ಮೆರೆದಿದ್ದ ಗಂಗೂಬಾಯಿ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಚಿತ್ರದ ಟೀಸರ್ ರಿಲೀಸ್ ಆದ ನಂತರದಲ್ಲಿ ಗಂಗೂಬಾಯಿ ಅವರ ದತ್ತುಪುತ್ರ ಬಾಬುರಾವ್ ಶಾ ದೂರು ದಾಖಲು ಮಾಡಿದ್ದರು.
ಮುಂಬೈ ಮಾಫಿಯಾ ಕ್ವೀನ್ ಗಂಗೂಬಾಯಿ ಕಾಠಿಯಾವಾಡಿ ಜೀವನ ಆಧರಿಸಿ ಸಿದ್ಧಗೊಂಡಿರುವ ಸಿನಿಮಾಗೆ ಸಂಕಷ್ಟ ಎದುರಾಗಿತ್ತು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಇರುವ ಈ ಚಿತ್ರತಂಡಕ್ಕೆ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮನ್ಸ್ ಜಾರಿ ಮಾಡಿ, ಕೋರ್ಟ್ಗೆ ಹಾಜರಾಗಲು ಸೂಚಿಸಿತ್ತು. ಆದರೆ, ಈಗ ಆದೇಶಕ್ಕೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ಈ ಮೂಲಕ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಕ್ಕೆ ಎದುರಾಗಿದ್ದ ಸಂಕಷ್ಟ ಕೊಂಚಮಟ್ಟಿಗೆ ದೂರವಾಗಿದೆ.
ಮುಂಬೈನ ಕಮಾಟಿಪುರದ ಡಾನ್ ಆಗಿ ಮೆರೆದಿದ್ದ ಗಂಗೂಬಾಯಿ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಚಿತ್ರದ ಟೀಸರ್ ರಿಲೀಸ್ ಆದ ನಂತರದಲ್ಲಿ ಗಂಗೂಬಾಯಿ ಅವರ ದತ್ತುಪುತ್ರ ಬಾಬುರಾವ್ ಶಾ ದೂರು ದಾಖಲು ಮಾಡಿದ್ದರು. ಅಲ್ಲದೆ, ಅವರು ಸಿನಿಮಾ ವಿರುದ್ಧ ಕಿಡಿಕಾರಿದ್ದರು. ‘ಈ ಚಿತ್ರದಲ್ಲಿ ಗಂಗೂಬಾಯಿ ಅವರನ್ನು ತಪ್ಪಾಗಿ ತೋರಿಸಲಾಗಿದೆ. ಸಿನಿಮಾದಲ್ಲಿ ತೋರಿಸಲು ಹೊರಟಿರುವ ದೃಶ್ಯಗಳು ವಾಸ್ತವಕ್ಕೆ ದೂರ ಇದ್ದಂತೆ ಕಾಣುತ್ತಿದೆ’ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ದೂರನ್ನು ಸ್ವೀಕರಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಆಲಿಯಾ ಭಟ್ ಹಾಗೂ ನಿರ್ದೇಶಕ ಸಂಜಯ್ ಬನ್ಸಾಲಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಇದನ್ನು ಪ್ರಶ್ನಿಸಿ ಸಂಜಯ್ ಲೀಲಾ ಬನ್ಸಾಲಿ, ಆಲಿಯಾ ಭಟ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಅವರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಸದ್ಯ, ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಮುಂಬೈ ಕೋರ್ಟ್ ಹೇಳಿದೆ. ಸೆಪ್ಟೆಂಬರ್ 7ರಂದು ಮುಂದಿನ ವಿಚಾರಣೆ ನಡೆಯಲಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜುಲೈ 30ರಂದು ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕೋರ್ಟ್ ಕೇಸ್ ಹಾಗೂ ಕೊವಿಡ್ ಎರಡನೇ ಅಲೆ ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕ ತಡವಾಗಿದೆ. ಹೊಸ ರಿಲೀಸ್ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿಲ್ಲ. ಸದ್ಯ, ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಗಂಗೂಬಾಯಿ ಆಗಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ.
ಇದನ್ನೂ ಒದಿ: ವೆಬ್ ಸೀರಿಸ್ ಡೈರೆಕ್ಷನ್ ಮಾಡೋಕೆ ಬನ್ಸಾಲಿ ಪಡೆಯೋ ಹಣ ಇಷ್ಟೊಂದಾ?; ಸ್ಟಾರ್ ನಟರ ಸಂಭಾವನೆಯನ್ನೂ ಹಿಂದಿಕ್ಕಿದ ನಿರ್ದೇಶಕ