AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daler Mehndi: ನನ್ನ ರೇಟ್​ ಜಾಸ್ತಿ, ಅದಕ್ಕೆ ನನ್ನನ್ನು ಯಾರೂ ಹಾಡುವುದಕ್ಕೆ ಕರೆಯುವುದಿಲ್ಲ- ಖ್ಯಾತ ಗಾಯಕ ದಲೇರ್ ಮೆಹಂದಿ

ನಾನು ಒಂದು ಹಾಡು ಹಾಡಲು 6 ಲಕ್ಷ ರೂಪಾಯಿ ಜೊತೆಗೆ ಅದರ ಮೇಲಿನ ಜಿಎಸ್​ಟಿ ಶುಲ್ಕವನ್ನೂ ಚಾರ್ಜ್​​ ಮಾಡುತ್ತೇವೆ. ಇದು ಬಾಲಿವುಡ್​​ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿಯೇ ನಾನು ಇತ್ತೀಚೆಗೆ ಹೆಚ್ಚು ಹಿಂದೀ ಹಾಡುಗಳನ್ನು ಹಾಡುತ್ತಿಲ್ಲ ಎಂದು ವಿಷಾದಮಿಶ್ರಿತ ದನಿಯಲ್ಲಿ ತುನಕ್ ತುನಕ್ ತುನ್ ಅನ್ನುತ್ತಾರೆ ದಲೇರ್ ಮೆಹಂದಿ (Singer Daler Mehndi)!

Daler Mehndi: ನನ್ನ ರೇಟ್​ ಜಾಸ್ತಿ, ಅದಕ್ಕೆ ನನ್ನನ್ನು ಯಾರೂ ಹಾಡುವುದಕ್ಕೆ ಕರೆಯುವುದಿಲ್ಲ- ಖ್ಯಾತ ಗಾಯಕ ದಲೇರ್ ಮೆಹಂದಿ
ನನ್ನ ರೇಟ್​ ಜಾಸ್ತಿ, ಅದಕ್ಕೆ ನನ್ನನ್ನು ಯಾರೂ ಹಾಡುವುದಕ್ಕೆ ಕರೆಯುವುದಿಲ್ಲ- ಖ್ಯಾತ ಗಾಯಕ ದಲೇರ್ ಮೆಹಂದಿ
TV9 Web
| Updated By: ಸಾಧು ಶ್ರೀನಾಥ್​|

Updated on:Aug 19, 2021 | 10:42 AM

Share

ಖ್ಯಾತ ಗಾಯಕ ದಲೇರ್ ಮೆಹಂದಿಗೆ ಬುಧವಾರ 54ನೇ ಹುಟ್ಟುಹಬ್ಬದ ಸಂಭ್ರಮ. 90 ದಶಕದಲ್ಲಿ ತಮ್ಮ ಸುಮಧುರ ಕಂಠದಿಂದ ಅಪಾರ ಶ್ರೋತೃಗನ್ನು ಮಂತ್ರಮುಗ್ಧರಾಗಿಸಿದ್ದ ದಲೇರ್​​ ತಮ್ಮ ಇಂದಿನ ವೃತ್ತಿ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಪಾಪ್ಯುಲರ್ ಆಲ್ಬಂಗಳಾದ ‘ತುನಕ್ ತುನಕ್ ತುನ್’, ‘ಬೊಲೊ ತಾರಾ ರಾರಾ’, ‘ದರ್ದಿ ರಬ್ ರಬ್ ಕರ್ದಿ’ ಅಥವಾ ‘ಹೊ ಜಾಯೆಗಿ ಬಲ್ಲೆ ಬಲ್ಲೆ’ ಮೂಲಕ ಕೇಳುಗರನ್ನು ಬೇರೆಯದ್ದೇ ಲೋಕ್ಕಕ್ಕೆ ಕೊಂಡೊಯ್ದ ಖ್ಯಾತ ಗಾಯಕ ದಲೇರ್ ಮೆಹಂದಿ ತಮ್ಮ ಕ್ವಾಲಿಟಿ ಜೊತೆ ಯಾವುದೇ ರಾಜಿ ಮಾಡಿಕೊಂಡಿಲ್ಲ. ಇಂದಿಗೂ ಖಡಕ್ಕಾಗಿ ತಮ್ಮ ರೇಟು ಇಷ್ಟು. ಅಷ್ಟಕ್ಕೇ ನಾನು ಹಾಡುವುದು. ಮತ್ತೆ ಯಾವುಯಾವುದೋ ಕೆಟ್ಟ ಹಾಡುಗಳಿಗೆಲ್ಲಾ ನಾನು ದನಿಯಾಗಲಾರೆ ಎಂದೂ ಗುಡುಗುತ್ತಾರೆ.

ನಾನು ಒಂದು ಹಾಡು ಹಾಡಲು 6 ಲಕ್ಷ ರೂಪಾಯಿ ಜೊತೆಗೆ ಅದರ ಮೇಲಿನ ಜಿಎಸ್​ಟಿ (GST) ಶುಲ್ಕವನ್ನೂ ಚಾರ್ಜ್​​ ಮಾಡುತ್ತೇವೆ. ಇದು ಬಾಲಿವುಡ್​​ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿಯೇ ನಾನು ಇತ್ತೀಚೆಗೆ ಹೆಚ್ಚು ಹಿಂದೀ ಹಾಡುಗಳನ್ನು ಹಾಡುತ್ತಿಲ್ಲ ಎಂದು ವಿಷಾದಮಿಶ್ರಿತ ದನಿಯಲ್ಲಿ ತುನಕ್ ತುನಕ್ ತುನ್ ಅನ್ನುತ್ತಾರೆ ದಲೇರ್ ಮೆಹಂದಿ (Singer Daler Mehndi)!

ಇಂದು ಒಂದು ಹಾಡನ್ನು ಹೇಗೆ ಮ್ಯಾನುಫ್ಯಾಕ್ಚರ್​​ ಮಾಡ್ತಾರೆ ಗೊತ್ತಾ? ಒಬ್ಬ ಡಮ್ಮಿ ಗಾಯಕ (dummy singer) ಮುಂಬೈನಲ್ಲಿ ಮೊದಲು ದನಿ ನೀಡುತ್ತಾನೆ. ಬಳಿಕ ಅದನ್ನು ಅನೇಕ ಹೊಸ, ಯುವ ಗಾಯಕರಿಂದ ಹಾಡಿಸಿ, ರೆಕಾರ್ಡ್​ ಮಾಡಿಸಲಾಗುತ್ತದೆ. ಅದಾದ ಬಳಿಕ ಯಾವುದು ಸುಮಾರಾಗಿದೆ ಅಂತನ್ನಿಸುತ್ತದೋ ಅದರಲ್ಲೊಂದನ್ನು ಸೆಲೆಕ್ಟ್​ ಮಾಡಿಬಿಡುತ್ತಾರೆ.

ಆದರೆ ನನ್ನ ವಿಷಯದಲ್ಲಿ ಹಾಗಲ್ಲ; ಮೊದಲು 6 ಲಕ್ಷ ರೂಪಾಯಿ ಜೊತೆಗೆ ಅದರ ಮೇಲಿನ ಜಿಎಸ್​ಟಿ (GST) ಶುಲ್ಕವನ್ನು ಕೊಡಬೇಕು. ಆಗಷ್ಟೇ ನನ್ನ ದನಿ ನೀಡುತ್ತೇನೆ. ಅದರಿಂದ ಅವರು ನನ್ನಹಾಡನ್ನು ತೆಗೆದು ಬೇರೆಯವರ ಧ್ವನಿ ಸೇರಿಸುವ ಪ್ರಮೇಯವೇ ಬರುವುದಿಲ್ಲ. ಅಷ್ಟೇ ಅಲ್ಲ. ನಾನು ಎಲ್ಲಾ ಹಾಡುಗಳಿಗೂ ದನಿಯಾಗಲಾರೆ. ನಾನು ತುಂಬಾ ಚೂಸಿ. ನಿರ್ದಿಷ್ಟ ಹಾಡುಗಳನ್ನಷ್ಟೇ ಸೆಲೆಕ್ಟ್​ ಮಾಡಿ,ಹಾಡುವೆ. ಮಾರುಕಟ್ಟೆಯಲ್ಲಿ ನಾನು ಹೊಸಲು ಕೆಲಸ ಮಾಡಲಾರೆ ಎಂದು ತಮ್ಮ ಕಂಚಿನ ಕಂಠದಲ್ಲಿ ಹೇಳುತ್ತಾರೆ ಮೆಹಂದಿ.

ಪಂಜಾಬಿ ಹಾಡುಗಳಿಗೆ, ಬಾಂಗ್ಡಾ ನೃತ್ಯಗಳಿಗೆ ಮತ್ತು ಅಲ್ಲಿನ ಸಂಗೀತಕ್ಕಿರುವ ವೈಶಿಷ್ಟ್ಯತೆಯೇ ಭಿನ್ನವಾದದ್ದು. ಸಂಗೀತ ಪ್ರಿಯರನ್ನು ಪಂಜಾಬಿ ಹಾಡುಗಳು ಹುಚ್ಚೆದ್ದು ಕುಣಿಯುವಂತೆ ಮಾಡುತ್ತವೆ ಅಂತ ಹೇಳೋದು ಸುಳ್ಳಲ್ಲ. ಈ ರಾಜ್ಯದ ಮ್ಯೂಸಿಕ್ ವಿಶ್ವದೆಲ್ಲೆಡೆ ಜನಪ್ರಿಯಗೊಂಡು ದಶಕಗಳೇ ಕಳೆದಿವೆ. ಪಾಶ್ಚಾತ್ಯ, ಅಮೆರಿಕ ಮತ್ತು ಇತರ ರಾಷ್ಟ್ರಗಳು ಸಹ ಪಂಜಾಬಿ ಹಾಡುಗಳಿಗೆ ಮಾರು ಹೋಗುವಂತೆ ಮಾಡಿದ ಖ್ಯಾತಿ ನಿಸ್ಸಂದೇಹವಾಗಿ ದಲೇರ್ ಮೆಹೆಂದಿ ಅವರಿಗೆ ಸಲ್ಲುತ್ತದೆ.

ದಲೇರ್ ಅವರ ಅತ್ಯಂತ ಪಾಪ್ಯುಲರ್ ಆಲ್ಬಂಗಳಾಗಿರುವ, ‘ತುನಕ್ ತುನಕ್ ತುನ್’, ‘ಬೊಲೊ ತಾರಾ ರಾರಾ’ BOLO TA RA RA, ‘ದರ್ದಿ ರಬ್ ರಬ್ ಕರ್ದಿ’ ಅಥವಾ ‘ಹೊ ಜಾಯೆಗಿ ಬಲ್ಲೆ ಬಲ್ಲೆ,’ ಮೊದಲ ಬಾರಿಗೆ ಕೇಳಿಸಿಕೊಂಡರೂ, ಸಂಗೀತದ ಜ್ಞಾನವಿರದವನು ಕೂಡ ಕೂತಲ್ಲೇ ಕೈಕಾಲುಗಳನ್ನು ಹಾಡಿನ ಧಾಟಿ ಮತ್ತು ಅದರ ಸಂಗೀತಕ್ಕೆ ತಕ್ಕಂತೆ ಲಯಬದ್ಧವಾಗಿ ಅಲ್ಲಾಡಿಸುತ್ತಾನೆ. ಜನರನ್ನು ಹಾಗೆ ಮಂತ್ರಮುಗ್ಧಗೊಳಿಸುವ ಶಕ್ತಿ ಅವರ ಹಾಡುಗಳಿಗಿವೆ.

Indian Pop King Daler Mehndi now a days costly and choosy singer 2

ದಲೇರ್ ಅವರ ‘ತುನಕ್ ತುನಕ್ ತುನ್’ ಆಲ್ಬಂ 164 ಮಿಲಿಯನ್ ವ್ಯೂಗಳನ್ನು ಕಂಡಿದ್ದು, ದಕ್ಷಿಣ ಕೊರಿಯಾದಲ್ಲಿ ಅದು ಈಗಲೂ ಪಾಪ್ಯುಲರ್ ಚಾರ್ಟ್​ಬಸ್ಟರ್ ಅಂತೆ.

ದಲೇರ್ ಅವರ ‘ತುನಕ್ ತುನಕ್ ತುನ್’ ಆಲ್ಬಂ 164 ಮಿಲಿಯನ್ ವ್ಯೂಗಳನ್ನು ಕಂಡಿದ್ದು, ದಕ್ಷಿಣ ಕೊರಿಯಾದಲ್ಲಿ ಅದು ಈಗಲೂ ಪಾಪ್ಯುಲರ್ ಚಾರ್ಟ್​ಬಸ್ಟರ್ ಅಂತೆ. ಭಾರತದ ವಿಖ್ಯಾತ ಸಿನಿಮಾ ನಿರ್ದೇಶಕರಲ್ಲೊಬ್ಬರಾಗಿರುವ ಎಸ್ ಎಸ್ ರಾಜಾಮೌಳಿ ಅವರ ‘ಬಾಹುಬಲಿ’ ಚಿತ್ರದ ಟೈಟಲ್ ಟ್ರ್ಯಾಕನ್ನು ಮೂರು ಭಾಷೆಗಳಲ್ಲೂ (ಹಿಂದಿ, ತೆಲುಗು ಮತ್ತು ತಮಿಳು) ಹಾಡಿರುವ ದಲೇರ್, ಹಾಡಿನ ಜನಪ್ರಿಯತೆ ಅದರೆ ಗುಣಮಟ್ಟದ ಮೇಲೆ ನೆಲೆಗೊಂಡಿರುತ್ತದೆ ಎಂದು ಹೇಳುತ್ತಾರೆ.

‘ನನ್ನ ತುನಕ್ ತುನಕ್ ತುನ್’ (TUNAK TUNAK TUN) ಹಾಡು 164 ಮಿಲಿಯನ್ ವ್ಯೂಗಳನ್ನು ಕಂಡಿದೆ. ಫೇಕ್ ವ್ಯೂಗಳನ್ನು ಸೃಷ್ಟಸಿಕೊಳ್ಳುವ ಅಲ್ಪತನ ನನ್ನಲಿಲ್ಲ. ಹಾಗೆ ಮಾಡಿಕೊಳ್ಳುವವರ ವ್ಯಕ್ತಿತ್ವವೂ ಫೇಕ್ ಆಗಿರುತ್ತದೆ. ಈಗಿನ ಕೆಲ ಉದಯೋನ್ಮುಖ ಗಾಯಕರು ತಮ್ಮ ಹಾಡುಗಳನ್ನು ಅಪ್ಲೋಡ್ ಮಾಡಿ ಫೇಕ್ ವ್ಯೂಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಅವರಲ್ಲಿ ಅದೊಂದು ಟ್ರೆಂಡ್ ಆಗಿಬಿಟ್ಟಿದೆ. ಹಾಡು ಜನಪ್ರಿಯಗೊಳ್ಳಬೇಕಾದರೆ ಅದರ ಗುಣಮಟ್ಟ ಚೆನ್ನಾಗಿರಬೇಕು. ನನ್ನ ಹೊಸ ‘ಇಶ್ಕ್ ನಚಾವೆ’ ಆಲ್ಬಂನಲ್ಲಿ ಎಂದಿನಂತೆ ನೈಜ್ಯತೆ ಮತ್ತು ಶುದ್ಧತೆ ಇರಲಿದೆ. ಈ ಹಾಡಿನಲ್ಲಿ165 ಸಂಗೀತ ಉಪಕರಣಗಳನ್ನು ಬಳಸಲಾಗಿದೆ. ನನ್ನ ಅಭಿಮಾನಿಗಳಿಗೆ ಅದು ಇಷ್ಟವಾಗಲಿದೆಯೆಂಬ ಭರವಸೆ ನನಗಿದೆ,’ ಎಂದು ದಲೇರ್ ಹೇಳಿದ್ದಾರೆ.

(Indian Pop King Daler Mehndi now a days costly and choosy singer)

Published On - 10:38 am, Thu, 19 August 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ