KBC 13: ಕರೋಡ್​ಪತಿ ಹಾಟ್​ಸೀಟ್​ನಲ್ಲಿ ಗಂಗೂಲಿ, ಸೆಹ್ವಾಗ್​? ​13ನೇ ಸೀಸನ್​ ನಿರೂಪಣೆಗೆ ಅಮಿತಾಭ್​ ರೆಡಿ

Kaun Banega Crorepati 13: ‘ಕೌನ್​ ಬನೇಗಾ ಕರೋಡ್​ಪತಿ’ 13ನೇ ಸೀಸನ್​ನಲ್ಲಿ ಅನೇಕ ಹೊಸ ಫೀಚರ್​ಗಳನ್ನು ಪರಿಚಯಿಸಲಾಗುತ್ತಿದೆ. ಅದರ ಝಲಕ್​ ತೋರಿಸಲು ಈಗಾಗಲೇ ಕೆಲವು ಪ್ರೋಮೋಗಳನ್ನು ಹಂಚಿಕೊಳ್ಳಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಆಗಲಿದೆ.

KBC 13: ಕರೋಡ್​ಪತಿ ಹಾಟ್​ಸೀಟ್​ನಲ್ಲಿ ಗಂಗೂಲಿ, ಸೆಹ್ವಾಗ್​? ​13ನೇ ಸೀಸನ್​ ನಿರೂಪಣೆಗೆ ಅಮಿತಾಭ್​ ರೆಡಿ
ವೀರೇಂದ್ರ ಸೆಹ್ವಾಗ್​, ಅಮಿತಾಭ್​ ಬಚ್ಚನ್​, ಸೌರವ್​ ಗಂಗೂಲಿ
Follow us
| Updated By: Digi Tech Desk

Updated on:Aug 19, 2021 | 2:34 PM

ಜನಪ್ರಿಯ ‘ಕೌನ್​ ಬನೇಗಾ ಕರೋಡ್​ಪತಿ’ (Kaun Banega Crorepati) ಕ್ವಿಜ್​ ಕಾರ್ಯಕ್ರಮ ಈವರೆಗೆ ಯಶಸ್ವಿಯಾಗಿ 12 ಸೀಸನ್​ಗಳನ್ನು ಮುಗಿಸಿದೆ. ಈಗ 13ನೇ ಸೀಸನ್​ಗೆ (KBC 13) ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಜ್ಞಾನ, ಪುರಾಣ, ರಾಜಕೀಯ, ಸಿನಿಮಾ, ಕ್ರೀಡೆ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತ ವೀಕ್ಷಕರ ಜ್ಞಾನ ಹೆಚ್ಚಿಸುವ ಈ ಶೋಗೆ ದೊಡ್ಡ ಪ್ರೇಕ್ಷಕವರ್ಗವಿದೆ. ಅಮಿತಾಭ್​ ಬಚ್ಚನ್​ (Amitabh Bachchan) ನಿರೂಪಣೆಯಲ್ಲಿ ಮೂಡಿಬರಲಿರುವ ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದ 13ನೇ ಸೀಸನ್​ನಲ್ಲಿ ಸೌರವ್​ ಗಂಗೂಲಿ (Sourav Ganguly) ಮತ್ತು ವೀರೇಂದ್ರ ಸೆಹ್ವಾಗ್​ (Virender Sehwag) ಅವರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಈಗ ಕೇಳಿಬಂದಿದೆ.

ಆ.23ರಿಂದ ಕೌನ್​ ಬನೇಗಾ ಕರೋಡ್​ಪತಿ 13ನೇ ಸೀಸನ್​ ಪ್ರಾರಂಭ ಆಗಲಿದೆ. ಕಳೆದ ಸೀಸಿನ್​ನಲ್ಲಿ ‘ಕರಮ್​ ವೀರ್’ ಎಪಿಸೋಡ್​ ಫೇಮಸ್​ ಆಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜನರನ್ನು ಈ ಸಂಚಿಕೆಗಳಿಗೆ ಅತಿಥಿಗಳಾಗಿ ಕರೆತರಲಾಗುತ್ತಿತ್ತು. ಅದರ ಬದಲು ಈ ಬಾರಿ ‘ಶಾಂದರ್​ ಶುಕ್ರವಾರ್​’ ಎಪಿಸೋಡ್​ ಪರಿಚಯಿಸಲಾಗುತ್ತಿದೆ. ಇದರಲ್ಲಿ ಭಾರತ ಕ್ರಿಕೆಟ್​ ದಿಗ್ಗಜರಾದ ಸೌರವ್​ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್​ ಅವರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಸೌರವ್​ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್​ ಭಾಗವಹಿಸುವ ಎಪಿಸೋಡ್​ ಆ.27ರಂದು ಪ್ರಸಾರವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸೋನಿ ವಾಹಿನಿ ಸದ್ಯ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ. ಅವರಿಬ್ಬರನ್ನು ಹಾಟ್​ಸೀಟ್​ನಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇಬ್ಬರ ಪೈಕಿ ಯಾರು ಹೆಚ್ಚು ಹಣ ಗಳಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ವೀಕ್ಷಕರಲ್ಲಿ ಮೂಡಿದೆ.

ಈ ಸೀಸನ್​ನಲ್ಲಿ ಅನೇಕ ಹೊಸ ಫೀಚರ್​ಗಳನ್ನು ಪರಿಚಯಿಸಲಾಗುತ್ತಿದೆ. ಅದರ ಝಲಕ್​ ತೋರಿಸಲು ಈಗಾಗಲೇ ಕೆಲವು ಪ್ರೋಮೋಗಳನ್ನು ಹಂಚಿಕೊಳ್ಳಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಆಗಲಿದೆ.

ಕೊರೊನಾ ವೈರಸ್​ ಮೊದಲನೇ ಅಲೆ ಕಾರಣದಿಂದ 12ನೇ ಸೀಸನ್​ಗೆ ಕೆಲವು ಅಡೆಚಣೆಗಳು ಉಂಟಾಗಿದ್ದವು, ಸ್ವತಃ ಅಮಿತಾಭ್​ ಬಚ್ಚನ್​ ಅವರು ಕೊವಿಡ್​ನಿಂದ ಚೇತರಿಸಿಕೊಂಡ ನಂತರವೇ ಶೋ ನಿರೂಪಣೆ ಆರಂಭಿಸಿದ್ದರು. ಸರ್ಕಾರ ಜಾರಿಗೊಳಿಸಿದ್ದ ಕೊವಿಡ್​ ಗೈಡ್​ಲೈನ್ಸ್​ ಪ್ರಕಾರ ಸ್ಟುಡಿಯೋದಲ್ಲಿ ಆಡಿಯನ್ಸ್​ ಇಲ್ಲದೆ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಆಡಿಯನ್ಸ್​ ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ:

ಅಮಿತಾಭ್​ ಬಚ್ಚನ್‌ ನನ್ನ ಪಾತ್ರ ಮೆಚ್ಚಿದ್ದರು, ಅದೇ ನನಗೆ ದೊಡ್ಡ ಪ್ರಶಸ್ತಿ; ವೈಜನಾಥ್ ಬಿರಾದಾರ್

ಪತ್ನಿ ಜಯಾ ಬಗ್ಗೆ ಅಮಿತಾಭ್​ ಬಚ್ಚನ್​ ಬಹಿರಂಗವಾಗಿ ಹೇಳಿಕೊಂಡ 5 ವಿಶೇಷ ಮಾತುಗಳು ಇಲ್ಲಿವೆ

Published On - 12:20 pm, Thu, 19 August 21

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ