AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್‌ ನೋಡಿದರೆ ಯುವ ಪೊಲಾರ್ಡ್ ನೋಡಿದಂತ್ತಾಗುತ್ತದೆ; ವೀರೇಂದ್ರ ಸೆಹ್ವಾಗ್

ಶಾರುಖ್ ಹಿಂದಿನ ಚೆಂಡಿನಲ್ಲಿ ಏನಾಯಿತು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದ ಆಟಗಾರ. ಅನೇಕ ಬ್ಯಾಟ್ಸ್‌ಮನ್‌ಗಳು, ಓಹ್, ನಾನು ಬೀಟ್ ಆಗಿದ್ದೇನೆ ಎಂದು ಚಿಂತೆಗೀಡಾಗುತ್ತಾರೆ.

ಶಾರುಖ್ ಖಾನ್‌ ನೋಡಿದರೆ ಯುವ ಪೊಲಾರ್ಡ್ ನೋಡಿದಂತ್ತಾಗುತ್ತದೆ; ವೀರೇಂದ್ರ ಸೆಹ್ವಾಗ್
ಕೂ ಆಪ್​ಗೆ ಎಂಟ್ರಿಕೊಟ್ಟ ವೀರೇಂದ್ರ ಸೆಹ್ವಾಗ್
Follow us
ಪೃಥ್ವಿಶಂಕರ
|

Updated on: May 16, 2021 | 4:46 PM

ಕೊರೊನಾ ವೈರಸ್ ಕಾರಣದಿಂದಾಗಿ ಐಪಿಎಲ್ 2021ಮುಂದೂಡಲ್ಪಟ್ಟಿರಬಹುದು, ಆದರೆ ಅನೇಕ ಯುವ ಆಟಗಾರರು ಆಡಿದ ಎಲ್ಲಾ ಪಂದ್ಯಗಳಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿದರು. ಅದರಲ್ಲಿ ಪಂಜಾಬ್ ಕಿಂಗ್ಸ್‌ನ ಯುವ ಬ್ಯಾಟ್ಸ್‌ಮನ್ ಶಾರುಖ್ ಖಾನ್ ಕೂಡ ಸೇರಿದ್ದಾರೆ, ಹೀಗಾಗಿ ಶಾರುಖ್ ಆಟ ನೋಡಿದ ಹಲವು ಅನುಭವಿ ಆಟಗಾರರು ಅವರನ್ನು ಕೊಂಡಾಡಿದ್ದಾರೆ. ಶಾರುಖ್ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕರೆನ್ ಪೊಲಾರ್ಡ್ ಅವರಂತೆ ಆಡುತ್ತಾರೆ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಹೇಳಿಕೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 2021 ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಶಾರುಖ್ ಅವರನ್ನು 5.25 ಕೋಟಿ ರೂ.ಗೆ ಖರೀದಿಸಿತು. ಕೊರೊನಾದ ಕಾರಣದಿಂದಾಗಿ ಪಂದ್ಯಾವಳಿಯನ್ನು ಮುಂದೂಡುವ ಮೊದಲು ಶಾರುಖ್ ಅದ್ಭುತ ಬ್ಯಾಟಿಂಗ್ ಮಾಡಿದರು. ಐಪಿಎಲ್‌ನ ಈ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಶಾರುಖ್ ಆರನೇ ಸ್ಥಾನದಲ್ಲಿ ಕಣಕ್ಕಿಳಿಯುತ್ತಿದ್ದರು. ಈ ಸಮಯದಲ್ಲಿ, ಅವರು ನಿರ್ಭಯವಾಗಿ ಬ್ಯಾಟ್​ ಬೀಸುತ್ತಿದ್ದಿದ್ದು ಕ್ರಿಕೆಟ್ ಪಂಡಿತರಿಗೆ ಅಚ್ಚರಿ ಮೂಡಿಸಿದೆ.

ಶಾರುಖ್ ಖಾನ್‌ನಲ್ಲಿ ಪೊಲಾರ್ಡ್‌ನ ಆಟ ಕ್ರಿಕ್‌ಬಝ್ ವೆಬ್‌ಸೈಟ್‌ನೊಂದಿಗೆ ಮಾತನಾಡಿದ ಸೆಹ್ವಾಗ್, ಶಾರಖ್ ನನಗೆ ಯುವ ಪೊಲಾರ್ಡ್ ಅವರನ್ನು ನೆನಪಿಸುತ್ತಾರೆ. ಪೊಲಾರ್ಡ್​ ಐಪಿಎಲ್​ಗೆ ಬಂದಾಗ. ಪ್ರತಿಯೊಬ್ಬರೂ ಅವರನ್ನು ಖರೀದಿಸುವತ್ತಾ ಮುಖಮಾಡುತ್ತಿದ್ದರು. ಏಕೆಂದರೆ ಅವರು ಪಂದ್ಯವನ್ನು ಏಕಾಂಗಿಯಾಗಿ ಗೆಲ್ಲಿಸಬಲ್ಲ ಮತ್ತು ದೊಡ್ಡ ಹೊಡೆತಗಳನ್ನು ಆಡಬಲ್ಲ ಆಟಗಾರರಾಗಿದ್ದರು. ಶಾರುಖ್ ಕೂಡ ಅದೇ ಗುಣವನ್ನು ಹೊಂದಿದ್ದಾರೆ. ಅವರಿಗೆ ಆರಂಭಿಕನಾಗಿ ಬ್ಯಾಟ್ ಮಾಡಲು ಅವಕಾಶ ಸಿಕ್ಕರೆ ಶಾರುಖ್ ಶತಕ ಗಳಿಸಬಹುದಾದ ಸಾಮಥ್ಯ್ರ ಹೊಂದಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ. ಶಾರುಖ್ ಹಿಂದಿನ ಚೆಂಡಿನಲ್ಲಿ ಏನಾಯಿತು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದ ಆಟಗಾರ. ಅನೇಕ ಬ್ಯಾಟ್ಸ್‌ಮನ್‌ಗಳು, ಓಹ್, ನಾನು ಬೀಟ್ ಆಗಿದ್ದೇನೆ ಎಂದು ಚಿಂತೆಗೀಡಾಗುತ್ತಾರೆ. ಹಿಂದಿನ ಚೆಂಡಿನ ಬಗ್ಗೆ ಯೋಚಿಸದವರು ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಹೊಂದಿರುತ್ತಾರೆ ಎಂಬುದು ಸೆಹ್ವಾಗ್ ಅಭಿಪ್ರಾಯವಾಗಿದೆ.

ಶಾರುಖ್ ಖಾನ್ ಪ್ರದರ್ಶನ ಐಪಿಎಲ್ 2021 ರಲ್ಲಿ ಪಂಜಾಬ್ ಕಿಂಗ್ಸ್ ಪರ ಶಾರುಖ್ 6 ನೇ ಸ್ಥಾನದಲ್ಲಿ ಕಣಕ್ಕಿಳಿದಿದ್ದರು ಮತ್ತು ತಂಡಕ್ಕೆ ಪ್ರಮುಖ ಪಾತ್ರ ವಹಿಸಿದರು. ಶಾರುಖ್ ಅವರ ಸ್ಕೋರ್ 6 *, 47, 15 *, 22, 13, 0 ಮತ್ತು 4 ರನ್ ಮಾಡಿದೆ. ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 36 ಎಸೆತಗಳಲ್ಲಿ 47 ರನ್ ಗಳಿಸಿದ್ದರು, ಇದು ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಆವೃತ್ತಿಯ 8 ಪಂದ್ಯಗಳಲ್ಲಿ ಒಟ್ಟು 107 ರನ್ ಗಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಶಾರುಖ್ ತಮಿಳುನಾಡು ಪರ 200 ರನ್ ಗಳಿಸಿದ್ದರು. ನಂತರ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ 5 ಪಂದ್ಯಗಳಲ್ಲಿ 198 ರನ್ ಗಳಿಸಿದ್ದರು.